ಏಳು ವರ್ಷಗಳ ಹಿಂದೆಯೆ ವೀಡಿಯೋವನ್ನು ಇತ್ತೀಚೆಗೆ ಇವಿಎಂ ಕೆಡಿಸಿರುವುದನ್ನು ತೋರಿಸುತ್ತದೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.
ಸಾರಾಂಶ:
ಭಾರತೀಯ ಜನತಾ ಪಕ್ಷ (ಬಿಜೆಪಿ) ಇತ್ತೀಚೆಗೆ ವಿದ್ಯುನ್ಮಾನ ಮತಯಂತ್ರಗಳನ್ನು (ಇವಿಎಂ) ಕೆಡಿಸಿದೆ ಎಂದು ಆರೋಪಿಸಿ ಸಾಮಾಜಿಕ ಮಾಧ್ಯಮ ಬಳಕೆದಾರರು ಹಿಂದಿ ಸುದ್ದಿಯ ಕ್ಲಿಪ್ ಒಂದನ್ನು ಹಂಚಿಕೊಂಡಿದ್ದಾರೆ. ಆದರೆ, ಸುದ್ದಿ ಕ್ಲಿಪ್‌ನಲ್ಲಿ ತೋರಿಸಿರುವ ಘಟನೆ ೨೦೧೭ ರಲ್ಲಿ ನಡೆದಿದೆ ಮತ್ತು ಯಾವುದೇ ಮುಂಬರುವ ಅಥವಾ ಇತ್ತೀಚಿನ ಚುನಾವಣೆಗಳಿಗೆ ಯಾವುದೇ ಸಂಬಂಧಿಸಿಲ್ಲ.
ಹೇಳಿಕೆ:
೨೦೨೪ ರ ಲೋಕಸಭಾ ಚುನಾವಣೆಗೆ ಮುಂಚಿತವಾಗಿ, ಇನ್ಸ್ಟಾಗ್ರಾಮ್, ಎಕ್ಸ್ (ಹಿಂದೆ ಟ್ವಿಟರ್) ಮತ್ತು ಯೂಟ್ಯೂಬ್‌ನಲ್ಲಿ ಹಂಚಿಕೊಳ್ಳಲಾದ ಪೋಷ್ಟ್ ಗಳು ೧.೫ ನಿಮಿಷಗಳ ಅವಧಿಯ ವೀಡಿಯೋ ಕ್ಲಿಪ್ ಹಿಂದಿ ಸುದ್ದಿ ವಿಭಾಗವನ್ನು ತೋರಿಸುತ್ತದೆ ಹಾಗು, ಬಿಜೆಪಿಯು ಇವಿಎಂಗಳನ್ನು ಕೆಡಿಸಿದೆ ಎಂದು ಆರೋಪಿಸಿವೆ. ವಿವಾದಾತ್ಮಕ ಕ್ಲಿಪ್‌ನ0ಲ್ಲಿ ಎಬಿಪಿ ನ್ಯೂಸ್‌ನ ಪ್ರಸಾರವೂ ಸೇರಿದ್ದು, ಹಿಂದಿ ಅಕ್ಷರಗಳಲ್ಲಿ ಮೇಲೆ "ಆನೆಯ ಬಟನ್ ಒತ್ತಿ್ದರೆ ಕಮಲದ ರಸೀದಿ ಹೊರಬಂದಿದೆ" ಎಂದು ಹೇಳುತ್ತದೆ. ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಫೇಸ್‌ಬುಕ್ ಪುಟ ಕೂಡ ಇದನ್ನು ಹಂಚಿಕೊಂಡಿದೆ.
