ತಮಿಳುನಾಡಿನ ಬಿಜೆಪಿ ನಾಯಕ ಅಣ್ಣಾಮಲೈ ಅವರು ಸಾವರ್ಕರ್ ಅವರನ್ನು ಟೀಕಿಸಿದ್ದಾರೆಂದು ಹೇಳಿಕೊಳ್ಳಲು ಕ್ಲಿಪ್ ಮಾಡಿದ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ

Update: 2024-06-02 13:20 GMT

ಸಾರಾಂಶ:

ಸಾಮಾಜಿಕ ಮಾಧ್ಯಮ ಬಳಕೆದಾರರು ತಮಿಳುನಾಡಿನ ಭಾರತೀಯ ಜನತಾ ಪಕ್ಷದ (ಬಿಜೆಪಿ) ಅಧ್ಯಕ್ಷ ಕೆ ಅಣ್ಣಾಮಲೈ ಅವರು ಹಿಂದೂ ಮಹಾಸಭಾ ನಾಯಕ ವಿ ಡಿ ಸಾವರ್ಕರ್ ಅವರನ್ನು "ಬ್ರಿಟಿಷರ ಬೂಟ್ ಲಿಕ್ಕರ್" ಎಂದು ಉಲ್ಲೇಖಿಸುವ ವೀಡಿಯೋ ಕ್ಲಿಪ್ ಅನ್ನು ಹಂಚಿಕೊಂಡಿದ್ದಾರೆ. ಆದರೆ, ಮೂಲ ವೀಡಿಯೋದಲ್ಲಿ ಅಣ್ಣಾಮಲೈ ಸಾವರ್ಕರ್ ವಿರುದ್ಧ ಮಾಡಿದ ಆರೋಪಗಳನ್ನು ವಿವಾದಿಸುತ್ತಿದ್ದರು. ಇದು ಈ ಹೇಳಿಕೆಯನ್ನು ತಪ್ಪುದಾರಿಗೆಳೆಯುವಂತೆ ಮಾಡುತ್ತದೆ.


ಹೇಳಿಕೆ:

ಎಕ್ಸ್ (ಹಿಂದೆ ಟ್ವಿಟ್ಟರ್) ನಲ್ಲಿನ ಪೋಷ್ಟ್ ಗಳು ತಮಿಳುನಾಡಿನ ಬಿಜೆಪಿ ಅಧ್ಯಕ್ಷ ಕೆ ಅಣ್ಣಾಮಲೈ ಅವರ ೧೨ ಸೆಕೆಂಡುಗಳ ವೀಡಿಯೋ ಕ್ಲಿಪ್ ಅನ್ನು ಹಂಚಿಕೊಂಡಿವೆ. ವೀಡಿಯೋದಲ್ಲಿ ಅಣ್ಣಾಮಲೈ ಅವರು ಹಿಂದೂ ರಾಷ್ಟ್ರೀಯತೆಯ ಪ್ರತಿಪಾದಕರಾದ ವಿನಾಯಕ ದಾಮೋದರ್ ಸಾವರ್ಕರ್, ಅಲಿಯಾಸ್ ವೀರ್ ಸಾವರ್ಕರ್ ಅವರನ್ನು ಅವಮಾನಿಸುತ್ತಿದ್ದಾರೆ ಎಂದು ಹೇಳಲಾಗಿದೆ. ಕ್ಲಿಪ್‌ನಲ್ಲಿ, ಅಣ್ಣಾಮಲೈ ಹೀಗೆ ಹೇಳುವುದನ್ನು ಕೇಳಬಹುದು, "ಸಾವರ್ಕರ್, ಅವರು ಬ್ರಿಟಿಷರ ಬೂಟುಗಳನ್ನು ನೆಕ್ಕಿದರು ಎಂದು ಸಾಮಾನ್ಯವಾಗಿ ಅವರ ಬಗ್ಗೆ ಹೇಳಲಾಗುತ್ತದೆ." ನಂತರ ವೀಡಿಯೋದಲ್ಲಿ ಮಲಯಾಳಂ ಚಲನಚಿತ್ರ ನಟ ಮೋಹನ್‌ಲಾಲ್ ಬೂಟನ್ನು ನೆಕ್ಕುವ ಕ್ಲಿಪ್ ಅನ್ನು ನೋಡಬಹುದು. ವೀಡಿಯೋದೊಂದಿಗೆ ಹಂಚಿಕೊಂಡಿರುವ ತಮಿಳು ಶೀರ್ಷಿಕೆಗಳು ಅಣ್ಣಾಮಲೈ ಅವರು ಬಿಜೆಪಿ ಸೇರುವ ಮುನ್ನ ಈ ರೀತಿ ಮಾತನಾಡುತ್ತಿದ್ದರು ಎಂದು ಹೇಳುತ್ತವೆ.

