ರಾಹುಲ್ ಗಾಂಧಿ ಕಾಂಗ್ರೆಸ್ ಪಕ್ಷದಿಂದ ರಾಜೀನಾಮೆ ನೀಡುತ್ತಿರುವುದಾಗಿ ತೋರಿಸಲು ಎಡಿಟ್ ಮಾಡಿದ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ.
ಸಾರಾಂಶ:
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕೇರಳದ ವಯನಾಡಿನಿಂದ ಲೋಕಸಭೆಗೆ ನಾಮಪತ್ರ ಸಲ್ಲಿಸಲು ಏಪ್ರಿಲ್ ೦೩, ೨೦೨೪ ರಂದು ಕೇರಳಕ್ಕೆ ಭೇಟಿ ನೀಡಿದರು. ರಾಹುಲ್ ಗಾಂಧಿ ಅವರು ನಾಮನಿರ್ದೇಶನದ ಪ್ರಮಾಣ ವಚನ ಸ್ವೀಕರಿಸುತ್ತಿರುವ ಸಂದರ್ಭದ ಮಾರ್ಫ್ ಮಾಡಿದ ಕ್ಲಿಪ್ ಅನ್ನು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ನಾಯಕ ಕಾಂಗ್ರೆಸ್ ಪಕ್ಷದಿಂದ ರಾಜೀನಾಮೆ ನೀಡುತ್ತಿದ್ದಾರೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಇಂತಹ ಹೇಳಿಕೆಗಳು ತಪ್ಪು.
ಹೇಳಿಕೆ:
ಎಕ್ಸ್ ನಲ್ಲಿನ ಬಳಕೆದಾರರು ರಾಹುಲ್ ಗಾಂಧಿಯವರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡುತ್ತಿರುವುದನ್ನು ತೋರಿಸುವ ವೀಡಿಯೋ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಬಳಕೆದಾರರು ಏಪ್ರಿಲ್ ೧೨, ೨೦೨೪ ರಂದು ವೀಡಿಯೋವನ್ನು ಪೋಷ್ಟ್ ಮಾಡಿದ್ದು, ಅದರ ಶೀರ್ಷಿಕೆ ಹೀಗಿದೆ, "ಈ ವೀಡಿಯೋ ನಿಜವೇ ಅಥವಾ ಎಡಿಟ್ ಮಾಡಲಾಗಿದೆಯೇ (ಕನ್ನಡಕ್ಕೆ ಅನುವಾದಿಸಲಾಗಿದೆ)". ಈ ಪೋಷ್ಟ್ ೨.೫ ಸಾವಿರ ವೀಕ್ಷಣೆಗಳನ್ನು ಗಳಿಸಿದೆ. ೩೦ ಸೆಕೆಂಡುಗಳ ಈ ಕ್ಲಿಪ್‌ನಲ್ಲಿ, ರಾಹುಲ್ ಗಾಂಧಿ ಹಿಂದಿಯಲ್ಲಿ ಮಾತನಾಡುತ್ತಾ, "ನಾನು, ರಾಹುಲ್ ಗಾಂಧಿ, ಇಂದು ಕಾಂಗ್ರೆಸ್‌ಗೆ ರಾಜೀನಾಮೆ ನೀಡುತ್ತಿದ್ದೇನೆ. ಇನ್ನು ಮುಂದೆ ನಾನು ಚುನಾವಣಾ ಉದ್ದೇಶಕ್ಕಾಗಿ ಹಿಂದೂ ಎಂದು ನಟಿಸಲು ಸಾಧ್ಯವಿಲ್ಲ. ಅನ್ಯಾಯ ಯಾತ್ರೆಯ ನಂತರ ನಾನು ನ್ಯಾಯ್ ಪತ್ರ್ ಅನ್ನು ಬಿಡುಗಡೆ ಮಾಡಿದ್ದೇನೆ. ಆದರೆ ಈಗ ಮೋದಿಜಿ ಭ್ರಷ್ಟರನ್ನು ಜೈಲಿಗೆ ಕಳುಹಿಸುತ್ತಿದ್ದಾರೆ, ಮತ್ತು ಈಗ ನಮ್ಮೆಲ್ಲರನ್ನು ಜೈಲಿಗೆ ಕಳುಹಿಸುತ್ತಾರೆ, ಆದ್ದರಿಂದ ನಾನು ಇಟಲಿಯಲ್ಲಿರುವ ನನ್ನ ತಾಯಿಯ ಮನೆಗೆ ಹೋಗುತ್ತಿದ್ದೇನೆ," ಎಂದು ಹೇಳುವುದು ಕೇಳಿಬರುತ್ತದೆ.
