ಯುನೈಟೆಡ್ ನೇಷನ್ಸ್ ನ ೨೦೩೦ ರ "ನ್ಯೂ ವರ್ಲ್ಡ್ ಆರ್ಡರ್" ಕಾರ್ಯಸೂಚಿಯಾದ್ದು ಎಂದು ಹೇಳಿಕೊಂಡು ತಪ್ಪಾದ ಚಿತ್ರವನ್ನು ಹಂಚಿಕೊಳ್ಳಲಾಗಿದೆ.
ಸಾರಾಂಶ:
ಎಕ್ಸ್ (ಹಿಂದೆ ಟ್ವಿಟ್ಟರ್) ಬಳಕೆದಾರರು ಯುನೈಟೆಡ್ ನೇಷನ್ಸ್ (ಯುಎನ್) ೨೦೩೦ ರ "ನ್ಯೂ ವರ್ಲ್ಡ್ ಆರ್ಡರ್" ಕಾರ್ಯಸೂಚಿಯನ್ನು ತೋರಿಸುತ್ತದೆ ಎಂದು ಹೇಳಿಕೊಳ್ಳುವ ಚಿತ್ರವನ್ನು ಹಂಚಿಕೊಂಡಿದ್ದಾರೆ. ೨೦೧೫ ಸೆಪ್ಟೆಂಬರ್ ೨೫-೨೭ ರಂದು ನ್ಯೂಯಾರ್ಕ್‌ನಲ್ಲಿ ನಡೆದ ಶೃಂಗಸಭೆಯಲ್ಲಿ ಯುಎನ್-೨೦೩೦ ರ ಸುಸ್ಥಿರ ಅಭಿವೃದ್ಧಿಗಾಗಿ ಕಾರ್ಯಸೂಚಿಯನ್ನು ಪ್ರಾರಂಭಿಸಿತು. ಈಗ ಹಂಚಿಕೊಂಡಿರುವ ಚಿತ್ರದ ವಿಷಯವು ಯುಎನ್ ವೆಬ್‌ಸೈಟ್‌ನಲ್ಲಿ ಪಟ್ಟಿಮಾಡಲಾದ ಅಧಿಕೃತ ಅಜೆಂಡಾ ೨೦೩೦ ಕ್ಕೆ ಹೊಂದಿಕೆಯಾಗುವುದಿಲ್ಲ.ಆದ್ದರಿಂದ, ಈ ಚಿತ್ರದಲ್ಲಿನ ಹೇಳಿಕೆಗಳು ತಪ್ಪು.
ಹೇಳಿಕೆ:
ಎಕ್ಸ್ ನಲ್ಲಿನ ಬಳಕೆದಾರರು "ನ್ಯೂ ವರ್ಲ್ಡ್ ಆರ್ಡರ್" ನ ಗುರಿಗಳನ್ನು ತೋರಿಸುವುದಾಗಿ ಹೇಳಿಕೊಳ್ಳುವ ಪೋಷ್ಟ್ ಅನ್ನು ಹಂಚಿಕೊಂಡಿದ್ದಾರೆ. ಬಳಕೆದಾರರು ಏಪ್ರಿಲ್ ೦೪, ೨೦೨೪ ರಂದು ಚಿತ್ರವನ್ನು ಪೋಷ್ಟ್ ಮಾಡಿದ್ದಾರೆ. ಆ ಪೋಷ್ಟ್ ನ ಶೀರ್ಷಿಕೆ ಹೀಗಿದೆ, “ಅವರು ಇದನ್ನೇ ಮಾಡುತ್ತಿದ್ದಾರೆ ಎಂದು ನಿಮಗೆ ಕಾಣಿಸುತ್ತಿಲ್ಲವೇ? ಎಲ್ಲಿಯಾದರೂ ಸುಳ್ಳು ಧ್ವಜಗಳಿಗೆ, ಮನಿ ಲಾಂಡರಿಂಗ್. ನಮ್ಮ ಸಾರಿಗೆ, ನ್ಯೂ ಮಸ್ಟಾಂಗ್ ಕಾರನ್ನು ನೋಡಿ, ಅದು ಫೋರ್ಡ್ ಎಸ್ಕೇಪ್ ಅಥವಾ ಯಾವುದೇ ಇತರ ಸಣ್ಣ ಎಸ್ಯುವಿಯಂತೆ ಕಾಣುತ್ತದೆ. (ಕನ್ನಡಕ್ಕೆ ಅನುವಾದಿಸಲಾಗಿದೆ).”
