ಇಲ್ಲ, ಟೈಮ್ಸ್ ನೌ ಆಂಧ್ರಪ್ರದೇಶದಲ್ಲಿ ಟಿಡಿಪಿ ಗೆಲುವಿನ ಮುನ್ಸೂಚನೆ ನೀಡುವ ಎಕ್ಸಿಟ್ ಪೋಲ್ ಅನ್ನು ಪ್ರಕಟಿಸಿಲ್ಲ
ಸಾರಾಂಶ:
೨೦೨೪ ರ ಆಂಧ್ರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ತೆಲುಗು ದೇಶಂ ಪಕ್ಷ (ಟಿಡಿಪಿ) ಗೆಲುವಿನ ಮುನ್ಸೂಚನೆ ನೀಡುವ ಟೈಮ್ಸ್ ನೌ ಎಕ್ಸಿಟ್ ಪೋಲ್‌ನ ಸ್ಕ್ರೀನ್‌ಶಾಟ್ ಅನ್ನು ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಂಡಿದ್ದಾರೆ. ಆದರೆ, ಭಾರತೀಯ ಚುನಾವಣಾ ಆಯೋಗದ (ಇಸಿಐ) ಪ್ರಕಾರ, ಯಾವುದೇ ಎಕ್ಸಿಟ್ ಪೋಲ್ ಫಲಿತಾಂಶಗಳನ್ನು ಜೂನ್ ೧, ೨೦೨೪ ರಂದು ಸಂಜೆ ೬:೩೦ ರ ಮೊದಲು ಪ್ರಕಟಿಸಬಾರದು. ಟೈಮ್ಸ್ ನೌ ಎಕ್ಸಿಟ್ ಪೋಲ್ ಫಲಿತಾಂಶಗಳನ್ನು ಪ್ರಕಟಿಸದ ಕಾರಣ ಈ ಸ್ಕ್ರೀನ್‌ಶಾಟ್ ನಕಲಿಯಾಗಿದೆ.
ಹೇಳಿಕೆ:
ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಆಂಧ್ರಪ್ರದೇಶದಲ್ಲಿ ಟಿಡಿಪಿ ಗೆಲುವನ್ನು ತೋರಿಸುವ ಟೈಮ್ಸ್ ನೌ ಎಕ್ಸಿಟ್ ಪೋಲ್ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡಿದ್ದಾರೆ. ದೇಶಾದ್ಯಂತ ನಡೆಯುತ್ತಿರುವ ೨೦೨೪ ರ ಸಾರ್ವತ್ರಿಕ ಚುನಾವಣೆಗಳ ಜೊತೆಗೆ ಆಂಧ್ರ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆಗಳಿಗೆ ಮೇ ೧೩, ೨೦೨೪ ರಂದು ರಾಜ್ಯದ ಜನರು ಮತ ಚಲಾಯಿಸಿದ್ದಾರೆ. ಎಕ್ಸ್‌ನಲ್ಲಿ (ಹಿಂದೆ ಟ್ವಿಟರ್) ಅಂತಹ ಒಂದು ಪೋಷ್ಟ್ ನ ಶೀರ್ಷಿಕೆಯು ಹೀಗೆ ಹೇಳಿಕೊಂಡಿದೆ, "ಟೈಮ್ಸ್ ನೌ ಎಕ್ಸಿಟ್ ಪೋಲ್ #YCPLosingBg #NDAallianceWinning ಎಂಬುದು ಸ್ಪಷ್ಟವಾಗಿದೆ (ಕನ್ನಡಕ್ಕೆ ಅನುವಾದಿಸಲಾಗಿದೆ)."
ಸಾಮಾಜಿಕ ಮಾಧ್ಯಮ ಪೋಷ್ಟ್ ಗಳ ಸ್ಕ್ರೀನ್‌ಶಾಟ್‌ಗಳು.