ಕ್ಲಿಪ್‌ನಲ್ಲಿರುವ ಸುದ್ದಿ ನಿರೂಪಕಿಯನ್ನು ಚಿತ್ರಾ ತ್ರಿಪಾಠಿ ಎಂದು ಗುರುತಿಸಿದ್ದೇವೆ (ಪ್ರಸ್ತುತ ಆಜ್ ತಕ್ ಜೊತೆ). ವೀಡಿಯೋದಲ್ಲಿ ಮಧ್ಯಪ್ರದೇಶದ ಭಿಂಡ್ ಜಿಲ್ಲೆಯಲ್ಲಿ ಪ್ರಾಥಮಿಕ ಪರೀಕ್ಷೆಯ ಸಮಯದಲ್ಲಿ ಇವಿಎಂಗಳು ದೋಷಪೂರಿತವಾದ ಕಾರಣ, ಹಲವಾರು ಅಧಿಕಾರಿಗಳನ್ನು ಕರ್ತವ್ಯದಿಂದ ಬಿಡುಗಡೆ ಮಾಡಲಾಗಿದೆ ಎಂದು ತ್ರಿಪಾಠಿ ಅವರು ವರದಿ ಮಾಡಿರುವುದನ್ನು ಕಾಣಬಹುದು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಐಎನ್‌ಸಿ) ಮತ್ತು ಆಮ್ ಆದ್ಮಿ ಪಾರ್ಟಿ(ಎಎಪಿ)ಯ ದೂರುಗಳ ನಂತರ ಹಲವಾರು ಅಧಿಕಾರಿಗಳನ್ನು ಕರ್ತವ್ಯದಿಂದ ಬಿಡುಗಡೆ ಮಾಡಲಾಗಿದೆ. ಈ ಘಟನೆಯು ಭಿಂಡ್‌ನ ಅಟೇರ್ ಅಸೆಂಬ್ಲಿ ಕ್ಷೇತ್ರದ ಚುನಾವಣೆಯ ಮೊದಲು ಸಂಭವಿಸಿದೆ ಮತ್ತು ಅಲ್ಲಿನ ವೋಟರ್ ವೆರಿಫೈಬಲ್ ಪೇಪರ್ ಆಡಿಟ್ ಟ್ರಯಲ್ (ವಿವಿಪಿಎಟಿ) ಯಂತ್ರಗಳು ಇವಿಎಮ್ ನಲ್ಲಿ ಯಾವ ಬಟನ್ ಒತ್ತಿದರೂ ಬಿಜೆಪಿಗೆ ಮತಗಳನ್ನು ದಾಖಲಿಸಿದೆ.
ಈ ಕ್ಲಿಪ್ ನೊಂದಿಗೆ ಹಂಚಿಕೊಳ್ಳಲಾದ ಕೆಲವು ಹ್ಯಾಶ್‌ಟ್ಯಾಗ್‌ಗಳಲ್ಲಿ #EVM, #loksabha ಮತ್ತು #election2024 ಸೇರಿವೆ. ಈ ಪೋಷ್ಟ್ ಗಳ ಶೀರ್ಷಿಕೆಗಳು ಹಗರಣ, ಅವ್ಯವಸ್ಥೆ ಮತ್ತು ಅಡಚಣೆ ಎಂಬ ಹಿಂದಿ ಪದಗಳನ್ನು ಸಹ ಒಳಗೊಂಡಿವೆ.
ಬಿಜೆಪಿಯು ಇವಿಎಂನ ಕೆಡಿಸಿತೆಂದು ಹೇಳಿಕೊಂಡಿರುವ ವೀಡಿಯೋವನ್ನು ಹಂಚಿಕೊಂಡಿರುವ ಎಕ್ಸ್ (ಎಡ) ಮತ್ತು ಇನ್ಸ್ಟಾಗ್ರಾಮ್ (ಬಲ) ಪೋಷ್ಟ್ ಗಳ ಸ್ಕ್ರೀನ್‌ಶಾಟ್‌ಗಳು.
ಪುರಾವೆ:
ವ್ಯಾಪಕವಾಗಿ ಹಂಚಿಕೊಂಡ ಸುದ್ದಿ ಕ್ಲಿಪ್‌ನ ವಿಸ್ತೃತ ವೀಡಿಯೋವನ್ನು ನಾವು ಗುರುತಿಸಿದ್ದೇವೆ. ಮೂಲತಃ ಈ ವೀಡಿಯೋ 'ಇವಿಎಂ ವಿವಾದ: ಎಸ್‌ಪಿ, ಭಿಂಡ್‌ನ ಕಲೆಕ್ಟರ್ ತೆಗೆದುಹಾಕಲಾಗಿದೆ,' ಎಂಬ ಶೀರ್ಷಿಕೆಯೊಂದಿಗೆ ಏಪ್ರಿಲ್ ೧, ೨೦೧೭ ರಂದು ಎಬಿಪಿ ನ್ಯೂಸ್‌ನ ಅಧಿಕೃತ ಯೂಟ್ಯೂಬ್ ಚಾನೆಲ್‌ಗೆ ಅಪ್‌ಲೋಡ್ ಮಾಡಲಾಗಿದೆ. ಸಂಪೂರ್ಣ ಕ್ಲಿಪ್ ೧೦ ನಿಮಿಷ - ೩೨ ಸೆಕೆಂಡುಗಳವರೆಗೆ ಚಲಿಸುತ್ತದೆ, ಆದರೆ ವೈರಲ್ ಕ್ಲಿಪ್ ಕೇವಲ ೧ ನಿಮಿಷ - ೩೦ ಸೆಕೆಂಡುಗಳಿಗೆ ಟ್ರಿಮ್ ಮಾಡಲಾಗಿದೆ. ಸಮಗ್ರ ವರದಿಯು ಮಧ್ಯಪ್ರದೇಶದ ಭಿಂಡ್‌ನಲ್ಲಿ ನಡೆದ ಇವಿಎಂ ಹಗರಣದ ಸಂದರ್ಭದಲ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಪೊಲೀಸ್ ವರಿಷ್ಠಾಧಿಕಾರಿಯನ್ನು ಹೊರಹಾಕುವುದನ್ನು ಒಳಗೊಂಡಿದೆ.
