ರಾಯ್ಬರೇಲಿಯಲ್ಲಿ ನಾಮಪತ್ರ ಸಲ್ಲಿಸಿದ ನಂತರ ರಾಹುಲ್ ಗಾಂಧಿ ಅಯೋಧ್ಯೆ ಮಂದಿರಕ್ಕೆ ಭೇಟಿ ನೀಡಲಿಲ್ಲ.
ಸಾರಾಂಶ:
೨೦೨೪ ರ ಲೋಕಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಿದ ನಂತರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅಯೋಧ್ಯೆಯ ರಾಮಮಂದಿರಕ್ಕೆ ಭೇಟಿ ನೀಡಿದ್ದರು, ಅಲ್ಲಿ ಅವರು "ಜೈ ಶ್ರೀ ರಾಮ್" ಮತ್ತು ಮೋದಿ ಪರ ಘೋಷಣೆಗಳನ್ನು ಎದುರಿಸಿದರು ಎಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ವೀಡಿಯೋ ಹಂಚಿಕೊಳ್ಳಲಾಗಿದೆ. ನಮ್ಮ ಸಂಶೋಧನೆಗಳಲ್ಲಿ, ಮೂಲ ವೀಡಿಯೋ ಫೆಬ್ರವರಿ ೩, ೨೦೨೪ ರಂದು, ರಾಹುಲ್ ಗಾಂಧಿ ಅವರ ಭಾರತ್ ಜೋಡೋ ನ್ಯಾಯ್ ಯಾತ್ರೆಯ ಸಮಯದಲ್ಲಿ ಅವರು ಜಾರ್ಖಂಡ್‌ನ ದಿಯೋಘರ್‌ನಲ್ಲಿರುವ ಹಿಂದೂ ದೇವಾಲಯಕ್ಕೆ ಭೇಟಿ ನೀಡಿದಾಗ ತೆಗೆದದ್ದು ಎಂದು ಕಂಡು ಬಂದಿದೆ. ಫೆಬ್ರವರಿ ೨೦೨೪ ರ ಈ ವೀಡಿಯೋವನ್ನು ರಾಹುಲ್ ಗಾಂಧಿ ಅಯೋಧ್ಯೆಗೆ ಈಗ ಭೇಟಿ ನೀಡುತ್ತಿದ್ದಾರೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.
ಹೇಳಿಕೆ:
ರಾಯ್ಬರೇಲಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ೨೦೨೪ ರ ಲೋಕಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಿದ ನಂತರ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿರುವ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ ಎಂದು ಹೇಳುವ ವೀಡಿಯೋವನ್ನು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ದೇವಸ್ಥಾನದಿಂದ ನಿರ್ಗಮಿಸುವಾಗ ಅವರನ್ನು "ಜೈ ಶ್ರೀ ರಾಮ್" ಮತ್ತು ಮೋದಿ ಪರ ಘೋಷಣೆಗಳೊಂದಿಗೆ ವಿರೋಧಿಸುವುದನ್ನು ವೈರಲ್ ವೀಡಿಯೋ ತೋರಿಸಿದೆ.
ಅಂತಹ ಒಂದು ವೀಡಿಯೋವನ್ನು ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ ಈ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ: “ರಾಹುಲ್ ಗಾಂಧಿ ರಾಯ್ ಬರೇಲಿಯಿಂದ ತಮ್ಮ ನಾಮಪತ್ರ ಸಲ್ಲಿಸಿದ ನಂತರ ಅಯೋಧ್ಯೆಗೆ ಭೇಟಿ ನೀಡುತ್ತಾರೆ. ಜನಸಮೂಹ ಮೋದಿ ಮೋದಿ ಎಂದು ಕೂಗುತ್ತದೆ (ಅನುವಾದಿಸಲಾಗಿದೆ).” ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ನಲ್ಲಿ ಹಲವಾರು ಇತರ ಸಾಮಾಜಿಕ ಮಾಧ್ಯಮ ಬಳಕೆದಾರರು ಈದೇ ರೀತಿಯ ಶೀರ್ಷಿಕೆಗಳೊಂದಿಗೆ ಅದೇ ಕ್ಲಿಪ್ ಅನ್ನು ಹಂಚಿಕೊಂಡಿದ್ದಾರೆ.
ರಾಯ್‌ಬರೇಲಿಯಲ್ಲಿ ನಾಮಪತ್ರ ಸಲ್ಲಿಸಿದ ನಂತರ ರಾಹುಲ್ ಗಾಂಧಿ ಅಯೋಧ್ಯೆ ರಾಮ ಮಂದಿರಕ್ಕೆ ಭೇಟಿ ನೀಡಿದ್ದಾರೆ ಎಂದು ಹೇಳಿಕೊಂಡು ಎಕ್ಸ್ ಎಕ್ಸ್ ನಲ್ಲಿ ಹಂಚಿಕೊಂಡ ಪೋಷ್ಟ್ ನ ಸ್ಕ್ರೀನ್‌ಶಾಟ್.