ಇದು ಯುಎನ್ ನ ೨೦೩೦ರ ಕಾರ್ಯಸೂಚಿಯನ್ನು ತೋರಿಸುತ್ತದೆ ಎಂದು ಹೇಳಿಕೊಂಡು ಎಕ್ಸ್ ನಲ್ಲಿ ಪೋಷ್ಟ್ ಮಾಡಲಾದ ಚಿತ್ರದ ಸ್ಕ್ರೀನ್‌ಶಾಟ್.
ಎಕ್ಸ್ ನಲ್ಲಿನ ಮತ್ತೊಬ್ಬ ಪರಿಶೀಲಿಸಿದ ಬಳಕೆದಾರರು ಈ ಶೀರ್ಷಿಕೆಯೊಂದಿಗೆ ಕ್ಲಿಪ್ ಅನ್ನು ಹಂಚಿಕೊಂಡಿದ್ದಾರೆ, “ಒಂದು ವೇಳೆ ನಿಮಗೆ ಅಜೆಂಡಾ ೨೦೩೦ ಏನೆಂದು ಖಚಿತವಾಗಿರದಿದ್ದರೆ ಮತ್ತು ಅವರು ೬ ವರ್ಷಗಳಲ್ಲಿ ಇದನ್ನು ಮಾಡಲು ಪ್ರಯತ್ನಿಸುತ್ತಿದ್ದಾರೆಂದು ನಾನು ನಿಮಗೆ ನೆನಪಿಸುತ್ತೇನೆ. ಇದು ನಡೆಯುವುದನ್ನು ನೀವು ನೋಡಬಹುದು, ಇಲ್ಲಿ ಯಾವುದೇ ಪಿತೂರಿ ಇಲ್ಲ. (ಕನ್ನಡಕ್ಕೆ ಅನುವಾದಿಸಲಾಗಿದೆ).”
ಚಿತ್ರವನ್ನು ಏಪ್ರಿಲ್ ೦೩, ೨೦೨೪ ರಂದು ಇನ್ಸ್ಟಾಗ್ರಾಮ್ ಖಾತೆಯಿಂದ ಹೀಗೆ ಹೇಳಿಕೊಂಡು ಪೋಷ್ಟ್ ಮಾಡಲಾಗಿದೆ, "#NWO #OneWorldGovernment ಗೆ ಇಲ್ಲ ಎಂದು ಹೇಳಿ #Sovereignty ಗೆ ಹೌದು ಎಂದು ಹೇಳಿ." ಈ ಪೋಷ್ಟ್ ೨೯೦೦ ಇಷ್ಟಗಳನ್ನು ಗಳಿಸಿದೆ.
ಇನ್ಸ್ಟಾಗ್ರಾಮ್ ಪೋಷ್ಟ್ ನ ಸ್ಕ್ರೀನ್‌ಶಾಟ್.
ಸಾಮಾಜಿಕ ಮಾಧ್ಯಮ ಪೋಷ್ಟ್ ಗಳು #NWO #OneWorldGovernment ನಂತಹ ಹ್ಯಾಶ್‌ಟ್ಯಾಗ್‌ಗಳನ್ನು ಬಳಸಿರುವುದನ್ನು ಕೂಡ ನಾವು ಗಮನಿಸಿದ್ದೇವೆ.
ಪುರಾವೆ:
ಯುಎನ್‌ನ '೨೦೩೦ ಅಜೆಂಡಾ ಫಾರ್ ಸಸ್ಟೈನಬಲ್ ಡೆವಲಪ್‌ಮೆಂಟ್' ಅಡಿಯಲ್ಲಿ ಪಟ್ಟಿ ಮಾಡಲಾದ ೧೭ ಗುರಿಗಳ ಜೊತೆಗೆ ವೈರಲ್ ಚಿತ್ರದ ವಿಷಯವನ್ನು ನಾವು ವಿಶ್ಲೇಷಿಸಿದ್ದೇವೆ.
ಸುಸ್ಥಿರ ಅಭಿವೃದ್ಧಿಗಾಗಿ ರಚಿಸಲಾದ ಯುಎನ್ ನ ೨೦೩೦ ಕಾರ್ಯಸೂಚಿಯ ಸ್ಕ್ರೀನ್‌ಶಾಟ್.
