೨೦೨೪ರ ಚುನಾವಣೆಯಲ್ಲಿ ಬಿಜೆಪಿಗೆ ದೊಡ್ಡ ಹೊಡೆತ ಬೀಳಲಿದೆ ಎಂದು ತೋರಿಸುವ ಚುನಾವಣಾ ಪೂರ್ವ ಸಮೀಕ್ಷೆ ಮತ್ತು ಸುದ್ದಿ ವರದಿಗಳ ಫೋಟೋ ಎಡಿಟ್ ಮಾಡಲಾಗಿವೆ.

Update: 2024-04-20 14:10 GMT

ಸಾರಾಂಶ:

೨೦೨೪ ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ದೊಡ್ಡ ನಷ್ಟವನ್ನು ಊಹಿಸುವ ಆಕ್ಸಿಸ್ ಮೈ ಇಂಡಿಯಾ ಆಂತರಿಕ ಸಮೀಕ್ಷೆಯನ್ನು ತೋರಿಸಲು ಉದ್ದೇಶಿಸಿರುವ ಚಿತ್ರವು ನಕಲಿಯಾಗಿದೆ. ಅಂತೆಯೇ, ಇಂಡಿಯಾ ಟುಡೇ ಕಾರ್ಯಕ್ರಮ “ಮೂಡ್ ಆಫ್ ದಿ ನೇಷನ್” ನ ಸ್ಕ್ರೀನ್‌ಶಾಟ್ ಅನ್ನು ಡಿಜಿಟಲ್ ಆಗಿ ಮಾರ್ಪಡಿಸಲಾಗಿದ್ದು, ೨೦೧೯ ಕ್ಕಿಂತ ೨೦೨೪ ರಲ್ಲಿ ಬಿಜೆಪಿ ಕಡಿಮೆ ಸ್ಥಾನಗಳನ್ನು ಪಡೆಯುತ್ತದೆ ಎಂದು ತಪ್ಪಾಗಿ ತೋರಿಸುತ್ತದೆ.

ಹೇಳಿಕೆ:

ಹಲವು ರಾಜ್ಯಗಳಲ್ಲಿ ಬಿಜೆಪಿ ೨೦೧೯ ರಲ್ಲಿ ಗಳಿಸಿದ್ದಕ್ಕಿಂತ ಕಡಿಮೆ ಸ್ಥಾನಗಳನ್ನು ಗೆಲ್ಲಲಿದೆ ಎಂದು ಹೇಳುವ ಮೂಲಕ ಅನೇಕ ಸ್ಕ್ರೀನ್‌ಶಾಟ್‌ಗಳು ಮತ್ತು ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ. ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ ಹಂಚಿಕೊಳ್ಳಲಾದ ಅಂತಹ ಒಂದು ಪೋಷ್ಟ್ ಆಕ್ಸಿಸ್ ಮೈ ಇಂಡಿಯಾ ನಡೆಸಿದ ಆಂತರಿಕ ಸಮೀಕ್ಷೆಯನ್ನು ತೋರಿಸಲು ಚಿತ್ರಣವನ್ನು ತೋರಿಸಿದೆ ಮತ್ತು ಹೀಗೆ ಬರೆದಿದ್ದಾರೆ, “ಬಿಜೆಪಿ ಸದ್ಯಕ್ಕೆ ಬಹುತೇಕ ಎಲ್ಲಾ ರಾಜ್ಯಗಳಲ್ಲಿ ದೊಡ್ಡ (೯೪ ಸ್ಥಾನಗಳನ್ನು) ಕಳೆದುಕೊಳ್ಳುತ್ತಿದೆ. (ಆಕ್ಸಿಸ್ ಮೈ ಇಂಡಿಯಾ) ದೆಹಲಿ (-೪) ಬಿಹಾರ (-೧೦) ಹರಿಯಾಣ (-೬) ರಾಜಸ್ಥಾನ (-೯) ಕರ್ನಾಟಕ (-೧೪) ಜಾರ್ಖಂಡ್ (-೫) ಪಶ್ಚಿಮ ಬಂಗಾಳ (-೭) ಮಹಾರಾಷ್ಟ್ರ (-೧೩) ಉತ್ತರ ಪ್ರದೇಶ (- ೮) ಮಧ್ಯಪ್ರದೇಶ (-೫) ಆಟ ನಡೆಯುತ್ತಿದೆ, ಇಂಡಿಯಾ ಬರುತ್ತಿದೆ (ಕನ್ನಡಕ್ಕೆ ಅನುವಾದಿಸಲಾಗಿದೆ)."

