ಅದಾನಿ ಮತ್ತು ಅಂಬಾನಿ ಬಗ್ಗೆ ರಾಹುಲ್ ಗಾಂಧಿ ಮೌನವಾಗಿದ್ದಾರೆ ಎಂಬ ಪ್ರಧಾನಿ ಮೋದಿ ಅವರ ಹೇಳಿಕೆ ತಪ್ಪು.
ಸಾರಾಂಶ:
೨೦೨೪ ರ ಲೋಕಸಭೆ ಚುನಾವಣೆ ಘೋಷಣೆಯಾದ ನಂತರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮುಖೇಶ್ ಅಂಬಾನಿ ಮತ್ತು ಗೌತಮ್ ಅದಾನಿ ಬಗ್ಗೆ ಮಾತನಾಡುವುದನ್ನು ನಿಲ್ಲಿಸಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಆದರೆ, ಈ ಹೇಳಿಕೆ ತಪ್ಪು. ಏಕೆಂದರೆ ರಾಹುಲ್ ಗಾಂಧಿ ಅವರ ಚುನಾವಣಾ ಪ್ರಚಾರದಲ್ಲಿ ಅಂಬಾನಿ ಮತ್ತು ಅದಾನಿಯನ್ನು ಉಲ್ಲೇಖಿಸಿದ ಹಲವಾರು ನಿದರ್ಶನಗಳನ್ನು ನಾವು ಗುರುತಿಸಿದ್ದೇವೆ.
ಹೇಳಿಕೆ:
ಮೇ ೮, ೨೦೨೪ ರಂದು ತೆಲಂಗಾಣದ ಕರೀಂನಗರದಲ್ಲಿ ಮಾಡಿದ ಭಾಷಣದಲ್ಲಿ, ೨೦೨೪ ರ ಲೋಕಸಭಾ ಚುನಾವಣೆಯ ಘೋಷಣೆಯಾದಾಗಿನಿಂದ, ರಾಹುಲ್ ಗಾಂಧಿ "ಇದ್ದಕ್ಕಿದ್ದಂತೆ" ಉದ್ಯಮಿಗಳಾದ ಮುಖೇಶ್ ಅಂಬಾನಿ ಮತ್ತು ಗೌತಮ್ ಅದಾನಿ ಅವರ ಹೆಸರನ್ನು ತೆಗೆಯುವುದು ನಿಲ್ಲಿಸಿದ್ದಾರೆ ಎಂದು ಪ್ರತಿಪಾದಿಸಿದರು. ಅವರು ಭ್ರಷ್ಟಾಚಾರದ ಆರೋಪಗಳನ್ನು ಆರೋಪಿಸಿದರು ಮತ್ತು ಕಾಂಗ್ರೆಸ್ ಈ ಇಬ್ಬರಿಂದ ಹಣದ ಟ್ರಕ್‌ಗಳನು ಪಡೆದಿದ್ದರಿಂದ ರಾಹುಲ್ ಗಾಂಧಿ ಅವರ ಹೆಸರನ್ನು ಉಲ್ಲೇಖಿಸಲಿಲ್ಲ ಎಂದು ಹೇಳಿದ್ದಾರೆ.
ತನ್ನ ಚುನಾವಣಾ ಪ್ರಚಾರದ ಕ್ಲಿಪ್ ಮಾಡಿದ ವೀಡಿಯೋವನ್ನು ಪ್ರಧಾನಿ ಮೋದಿಯವರು ತಮ್ಮ ಅಧಿಕೃತ ಎಕ್ಸ್ (ಹಿಂದೆ ಟ್ವಿಟರ್) ಹ್ಯಾಂಡಲ್ ನಲ್ಲಿ ಹೀಗೆ ಹೇಳಿಕೊಂಡು ಹಂಚಿಕೊಂಡಿದ್ದಾರೆ, "ಈ ಚುನಾವಣೆಯಲ್ಲಿ ಶಹಜಾದೆ ಜಿ ಅವರು ಅಂಬಾನಿ-ಅದಾನಿ ಬಗ್ಗೆ ಮಾತನಾಡುವುದನ್ನು ಏಕೆ ನಿಲ್ಲಿಸಿದ್ದಾರೆ? ಜನರು ರಹಸ್ಯ ಒಪ್ಪಂದವನ್ನು ವಾಸನೆ ಮಾಡುತ್ತಿದ್ದಾರೆ… (ಅನುವಾದಿಸಲಾಗಿದೆ)” ಹಲವಾರು ಇತರ ಸಾಮಾಜಿಕ ಮಾಧ್ಯಮ ಬಳಕೆದಾರರು ಈ ವೈರಲ್ ವೀಡಿಯೊವನ್ನು ಎಕ್ಸ್, ಫೇಸ್‌ಬುಕ್ ಮತ್ತು ಯೂಟ್ಯೂಬ್ ನಲ್ಲಿ ವ್ಯಾಪಕವಾಗಿ ಹಂಚಿಕೊಂಡಿದ್ದಾರೆ.
ಮೋದಿಯವರು ಮಾಡಿದ ಆರೋಪದ ವೀಡಿಯೋ ಹೊಂದಿರುವ ಎಕ್ಸ್ ಪೋಷ್ಟ್ ನ ಸ್ಕ್ರೀನ್‌ಶಾಟ್.
