ಇಲ್ಲ, ಈ ವೀಡಿಯೋ ೨೦೨೪ ರ ಲೋಕಸಭಾ ಚುನಾವಣೆಯ ಸಮಯದಲ್ಲಿ ಮತದಾನದ ವಂಚನೆಯನ್ನು ಚಿತ್ರಿಸುವುದಿಲ್ಲ

Update: 2024-05-27 13:20 GMT

ಸಾರಾಂಶ:

೨೦೨೪ ರ ಲೋಕಸಭಾ ಚುನಾವಣೆಯ ಸಮಯದಲ್ಲಿ ಮತದಾನದ ವಂಚನೆಯನ್ನು ತೋರಿಸುವ ವೀಡಿಯೋವನ್ನು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವ್ಯಾಪಕವಾಗಿ ಹಂಚಿಕೊಂಡಿದ್ದಾರೆ. ಆದರೆ, ನಮ್ಮ ತನಿಖೆಯು ಈ ಹೇಳಿಕೆ ತಪ್ಪು ಮತ್ತು ವೈರಲ್ ವೀಡಿಯೋ ಪ್ರಸ್ತುತ ಚುನಾವಣೆಗಳಿಗೆ ಸಂಬಂಧಿಸಿಲ್ಲ ಎಂದು ನಿರ್ಧರಿಸಿದೆ.


ಹೇಳಿಕೆ:

ಮತಗಟ್ಟೆಯಲ್ಲಿ ಮೂವರು ಮಹಿಳೆಯರ ಪರವಾಗಿ ಒಬ್ಬ ಪುರುಷ ಮತ ಚಲಾಯಿಸುತ್ತಿದ್ದಾನೆ ಎಂದು ತೋರಿಸುವ ವೀಡಿಯೋವನ್ನು ಎಕ್ಸ್ (ಹಿಂದೆ ಟ್ವಿಟರ್), ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಮ್ ನಂತಹ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವ್ಯಾಪಕವಾಗಿ ಹಂಚಿಕೊಂಡಿದ್ದಾರೆ. ಸಾಮಾಜಿಕ ಮಾಧ್ಯಮ ಬಳಕೆದಾರರು ಈ ವೀಡಿಯೋ ೨೦೨೪ ರ ಲೋಕಸಭಾ ಚುನಾವಣೆಯ ಸಮಯದಲ್ಲಿ ಮತದಾನದ ವಂಚನೆಗೆ ಸಾಕ್ಷಿಯಾಗಿದೆ ಎಂಬ ಶೀರ್ಷಿಕೆಗಳೊಂದಿಗೆ ಹಂಚಿಕೊಂಡಿದ್ದಾರೆ. ಅಂತಹ ಒಂದು ಪೋಷ್ಟ್ ನ ಶೀರ್ಷಿಕೆಯು, “ಉತ್ತರ ಭಾರತದ ಚುನಾವಣೆ! ೪೦೦ ಸೀಟು ಖಾತ್ರಿಪಡಿಸಲು ಇದೇ ಮೋದಿ ಮ್ಯಾಜಿಕ್! ಮಿಲಿಟರಿ ಆಡಳಿತ ಇದಕ್ಕಿಂತ ಉತ್ತಮವಾಗಿರುತ್ತದೆ” (ಅನುವಾದಿಸಲಾಗಿದೆ).

ಮತದಾನದ ವಂಚನೆಯನ್ನು ಆರೋಪಿಸಿ ವೈರಲ್ ವೀಡಿಯೋವನ್ನು ಹಂಚಿಕೊಳ್ಳುವ ಎಕ್ಸ್‌ ಪೋಷ್ಟ್ ನ ಸ್ಕ್ರೀನ್‌ಶಾಟ್.


ಪುರಾವೆ:

ವೈರಲ್ ವೀಡಿಯೋದ ಕೀಫ್ರೇಮ್‌ಗಳ ರಿವರ್ಸ್ ಇಮೇಜ್ ಸರ್ಚ್ ಅದೇ ವೀಡಿಯೋವನ್ನು ಟೈಮ್ಸ್ ಆಫ್ ಇಂಡಿಯಾ, ಹಿಂದೂಸ್ತಾನ್ ಟೈಮ್ಸ್, ಇಂಡಿಯಾ ಟುಡೆ, ಇಂಡಿಯಾ.ಕಾಮ್ ಮತ್ತು ಮಂಗಳೂರು ಟುಡೆಯಂತಹ ಸುದ್ದಿವಾಹಿನಿಗಳು ಮೇ ೨೦೧೯ ರಲ್ಲಿ ವರದಿ ಮಾಡಿದೆ ಎಂದು ತಿಳಿದುಬಂದಿದೆ. ೨೦೧೯ ರ ಲೋಕಸಭಾ ಚುನಾವಣೆಯ ಸಮಯದಲ್ಲಿ ಹರಿಯಾಣದ ಫರಿದಾಬಾದ್‌ನಲ್ಲಿ ಮತದಾರರ ಮೇಲೆ ಪ್ರಭಾವ ಬೀರಿದ ಆರೋಪದ ಮೇಲೆ ಪೋಲಿಂಗ್ ಏಜೆಂಟ್‌ನನ್ನು ಬಂಧಿಸಿದ ಘಟನೆಯನ್ನು ಸುದ್ದಿ ವರದಿಗಳು ಸರ್ವಾನುಮತದಿಂದ ದೃಢಪಡಿಸಿವೆ.