ಆಕ್ಸಿಸ್ ಮೈ ಇಂಡಿಯಾದ ಉದ್ದೇಶಿತ ಅಭಿಪ್ರಾಯ ಸಂಗ್ರಹವನ್ನು ತೋರಿಸುವ ಪೋಷ್ಟ್ ಗಳ ಸ್ಕ್ರೀನ್‌ಶಾಟ್‌ಗಳು.


ಹಲವಾರು ಇತರ ಎಕ್ಸ್ ಬಳಕೆದಾರರು ನಿಖರವಾದ ಪಠ್ಯ ಮತ್ತು ಚಿತ್ರದೊಂದಿಗೆ ಪೋಷ್ಟ್ ಗಳನ್ನು ಹಂಚಿಕೊಂಡಿದ್ದಾರೆ, ಸಾಮಾನ್ಯವಾಗಿ "ಕಾಪಿ-ಪಾಸ್ಟಾ" ತಂತ್ರ ಎಂದು ಕರೆಯಲ್ಪಡುವ ಮಾದರಿಯನ್ನು ಸ್ಪಷ್ಟವಾಗಿ ತೋರಿಸುತ್ತದೆ. ಜನರು ಪೋಷ್ಟ್ ನ ಸಂಪೂರ್ಣ ವಿಷಯವನ್ನು ನಕಲಿಸಿದಾಗ ಮತ್ತು ಮೂಲ ಪೋಷ್ಟ್ ಅನ್ನು ಮರುಹಂಚಿಕೊಳ್ಳುವ ಬದಲು ಅದನ್ನು ಮತ್ತೆ ಹಂಚಿಕೊಂಡಾಗ ಈ ಮಾದರಿಯನ್ನು ಗಮನಿಸಬಹುದು.

ಹಾಗೆಯೇ, ಎಕ್ಸ್‌ನಲ್ಲಿನ ಮತ್ತೊಂದು ಪೋಷ್ಟ್ 'ಮೂಡ್ ಆಫ್ ದಿ ನೇಷನ್,' ಎಂಬ ಇಂಡಿಯಾ ಟುಡೆ ಸುದ್ದಿ ಕಾರ್ಯಕ್ರಮದ ಸ್ಕ್ರೀನ್‌ಶಾಟ್ ಅನ್ನು ಹಿಂದಿಯಲ್ಲಿ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದೆ. ಇದನ್ನು ಅನುವಾದಿಸಿದಾಗ: "ಇಂಡಿಯಾ ಟುಡೇ ತನ್ನ ಉತ್ತರ ಪ್ರದೇಶದ ಸಮೀಕ್ಷೆಯಲ್ಲಿ ~ ಎಸ್‌ಪಿಗೆ ೧೭ ಸ್ಥಾನಗಳನ್ನು ನೀಡಲಾಗಿದೆ ~ ಕಾಂಗ್ರೆಸ್‌ಗೆ ೫ ಸ್ಥಾನಗಳನ್ನು ನೀಡಲಾಗಿದೆ ಕಾದು ನೋಡಿ, ಇದು ಆರಂಭವಷ್ಟೇ, ಎಸ್‌ಪಿ ಏಕಾಂಗಿಯಾಗಿ ೩೦ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲಿದೆ." ಎಂದು ಹೇಳಿಕೊಳ್ಳುತ್ತದೆ.

ಇಂಡಿಯಾ ಟುಡೇ ಸಮೀಕ್ಷೆಯನ್ನು ತೋರಿಸುವ ಪೋಷ್ಟ್ ಗಳ ಸ್ಕ್ರೀನ್‌ಶಾಟ್‌ಗಳು.


ಹಲವಾರು ಇತರ ಬಳಕೆದಾರರು ಮೇಲಿನ ರೀತಿಯ ಶೀರ್ಷಿಕೆಗಳೊಂದಿಗೆ ಅದೇ ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಂಡಿದ್ದಾರೆ.


ಪುರಾವೆ:

ಆಕ್ಸಿಸ್ ಮೈ ಇಂಡಿಯಾ ಆಂತರಿಕ ಸಮೀಕ್ಷೆ:

