ಫೋಟೋದಲ್ಲಿ ಕಂಗನಾ ರನಾವತ್ ಪಕ್ಕದಲ್ಲಿರುವ ಪತ್ರಕರ್ತನನ್ನು ಅಪರಾಧಿ ಅಬು ಸಲೇಂ ಎಂದು ತಪ್ಪಾಗಿ ಗುರುತಿಸಲಾಗಿದೆ

Update: 2024-06-03 13:20 GMT

ಸಾರಾಂಶ:

ಅಪರಾಧಿ ಅಬು ಸಲೇಂನೊಂದಿಗೆ ನಟಿ-ರಾಜಕಾರಣಿ ಕಂಗನಾ ರನಾವತ್ ಫೋಟೋ ತೆಗೆಸಿಒಂದಿದ್ದರೆಂದು ಆಕೆ ಒಬ್ಬ ವ್ಯಕ್ತಿಯೊಂದಿಗೆ ನಿಂತಿರುವ ಚಿತ್ರವನ್ನು ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಂಡಿದ್ದಾರೆ. ಆದರೆ, ಚಿತ್ರವು ೨೦೧೭ ರದು, ಮತ್ತು ಚಿತ್ರದಲ್ಲಿನ ವ್ಯಕ್ತಿ ವಾಸ್ತವವಾಗಿ ಮಾಜಿ ಪತ್ರಕರ್ತ ಮಾರ್ಕ್ ಮ್ಯಾನುಯೆಲ್ ಆಗಿದ್ದು, ಇದು ಹೇಳಿಕೆಯನ್ನು ತಪ್ಪಾಗಿಸುತ್ತದೆ.


ಹೇಳಿಕೆ:

ಕಂಗನಾ ರಣಾವತ್ ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದಿಂದ ಭಾರತೀಯ ಜನತಾ ಪಕ್ಷದ (ಬಿಜೆಪಿ) ಅಭ್ಯರ್ಥಿಯಾಗಿದ್ದಾರೆ. ಒಬ್ಬ ಪುರುಷನೊಂದಿಗೆ ಆಕೆಯ ಫೋಟೋವನ್ನು ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ ವ್ಯಾಪಕವಾಗಿ ಪ್ರಸಾರ ಮಾಡಲಾಗಿದೆ. ೧೯೯೩ ರ ಮುಂಬೈ ಸ್ಫೋಟದ ಅಪರಾಧಿ ದರೋಡೆಕೋರ ಅಬು ಸಲೇಂನೊಂದಿಗೆ ಬಿಜೆಪಿ ನಾಯಕ ಫೋಟೊ ತೆಗೆಸಿಕೊಂಡಿದ್ದಾರೆ ಎಂದು ಚಿತ್ರದ ಶೀರ್ಷಿಕೆ ಸೂಚಿಸುತ್ತದೆ. ಪ್ರಸ್ತುತ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಸಲೇಮ್ ಮತ್ತು ರಣಾವತ್ ನಡುವೆ ಸಂಪರ್ಕವಿದೆಯೆಂದು ಸೂಚಿಸಲು ಫೋಟೋವನ್ನು ಹಂಚಿಕೊಳ್ಳಲಾಗಿದೆ. ವೈರಲ್ ಚಿತ್ರದೊಳಗಿನ ಹಿಂದಿ ಪಠ್ಯವು, “ದೇಶದ ಶತ್ರು ಅಬು ಸಲೇಂನೊಂದಿಗೆ ಭಕ್ತರ ಸಿಂಹಿಣಿಯ ಸ್ಮರಣೀಯ ಕ್ಷಣಗಳು” (ಅನುವಾದಿಸಲಾಗಿದೆ) ಎಂದು ಹೇಳುತ್ತದೆ.

ಮೇ ೨೬, ೨೦೨೪ ರಂದು ಎಕ್ಸ್ ನಲ್ಲಿ ಹಂಚಿಕೊಳ್ಳಲಾದ ವೈರಲ್ ಚಿತ್ರದ ಸ್ಕ್ರೀನ್‌ಶಾಟ್.


