ಇಲ್ಲ, ಕಾಂಗ್ರೆಸ್ ಶಾಸಕರೊಬ್ಬರು ಇವಿಎಂ ಘಟಕಕ್ಕೆ ಹಾನಿ ಮಾಡಿರುವುದನ್ನು ವೀಡಿಯೋ ತೋರಿಸುತ್ತಿಲ್ಲ
ಸಾರಾಂಶ:
ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ ಸಾಮಾಜಿಕ ಮಾಧ್ಯಮ ಬಳಕೆದಾರರು ನಡೆಯುತ್ತಿರುವ ಸಾರ್ವತ್ರಿಕ ಚುನಾವಣೆಯ ಸಮಯದಲ್ಲಿ ಕಾಂಗ್ರೆಸ್ ಶಾಸಕರೊಬ್ಬರು ಇವಿಎಂ ಘಟಕವನ್ನು ಒಡೆಯುವುದನ್ನು ತೋರಿಸುತ್ತದೆ ಎಂದು ಹೇಳಿಕೊಂಡು ವೀಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಈ ಘಟನೆಯು ಮೇ ೧೩, ೨೦೨೪ ರಂದು ಸಂಭವಿಸಿದ್ದರೂ, ಆಂಧ್ರಪ್ರದೇಶದಲ್ಲಿ ಯುವಜನ ಶ್ರಮಿಕ ರೈತ ಕಾಂಗ್ರೆಸ್ ಪಕ್ಷದ (ವೈಎಸ್‌ಆರ್‌ಸಿಪಿ) ಶಾಸಕರೊಬ್ಬರು ಮತದಾನ ಯಂತ್ರವನ್ನು ಹಾನಿಗೊಳಿಸಿದ್ದಾರೆ ಎಂಬುದನ್ನು ಗಮನಿಸಬೇಕು. ಹೀಗಾಗಿ ವೀಡಿಯೋದಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ ಎಂಬ ಆರೋಪ ತಪ್ಪು.
ಹೇಳಿಕೆ:
ಎಕ್ಸ್ ನಲ್ಲಿನ ಬಳಕೆದಾರರು ಒಬ್ಬ ವ್ಯಕ್ತಿಯು ಇವಿಎಂ ಘಟಕವನ್ನು ಹಾನಿಗೊಳಿಸುತ್ತಿರುವುದನ್ನು ತೋರಿಸುವ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ೪.೬ ಸಾವಿರ ಅನುಯಾಯಿಗಳನ್ನು ಹೊಂದಿರುವ ಬಳಕೆದಾರರು ಮೇ ೨೨, ೨೦೨೪ ರಂದು ವೀಡಿಯೋವನ್ನು ಪೋಷ್ಟ್ ಮಾಡಿದ್ದಾರೆ. ಮಲಯಾಳಂ ನಲ್ಲಿರುವ ಇದರ ಶೀರ್ಷಿಕೆ ಹೀಗಿದೆ, "ಕಾಂಗ್ರೆಸ್ ಶಾಸಕರು ಮತದಾನ ಯಂತ್ರವನ್ನು ಒಡೆಯುತ್ತಾರೆ. ಈಗ, ಸೋಲುವ ಭಯ ಪ್ರಾರಂಭವಾಗಿದೆ. (ಕನ್ನಡಕ್ಕೆ ಅನುವಾದಿಸಲಾಗಿದೆ)."
ಕಾಂಗ್ರೆಸ್ ಶಾಸಕರೊಬ್ಬರು ಇವಿಎಂ ಒಡೆಯುತ್ತಿರುವುದನ್ನು ತೋರಿಸುತ್ತದೆ ಎಂದು ಹೇಳಿಕೊಂಡು ಎಕ್ಸ್‌ನಲ್ಲಿ ಪೋಷ್ಟ್ ಮಾಡಲಾದ ವೀಡಿಯೋದ ಸ್ಕ್ರೀನ್‌ಶಾಟ್.
ಫೇಸ್‌ಬುಕ್‌ನಲ್ಲಿ ಇತರ ಸಾಮಾಜಿಕ ಮಾಧ್ಯಮ ಬಳಕೆದಾರರು ಇದೇ ರೀತಿಯ ಶೀರ್ಷಿಕೆಯೊಂದಿಗೆ ವೀಡಿಯೋವನ್ನು ಹಂಚಿಕೊಂಡಿದ್ದಾರೆ.
