ಪಶ್ಚಿಮ ದೆಹಲಿಯಲ್ಲಿ ಎಎಪಿ ಗೆಲುವಿನ ಮುನ್ಸೂಚನೆ ನೀಡುವ ಎಕ್ಸಿಟ್ ಪೋಲ್‌ನ ನ್ಯೂಸ್24 ವೀಡಿಯೋ ನಕಲಿಯಾಗಿದೆ

Update: 2024-05-30 09:54 GMT

ಸಾರಾಂಶ:

ಪಶ್ಚಿಮ ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದ (ಎಎಪಿ) ಗೆಲುವನ್ನು ಸೂಚಿಸುವ ಟುಡೇಸ್ ಚಾಣಕ್ಯ ಎಕ್ಸಿಟ್ ಪೋಲ್ ಅನ್ನು ತೋರಿಸಲು ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ನ್ಯೂಸ್24 ನ ಸುದ್ದಿ ವರದಿಯ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಆದರೆ, ಈ ವೀಡಿಯೋ ಡೀಪ್‌ಫೇಕ್ ಆಗಿದೆ ಮತ್ತು ಅದನ್ನು ಆನ್‌ಲೈನ್‌ನಲ್ಲಿ ತಪ್ಪಾಗಿ ಹಂಚಿಕೊಳ್ಳಲಾಗಿದೆ ಎಂದು ಕಂಡುಬಂದಿದೆ.

ಹೇಳಿಕೆ:

ಟುಡೇಸ್ ಚಾಣಕ್ಯ ಎಕ್ಸಿಟ್ ಪೋಲ್ ಪಶ್ಚಿಮ ದೆಹಲಿಯಲ್ಲಿ ಎಎಪಿ ಗೆಲುವಿನ ಮುನ್ಸೂಚನೆ ನೀಡಿದೆ ಎಂದು ಹೇಳುವ ಉದ್ದೇಶಿತ ವೀಡಿಯೋವನ್ನು ಆನ್‌ಲೈನ್‌ನಲ್ಲಿ ಹಂಚಿಕೊಳ್ಳಲಾಗುತ್ತಿದೆ. ಈ ವೀಡಿಯೋ ನ್ಯೂಸ್ 24 ವರದಿಯದ್ದಾಗಿದೆ. ಫೇಸ್‌ಬುಕ್‌ನಲ್ಲಿ ಅಂತಹ ಒಂದು ವೀಡಿಯೋ ಪೋಷ್ಟ್ ನ ಶೀರ್ಷಿಕೆ ಹೀಗಿದೆ, “ಮಹಾಬಲ್ ಮಿಶ್ರಾ ಅವರ ಸ್ಪಷ್ಟ ಅಲೆಯು ಅತಿದೊಡ್ಡ ಮಾಧ್ಯಮ ಟುಡೇ ಚಾಣಕ್ಯ ಸಮೀಕ್ಷೆಯಲ್ಲಿ ಗೋಚರಿಸುತ್ತದೆ. ಮಹಾಬಲ್ ಮಿಶ್ರಾ ಅವರು ೫ ಲಕ್ಷ ಮತಗಳ ಅಂತರದಲ್ಲಿ ಗೆಲ್ಲುತ್ತಾರೆ ಎಂದು ತೋರುತ್ತದೆ." ಮಹಾಬಲ್ ಮಿಶ್ರಾ ಪಶ್ಚಿಮ ದೆಹಲಿಯಿಂದ ಎಎಪಿ ಅಭ್ಯರ್ಥಿ.

ನ್ಯೂಸ್24 ವೀಡಿಯೋದೊಂದಿಗೆ ಫೇಸ್‌ಬುಕ್ ನಲ್ಲಿ ಹಂಚಿಕೊಂಡ ಪೋಷ್ಟ್ ನ ಸ್ಕ್ರೀನ್‌ಶಾಟ್.


