ನೇಹಾ ಹಿರೇಮಠ್ ಮನೆಗೆ ಕಾಂಗ್ರೆಸ್ ನಾಯಕರು ಯಾರೂ ಭೇಟಿ ನೀಡಿಲ್ಲ ಎಂಬ ಹೇಳಿಕೆ ತಪ್ಪು.

Update: 2024-04-29 11:10 GMT

ಸಾರಾಂಶ:

ಕಾಂಗ್ರೆಸ್ ಪಕ್ಷದ ಯಾವುದೇ ನಾಯಕರು ನೇಹಾ ಹಿರೇಮಠ್ ಮನೆಗೆ ಭೇಟಿ ನೀಡಿಲ್ಲ ಎಂಬ ಸಾಮಾಜಿಕ ಜಾಲತಾಣ ಬಳಕೆದಾರರ ಹೇಳಿಕೆಗಳು ತಪ್ಪು. ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರು ನೇಹಾ ಹಿರೇಮಠ್ ಅವರ ಮನೆಗೆ ಭೇಟಿ ನೀಡಿದ್ದಾರೆ.

ಹೇಳಿಕೆ:

ಕರ್ನಾಟಕದ ಹುಬ್ಬಳ್ಳಿಯಲ್ಲಿ ೨೧ ವರ್ಷದ ವಿದ್ಯಾರ್ಥಿನಿ ನೇಹಾ ಹಿರೇಮಠ್ ಅವರ ಸಾವಿಗೆ ಕಾರಣವಾದ ಚಾಕು ಇರಿತ ಘಟನೆಯು ಕರ್ನಾಟಕದಲ್ಲಿ ಭಾರೀ ರಾಜಕೀಯ ಸಂಚಲನವನ್ನು ಉಂಟುಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವಾರು ಬಿಜೆಪಿ ನಾಯಕರು ತಮ್ಮ ಚುನಾವಣಾ ಪ್ರಚಾರ ರ‍್ಯಾಲಿಗಳಲ್ಲಿ ಕಾಂಗ್ರೆಸ್ ಅನ್ನು ಗುರಿಯಾಗಿಸಲು ಮತ್ತು ತುಷ್ಟೀಕರಣದ ರಾಜಕೀಯದ ಆರೋಪ ಮಾಡಲು ಈ ಘಟನೆಯನ್ನು ಬಳಸಿದ್ದಾರೆ, ಏಕೆಂದರೆ ಕೊಲೆಗಾರ ಅಲ್ಪಸಂಖ್ಯಾತ ಸಮುದಾಯದವನಾಗಿದ್ದಾನೆ.

ಈ ಮಧ್ಯೆ, ಸಂತ್ರಸ್ತೆಯ ತಂದೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಲ್ಲಿ ಕಾಂಗ್ರೆಸ್ ಪಕ್ಷದ ಕೌನ್ಸಿಲರ್ ಆಗಿದ್ದರೂ, ಕಾಂಗ್ರೆಸ್ ನಾಯಕರು ಸಂತ್ರಸ್ತೆಯ ಮನೆಗೆ ಭೇಟಿ ನೀಡಿಲ್ಲ ಎಂದು ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಆರೋಪಿಸಿದ್ದಾರೆ. ಎಕ್ಸ್‌ನಲ್ಲಿ ಅಂತಹ ಒಂದು ಪೋಷ್ಟ್ ಹೀಗೆ ಹೇಳಿಕೊಂಡಿದೆ, “ಹುಬ್ಬಳ್ಳಿ: ಜೆಪಿ ನಡ್ಡಾ ಜಿ ನಂತರ, ಕರ್ನಾಟಕ ಬಿಜೆಪಿ ಮುಖ್ಯಸ್ಥ ವಿಜಯೇಂದ್ರ ನೇಹಾ ಹಿರೇಮಠ್ ಅವರ ಮನೆಗೆ ಭೇಟಿ ನೀಡಿದರು ಮತ್ತು ಅವರ ತಂದೆ ಮತ್ತು ಕಾಂಗ್ರೆಸ್ ಮುಖಂಡ ನಿರಂಜನ್ ಹಿರೇಮಠ್ ಅವರನ್ನು ಭೇಟಿ ಮಾಡಿದರು. ಇನ್ನೂ ಕಾಂಗ್ರೆಸ್ ನ ಒಬ್ಬ ವ್ಯಕ್ತಿಯೂ ನೇಹಾ ಮನೆಗೆ ಭೇಟಿ ನೀಡಿಲ್ಲ. ಔಪಚಾರಿಕತೆಗಾಗಿಯೂ ಅಲ್ಲ. ಅತ್ಯುನ್ನತ ಮಟ್ಟದಲ್ಲಿ ಮುಸ್ಲಿಂ ತುಷ್ಟೀಕರಣ. ಅವಮಾನ!” ಬಿಜೆಪಿ ಮುಖ್ಯಸ್ಥ ಜೆ.ಪಿ.ನಡ್ಡಾ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಸಂತ್ರಸ್ತರ ಮನೆಗೆ ಭೇಟಿ ನೀಡಿದರೂ ಯಾವುದೇ ಕಾಂಗ್ರೆಸ್ ನಾಯಕರು ಸಂತ್ರಸ್ತರ ಮನೆಗೆ ಭೇಟಿ ನೀಡಿಲ್ಲ ಎಂಬುದಾಗಿ ಇದು ತೋರಿಸುತ್ತದೆ.