ಪುರಾವೆ:

ಅಪರಾಧಿಯ ಕುರಿತಾದ ಸುದ್ದಿ ವರದಿಗಳನ್ನು ಉಲ್ಲೇಖಿಸಿ ವೈರಲ್ ಚಿತ್ರದಲ್ಲಿರುವ ವ್ಯಕ್ತಿ ಅಬು ಸಲೇಂ ಅಲ್ಲ ಎಂದು ನಾವು ಖಚಿತಪಡಿಸಿದ್ದೇವೆ. ಜನವರಿ ೨೦೨೪ ರಲ್ಲಿ ಪ್ರಕಟವಾದ ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿಯು ಅವರ ಫೋಟೋವನ್ನು ಹೊಂದಿದೆ, ಅದು ವೈರಲ್ ಚಿತ್ರದಲ್ಲಿರುವ ವ್ಯಕ್ತಿಯೊಂದಿಗೆ ಹೊಂದಿಕೆಯಾಗುವುದಿಲ್ಲ.

ಅಬು ಸಲೇಂನ ಫೋಟೋವನ್ನು ಹೊಂದಿರುವ ಜನವರಿ ೨೦೨೪ ರ ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿಯ ಸ್ಕ್ರೀನ್‌ಶಾಟ್.


ಮಾಜಿ ಪತ್ರಕರ್ತ ಮಾರ್ಕ್ ಮ್ಯಾನುಯೆಲ್ ಅವರೊಂದಿಗಿನ ಫೋಟೋವನ್ನು ಅಪರಾಧಿ ಅಬು ಸಲೇಂ ಅವರೊಂದಿಗಿನ ಚಿತ್ರ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ ಎಂದು ಕಂಗನಾ ರಣಾವತ್ ಇನ್‌ಸ್ಟಾಗ್ರಾಮ್‌ನಲ್ಲಿ ಸ್ಪಷ್ಟಪಡಿಸಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ಮತ್ತು ಇತರ ಸುದ್ದಿವಾಹಿನಿಗಳು ವರದಿ ಮಾಡಿವೆ. ಇದರ ಆಧಾರದ ಮೇಲೆ, ನಾವು ಮಾರ್ಕ್ ಮ್ಯಾನುಯೆಲ್ ಅವರ ಇನ್ಸ್ಟಾಗ್ರಾಮ್ ಮತ್ತು ಫೇಸ್‌ಬುಕ್ ಖಾತೆಗಳನ್ನು ಪರಿಶೀಲಿಸಿದ್ದೇವೆ. ಮ್ಯಾನುಯೆಲ್ ಅವರು ಟೈಮ್ಸ್ ಆಫ್ ಇಂಡಿಯಾದಲ್ಲಿ ಮಾಜಿ ಸಂಪಾದಕರಾಗಿದ್ದಾರು ಮತ್ತು ಮಿಡ್-ಡೇಯಲ್ಲಿ ಪತ್ರಕರ್ತರಾಗಿ ಕೆಲಸ ಮಾಡಿದ್ದಾರೆ ಎಂದು ನಮ್ಮ ಸಂಶೋಧನೆಗಳು ಬಹಿರಂಗಪಡಿಸುತ್ತವೆ. ಅವರು ಹಿಂದೂಸ್ತಾನ್ ಟೈಮ್ಸ್ ಮತ್ತು ಹಫ್‌ಪೋಸ್ಟ್‌ ನಲ್ಲಿ ಅಂಕಣಕಾರರಾಗಿಯೂ ಸೇವೆ ಸಲ್ಲಿಸಿದ್ದಾರೆ.