ಯುಎನ್ ಪ್ರಕಟಿಸಿದ ದಾಖಲೆಯ ಪ್ರಕಾರ, ೧೭ "ಗೋಲ್ಸ್ ಅಂಡ್ ಟಾರ್ಗೇಟ್ಸ್" ಕೆಳಕಂಡಂತಿವೆ:
ಪಠ್ಯವನ್ನು ಹೋಲಿಸಿದಾಗ, ವೈರಲ್ ಚಿತ್ರದ ವಿಷಯವು ವಿಶ್ವಸಂಸ್ಥೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟವಾದ ಮಾಹಿತಿಗಿಂತ ಸಂಪೂರ್ಣವಾಗಿ ಭಿನ್ನವಾಗಿದೆ ಎಂದು ನಾವು ಕಂಡುಕೊಂಡಿದ್ದೇವೆ. ಆದ್ದರಿಂದ, "ಯುಎನ್ ಅಜೆಂಡಾ ೨೦೩೦ ಫಾರ್ ದಿ ನ್ಯೂ ವರ್ಲ್ಡ್ ಆರ್ಡರ್" ಎಂದು ಹೇಳುವ ವೈರಲ್ ಆನ್‌ಲೈನ್ ಚಿತ್ರವು ನಕಲಿಯಾಗಿದೆ.
ಇದಲ್ಲದೆ, ಯುಎನ್ ನ ಕಾರ್ಯಸೂಚಿ ೨೦೩೦ ನ್ನು, "ನ್ಯೂ ವರ್ಲ್ಡ್ ಆರ್ಡರ್" ನಂತಹ ಪಿತೂರಿ ಸಿದ್ಧಾಂತಗಳೊಂದಿಗೆ ಹೋಲಿಸಿ ಹಲವಾರು ಜನರು ತಪ್ಪಾದ ಮಾಹಿತಿಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಈ ಪಿತೂರಿ ಸಿದ್ಧಾಂತಗಳು, ರಾಜಕಾರಣಿಗಳು ಸೇರಿದಂತೆ ವಿಶ್ವದ ಕೆಲವು ಪ್ರಭಾವಶಾಲಿ ವ್ಯಕ್ತಿಗಳು ಮತ್ತು ಸಂಸ್ಥೆಗಳು "ಏಕ ವಿಶ್ವ ಸರ್ಕಾರ" (ಒನ್ ವರ್ಲ್ಡ್ ಗವರ್ನಮೆಂಟ್) ಅನ್ನು ರಚಿಸಲು ಮತ್ತು ಜಾಗತಿಕ ಜನಸಂಖ್ಯೆಯನ್ನು ಗುಲಾಮರನ್ನಾಗಿ ಮಾಡಲು ಪಿತೂರಿ ಮಾಡುತ್ತಿದ್ದಾರೆ ಎಂದು ಆಧಾರರಹಿತವಾಗಿ ಆರೋಪಿಸುತ್ತವೆ. ಇಂತಹ ಪಿತೂರಿ ಸಿದ್ದಂತಗಳನ್ನು ಕೇವಲ ಜನರಲ್ಲಿ ಭಯ ಹುಟ್ಟಿಸುವ ಮತ್ತು ತಪ್ಪು ಮಾಹಿತಿ ಪ್ರಚಾರ ಮಾಡುವ ಉದ್ದೇಶದಿಂದ ಹಂಚಿಕೊಳ್ಳಲಾಗಿವೆ ಎಂಬುದು ಗಮನಾರ್ಹ.
ತೀರ್ಪು:
ಚಿತ್ರದ ವಿಶ್ಲೇಷಣೆಯು ಇದು ಅಧಿಕೃತ ಯುಎನ್ ೨೦೩೦ ರ "ಸಸ್ಟೈನಬಲ್ ಡೆವಲಪ್‌ಮೆಂಟ್" ಅಜೆಂಡಾವನ್ನು ಪ್ರತಿನಿಧಿಸುವುದಿಲ್ಲ ಎಂದು ಕಂಡುಬಂದಿದೆ. ಆದ್ದರಿಂದ, ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಪ್ರಸಾರವಾಗುವ “ನ್ಯೂ ವರ್ಲ್ಡ್ ಆರ್ಡರ್” ಚಿತ್ರದ ಅಡಿಯಲ್ಲಿ ಪಟ್ಟಿ ಮಾಡಲಾದ ಗುರಿಗಳು ತಪ್ಪು ಎಂದು ಸ್ಪಷ್ಟವಾಗಿದೆ.