ರಾಹುಲ್ ಗಾಂಧಿ ಕಾಂಗ್ರೆಸ್‌ಗೆ ರಾಜೀನಾಮೆ ನೀಡುತ್ತಿದ್ದಾರೆ ಎಂದು ಹೇಳಿಕೊಂಡು ಎಕ್ಸ್ ನಲ್ಲಿ ಪೋಷ್ಟ್ ಮಾಡಲಾದ ವೀಡಿಯೋದ ಸ್ಕ್ರೀನ್‌ಶಾಟ್.
ಎಕ್ಸ್ ನಲ್ಲಿ ಮತ್ತೊಬ್ಬ ಪರಿಶೀಲಿಸಿದ ಬಳಕೆದಾರರು ೮ ಸಾವಿರ ವೀಕ್ಷಣೆಗಳು, ೪೬೬ ಇಷ್ಟಗಳು ಮತ್ತು ೧೮೬ ಮರುಪೋಷ್ಟ್ ಗಳನ್ನು ಸ್ವೀಕರಿಸಿದ ಇದೇ ರೀತಿಯ ಶೀರ್ಷಿಕೆಯೊಂದಿಗೆ ಕ್ಲಿಪ್ ಅನ್ನು ಹಂಚಿಕೊಂಡಿದ್ದಾರೆ.
ಏಪ್ರಿಲ್ ೦೯, ೨೦೨೪ ರಂದು ಈ ಕ್ಲಿಪ್ ಅನ್ನು ಪೋಷ್ಟ್ ಮಾಡಿದ ಇನ್‌ಸ್ಟಾಗ್ರಾಮ್ ಖಾತೆಯನ್ನು ಸಹ ನಾವು ಗುರುತಿಸಿದ್ದೇವೆ. ಇದರ ಹಿಂದಿಯಲ್ಲಿರುವ ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ಹೀಗಿದೆ, “ರಾಹುಲ್ ಗಾಂಧಿ ನಿಜವಾಗಿಯೂ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದಾರೆಯೇ? #bjp #bhajpa #modi #india #trendingreels #ಅಭಿನಂದನೆಗಳು #ಕಾಂಗ್ರೆಸ್ #vidio #hindu #rajniti #೨೦೨೪,” ವೀಡಿಯೋ ಮೇಲಿನ ಪಠ್ಯವು, “ಕಾಂಗ್ರೆಸ್ ಸಭೆಯ ಲೀಕ್ಡ್ ವೀಡಿಯೋ” ಎಂದು ಹೇಳುತ್ತದೆ.
ಇನ್ಸ್ಟಾಗ್ರಾಮ್ ಪೋಷ್ಟ್ ನ ಸ್ಕ್ರೀನ್‌ಶಾಟ್.
#bjp #bhajpa #modi #india #trendingreels #congratulations #congrees #vidio #hindu #rajniti #2024 ಮೊದಲಾದ ಹ್ಯಾಶ್ಟ್ಯಾಗ್ ಗಳನ್ನೂ ಈ ವೀಡಿಯೋ ಜೊತೆ ಹಂಚಿಕೊಳ್ಳಲಾಗಿದೆ.
ವೈರಲ್ ವೀಡಿಯೋದ ಲೋಗೋವನ್ನು ಆಧರಿಸಿ, ಆರಂಭದಲ್ಲಿ ವೀಡಿಯೊವನ್ನು ಹಂಚಿಕೊಂಡ ಇನ್ಸ್ಟಾಗ್ರಾಮ್ ಖಾತೆಯನ್ನು ನಾವು ಕಂಡುಕೊಂಡಿದ್ದೇವೆ. a,ಆದರೆ ಅಲ್ಲಿನ ಪೋಷ್ಟ್ ಡಿಲೀಟ್ ಮಾಡಲಾಗಿತ್ತು.