ಮೇ ೨೦೧೯ ರಲ್ಲಿ ಫರಿದಾಬಾದ್‌ನಲ್ಲಿ ನಡೆದ ಮತದಾನದ ವಂಚನೆಯ ಕುರಿತು ಟೈಮ್ಸ್ ಆಫ್ ಇಂಡಿಯಾ ವರದಿಯ ಸ್ಕ್ರೀನ್‌ಶಾಟ್.


ಫರಿದಾಬಾದ್‌ನಲ್ಲಿರುವ ಜಿಲ್ಲಾ ಚುನಾವಣಾ ಕಛೇರಿಯು ಘಟನೆಯಲ್ಲಿ ಭಾಗಿಯಾಗಿರುವ ಪೋಲಿಂಗ್ ಏಜೆಂಟ್ ವಿರುದ್ಧ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ಅನ್ನು ಬಂಧಿಸಿ ದಾಖಲಿಸಿರುವುದನ್ನು ದೃಢಪಡಿಸಿದೆ. ವೀಡಿಯೋದ ದೃಶ್ಯಗಳು ಮತ್ತು ವಿಷಯವು ೨೦೧೯ ರ ಲೋಕಸಭಾ ಚುನಾವಣೆಯ ವರದಿಗಳೊಂದಿಗೆ ಸ್ಥಿರವಾಗಿದೆ ಎಂದು ಇದು ಸಾಬೀತುಪಡಿಸುತ್ತದೆ, ಇದು ಇತ್ತೀಚಿನ ಕ್ಲಿಪ್ ಅಲ್ಲ ಎಂದು ಸೂಚಿಸುತ್ತದೆ. ಹೆಚ್ಚುವರಿಯಾಗಿ, ಯಾವುದೇ ವಿಶ್ವಾಸಾರ್ಹ ಸುದ್ದಿ ವರದಿಗಳು ಅಥವಾ ಅಧಿಕೃತ ಹೇಳಿಕೆಗಳು ಪ್ರಸ್ತುತ ನಡೆಯುತ್ತಿರುವ ಮತದಾನಕ್ಕೆ ವೀಡಿಯೋವನ್ನು ಸಂಭಧಿಸಿಲ್ಲ.

ಪೋಲಿಂಗ್ ಏಜೆಂಟ್‌ನ ಬಂಧನಕ್ಕೆ ಸಂಬಂಧಿಸಿದಂತೆ ಎಕ್ಸ್‌ ನಲ್ಲಿನ ಜಿಲ್ಲಾ ಚುನಾವಣಾ ಕಛೇರಿಯ ಪೋಷ್ಟ್ ನ ಸ್ಕ್ರೀನ್‌ಶಾಟ್‌ಗಳು.


ತೀರ್ಪು:

ವೈರಲ್ ವೀಡಿಯೋದ ವಿಶ್ಲೇಷಣೆಯು ೨೦೨೪ ರ ಲೋಕಸಭಾ ಚುನಾವಣೆಗೆ ಸಂಬಂಧಿಸಿಲ್ಲ ಎಂದು ತೋರಿಸುತ್ತದೆ. ಇದು ಹರಿಯಾಣದ ಫರಿದಾಬಾದ್‌ನಲ್ಲಿ ೨೦೧೯ ರ ಲೋಕಸಭಾ ಚುನಾವಣೆಯದು, ಅಲ್ಲಿ ಮತದಾರರ ಮೇಲೆ ಪ್ರಭಾವ ಬೀರಿದ ಆರೋಪದ ಮೇಲೆ ಪೋಲಿಂಗ್ ಏಜೆಂಟ್‌ನನ್ನು ಬಂಧಿಸಲಾಯಿತು. ಆದ್ದರಿಂದ, ಈ ವೀಡಿಯೋವನ್ನು ಪ್ರಸ್ತುತ ಚುನಾವಣೆಗಳಿಗೆ ಸಂಬಂಧಿಸುವ ಹೇಳಿಕೆ ತಪ್ಪು.

Claim :  No, this video does not depict voting fraud during the 2024 Lok Sabha elections
Claimed By :  Instagram User
Fact Check :  False
Tags:    

Similar News