ಏಪ್ರಿಲ್ ೧, ೨೦೧೭ ರಂದು ಯೂಟ್ಯೂಬ್ ಗೆ ಅಪ್‌ಲೋಡ್ ಮಾಡಲಾದ ಎಬಿಪಿ ನ್ಯೂಸ್ ನ ವರದಿಯ ಸ್ಕ್ರೀನ್‌ಶಾಟ್.
ಏಪ್ರಿಲ್ ೨, ೨೦೧೭ ರಂದು ನ್ಯೂಸ್18 ಪ್ರಕಟಿಸಿದ ವರದಿಯ ಪ್ರಕಾರ, ಭಿಂಡ್‌ನ ಅಟೇರ್ ಅಸೆಂಬ್ಲಿ ಸ್ಥಾನಕ್ಕೆ ಮತ್ತು ಉಮಾರಿಯಾದ ಬಾಂಧವ್‌ಗಢ ಅಸೆಂಬ್ಲಿ ಪ್ರದೇಶಕ್ಕೆ ವಿಶೇಷ ಚುನಾವಣೆಯನ್ನು ಏಪ್ರಿಲ್ ೯, ೨೦೧೭ ರಂದು ನಿಗದಿಪಡಿಸಲಾಗಿತ್ತು. ಈ ಚುನಾವಣೆಗಳ ಮೊದಲು, ಭಿಂಡ್‌ನಿಂದ ವೀಡಿಯೋ ವೈರಲ್ ಆಗಿತ್ತು. ಉದ್ದೇಶಪೂರ್ವಕವಾಗಿ ಮತ ಯಂತ್ರದ ಯಾವುದೇ ಬಟನ್‌ಗಳನ್ನು ಒತ್ತಿದ್ದರೂ ಇವಿಎಂಗೆ ಸಂಪರ್ಕಗೊಂಡಿರುವ ವಿವಿಪಿಎಟಿ ನೀಡುವ ಬಿಜೆಪಿಯ ಕಮಲದ ಚಿಹ್ನೆಯ ರಶೀದಿಗಳನ್ನು ತೋರಿಸಲಾಗುತ್ತಿದೆ.
ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, ಭಾರತೀಯ ಚುನಾವಣಾ ಆಯೋಗವು (ಇಸಿಐ) ಭಿಂಡ್‌ನ ೨೧ ಅಧಿಕಾರಿಗಳಿಂದ ವಿವರವಾದ ವರದಿಯನ್ನು ಕೇಳಿತು, ಆದರೆ ಕಾಂಗ್ರೆಸ್ ಮತ್ತು ಎಎಪಿ ಮಧ್ಯಪ್ರದೇಶದ ಮುಖ್ಯ ಚುನಾವಣಾ ಅಧಿಕಾರಿ ಶಾಲಿನಾ ಸಿಂಗ್ ಅವರನ್ನು ವಜಾಗೊಳಿಸುವಂತೆ ಕರೆ ನೀಡಿತು. ಈ ಘಟನೆಗಳ ನಂತರ, ಮಧ್ಯಪ್ರದೇಶದ ಆಡಳಿತವು ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಪೊಲೀಸ್ ಅಧೀಕ್ಷಕರನ್ನು ಅವರ ಕರ್ತವ್ಯಗಳಿಂದ ಮುಕ್ತಗೊಳಿಸಿತು ಮತ್ತು ೧೯ ಇತರ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮಗಳನ್ನು ಪ್ರಾರಂಭಿಸಿತು.