ವೈರಲ್ ಚಿತ್ರವನ್ನು ಮೂಲತಃ ಮ್ಯಾನುಯೆಲ್ ಅವರು ಸೆಪ್ಟೆಂಬರ್ ೧೫, ೨೦೧೭ ರಂದು ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅದೇ ದಿನದಿಂದ ಅವರ ಹಂಚಿಕೊಂಡ ಫೇಸ್‌ಬುಕ್ ಪೋಷ್ಟ್ ನಲ್ಲಿ ಹೆಚ್ಚಿನ ಮಾಹಿತಿ ಲಭ್ಯವಿದೆ ಎಂದು ಶೀರ್ಷಿಕೆ ಹೇಳಿದೆ. "ಕೆಲವು ತಿಂಗಳ ಹಿಂದೆ" ಬಿಡುಗಡೆಯಾದ ಕಂಗನಾ ಅವರ ಚಲನಚಿತ್ರ 'ಸಿಮ್ರಾನ್' ಅನ್ನು ಆಚರಿಸುವ ಶಾಂಪೇನ್ ಬ್ರಂಚ್‌ನಲ್ಲಿ ಖಾರ್‌ನ ಕಾರ್ನರ್ ಹೌಸ್‌ನಲ್ಲಿ ಆ ಫೋಟೋವನ್ನು ತೆಗೆಯಲಾಗಿತ್ತು ಎಂಬ ಶೀರ್ಷಿಕೆಯೊಂದಿಗೆ ಅವರು ಅದೇ ಚಿತ್ರವನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ.

೨೦೨೩ ರ ಅಕ್ಟೋಬರ್‌ನಲ್ಲಿ ಅದೇ ಹೇಳಿಕೆಯೊಂದಿಗೆ ಫೋಟೋ ವೈರಲ್ ಆದ ನಂತರ ಮ್ಯಾನುಯೆಲ್ ಫೇಸ್‌ಬುಕ್‌ನಲ್ಲಿ ಅದರ ಬಗ್ಗೆ ಸ್ಪಷ್ಟೀಕರಣವನ್ನು ಹಂಚಿಕೊಂಡಿದ್ದಾರೆ. ಚಿತ್ರವು ೨೦೧೭ ರ ಹಫ್‌ಪೋಸ್ಟ್ ವರದಿಯಿಂದ ಬಂದಿದೆ ಎಂದು ಅವರು ಶೀರ್ಷಿಕೆಯಲ್ಲಿ ಹೇಳಿದ್ದಾರೆ. ರಣಾವತ್ ಕೂಡ ಅಕ್ಟೋಬರ್ ೧, ೨೦೨೩ ರಂದು ಎಕ್ಸ್‌ನಲ್ಲಿ ಅವರ ಪಕ್ಕದಲ್ಲಿರುವ ವ್ಯಕ್ತಿ ಪತ್ರಕರ್ತ ಮಾರ್ಕ್ ಮ್ಯಾನುಯೆಲ್, ಅಪರಾಧಿ ಅಬು ಸಲೇಂ ಅಲ್ಲ ಎಂದು ಸ್ಪಷ್ಟಪಡಿಸಿದ್ದರು.

ಅಕ್ಟೋಬರ್ ೨೦೨೩ ರಲ್ಲಿ ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳಲಾದ ಮಾರ್ಕ್ ಮ್ಯಾನುಯೆಲ್ ಅವರ ಸ್ಪಷ್ಟೀಕರಣದ ಸ್ಕ್ರೀನ್‌ಶಾಟ್.


ತೀರ್ಪು:

ಈ ಹೇಳಿಕೆಯ ವಿಶ್ಲೇಷಣೆಯು ಪತ್ರಕರ್ತ ಮಾರ್ಕ್ ಮ್ಯಾನುಯೆಲ್ ಅವರೊಂದಿಗೆ ಕಂಗನಾ ಫೋಟೋಗೆ ಪೋಸ್ ನೀಡುತ್ತಿರುವುದನ್ನು ತಪ್ಪಾಗಿ ಹಂಚಿಕೊಳ್ಳಲಾಗಿದೆ ಎಂದು ಬಹಿರಂಗಪಡಿಸುತ್ತದೆ. ರಣಾವತ್ ಮತ್ತು ಮ್ಯಾನುಯೆಲ್ ಇಬ್ಬರೂ ೨೦೧೭ ರ ಈ ಚಿತ್ರದ ಬಗ್ಗೆ ಸ್ಪಷ್ಟೀಕರಣಗಳನ್ನು ನೀಡಿದ್ದಾರೆ. ಆದ್ದರಿಂದ, ಈ ಹೇಳಿಕೆ ತಪ್ಪು.

Claim :  Journalist beside Kangana Ranaut misidentified as gangster Abu Salem
Claimed By :  X user
Fact Check :  False
Tags:    

Similar News