ನಾವು ಆಕ್ಸಿಸ್ ಮೈ ಇಂಡಿಯಾ ಅಭಿಪ್ರಾಯ ಸಮೀಕ್ಷೆಗಾಗಿ ಹುಡುಕಿದ್ದೇವೆ ಮತ್ತು ನಡೆಯುತ್ತಿರುವ ೨೦೨೪ ರ ಸಾರ್ವತ್ರಿಕ ಚುನಾವಣೆಗಳಿಗೆ ಸಂಬಂಧಿಸಿದ ಯಾವುದೇ ಇತ್ತೀಚಿನ ಅಭಿಪ್ರಾಯ ಸಂಗ್ರಹಗಳು ಕಂಡುಬಂದಿಲ್ಲ. ನಾವು ಅವರ ಅಧಿಕೃತ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳನ್ನು ನೋಡಿದ್ದೇವೆ ಮತ್ತು ಏಪ್ರಿಲ್ ೧೯, ೨೦೨೪ ರಂದು ಆಕ್ಸಿಸ್ ಮೈ ಇಂಡಿಯಾದ ಫೇಸ್‌ಬುಕ್ ಪೋಷ್ಟ ಅನ್ನು ಕಂಡುಕೊಂಡಿದ್ದೇವೆ. ಈ ಪೋಷ್ಟ್ ನ ಶೀರ್ಷಿಕೆ ಹೀಗಿದೆ, “ಪ್ರಮುಖ ಅಪ್‌ಡೇಟ್: ಕೆಲವು ಪೋಷ್ಟ್ ಗಳು ಮತ್ತು ವರದಿಗಳು ಆಕ್ಸಿಸ್ ಮೈ ಇಂಡಿಯಾ ಹೆಸರನ್ನು ದುರುಪಯೋಗಪಡಿಸಿಕೊಳ್ಳುತ್ತಿವೆ. ಅಂತಹ ಯಾವುದೇ ವರದಿಗಳನ್ನು ನಂಬಬೇಡಿ. ಈ ಪೋಷ್ಟ್ ಪತ್ರಿಕಾ ಪ್ರಕಟಣೆಯನ್ನು ಸಹ ಹೊಂದಿದ್ದು, ಅವರು ಅಂತಹ ಯಾವುದೇ ಪೂರ್ವ-ಚುನಾವಣೆ ಅಥವಾ ಅಭಿಪ್ರಾಯ ಸಂಗ್ರಹಗಳನ್ನು ಎಂದಿಗೂ ಪ್ರಕಟಿಸಿಲ್ಲ ಮತ್ತು ತಮ್ಮ ಎಕ್ಸಿಟ್ ಪೋಲ್ ಫಲಿತಾಂಶಗಳನ್ನು ಜೂನ್ 1, 2024 ರಂದು ಸಂಜೆ ೬.೩೦ ಕ್ಕೆ ಬಿಡುಗಡೆ ಮಾಡುವುದಾಗಿ ಸ್ಪಷ್ಟಪಡಿಸಿದ್ದಾರೆ. ಈ ಪತ್ರಿಕಾ ಪ್ರಕಟಣೆಯು ಚಿತ್ರದಲ್ಲಿ "ಆಂತರಿಕ ವರದಿ" ಯ ಹೇಳಿಕೆಗಳನ್ನು ಕೂಡ ಅಂತಹ ವಿಷಯವಿಲ್ಲ ಎಂದು ಹೇಳಿಕೊಂಡು ತಳ್ಳಿಹಾಕಿದೆ.

ಆಕ್ಸಿಸ್ ಮೈ ಇಂಡಿಯಾ ಹಂಚಿಕೊಂಡಿರುವ ಪತ್ರಿಕಾ ಪ್ರಕಟಣೆಯ ಸ್ಕ್ರೀನ್‌ಶಾಟ್.


ಆಕ್ಸಿಸ್ ಮೈ ಇಂಡಿಯಾ ತನ್ನ ಅಧಿಕೃತ ಎಕ್ಸ್ ಹ್ಯಾಂಡಲ್‌ನಲ್ಲಿ ಕೂಡ ಅದೇ ಪತ್ರಿಕಾ ಪ್ರಕಟಣೆಯನ್ನು ಹಂಚಿಕೊಂಡಿದೆ. ಇದು ಆಕ್ಸಿಸ್ ಮೈ ಇಂಡಿಯಾ ನಡೆಸಿದ ನಿಜವಾದ ಚುನಾವಣಾ ಪೂರ್ವ ಸಮೀಕ್ಷೆಯ ಚಿತ್ರವಲ್ಲ ಮತ್ತು ನಕಲಿ ಎಂದು ದೃಢಪಡಿಸುತ್ತದೆ.