ಪುರಾವೆ:
ಕ್ಲಿಪ್‌ನ ಎಡ ಮೇಲ್ಭಾಗದ ಮೂಲೆಯಲ್ಲಿ ಮೇ ೨೨, ೨೦೨೪ ರಂದು ಉಲ್ಲೇಖಿಸಲಾದ ವೈರಲ್ ವೀಡಿಯೋವನ್ನು ನಾವು ವಿಶ್ಲೇಷಿಸಿದ್ದೇವೆ. ವೀಡಿಯೋದಲ್ಲಿನ ಮಲಯಾಳಂ ಪಠ್ಯವು, "ಆಂಧ್ರಪ್ರದೇಶದ ಮತಗಟ್ಟೆಯನ್ನು ತಲುಪಿದ ನಂತರ ಶಾಸಕರು ಇವಿಎಂ ಒಡೆಯುವ ದೃಶ್ಯಗಳು (ಕನ್ನಡಕ್ಕೆ ಅನುವಾದಿಸಲಾಗಿದೆ)" ಎಂದು ಓದುತ್ತದೆ. ವೀಡಿಯೋ ಮಲಯಾಳಂ ಸುದ್ದಿ ಮಾಧ್ಯಮವಾದ ಏಷ್ಯಾನೆಟ್ ನ್ಯೂಸ್ ನ ಲೋಗೋವನ್ನು ಹೊಂದಿದೆ.
ನಾವು ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದ್ದೇವೆ, ಮತ್ತು ಇದು ವೈರಲ್ ವೀಡಿಯೋದ ದೃಶ್ಯಗಳನ್ನು ಹೊಂದಿರುವ ಮೇ ೨೨, ೨೦೨೪ ರ ರಿಂದಏಷ್ಯಾನೆಟ್ ನ್ಯೂಸ್ ಇನ್‌ಸ್ಟಾಗ್ರಾಮ್ ಪೋಷ್ಟ್ ಗೆ ನಮ್ಮನ್ನು ಕರೆದೊಯ್ದಿದೆ. ಮಲಯಾಳಂನಲ್ಲಿರುವ ಪೋಷ್ಟ್ ನ ಶೀರ್ಷಿಕೆ ಹೀಗಿದೆ, "ತುಣುಕುಗಳು ವೈರಲ್ ಆದ ನಂತರ ಚುನಾವಣಾ ಆಯೋಗವು ವೈಎಸ್‌ಆರ್ ಕಾಂಗ್ರೆಸ್ ಪಕ್ಷದ ಶಾಸಕ ವಿರುದ್ಧ ತನಿಖೆಯನ್ನು ಆರಂಭಿಸಿದೆ #YSRCPMLA #EVMVandalism #AndraPradesh #LoksabhaElection #ElectionCommission (ಕನ್ನಡಕ್ಕೆ ಅನುವಾದಿಸಲಾಗಿದೆ)." ಪೋಸ್ಟ್‌ನಲ್ಲಿ #YSRCPMLA, #EVMVandalism, #AndraPradesh, #LoksabhaElection, ಮತ್ತು #ElectionCommission ಮುಂತಾದ ಹ್ಯಾಶ್‌ಟ್ಯಾಗ್‌ಗಳನ್ನು ಬಳಸಲಾಗಿದೆ.
ಮೇ ೨೨, ೨೦೨೪ ರಂದು ಏಷ್ಯಾನೆಟ್ ನ್ಯೂಸ್ ಹಂಚಿಕೊಂಡ ಇನ್ಸ್ಟಾಗ್ರಾಮ್ ಪೋಷ್ಟ್ ನ ಸ್ಕ್ರೀನ್‌ಶಾಟ್.
ನಾವು "ಆಂಧ್ರ ಪ್ರದೇಶ," "ಎಂಎಲ್‌ಎ," "ಇವಿಎಂ," ಮತ್ತು "ಡ್ಯಾಮೇಜ್" ನಂತಹ ಕೀವರ್ಡ್‌ಗಳನ್ನು ಹುಡುಕಿದಾಗ, ಇದು ವೈರಲ್ ವೀಡಿಯೋದ ಕೀಫ್ರೇಮ್ ಅನ್ನು ಹೊಂದಿರುವ ಮೇ ೨೫, ೨೦೨೪ ರ ದಿ ಹಿಂದೂ ವರದಿಗೆ ನಮ್ಮನ್ನು ಕರೆದೊಯ್ಯಿತು.
ಮೇ ೨೫, ೨೦೨೪ ರ ದಿ ಹಿಂದೂ ವರದಿಯ ಸ್ಕ್ರೀನ್‌ಶಾಟ್.