ಪುರಾವೆ:

ನ್ಯೂಸ್24 ವರದಿ ಮಾಡಿರುವ ಟುಡೇಸ್ ಚಾಣಕ್ಯ ಎಕ್ಸಿಟ್ ಪೋಲ್‌ನ ಬಗ್ಗೆಯ ವರದಿಗಳನ್ನು ನಾವು ಹುಡುಕಿದಾಗ ಅಂತಹ ಯಾವುದೇ ಸುದ್ದಿ ವರದಿಗಳು ನಮಗೆ ಕಂಡು ಬಂದಿಲ್ಲ. ವೈರಲ್ ವೀಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ, ವೀಡಿಯೋದಲ್ಲಿನ ಶೋ ಹೋಸ್ಟ್‌ನ ಆಡಿಯೋ ಮತ್ತು ತುಟಿಗಳ ಚಾಲನೆ ಸಿಂಕ್ ಆಗಿಲ್ಲ ಎಂದು ಕಂಡುಬಂದಿದೆ. ಇದನ್ನು ಖಚಿತಪಡಿಸಲು, ನಾವು ವೀಡಿಯೋದ ಕೀಫ್ರೇಮ್‌ಗಳ ರಿವರ್ಸ್ ಇಮೇಜ್ ಹುಡುಕಾಟವನ್ನು ಮಾಡಿದ್ದೇವೆ. ಇದು ವೈರಲ್ ವೀಡಿಯೋದಲ್ಲಿ ಕಂಡುಬರುವ ನ್ಯೂಸ್24 ಶೋ ಹೋಸ್ಟ್ ಮನಕ್ ಗುಪ್ತಾ ಅವರ ಎಕ್ಸ್ (ಹಿಂದೆ ಟ್ವಿಟರ್) ಪೋಷ್ಟ್ ಗೆ ನಮ್ಮನ್ನು ಕರೆದೊಯ್ಯಿತು. ಆ ಪೋಷ್ಟ್ ನಲ್ಲಿ, ಅವರು ಅದೇ ವೀಡಿಯೋವನ್ನು ಹಂಚಿಕೊಂಡಿದ್ದಾರೆ ಮತ್ತು “ರಾಷ್ಟ್ರ ಕಿ ಬಾತ್” ಕಾರ್ಯಕ್ರಮದಿಂದ ಅವರ ದೃಶ್ಯಗಳನ್ನು ತೆಗೆದುಕೊಳ್ಳಲಾಗಿದೆ ಮತ್ತು ನಕಲಿ ವೀಡಿಯೊವನ್ನು ರಚಿಸಲು ಎಐ- ರಚಿತವಾದ ಆಡಿಯೊವನ್ನು ಅದರಲ್ಲಿ ಸೇರಿಸಲಾಗಿದೆ ಎಂದು ಗಮನಿಸಿದರು. ಟುಡೇಸ್ ಚಾಣಕ್ಯ ಅಂತಹ ಯಾವುದೇ ಸಮೀಕ್ಷೆಯನ್ನು ಬಿಡುಗಡೆ ಮಾಡಿಲ್ಲ ಎಂದು ಕೂಡ ಅವರು ಸ್ಪಷ್ಟಪಡಿಸಿದ್ದಾರೆ.

ಮನಕ್ ಗುಪ್ತಾ ಅವರ ಎಕ್ಸ್ ಪೋಷ್ಟ್ ನ ಸ್ಕ್ರೀನ್‌ಶಾಟ್.


ಟುಡೇಸ್ ಚಾಣಕ್ಯ ಅವರ ಎಕ್ಸ್ ಪೋಷ್ಟ್ ಅನ್ನು ಸಹ ನಾವು ನೋಡಿದ್ದೇವೆ. ಅಲ್ಲಿ ಅವರು ಮನಕ್ ಗುಪ್ತಾ ಅವರ ಎಕ್ಸ್ ಪೋಷ್ಟ್ ಅನ್ನು ಮರು ಪೋಷ್ಟ್ ಮಾಡಿದ್ದಾರೆ ಮತ್ತು ಹೀಗೆ ಹೇಳಿಕೊಂಡಿದ್ದಾರೆ, “ನಾವು ದೆಹಲಿ ಅಥವಾ ಇತರ ಯಾವುದೇ ರಾಜ್ಯದ ಕುರಿತು ಯಾವುದೇ ಅಭಿಪ್ರಾಯ ಸಂಗ್ರಹವನ್ನು ಬಿಡುಗಡೆ ಮಾಡಿಲ್ಲ. ನಮ್ಮ ಹೆಸರಿನಲ್ಲಿರುವ ಎಲ್ಲಾ ಸಮೀಕ್ಷೆಗಳು ನಕಲಿ ಮತ್ತು ನಮಗೆ ಸೇರಿದ್ದಲ್ಲ." ವೀಡಿಯೋವನ್ನು ಎಐ ಬಳಸಿ ಎಡಿಟ್ ಮಾಡಲಾಗಿದೆ ಮತ್ತು ಅದು ನಕಲಿ ಎಂದು ಇದು ಖಚಿತಪಡಿಸುತ್ತದೆ.

