ಇಲ್ಲ, ಇಂಡಿಯಾ ನ್ಯೂಸ್ ೨೦೨೪ ರ ಲೋಕಸಭಾ ಚುನಾವಣೆಯ ಎಕ್ಸಿಟ್ ಪೋಲ್ ಅನ್ನು ಬಿಡುಗಡೆ ಮಾಡಿಲ್ಲ
ಸಾರಾಂಶ:
ಸಾಮಾಜಿಕ ಮಾಧ್ಯಮ ಬಳಕೆದಾರರು ೨೦೨೪ ರ ಸಾರ್ವತ್ರಿಕ ಚುನಾವಣೆಗಳ ಇಂಡಿಯಾ ನ್ಯೂಸ್‌ನ ಎಕ್ಸಿಟ್ ಪೋಲ್‌ನದ್ದು ಎಂದು ಹೇಳಿಕೊಂಡು ಚಿತ್ರವೊಂದನ್ನು ಹಂಚಿಕೊಂಡಿದ್ದಾರೆ. ಆದರೆ, ವೈರಲ್ ಚಿತ್ರವು ಏಪ್ರಿಲ್ ೧೬, ೨೦೨೪ ರಿಂದ ಇಂಡಿಯಾ ನ್ಯೂಸ್ ನ ಚುನಾವಣಾ ಪೂರ್ವ ಸಮೀಕ್ಷೆಯಿಂದ ಬಂದಿದೆ. ಆದ್ದರಿಂದ, ಇಂಡಿಯಾ ನ್ಯೂಸ್ ಇತ್ತೀಚೆಗೆ ಎಕ್ಸಿಟ್ ಪೋಲ್ ಅನ್ನು ಬಿಡುಗಡೆ ಮಾಡಿದೆ ಎಂಬ ಹೇಳಿಕೆಗಳು ತಪ್ಪು.
ಹೇಳಿಕೆ:
ಎಕ್ಸ್ (ಹಿಂದೆ ಟ್ವಿಟ್ಟರ್) ನಲ್ಲಿನ ಬಳಕೆದಾರರು ಇತ್ತೀಚಿನ ಇಂಡಿಯಾ ನ್ಯೂಸ್‌ನ ನಿರ್ಗಮನ ಸಮೀಕ್ಷೆಯನ್ನು ತೋರಿಸುತ್ತದೆ ಎಂದು ಹೇಳಿಕೊಂಡು ಚಿತ್ರವನ್ನು ಹಂಚಿಕೊಂಡಿದ್ದಾರೆ. ಅದು ಇಂಡಿಯಾ ಒಕ್ಕೊಟಕ್ಕೆ ೧೦೯ ಸ್ಥಾನಗಳು ಮತ್ತು ನ್ಯಾಷನಲ್ ಡೆಮಾಕ್ರಟಿಕ್ ಅಲೈಯನ್ಸ್ (ಎನ್‌ಡಿಎ) ಗೆ ೩೮೩ ಸ್ಥಾನಗಳನ್ನು ಊಹಿಸುತ್ತದೆ. ೬೦.೪ ಸಾವಿರ ಅನುಯಾಯಿಗಳನ್ನು ಹೊಂದಿರುವ ಪರಿಶೀಲಿಸಿದ ಬಳಕೆದಾರರು ಮೇ ೩೦, ೨೦೨೪ ರಂದು ಚಿತ್ರವನ್ನು ಹೀಗೆ ಹೇಳಿಕೊಂಡು ಪೋಷ್ಟ್ ಮಾಡಿದ್ದಾರೆ, "ಇದೀಗ ಬಂದ ಸುದ್ದಿ: ಲೈವ್ ಎಕ್ಸಿಟ್ ಪೋಲ್ ಎನ್‌ಡಿಎ - ೩೮೩ ಇಂಡಿಯಾ ಅಲೈಯನ್ಸ್ - ೧೦೯ ಇತರರು - ೫೧. ಮೂಲ - ಇಂಡಿಯಾ ನ್ಯೂಸ್ ಚುನಾವಣೆ 🗳️ ೨೦೨೪ (ಅನುವಾದಿಸಲಾಗಿದೆ)." ಈ ಪೋಷ್ಟ್ ೭.೯ ಸಾವಿರ ವೀಕ್ಷಣೆಗಳನ್ನು ಗಳಿಸಿದೆ.
ಎಕ್ಸ್ ನಲ್ಲಿ ಹಂಚಿಕೊಂಡ ಎಕ್ಸಿಟ್ ಪೋಲ್ ನದ್ದು ಎಂದು ಹೇಳಿಕೊಳ್ಳುವ ಚಿತ್ರದ ಸ್ಕ್ರೀನ್‌ಶಾಟ್.
ಫೇಸ್‌ಬುಕ್ ನಂತಹ ಪ್ಲಾಟ್‌ಫಾರ್ಮ್‌ಗಳಲ್ಲಿ ಕೂಡ ಇತರ ಸಾಮಾಜಿಕ ಮಾಧ್ಯಮ ಬಳಕೆದಾರರು ಇದೇ ಚಿತ್ರವನ್ನು ಹಂಚಿಕೊಂಡಿದ್ದಾರೆ.