ಪುರಾವೆ:
ವೈರಲ್ ವೀಡಿಯೋದ ಕೀಫ್ರೇಮ್‌ಗಳ ರಿವರ್ಸ್ ಇಮೇಜ್ ಸರ್ಚ್, ಏಪ್ರಿಲ್ ೦೩, ೨೦೨೪ ರಂದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಅಧಿಕೃತ ಚಾನೆಲ್ ನಲ್ಲಿ ಅಪ್‌ಲೋಡ್ ಮಾಡಲಾದ ಒಂದು ನಿಮಿಷದ ಯೂಟ್ಯೂಬ್ ವಿಡಿಯೋವಿನತ್ತ ನಮ್ಮನ್ನು ಕರೆದೊಯ್ಯಿತು. ಹಿಂದಿಯಲ್ಲಿರುವ ವೀಡಿಯೋದ ಶೀರ್ಷಿಕೆಯು "ರಾಹುಲ್ ಗಾಂಧಿಯವರು ವಯನಾಡ್‌ನಿಂದ ನಾಮಪತ್ರ ಸಲ್ಲಿಸಿದ್ದಾರೆ (ಕನ್ನಡಕ್ಕೆ ಅನುವಾದಿಸಲಾಗಿದೆ)" ಎಂದು ಹೇಳಿಕೊಂಡಿದೆ.
ಏಪ್ರಿಲ್ ೩, ೨೦೨೪ ರಂದು ಯೂಟ್ಯೂಬ್ ನಲ್ಲಿ ಹಂಚಿಕೊಂಡಿರುವ ವೀಡಿಯೋವಿನ ಸ್ಕ್ರೀನ್‌ಶಾಟ್.
ಈ ವೀಡಿಯೋದಲ್ಲಿ ರಾಹುಲ್ ಗಾಂಧಿಯವರು ನಾಮನಿರ್ದೇಶನ ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ; ಅದರಲ್ಲಿ ಅವರು ಹೀಗೆ ಹೇಳುತ್ತಾರೆ, "ನಾನು, ರಾಹುಲ್ ಗಾಂಧಿ, ಜನರ ಸದನದಲ್ಲಿ ಸ್ಥಾನವನ್ನು ತುಂಬಲು ಅಭ್ಯರ್ಥಿಯಾಗಿ ನಾಮನಿರ್ದೇಶನಗೊಂಡ ನಂತರ, ಕಾನೂನಿನ ಮೂಲಕ ಸ್ಥಾಪಿಸಲ್ಪಟ್ಟಿರುವಂತೆ ನಾನು ಭಾರತದ ಸಂವಿಧಾನಕ್ಕೆ ನಿಜವಾದ ನಂಬಿಕೆ ಮತ್ತು ನಿಷ್ಠೆಯನ್ನು ಹೊಂದುತ್ತೇನೆ ಮತ್ತು ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆಯನ್ನು ಎತ್ತಿಹಿಡಿಯುತ್ತೇನೆ. (ಕನ್ನಡಕ್ಕೆ ಅನುವಾದಿಸಲಾಗಿದೆ)”.
ವೈರಲ್ ಕ್ಲಿಪ್ ಅನ್ನು ನಕಲಿ ಆಡಿಯೋ ಟ್ರ್ಯಾಕ್‌ನೊಂದಿಗೆ ಬದಲಾಯಿಸಲಾಗಿದೆ ಎಂದು ಇದು ಮತ್ತಷ್ಟು ಸ್ಪಷ್ಟಪಡಿಸುತ್ತದೆ. ಹಾಗಾಗಿ ರಾಹುಲ್ ಗಾಂಧಿ ಅವರು ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಪೋಷ್ಟ್ ಗಳು ತಪ್ಪು.
ತೀರ್ಪು:
ರಾಹುಲ್ ಗಾಂಧಿ ಅವರು ಕಾಂಗ್ರೆಸ್‌ಗೆ ರಾಜೀನಾಮೆ ನೀಡುವುದಾಗಿ ತಪ್ಪಾದ ಹೇಳಿಕೆಯೊಂದಿಗೆ ಮಾರ್ಫ್ ಮಾಡಿ ಆನ್‌ಲೈನ್‌ನಲ್ಲಿ ಹಂಚಿಕೊಳ್ಳಲಾದ ಮೂಲ ವೀಡಿಯೋದಲ್ಲಿ ನಾಮನಿರ್ದೇಶನ ಪ್ರಮಾಣವಚನ ಸ್ವೀಕರಿಸಿದ್ದಾರೆ ಎಂದು ಕ್ಲಿಪ್‌ನ ವಿಶ್ಲೇಷಣೆಯು ಬಹಿರಂಗಪಡಿಸುತ್ತದೆ.