ಅವರು ಎಕ್ಸಿಟ್ ಪೋಲ್ ಸಮೀಕ್ಷೆಗಳನ್ನು ಪ್ರಕಟಿಸಿಲ್ಲ ಎಂದು ಖಚಿತಪಡಿಸುವ ಟುಡೇಸ್ ಚಾಣಕ್ಯ ಅವರ ಎಕ್ಸ್ ಪೋಷ್ಟ್ ನ ಸ್ಕ್ರೀನ್‌ಶಾಟ್‌.


ಜೂನ್ ೧, ೨೦೨೪ ರಂದು ಸಂಜೆ ೬:೩೦ ಗಂಟೆಯ ಮೊದಲು ಯಾವುದೇ ನಿರ್ಗಮನ ಸಮೀಕ್ಷೆಯ ಫಲಿತಾಂಶಗಳನ್ನು ಪ್ರಕಟಿಸುವುದನ್ನು ಇಸಿಐ ನಿಷೇಧಿಸಿದೆ ಎಂಬುದು ಗಮನಿಸಬೇಕಾದ ಸಂಗತಿ. ಇದಲ್ಲದೆ, ನಾವು ಪ್ರಸ್ತುತ ನಡೆಯುತ್ತಿರುವ ಲೋಕಸಭಾ ಚುನಾವಣೆಗಳಿಗೆ ಸಂಬಂಧಿಸಿದಂತೆ ಇಂತಹ ಅನೇಕ ಉದ್ದೇಶಿತ ನಿರ್ಗಮನ ಸಮೀಕ್ಷೆಗಳನ್ನು ಫೇಕ್ ಎಂದು ಫ್ಯಾಕ್ಟ್-ಚೆಕ್ ಮೂಲಕ ಪ್ರಕಟಿಸಿದ್ದೇವೆ.

ತೀರ್ಪು:

ಟುಡೇಸ್ ಚಾಣಕ್ಯ ಸಮೀಕ್ಷೆಯ ಕುರಿತು ನ್ಯೂಸ್24 ವರದಿಯು ಪಶ್ಚಿಮ ದೆಹಲಿಯಲ್ಲಿ ಎಎಪಿ ಗೆಲುವಿನ ಮುನ್ಸೂಚನೆಯನ್ನು ನೀಡಿದೆ ಎಂದು ತೋರಿಸಲು ಉದ್ದೇಶಿಸಿರುವ ವೀಡಿಯೋ ನಕಲಿಯಾಗಿದೆ. ಈ ವೀಡಿಯೋವನ್ನು ರಚಿಸಲು, ಎಐ- ರಚಿತವಾದ ಆಡಿಯೋವನ್ನು ನ್ಯೂಸ್24 ನ ಕಾರ್ಯಕ್ರಮಗಳ ಒಂದು ವೀಡಿಯೋ ಕ್ಲಿಪ್ ಗೆ ಅದನ್ನು ಸೇರಿಸಲಾಗಿದೆ ಎಂದು ವೀಡಿಯೋದ ವಿಶ್ಲೇಷಣೆಯಲ್ಲಿ ಕಂಡುಬಂದಿದೆ.


Claim :  The News24 video of an exit poll predicting AAP win in West Delhi is fake
Claimed By :  Facebook User
Fact Check :  Fake
Tags:    

Similar News