ವರದಿಯ ಪ್ರಕಾರ, ಆಂಧ್ರಪ್ರದೇಶದ ಪಲ್ನಾಡು ಜಿಲ್ಲೆಯ ಮಾಚೆರ್ಲಾ ವಿಧಾನಸಭಾ ಕ್ಷೇತ್ರದಲ್ಲಿ ಮೇ ೧೩, ೨೦೨೪ ರಂದು ಪ್ರಸ್ತುತ ಲೋಕಸಭಾ ಚುನಾವಣೆಯ ನಾಲ್ಕನೇ ಹಂತದಲ್ಲಿ ಈ ಘಟನೆ ಸಂಭವಿಸಿದೆ. ಮತದಾನದ ದಿನದಂದು ವೈಎಸ್‌ಆರ್‌ಸಿಪಿ ಶಾಸಕ ಪಿನ್ನೆಲ್ಲಿ ರಾಮಕೃಷ್ಣ ರೆಡ್ಡಿ ಅವರು ತಮ್ಮ ಅನುಯಾಯಿಗಳೊಂದಿಗೆ ಪಾಲ್ವಾಯಿ ಗೇಟ್ ಮತಗಟ್ಟೆ ಸಂಖ್ಯೆ ೨೦೨ಕ್ಕೆ ನುಗ್ಗಿ ಇವಿಎಂ ಅನ್ನು ನೆಲಕ್ಕೆ ಎಸೆದು ಒಡೆದು ಹಾಕಿದ್ದಾರೆ. ಆಂಧ್ರಪ್ರದೇಶ ರಾಜ್ಯ ಸರ್ಕಾರ ರಚಿಸಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಘಟನೆಯ ತನಿಖೆ ನಡೆಸಲಿದೆ.
ಮೇ ೨೩, ೨೦೨೪ ರ ಡೆಕ್ಕನ್ ಹೆರಾಲ್ಡ್ ವರದಿಯ ಪ್ರಕಾರ, ಎಸ್‌ಐಟಿ ಈಗ ತಲೆಮರೆಸಿಕೊಂಡಿರುವ ಎಂಎಲ್‌ಎಯನ್ನು ಪ್ರಜಾಪ್ರತಿನಿಧಿ ಕಾಯ್ದೆ ಮತ್ತು ಭಾರತೀಯ ದಂಡ ಸಂಹಿತೆಯ ಕನಿಷ್ಠ ಹತ್ತು ಸೆಕ್ಷನ್‌ಗಳ ಅಡಿಯಲ್ಲಿ ದಾಖಲಿಸಿದೆ ಮತ್ತು ಲುಕ್‌ಔಟ್ ನೋಟಿಸ್ ಬಿಡುಗಡೆ ಮಾಡಿದೆ.
ಇತರ ಸುದ್ದಿ ಮಾಧ್ಯಮಗಳಾದ ಹಿಂದೂಸ್ತಾನ್ ಟೈಮ್ಸ್, ದಿ ಟೈಮ್ಸ್ ಆಫ್ ಇಂಡಿಯಾ ಮತ್ತು ದಿ ಇಂಡಿಯನ್ ಎಕ್ಸ್‌ಪ್ರೆಸ್ ಕೂಡ ಘಟನೆಯನ್ನು ವರದಿ ಮಾಡಿದೆ.
ತೀರ್ಪು:
ಮೇ ೧೩, ೨೦೨೪ ರಂದು ವೈಎಸ್‌ಆರ್‌ಸಿಪಿ ಶಾಸಕ ಪಿನ್ನೆಲ್ಲಿ ರಾಮಕೃಷ್ಣ ರೆಡ್ಡಿ ಅವರು ಆಂಧ್ರಪ್ರದೇಶದ ಪಲ್ನಾಡು ಮಾಚೆರ್ಲಾದಲ್ಲಿನ ಮತಗಟ್ಟೆಯಲ್ಲಿ ಇವಿಎಂ ಘಟಕಕ್ಕೆ ಹಾನಿ ಮಾಡಿದ ಘಟನೆಯನ್ನು ಇದು ತೋರಿಸುತ್ತದೆ ಎಂದು ವೀಡಿಯೋದ ವಿಶ್ಲೇಷಣೆ ಬಹಿರಂಗಪಡಿಸುತ್ತದೆ. ಆದ್ದರಿಂದ, ವೀಡಿಯೋದಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ ಎಂದು ಆರೋಪಿಸಿರುವ ಆನ್‌ಲೈನ್ ನಲ್ಲಿ ಕಂಡುಬಂದಿರುವ ಆರೋಪಗಳು ತಪ್ಪು.