ಮೇ ೨೯, ೨೦೨೪ ರಂದು ಎಕ್ಸ್ ನಲ್ಲಿ ಹಂಚಿಕೊಳ್ಳಲಾದ ವೈರಲ್ ಕ್ಲಿಪ್‌ನ ಸ್ಕ್ರೀನ್‌ಶಾಟ್.


ಪುರಾವೆ:

ನಾವು "ಅಣ್ಣಾಮಲೈ" ಮತ್ತು "ಸಾವರ್ಕರ್" ನಂತಹ ಪದಗಳನ್ನು ಬಳಸಿಕೊಂಡು ಕೀವರ್ಡ್ ಸರ್ಚ್ ನಡೆಸಿದ್ದೇವೆ ಮತ್ತು ಅಕ್ಟೋಬರ್ ೨, ೨೦೨೧ ರಂದು ಯೂಟ್ಯೂಬ್ ವೀಡಿಯೋವನ್ನು ಕಂಡುಕೊಂಡಿದ್ದೇವೆ. ಇದನ್ನು 'ಇನ್‌ಸೈಡ್ ತಮಿಳ್' ಹೆಸರಿನ ಚಾನಲ್ ಅಪ್‌ಲೋಡ್ ಮಾಡಿದೆ ಮತ್ತು "ತಿರು. ಅಣ್ಣಾಮಲೈ l ಪ್ರೆಸ್ ಮೀಟ್ l ಬಿಜೆಪಿ l ಸಾವರ್ಕರ್ ಪುಸ್ತಕ ಪ್ರಕಟಿತ l ಇನ್ಸೈಡ್ ತಮಿಳ್" (ಅನುವಾದಿಸಲಾಗಿದೆ) ಎಂಬ ಶೀರ್ಷಿಕೆ ನೀಡಲಾಗಿದೆ. ವಿಕ್ರಮ್ ಸಂಪತ್ ಅವರ 'ಸಾವರ್ಕರ್: ಎ ಕಾಂಟೆಸ್ಟೆಡ್ ಲೆಗಸಿ' ಪುಸ್ತಕದ ಬಿಡುಗಡೆಯನ್ನು ವೀಡಿಯೋ ಒಳಗೊಂಡಿದೆ. ಕಾರ್ಯಕರಮದ ವಿವರಗಳನ್ನು ಪುಸ್ತಕದ ಪ್ರಕಾಶಕರಾದ ಪ್ರಭಾ ಖೈತಾನ್ ಫೌಂಡೇಶನ್ ಸೆಪ್ಟೆಂಬರ್ ೨೮, ೨೦೨೧ ರಂದು ಎಕ್ಸ್ ನಲ್ಲಿ ಹಂಚಿಕೊಂಡಿದ್ದಾರೆ.

ಅಕ್ಟೋಬರ್ ೨, ೨೦೨೧ ರಂದು ಅಪ್‌ಲೋಡ್ ಮಾಡಿದ ಇನ್‌ಸೈಡ್ ತಮಿಳ್ ನ ಯೂಟ್ಯೂಬ್ ವೀಡಿಯೋದ ಸ್ಕ್ರೀನ್‌ಶಾಟ್.