ಪುರಾವೆ:
ನಾವು ಟೈಮ್ಸ್ ನೌ ಎಕ್ಸಿಟ್ ಪೋಲ್ ಅನ್ನು ಹುಡುಕಿದೆವು ಮತ್ತು ಅದನ್ನು ಅವರ ವೆಬ್‌ಸೈಟ್ ಅಥವಾ ಯಾವುದೇ ಅಧಿಕೃತ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳಲ್ಲಿ ಪ್ರಕಟಿಸಲಾಗಿಲ್ಲ ಎಂದು ಕಂಡುಬಂದಿದೆ. ೨೦೨೪ ರ ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ಸಂಸ್ಥೆಯು ಎಕ್ಸಿಟ್ ಪೋಲ್ ಫಲಿತಾಂಶಗಳನ್ನು ಪ್ರಕಟಿಸಿಲ್ಲ. ಜೂನ್ ೧, ೨೦೨೪ ರ ಸಂಜೆಯವರೆಗೆ ಎಕ್ಸಿಟ್ ಪೋಲ್‌ಗಳನ್ನು ಪ್ರಕಟಿಸುವುದನ್ನು ಇಸಿಐ ನಿಷೇಧಿಸಿದೆ ಎಂಬುದು ಗಮನಿಸಬೇಕಾದ ಸಂಗತಿ.
ಜೂನ್ ೧, ೨೦೨೪ ರವರೆಗೆ ಎಕ್ಸಿಟ್ ಪೋಲ್‌ಗಳನ್ನು ನಿಷೇಧಿಸುವ ಇಸಿಐ ಎಕ್ಸ್ ನಲ್ಲಿ ಹಂಚಿಕೊಂಡ ಪೋಷ್ಟ್ ನ ಸ್ಕ್ರೀನ್‌ಶಾಟ್‌ಗಳು.
ವೈರಲ್ ಸ್ಕ್ರೀನ್‌ಶಾಟ್‌ನ ಸತ್ಯಾಸತ್ಯತೆಯನ್ನು ಖಚಿತಪಡಿಸಲು ನಾವು ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದ್ದೇವೆ ಮತ್ತು ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆಗೆ ಸಂಬಂಧಿಸಿದ ಯಾವುದೇ ಫಲಿತಾಂಶಗಳು ಕಂಡುಬಂದಿಲ್ಲ. ಹೀಗಿರುವಾದ, ನವೆಂಬರ್ ೨೦೨೧ ರಲ್ಲಿ ನಡೆದ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಹಂಚಿಕೊಂಡ ಈಗ ವೈರಲ್ ಆಗಿರುವ ಸ್ಕ್ರೀನ್‌ಶಾಟ್‌ನಂತೆಯೇ ಕಾಣಿಸಿಕೊಳ್ಳುವ ಅಭಿಪ್ರಾಯ ಸಮೀಕ್ಷೆಗಳ ಸ್ಕ್ರೀನ್‌ಶಾಟ್‌ಗಳನ್ನು ನಾವು ನೋಡಿದ್ದೇವೆ. ಈ ಸ್ಕ್ರೀನ್‌ಶಾಟ್‌ಗಳು ೨೦೨೨ ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗಾಗಿ ನಡೆಸಿದ ಟೈಮ್ಸ್ ನೌ-ಪೋಲ್‌ಸ್ಟ್ರಾಟ್ ಅಭಿಪ್ರಾಯ ಸಮೀಕ್ಷೆಗಳನ್ನು ತೋರಿಸಿದೆ.
೨೦೨೧ ರ ಎಕ್ಸ್ ಪೋಷ್ಟ್ ಗಳ ಸ್ಕ್ರೀನ್‌ಶಾಟ್‌ಗಳು.