ಏಪ್ರಿಲ್ ೮, ೨೦೧೭ ರಂದು, ದಿ ಇಂಡಿಯನ್ ಎಕ್ಸ್‌ಪ್ರೆಸ್ ಅಂತಿಮ ತನಿಖಾ ವರದಿಯು ಎಎಪಿಯ ಆರೋಪಗಳನ್ನು ತಳ್ಳಿಹಾಕಿದೆ ಎಂದು ವರದಿ ಮಾಡಿದೆ. "ಉತ್ತರ ಪ್ರದೇಶದ ಕಾನ್ಪುರ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿಗಳ ಹೆಸರನ್ನು ಭಿಂಡ್‌ನಲ್ಲಿ ಬಳಸಲಾದ ವಿವಿಪಿಎಟಿನಿಂದ ಅಳಿಸದ ಕಾರಣ ಚುನಾವಣಾಧಿಕಾರಿಗಳ ಕಡೆಯಿಂದ ಲೋಪ ಎಸಗಿರುವುದು ವಿಚಾರಣೆಯಲ್ಲಿ ಕಂಡುಬಂದಿದೆ. ಕಾರ್ಯವಿಧಾನದ ಪ್ರಕಾರ, ಮತಗಟ್ಟೆ ಅಧಿಕಾರಿಗಳು ಭಿಂಡ್‌ನಲ್ಲಿ ಪ್ರದರ್ಶನಕ್ಕೆ ಬಳಸುವ ಮೊದಲು ಕಾನ್ಪುರದಿಂದ ವಿವಿಪಿಎಟಿಯಲ್ಲಿ ಲೋಡ್ ಮಾಡಲಾದ ಡೇಟಾವನ್ನು ಅಳಿಸಬೇಕು. ‘ಪ್ರದರ್ಶನದ ಸಂದರ್ಭದಲ್ಲಿ, ಚುನಾವಣಾ ಅಧಿಕಾರಿಗಳು ಮತದಾನ ಮತ್ತು ವಿವಿಪಿಎಟಿ ಯಂತ್ರಗಳ ನಿಖರತೆಯನ್ನು ಪರೀಕ್ಷಿಸಲು ಡಮ್ಮಿ ಚಿಹ್ನೆಗಳೊಂದಿಗೆ ಡಮ್ಮಿ ಅಭ್ಯರ್ಥಿಗಳನ್ನು ಬಳಸುತ್ತಾರೆ. ಆದರೆ, ಕಾನ್ಪುರ ಸೀಟಿನ ಪೂರ್ವ ಲೋಡ್ ಮಾಡಲಾದ ಡೇಟಾವನ್ನು ವಿವಿಪಿಎಟಿನಿಂದ ಅಳಿಸಲಾಗಿಲ್ಲವಾದ್ದರಿಂದ, ಇದು ಇವಿಎಂನ ಬ್ಯಾಲೆಟ್ ಯೂನಿಟ್‌ನಲ್ಲಿ ಒತ್ತಿದ ಬಟನ್‌ಗೆ ಅನುಗುಣವಾದ ಕಾನ್ಪುರ ಅಭ್ಯರ್ಥಿಗಳ ಚುನಾವಣಾ ಚಿಹ್ನೆಗಳೊಂದಿಗೆ ರಶೀದಿಗಳನ್ನು ವಿತರಿಸಿದೆ,' ಎಂದು ಚುನಾವಣಾ ಆಯೋಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ" ಎಂದು ವರದಿ ಮಾಡಲಾಗಿದೆ.
ತೀರ್ಪು:
ಲೋಪವಾದ ಇವಿಎಂಅನ್ನು ತೋರಿಸುವ ಏಳು ವರ್ಷಗಳ ಹಳೆಯ ಸುದ್ದಿಯ ವೀಡಿಯೋ ವನ್ನು ಮುಂಬರುವ ೨೦೨೪ ರ ಸಾರ್ವತ್ರಿಕ ಚುನಾವಣೆಗಳ ಮೊದಲು ನಡೆದ ಇತ್ತೀಚಿನ ಘಟನೆ ಎಂದು ತಪ್ಪಾಗಿ ನಿರೂಪಿಸಲಾಗಿದೆ. ಆದ್ದರಿಂದ, ಈ ಈ ಹೇಳಿಕೆಯನ್ನು ಸಂದರ್ಭದಿಂದ ಹೊರಗಿಡಲಾಗಿದೆ ಎಂದು ಗುರುತಿಸುತ್ತೇವೆ.