ಪುರಾವೆ:
ನಾವು ವೈರಲ್ ಚಿತ್ರವನ್ನು ವಿಶ್ಲೇಷಿಸಿದಾಗ ಅದರಲ್ಲಿ ಇಂಡಿಯಾ ನ್ಯೂಸ್ ಲೋಗೋವನ್ನು ಗುರುತಿಸಿದ್ದೇವೆ ಮತ್ತು ಅದರಲ್ಲಿ "ಇತ್ತೀಚಿನ ಅಭಿಪ್ರಾಯ ಸಂಗ್ರಹಗಳು ರಾಜಸ್ಥಾನ ೨೦೨೪ (ಅನುವಾದಿಸಲಾಗಿದೆ)" ಎಂದು ಹೇಳುತ್ತದೆ. ನಾವು "ಇಂಡಿಯಾ ನ್ಯೂಸ್," "ರಾಜಸ್ಥಾನ," ಮತ್ತು "ಅಭಿಪ್ರಾಯ ಸಂಗ್ರಹಣೆ" ಮೊದಲಾದ ಕೀವರ್ಡ್‌ಗಳನ್ನು ಬಳಸಿಕೊಂಡು ಹುಡುಕಾಟವನ್ನು ನಡೆಸಿದ್ದೇವೆ, ಮತ್ತು ಏಪ್ರಿಲ್ ೧೬, ೨೦೨೪ ರಂದು ಯೂಟ್ಯೂಬ್ ನಲ್ಲಿ ಇಂಡಿಯಾ ನ್ಯೂಸ್ ಹಂಚಿಕೊಂಡ ಚುನಾವಣಾ-ಪೂರ್ವ ಸಮೀಕ್ಷೆಯ ವೀಡಿಯೋವಿಗೆ ನಮ್ಮನ್ನು ಕರೆದೊಯ್ಯಿತು. ವೀಡಿಯೋದ ಹಿಂದಿ ಶೀರ್ಷಿಕೆಯು ಹೀಗಿದೆ, " ಲೋಕಸಭೆ ಚುನಾವಣೆ ಸಮೀಕ್ಷೆ: ರಾಜಸ್ಥಾನದ ಅಭಿಪ್ರಾಯ ಸಂಗ್ರಹದಲ್ಲಿ ಜಲೋರ್‌ನಿಂದ ಯಾರು ಗೆಲ್ಲುತ್ತಾರೆ?| ಇಂಡಿಯಾ ನ್ಯೂಸ್ (ಅನುವಾದಿಸಲಾಗಿದೆ)."
ಏಪ್ರಿಲ್ ೧೬, ೨೦೨೪ ರಂದು ಇಂಡಿಯಾ ನ್ಯೂಸ್ ಚುನಾವಣಾ-ಪೂರ್ವ ಸಮೀಕ್ಷೆಯ ವೀಡಿಯೋದ ಸ್ಕ್ರೀನ್‌ಶಾಟ್.
ವೈರಲ್ ಚಿತ್ರವು ವೀಡಿಯೋದ ೦:೫೮ ನಿಮಿಷಗಳ ಟೈಮ್‌ಸ್ಟ್ಯಾಂಪ್‌ನಲ್ಲಿರುವ ಕೀಫ್ರೇಮ್‌ಗೆ ಹೊಂದಿಕೆಯಾಗುತ್ತದೆ ಮತ್ತು ರಾಜಸ್ಥಾನದ ಜಲೋರ್ ಕ್ಷೇತ್ರದ ಅಭಿಪ್ರಾಯ ಸಂಗ್ರಹವನ್ನು ತೋರಿಸುತ್ತದೆ ಎಂದು ನಾವು ಕಂಡುಕೊಂಡಿದ್ದೇವೆ.
ಏಪ್ರಿಲ್ ೧೯, ೨೦೨೪ ರಂದು ಹಂಚಿಕೊಂಡ ಭಾರತೀಯ ಚುನಾವಣಾ ಆಯೋಗದ (ಇಸಿಐ) ಎಕ್ಸ್ ಪೋಷ್ಟ್ ಪ್ರಕಾರ, ಎಕ್ಸಿಟ್ ಪೋಲ್‌ಗಳ ಬಿಡುಗಡೆಯನ್ನು ಏಪ್ರಿಲ್ ೧೯, ೨೦೨೪ ರಿಂದ ಜೂನ್ ೧, ೨೦೨೪ ರವರೆಗೆ ಪ್ರಕಟಿಸುವುದನ್ನು ನಿಷೇಧಿಸಲಾಗಿದೆ.
ತೀರ್ಪು:
ಏಪ್ರಿಲ್ ೧೬, ೨೦೨೪ ರ ರಾಜಸ್ಥಾನದ ಬಗ್ಗೆಯ ಇಂಡಿಯಾ ನ್ಯೂಸ್ ಅಭಿಪ್ರಾಯ ಸಂಗ್ರಹದ ವೀಡಿಯೋದ ಸ್ಕ್ರೀನ್‌ಶಾಟ್ ಅನ್ನು ಇತ್ತೀಚಿನ ಎಕ್ಸಿಟ್ ಪೋಲ್ ಎಂದು ಪ್ರಸಾರ ಮಾಡಲಾಗಿದೆ ಎಂದು ಚಿತ್ರದ ವಿಶ್ಲೇಷಣೆ ಬಹಿರಂಗಪಡಿಸುತ್ತದೆ; ಆದ್ದರಿಂದ, ಇಂಡಿಯಾ ನ್ಯೂಸ್ ಪ್ರಸ್ತುತ ಚುನಾವಣೆಗೆ ಸಂಬಂಧಿಸಿದಂತೆ ಎಕ್ಸಿಟ್ ಪೋಲ್ ಅನ್ನು ಬಿಡುಗಡೆ ಮಾಡಿದೆ ಎಂಬ ಹೇಳಿಕೆಗಳು ತಪ್ಪು.