ನೇಹಾ ಹಿರೇಮಠ್ ಅವರ ಮನೆಗೆ ಕಾಂಗ್ರೆಸ್ ನಾಯಕರು ಭೇಟಿ ನೀಡಿಲ್ಲ ಎಂದು ಆರೋಪಿಸುವ ವೈರಲ್ ಪೋಷ್ಟ್ ಗಳ ಸ್ಕ್ರೀನ್‌ಶಾಟ್‌ಗಳು.


ಪುರಾವೆ:

ನೇಹಾ ಹಿರೇಮಠ್ ಅವರ ಮನೆಗೆ ರಾಜಕಾರಣಿಗಳು ಭೇಟಿ ನೀಡುವ ಕುರಿತು ಸುದ್ದಿ ವರದಿಗಳು ಮತ್ತು ಸಾಮಾಜಿಕ ಮಾಧ್ಯಮದ ಪೋಷ್ಟ್ ಗಳನ್ನು ಹುಡುಕಿದಾಗ, ನೇಹಾ ಅವರ ಮನೆಗೆ ರಾಜಕಾರಣಿಗಳು ಮತ್ತು ಪ್ರಮುಖ ವ್ಯಕ್ತಿಗಳು ಭೇಟಿ ನೀಡುವ ಕುರಿತು ಏಪ್ರಿಲ್ ೨೦, ೨೦೨೪ ರ ದಿ ಹಿಂದೂ ಪತ್ರಿಕೆಯ ಸುದ್ದಿ ವರದಿಯನ್ನು ನಾವು ನೋಡಿದ್ದೇವೆ. ಕರ್ನಾಟಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಅದೇ ದಿನ (ಏಪ್ರಿಲ್ ೨೦, ೨೦೨೪) ಕುಟುಂಬವನ್ನು ಭೇಟಿ ಮಾಡಿದ್ದಾರೆ ಎಂದು ಈ ವರದಿಯು ಗಮನಿಸಿದೆ. ಕರ್ನಾಟಕದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ (ಬಿಜೆಪಿ) ಸೇರಿದಂತೆ ಹಲವರು ಕುಟುಂಬವನ್ನು ಭೇಟಿ ಮಾಡಿದ್ದಾರೆ ಎಂದು ವರದಿ ತಿಳಿಸಿದೆ.

ಏಪ್ರಿಲ್ ೨೦, ೨೦೨೪ ರಂದು ಪ್ರಕಟವಾದ ದಿ ಹಿಂದೂ ಪತ್ರಿಕೆಯ ಸುದ್ದಿ ವರದಿಯ ಚಿತ್ರದ ಸ್ಕ್ರೀನ್‌ಶಾಟ್.


ಏಪ್ರಿಲ್ ೨೧, ೨೦೨೪ ರಂದು ಬಿಜೆಪಿ ಮುಖ್ಯಸ್ಥ ಜೆ.ಪಿ. ನಡ್ಡಾ ಸಂತ್ರಸ್ತೆಯ ಮನೆಗೆ ಭೇಟಿ ನೀಡಿದ್ದರು ಎಂದು ಗಮನಿಸಲಾದ ಸಿಎನ್ಬಿಸಿ-ಟಿವಿ೧೮ ರ ಯೂಟ್ಯೂಬ್ ವೀಡಿಯೋವನ್ನು ನಾವು ನೋಡಿದ್ದೇವೆ. ನೇಹಾ ಅವರ ಕುಟುಂಬವನ್ನು ಕಾಂಗ್ರೆಸ್ ನಾಯಕರು ಭೇಟಿ ಮಾಡಿಲ್ಲ ಎಂದು ಆರೋಪಿಸಿರುವ ಪೋಸ್ಟ್‌ಗಳನ್ನು ಪ್ರಧಾನವಾಗಿ ಏಪ್ರಿಲ್‌ ೨೪, ೨೦೨೪ ರಂದು ಹಂಚಿಕೊಳ್ಳಲಾಗಿದೆ ಎಂಬುದು ಗಮನಿಸಬೇಕಾದ ಸಂಗತಿ.