ಹೆಚ್ಚಿನ ವಿಶ್ಲೇಷಣೆಯ ನಂತರ, ನಾವು ನವೆಂಬರ್ ೧೬, ೨೦೨೧ ರಂದು ಎಕ್ಸ್ ನಲ್ಲಿ ಟೈಮ್ಸ್ ನೌ ಕೂಡ ಇದೆ ಚಿತ್ರವನ್ನು ಹಂಚಿಕೊಂಡಿದೆ ಎಂದು ನಾವು ನೋಡಿದ್ದೇವೆ. ೨೦೨೧ ರ ಈ ಸ್ಕ್ರೀನ್‌ಶಾಟ್ ಅನ್ನು ಇತ್ತೀಚಿನ ಎಕ್ಸಿಟ್ ಪೋಲ್ ಫಲಿತಾಂಶದಂತೆ ಕಾಣುವಂತೆ ಡಿಜಿಟಲ್ ಆಗಿ ಮಾರ್ಪಡಿಸಲಾಗಿದೆ ಎಂದು ಇದು ಸೂಚಿಸುತ್ತದೆ. ಆದಾಗ್ಯೂ, ಜೂನ್ ೧, ೨೦೨೪ ರ ಮೊದಲು ಇತ್ತೀಚಿನ ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ಎಕ್ಸಿಟ್ ಪೋಲ್‌ಗಳನ್ನು ಪ್ರಕಟಿಸಲಾಗಿಲ್ಲವಾದಕಾರಣ ಟೈಮ್ಸ್ ನೌ ನ ಆಂಧ್ರ ಪ್ರದೇಶದ ಎಕ್ಸಿಟ್ ಪೋಲ್ ಎಂದು ಹೇಳಿಕೊಂಡು ವೈರಲ್ ಆಗಿರುವ ಸ್ಕ್ರೀನ್‌ಶಾಟ್ ನಕಲಿ ಎಂಬುದು ಸ್ಪಷ್ಟವಾಗಿದೆ.
ನವೆಂಬರ್ ೧೬, ೨೦೨೧ ರಂದು ಟೈಮ್ಸ್ ನೌ ಹಂಚಿಕೊಂಡ ಎಕ್ಸ್ ಪೋಷ್ಟ್ ನ ಸ್ಕ್ರೀನ್‌ಶಾಟ್.
ನಾವು ಈ ಹಿಂದೆ ಆಂಧ್ರಪ್ರದೇಶದ ಎಕ್ಸಿಟ್ ಪೋಲ್ ಗಳನ್ನು ತೋರಿಸುತ್ತದೆ ಎಂದು ದಿ ನ್ಯೂಸ್ ಮಿನಿಟ್ ಅನ್ನು ಉಲ್ಲೇಖಿಸಿ ಹಂಚಿಕೊಂಡ ಇದೇ ರೀತಿಯ ಸ್ಕ್ರೀನ್‌ಶಾಟ್ ನ ಹೇಳಿಕೆಗಳನ್ನು ನಕಲಿ ಎಂದು ವಿಧಿಸಿ ಫ್ಯಾಕ್ಟ್-ಚೆಕ್ ಪ್ರಕಟಿಸಿದ್ದೇವೆ.
ತೀರ್ಪು:
ಆಂಧ್ರಪ್ರದೇಶದ ಟೈಮ್ಸ್ ನೌ ಎಕ್ಸಿಟ್ ಪೋಲ್ ಅನ್ನು ತೋರಿಸಲು ಸಾಮಾಜಿಕ ಮಾಧ್ಯಮ ಬಳಕೆದಾರರು ನಕಲಿ ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಂಡಿದ್ದಾರೆ. ಟೈಮ್ಸ್ ನೌ ಅಥವಾ ಇತರ ಸಂಸ್ಥೆಗಳು ಯಾವುದೇ ಎಕ್ಸಿಟ್ ಪೋಲ್ ಫಲಿತಾಂಶಗಳನ್ನು ಬಿಡುಗಡೆ ಮಾಡಿಲ್ಲ, ಏಕೆಂದರೆ ಇಸಿಐ ಜೂನ್ ೧, ೨೦೨೪ ರ ಸಂಜೆಯವರೆಗೆ ಎಕ್ಸಿಟ್ಅ ಪೋಲ್ವು ಫಲಿತಾಂಶಗಳ ಪ್ರಕಟಣೆಗಳನ್ನು ನಿಷೇಧಿಸಿದೆ.