ಪುರಾವೆ:
ರಾಹುಲ್ ಗಾಂಧಿ ಅವರು ನಾಮಪತ್ರ ಸಲ್ಲಿಸಿದ ನಂತರ ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರಕ್ಕೆ ಭೇಟಿ ನೀಡಿದ ಯಾವುದೇ ವಿಶ್ವಾಸಾರ್ಹ ಸುದ್ದಿ ವರದಿಗಳು ನಮಗೆ ಕಂಡುಬಂದಿಲ್ಲ.
ವೈರಲ್ ವೀಡಿಯೋದ ಕೀಫ್ರೇಮ್‌ಗಳ ರಿವರ್ಸ್ ಇಮೇಜ್ ಸರ್ಚ್ ಫೆಬ್ರವರಿ ೩, ೨೦೨೪ ರಂದು ರಿಪಬ್ಲಿಕ್ ವರ್ಲ್ಡ್ ಅಪ್‌ಲೋಡ್ ಮಾಡಿದ ಯೂಟ್ಯೂಬ್ ವೀಡಿಯೋಗೆ ನಮ್ಮನ್ನು ಕರೆದೊಯ್ಯಿತು. "ವೀಕ್ಷಿಸಿ: ರಾಹುಲ್ ಗಾಂಧಿ ಮತ್ತೊಮ್ಮೆ ಮುಜುಗರಕ್ಕೊಳಗಾದರು, ಬಾಬಾ ಬೈದ್ಯನಾಥ್ ಧಾಮ್‌ನಲ್ಲಿ ಮೋದಿ-ಮೋದಿ ಪಠಣಗಳೊಂದಿಗೆ ಸ್ವಾಗತಿಸಿದರು (ಅನುವಾದಿಸಲಾಗಿದೆ).” ಈ ವೀಡಿಯೋವನ್ನು ನೋಡಿದಾಗ, ಈಗ ವೈರಲ್ ಆಗಿರುವ ವೀಡಿಯೋದ ದೃಶ್ಯಗಳು ಫೆಬ್ರವರಿ ೩, ೨೦೨೪ ರಂದು ಜಾರ್ಖಂಡ್‌ನ ದಿಯೋಘರ್‌ನ ಬಾಬಾ ಬೈದ್ಯನಾಥ ಧಾಮ್‌ನಲ್ಲಿ ನಡೆದ ಘಟನೆ ಎಂಬುದು ಸ್ಪಷ್ಟವಾಗಿದೆ. ಭಾರತ್ ಜೋಡೋ ನ್ಯಾಯ್ ಯಾತ್ರೆಯ ಸಂದರ್ಭದಲ್ಲಿ ರಾಹುಲ್ ಗಾಂಧಿಯವರ ಈ ದೇವಾಲಯದ ಭೇಟಿಯನ್ನು ಕೈಕೊಂಡರು.
ಫೆಬ್ರವರಿ ೩, ೨೦೨೪ ರಂದು ಜಾರ್ಖಂಡ್‌ನ ಬಾಬಾ ಬೈದ್ಯನಾಥ ಧಾಮಕ್ಕೆ ಭೇಟಿ ನೀಡಿದ ರಾಹುಲ್ ಗಾಂಧಿಯವರ ರಿಪಬ್ಲಿಕ್ ವರ್ಲ್ಡ್ ಅಪ್‌ಲೋಡ್ ಮಾಡಿದ ಮೂಲ ಯೌಟ್ಯೂಬ್ ವೀಡಿಯೋದ ಸ್ಕ್ರೀನ್‌ಶಾಟ್.
"ರಾಹುಲ್ ಗಾಂಧಿ ಜಾರ್ಖಂಡ್‌ನ ಬಾಬಾ ಬೈದ್ಯನಾಥ ಧಾಮಕ್ಕೆ ಭೇಟಿ ನೀಡುತ್ತಿದ್ದಂತೆ ಜನಸಮೂಹವು 'ಮೋದಿ, ಮೋದಿ' ಘೋಷಣೆಗಳನ್ನು ಎತ್ತುತ್ತದೆ" (ಅನುವಾದಿಸಲಾಗಿದೆ) ಎಂಬ ಶೀರ್ಷಿಕೆಯಡಿಯಲ್ಲಿ ಎಎನ್‌ಐ ಅಪ್‌ಲೋಡ್ ಮಾಡಿದ ವೀಡಿಯೋವನ್ನು ವಿಶ್ಲೇಷಿಸಿದ ನಂತರ, ಅವರು ದೇವಸ್ಥಾನಕ್ಕೆ ಪ್ರವೇಶಿಸುವಾಗ ಮತ್ತು ಪ್ರಾರ್ಥನೆ ಸಲ್ಲಿಸುವಾಗ ನಾವು “ರಾಹುಲ್ ಗಾಂಧಿ ಜಿಂದಾಬಾದ್” ಘೋಷಣೆಗಳನ್ನು ಕೇಳಬಹುದು. ಆದರೆ ಅವರು ನಿರ್ಗಮಿಸುವಾಗ ಅವರನ್ನು “ಮೋದಿ-ಮೋದಿ” ಘೋಷಣೆಗಳೊಂದಿಗೆ ಟೀಕಿಸಲಾಗಿದೆ.