ಏಪ್ರಿಲ್ ೨೪, ೨೦೨೪ ರಂದು, ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲಾ ಅವರು ನೇಹಾ ಹಿರೇಮಠ್ ಅವರ ಮನೆಗೆ ಭೇಟಿ ನೀಡಿದರು ಮತ್ತು ಅವರ ಭೇಟಿಯ ಕುರಿತು ಎಕ್ಸ್ ಪೋಷ್ಟ್ ಅನ್ನು ಹಂಚಿಕೊಂಡರು. ಅದರಲ್ಲಿ ಅವರು ಕುಟುಂಬವನ್ನು ಭೇಟಿ ಮಾಡಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡುವ ವೀಡಿಯೋವನ್ನು ಕೂಡ ಹಂಚಿಕೊಂಡಿದ್ದಾರೆ.

ರಣದೀಪ್ ಸಿಂಗ್ ಸುರ್ಜೆವಾಲಾ ಅವರು ಹಂಚಿಕೊಂಡ ಎಕ್ಸ್ ಪೋಷ್ಟ್ ನ ಸ್ಕ್ರೀನ್‌ಶಾಟ್.


ಅದೇ ರೀತಿ, ಏಪ್ರಿಲ್ ೨೫, ೨೦೨೪ ರಂದು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೇಹಾ ಹಿರೇಮಠ್ ಅವರ ಮನೆಗೆ ಭೇಟಿ ನೀಡಿ ಕುಟುಂಬದೊಂದಿಗೆ ಮಾತನಾಡಿದರು. ಕನ್ನಡ ಸುದ್ದಿ ವಾಹಿನಿ ಪಬ್ಲಿಕ್ ಟಿವಿ ಯುಟ್ಯೂಬ್‌ನಲ್ಲಿ ಹಂಚಿಕೊಂಡ ಸುದ್ದಿ ವರದಿಯ ವೀಡಿಯೋದಲ್ಲಿ ಮುಖ್ಯಮಂತ್ರಿಗಳು ಕುಟುಂಬವನ್ನು ಭೇಟಿ ಮಾಡಿದ ದೃಶ್ಯಗಳನ್ನು ತೋರಿಸಲಾಗಿದೆ.

ಏಪ್ರಿಲ್ ೨೫, ೨೦೨೪ ರಂದು ಪಬ್ಲಿಕ್ ಟಿವಿ ಹಂಚಿಕೊಂಡ ಯೂಟ್ಯೂಬ್ ವೀಡಿಯೋದ ಸ್ಕ್ರೀನ್‌ಶಾಟ್.


ನೇಹಾ ಹಿರೇಮಠ್ ಅವರ ಕುಟುಂಬವನ್ನು ಕಾಂಗ್ರೆಸ್ ಪಕ್ಷದ ಯಾವುದೇ ನಾಯಕರು ಭೇಟಿ ಮಾಡಿಲ್ಲ ಎಂದು ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಮಾಡಿರುವ ಹೇಳಿಕೆಗಳು ಸುಳ್ಳು ಎಂಬುದನ್ನು ಇದು ತೋರಿಸುತ್ತದೆ.

ತೀರ್ಪು:

ಬಿಜೆಪಿ ಮುಖಂಡ ಜೆ.ಪಿ.ನಡ್ಡಾ, ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಕಾಂಗ್ರೆಸ್ ಪಕ್ಷದ ರಣದೀಪ್ ಸಿಂಗ್ ಸುರ್ಜೇವಾಲಾ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಹಲವಾರು ಪ್ರಮುಖ ರಾಜಕಾರಣಿಗಳು ನೇಹಾ ಹಿರೇಮಠ್ ಅವರ ಮನೆಗೆ ಭೇಟಿ ನೀಡಿ ಕುಟುಂಬದೊಂದಿಗೆ ಮಾತನಾಡಿದ್ದಾರೆ. ಕಾಂಗ್ರೆಸ್ ಪಕ್ಷದ ಯಾವುದೇ ನಾಯಕರು ಕುಟುಂಬವನ್ನು ಭೇಟಿ ಮಾಡಿಲ್ಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಮಾಡಿರುವ ಹೇಳಿಕೆಗಳು ತಪ್ಪು.



Claim :  ನೇಹಾ ಹಿರೇಮಠ್ ಮನೆಗೆ ಕಾಂಗ್ರೆಸ್ ನಾಯಕರು ಯಾರೂ ಭೇಟಿ ನೀಡಿಲ್ಲ.
Claimed By :  Anonymous
Fact Check :  False

Similar News