ಪುರಾವೆ:
ಮಾರ್ಚ್ ೧೭, ೨೦೨೪ ಮತ್ತು ಮೇ ೮, ೨೦೨೪ ರ ನಡುವಿನ ಕಾಂಗ್ರೆಸ್‌ನ ಚುನಾವಣಾ ಪ್ರಚಾರಗಳನ್ನು ವಿಶ್ಲೇಷಿಸಿದ ನಂತರ, ರಾಹುಲ್ ಗಾಂಧಿ ಹಲವಾರು ಸಂದರ್ಭಗಳಲ್ಲಿ ಅಂಬಾನಿ ಮತ್ತು ಅದಾನಿಯನ್ನು ಉಲ್ಲೇಖಿಸಿದ್ದಾರೆ ಎಂದು ನಾವು ಕಂಡುಕೊಂಡಿದ್ದೇವೆ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ತನ್ನ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ವೀಡಿಯೋಗಳ ಟೈಮ್‌ಲೈನ್ ಅನ್ನು ಅಪ್‌ಲೋಡ್ ಮಾಡಿದೆ. ರಾಹುಲ್ ಗಾಂಧಿ ಅವರು ಮೇ ತಿಂಗಳಲ್ಲಿ ಐದು ಬಾರಿ ಚುನಾವಣಾ ಪ್ರಚಾರದಲ್ಲಿ ಅಂಬಾಯ್ ಮತ್ತು ಅದಾನಿಯನ್ನು ಪ್ರಸ್ತಾಪಿಸಿದರು.
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಅಧಿಕೃತ ಯೂಟ್ಯೂಬ್ ಚಾನೆಲ್‌ನ ಸ್ಕ್ರೀನ್‌ಶಾಟ್
ರಾಹುಲ್ ಗಾಂಧಿಯವರ ವೀಡಿಯೋಗಳ ಟೈಮ್‌ಲೈನ್ ಅನ್ನು ಉಲ್ಲೇಖಿಸುತ್ತದೆ.
ಏಪ್ರಿಲ್ ೨೦, ೨೦೨೪ ರಂದು, ಬಿಹಾರದ ಭಾಗಲ್ಪುರದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ವೀಡಿಯೋದ ೫:೪೭ ನಿಮಿಷಗಳ ಸಮಯದಲ್ಲಿ ರಾಹುಲ್ ಗಾಂಧಿ "ಅಂಬಾನಿ-ಅದಾನಿ" ಎಂದು ಉಲ್ಲೇಖಿಸಿದ್ದಾರೆ. ಬಡವರು, ರೈತರು ಮತ್ತು ಕಾರ್ಮಿಕರು ಸಾಕಷ್ಟು ಹಣವನ್ನು ಸಂಪಾದಿಸದಿದ್ದರೂ, ಇಬ್ಬರು ಕೋಟ್ಯಾಧಿಪತಿಗಳು ಏಳಿಗೆ ಹೊಂದುತ್ತಾರೆ ಎಂದು ಅವರು ಹೇಳಿದರು.
ಹಿರಿಯ ನಾಯಕ ರಾಹುಲ್ ಗಾಂಧಿ ಅವರು ತಮ್ಮ ಹಲವಾರು ಚುನಾವಣಾ ಭಾಷಣಗಳಲ್ಲಿ ಈ ರಾಜ್ಯಗಳಲ್ಲಿ - ಜಾರ್ಖಂಡ್ (3:09 ರಿಂದ 3:40), ಮಧ್ಯಪ್ರದೇಶ (14:35 ರಿಂದ 15:55), ಛತ್ತೀಸ್‌ಗಢ (6:33 ರಿಂದ 7:22), ಗುಜರಾತ್ (2:18-3:44), ಕರ್ನಾಟಕ (4:00 - 4:40), ಮಹಾರಾಷ್ಟ್ರ (22:40-24:37), ಉತ್ತರ ಪ್ರದೇಶ (1:16- 4:02), ಒಡಿಶಾ (5:17-6:20), ಮತ್ತು ಕೇಂದ್ರಾಡಳಿತ ಪ್ರದೇಶ ದಮನ್ ಮತ್ತು ದಿಯು (8:57 -9:56) ಅದಾನಿ ಮತ್ತು ಅಂಬಾನಿ ಕೇಂದ್ರದಿಂದ ಒಲವು ತೋರುತ್ತಿರುವುದನ್ನು ಉಲ್ಲೇಖಿಸಿ ಇದೇ ರೀತಿಯ ಟೀಕೆಗಳ ಭಾನೆಗಳನ್ನು ಮಾಡಿದ್ದಾರೆ.
ತೀರ್ಪು:
೨೦೨೪ ರ ಲೋಕಸಭಾ ಚುನಾವಣೆಯ ಘೋಷಣೆಯಾದ ನಂತರ ರಾಹುಲ್ ಗಾಂಧಿ ಅವರು ತಮ್ಮ ಯಾವುದೇ ಭಾಷಣಗಳಲ್ಲಿ ಗೌತಮ್ ಅದಾನಿ ಮತ್ತು ಮುಖೇಶ್ ಅಂಬಾನಿ ಹೆಸರನ್ನು ಉಲ್ಲೇಖಿಸಿಲ್ಲ ಎಂಬ ಪ್ರಧಾನಿ ಮೋದಿ ಅವರ ಹೇಳಿಕೆಯು ತಪ್ಪು. ಏಕೆಂದರೆ ರಾಹುಲ್ ಗಾಂಧಿ ತಮ್ಮ ಇತ್ತೀಚಿನ ಭಾಷಣಗಳಲ್ಲಿ ಹಲವಾರು ಉಲ್ಲೇಖಗಳನ್ನು ಮಾಡಿದ್ದಾರೆ.