ಫೆಬ್ರವರಿ ೩, ೨೦೨೪ ರಂದು ಎಬಿಪಿ ಲೈವ್ ಪ್ರಕಟಿಸಿದ ಮತ್ತೊಂದು ವರದಿ ಮತ್ತು ಚಿತ್ರಗಳು, "ರಾಹುಲ್ ಗಾಂಧಿ ಅವರು ಜಾರ್ಖಂಡ್‌ನ ಬಾಬಾ ಬೈಧನಾಥ್ ಧಾಮದಲ್ಲಿ ರುದ್ರಾಭಿಷೇಕ ಮಾಡಿದರು ಮತ್ತು ದೇಶದ ಸಂತೋಷ, ಶಾಂತಿ ಮತ್ತು ಸಮೃದ್ಧಿಗಾಗಿ ಪ್ರಾರ್ಥಿಸಿದರು (ಅನುವಾದಿಸಲಾಗಿದೆ).” ಎಂದು ಹೇಳಲಾಗಿದೆ.
ಜಾರ್ಖಂಡ್‌ನ ಬಾಬಾ ಬೈದ್ಯನಾಥ ಧಾಮ್‌ಗೆ ರಾಹುಲ್ ಗಾಂಧಿಯವರ ಭೇಟಿಯ ಚಿತ್ರಗಳನ್ನು ಪ್ರಕಟಿಸುವ ಎಬಿಪಿ ಲೈವ್ ವರದಿಯ ಸ್ಕ್ರೀನ್‌ಶಾಟ್.
ಜನವರಿ ೨೨, ೨೦೨೪ ರಂದು ರಾಮಲಲ್ಲಾ ವಿಗ್ರಹವನ್ನು ಪ್ರತಿಷ್ಠಾಪಿಸಿದ ನಂತರ ರಾಹುಲ್ ಗಾಂಧಿ ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿಗೆ ಭೇಟಿ ನೀಡಿಲ್ಲ. ರಾಯ್ ಬರೇಲಿಯಲ್ಲಿ ನಾಮಪತ್ರ ಸಲ್ಲಿಸಿದ ನಂತರ ರಾಹುಲ್ ಗಾಂಧಿ ಅಯೋಧ್ಯೆಗೆ ಭೇಟಿ ನೀಡಿದ್ದಾರೆ ಎಂದು ಹೇಳುವ ವೀಡಿಯೋ ತಪ್ಪು ಎಂದು ಇದು ಸಾಬೀತುಪಡಿಸುತ್ತದೆ.
ತೀರ್ಪು:
ರಾಯ್ ಬರೇಲಿ ಲೋಕಸಭಾ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿದ ಬಳಿಕ ರಾಹುಲ್ ಗಾಂಧಿ ಅಯೋಧ್ಯೆಯ ರಾಮಮಂದಿರಕ್ಕೆ ಭೇಟಿ ನೀಡುತ್ತಿರುವುದಾಗಿ ತೋರಿಸಿ ಹಂಚಿಕೊಂಡ ಪೋಷ್ಟ್ ಗಳ ವೀಡಿಯೋ ತಪ್ಪು. ಜಾರ್ಖಂಡ್‌ನಲ್ಲಿ ಭಾರತ್ ಜೋಡೋ ನ್ಯಾಯ್ ಯಾತ್ರೆಯ ಸಂದರ್ಭದಲ್ಲಿ ಅವರು ಭೇಟಿ ನೀಡಿದ ದಿಯೋಘರ್‌ನಲ್ಲಿರುವ ಬಾಬಾ ಬೈದ್ಯನಾಥ್ ಧಾಮ್‌ನಿಂದ ವೀಡಿಯೋ ಇದು. ಇದಲ್ಲದೆ, ಜನರು ಆರಂಭದಲ್ಲಿ “ರಾಹುಲ್ ಗಾಂಧಿ ಜಿಂದಾಬಾದ್” ಘೋಷಣೆಗಳನ್ನು ಕೂಗಿದರು ಮತ್ತು ನಂತರ ಮೋದಿ ಪರ ಘೋಷಣೆಗಳನ್ನು ಕೂಗಿದರು ಎಂದು ವೀಡಿಯೋದ ವಿಶ್ಲೇಷಣೆಯು ತೋರಿಸುತ್ತದೆ.