ಯೂಟ್ಯೂಬ್ ವೀಡಿಯೋದಲ್ಲಿ ೬:೨೮ ನಿಮಿಷಗಳ ಅವಧಿಯಲ್ಲಿ, ಅಣ್ಣಾಮಲೈ ಅವರು ಸಾವರ್ಕರ್ ಬಗ್ಗೆ ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯಿಸುತ್ತಾ, “ತಮಿಳುನಾಡಿನಲ್ಲಿ ವೀರ್ ಸಾವರ್ಕರ್ ಬಗ್ಗೆ ಜನರು ಚರ್ಚಿಸಿದಾಗ, ಅವರು ತಕ್ಷಣವೇ ಅವರನ್ನು ಟೀಕಿಸುತ್ತಾರೆ. ಅವರನ್ನು ಅಪೊಲೊಜಿಸ್ಟ್ ಎಂದು ಕರೆಯುತ್ತಾರೆ. ನಾನು ಆ ಪದವನ್ನು ಬಳಸಲು ಬಯಸುವುದಿಲ್ಲ. ಸಾಮಾನ್ಯವಾಗಿ ಅವರನ್ನು ತಮಿಳುನಾಡಿನಲ್ಲಿ ಬ್ರಿಟಿಷ್ ಬೂಟ್ ಲಿಕ್ಕರ್ ಎಂದು ಕರೆಯುತ್ತಾರೆ. ವೀರ್ ಸಾವರ್ಕರ್ ಆಂಗ್ಲರ ಬೂಟುಗಳನ್ನು ನೆಕ್ಕಿದರು ಎಂದು ಜನರು ಹೇಳುತ್ತಾರೆ. ಆದರೆ ಇದು ನಿಜವಾಗಿಯೂ ಆ ಮನುಷ್ಯನಿಗೆ ನ್ಯಾಯವನ್ನು ನೀಡುತ್ತದೆಯೇ?" (ಅನುವಾದಿಸಲಾಗಿದೆ).

ವೈರಲ್ ವೀಡಿಯೋ ಅಣ್ಣಾಮಲೈ ಅವರ "ಬೂಟ್‌ಲಿಕರ್" ಎಂಬ ವರ್ಣನೆಯನ್ನು ಮಾತ್ರ ಒಳಗೊಂಡಿದೆ, ಇದನ್ನು ಅಣ್ಣಾಮಲೈ ಸಾವರ್ಕರ್ ಅವರನ್ನು ಟೀಕಿಸಿದ್ದಾರೆ ಎಂಬ ಭಾವನೆಯನ್ನು ನೀಡಲು ಸಂದರ್ಭದಿಂದ ಹೊರಗಿಟ್ಟು ಹಂಚಿಕೊಳ್ಳಲಾಗಿದೆ. ಕಾರ್ಯಕ್ರಮದುದ್ದಕ್ಕೂ, ಅಣ್ಣಾಮಲೈ ಅವರು ಸಾವರ್ಕರ್ ನಿರಪರಾಧಿ ಮತ್ತು ಅವರ ಕ್ರಮಗಳು ಸೂಕ್ತವೆಂದು ಪ್ರತಿಪಾದಿಸಿರುವುದನ್ನು ಸಂಪೂರ್ಣ ವೀಡಿಯೋದಲ್ಲಿ ಕಾಣಬಹುದು.


ತೀರ್ಪು:

ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ತಮಿಳುನಾಡಿನ ಬಿಜೆಪಿ ನಾಯಕ ಅಣ್ಣಾಮಲೈ ಅವರು ಸಾವರ್ಕರ್ ಅವರ ಬಗ್ಗೆ ಮಾತನಾಡಿರುವ ವೀಡಿಯೋವನ್ನು ಅವರು ಸಾವರ್ಕರ್ ಅವರನ್ನು ಟೀಕಿಸುತ್ತಿರುವಂತೆ ತೋರಲು ಅದನ್ನು ಕ್ಲಿಪ್ ಮಾಡಿ ಸಂದರ್ಭದಿಂದ ಹೊರಗಿಟ್ಟು ಹಂಚಿಕೊಳ್ಳಲಾಗಿದೆ ಎಂದು ಈ ಹೇಳಿಕೆಯ ವಿಶ್ಲೇಷಣೆ ಸ್ಪಷ್ಟಪಡಿಸುತ್ತದೆ. ಆದ್ದರಿಂದ, ಈ ಹೇಳಿಕೆ ತಪ್ಪುದಾರಿಗೆಳೆಯುವಂತಿದೆ.

Claim :  Clipped video of Tamil Nadu BJP leader Annamalai shared out of context to claim he criticized Savarkar
Claimed By :  X user
Fact Check :  Misleading
Tags:    

Similar News