ಇಂಡಿಯಾ ಟುಡೇ ಸಮೀಕ್ಷೆ:

ಇಂಡಿಯಾ ಟುಡೇ ಸಮೀಕ್ಷೆಯನ್ನು ತೋರಿಸಲು ನಾವು ಸ್ಕ್ರೀನ್‌ಶಾಟ್‌ನ ರಿವರ್ಸ್ ಇಮೇಜ್ ಸರ್ಚ್ ನಡೆಸಿದ್ದೇವೆ ಮತ್ತು ಏಪ್ರಿಲ್ ೩, ೨೦೨೪ ರಂದು ಇಂಡಿಯಾ ಟುಡೇ ಹಂಚಿಕೊಂಡ ಯೂಟ್ಯೂಬ್ ವೀಡಿಯೋವನ್ನು ಕಂಡುಕೊಂಡಿದ್ದೇವೆ. ವೀಡಿಯೋದಲ್ಲಿ, ವೈರಲ್ ಸ್ಕ್ರೀನ್‌ಶಾಟ್‌ನಲ್ಲಿ ನೋಡಿದ ಅದೇ ಪ್ಯಾನೆಲಿಸ್ಟ್‌ಗಳು ಮತ್ತು ತಜ್ಞರನ್ನು ನಾವು ನೋಡಿದ್ದೇವೆ. ವೀಡಿಯೋವನ್ನು ವಿಶ್ಲೇಷಿಸಿದಾಗ, ವೈರಲ್ ಸ್ಕ್ರೀನ್‌ಶಾಟ್‌ನಲ್ಲಿರುವ ಅದೇ ಅಂಕಿಅಂಶಗಳನ್ನು ಅದರಲ್ಲೆಲ್ಲೂ ನೋಡಲಿಲ್ಲ. ಆದರೆ, “ಮೂಡ್ ಆಫ್ ದಿ ನೇಷನ್” ಕಾರ್ಯಕ್ರಮದ ಸಮಯದಲ್ಲಿ ಪ್ರದರ್ಶಿಸಲಾದ ಅಂಕಿಅಂಶಗಳು ಭಿನ್ನವಾಗಿವೆ (ಬಿಜೆಪಿ - ೭೦, ಅಪ್ನಾ ದಳ - ೨, ಕಾಂಗ್ರೆಸ್ - ೧, ಎಸ್‌ಪಿ - ೭, ಬಿಎಸ್‌ಪಿ - ೦, ಮತ್ತು ಇತರರು - ೦).

ಏಪ್ರಿಲ್ ೩, ೨೦೨೪ ರಂದು ಇಂಡಿಯಾ ಟುಡೇ ಹಂಚಿಕೊಂಡ ಯೂಟ್ಯೂಬ್ ವೀಡಿಯೋದ ಸ್ಕ್ರೀನ್‌ಶಾಟ್.


ಗಮನಿಸಬೇಕಾದ ಸಂಗತಿಯೆಂದರೆ, ವೀಡಿಯೋದಲ್ಲಿರುವ ಎಲ್ಲಾ ನಾಲ್ಕು ವ್ಯಕ್ತಿಗಳ ಉಡುಪುಗಳು ಮತ್ತು ಸಂಬಂಧಿತ ಹಿನ್ನೆಲೆಗಳು ವೈರಲ್ ಸ್ಕ್ರೀನ್‌ಶಾಟ್‌ನಲ್ಲಿ ನೋಡಿದಂತೆಯೇ ಇವೆ. a, ಆದರೆ ಸ್ಕ್ರೀನ್ ನ ಬಲಭಾಗದಲ್ಲಿ ೨೦೨೪ ರ "ಯೋಜಿತ ಆಸನ ಹಂಚಿಕೆ" ಅಂಕಿಅಂಶಗಳನ್ನು ಬದಲಾಯಿಸಲಾಗಿದೆ.


ತೀರ್ಪು:

ಇಂಡಿಯಾ ಟುಡೇ ಶೋ ನ ಸ್ಕ್ರೀನ್‌ಶಾಟ್ ಅನ್ನು ಬಳಸಿಕೊಂಡು ವೈರಲ್ ಹೇಳಿಕೆಗಳು ಮತ್ತು ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆಯಿಂದ ಬಂದ ಅಂಕಿಅಂಶಗಳು ತಪ್ಪಾಗಿವೆ. ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆಯನ್ನು ತೋರಿಸಲು ನಕಲಿ ಚಿತ್ರವನ್ನು ಬಳಸಲಾಗಿದೆ ಮತ್ತು ಇಂಡಿಯಾ ಟುಡೇ ಸಮೀಕ್ಷೆಯನ್ನು ತೋರಿಸಲು ಎಡಿಟ್ ಮಾಡಿದ ಚಿತ್ರವನ್ನು ಬಳಸಲಾಗಿದೆ.

Claim :  Photo edited from pre-election polls and news reports showing that the BJP will be hit hard in the 2024 elections.
Claimed By :  X user
Fact Check :  False
Tags:    

Similar News