ಪಾಕಿಸ್ತಾನದಲ್ಲಿ ಭಾರತೀಯ ತ್ರಿವರ್ಣ ಧ್ವಜದ ಮೇಲೆ ವಾಹನಗಳು ಓಡಿಸುತ್ತಿರುವ ಹಳೆಯ ವೀಡಿಯೋವನ್ನು ಕೇರಳದ ಘಟನೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.
ಸಾರಾಂಶ:
ಕೇರಳದ ಘಟನೆ ಎಂದು ಹೇಳಿಕೊಂಡು ಭಾರತದ ತ್ರಿವರ್ಣ ಧ್ವಜದ ಮೇಲೆ ವಾಹನಗಳು ಓಡುತ್ತಿರುವ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ. ಆದರೆ, ಈ ವೀಡಿಯೋ 2020 ರದ್ದು ಮತ್ತು ಪಾಕಿಸ್ತಾನದಿಂದ ಬಂದಿದೆ. ಕೇರಳದಲ್ಲಿ ವಾಹನಗಳು ತ್ರಿವರ್ಣ ಧ್ವಜದ ಮೇಲೆ ಓಡುತ್ತಿರುವುದು ಕಂಡುಬಂದಿದೆ ಎಂದು ಆರೋಪಿಸಿ ಈ ವೀಡಿಯೋವನ್ನು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ.
ಹೇಳಿಕೆ:
ರಸ್ತೆಯಲ್ಲಿ ಭಾರತೀಯ ತ್ರಿವರ್ಣ ಧ್ವಜದ ಮೇಲೆ ವಾಹನಗಳು ಓಡುತ್ತಿರುವ ವೀಡಿಯೋವನ್ನು ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಂಡಿದ್ದಾರೆ. ಕೇರಳದಲ್ಲಿ ಈ ಘಟನೆ ನಡೆದಿದೆ ಎಂದು ಆರೋಪಿಸಿ ಆಕ್ರೋಶವನ್ನು ಕೂಡ ವ್ಯಕ್ತಪಡಿಸಿದ್ದಾರೆ. ಮೇ ೨೦೨೪ ರಲ್ಲಿ ಹಿಂದಿಯಲ್ಲಿ ಹಂಚಿಕೊಳ್ಳಲಾದ ಅಂತಹ ಒಂದು ಪೋಷ್ಟ್ ನ ಶೀರ್ಷಿಕೆಯು ಹೀಗಿದೆ, “ಕೇರಳದಿಂದ ಈ ವೀಡಿಯೋವನ್ನು ವೀಕ್ಷಿಸಿ. ನೀವು ನಿಮ್ಮನ್ನು ನಿಜವಾದ ದೇಶಪ್ರೇಮಿ ಮತ್ತು ಸನಾತನಿ ಎಂದು ಪರಿಗಣಿಸಿದರೆ, ಈ ವೀಡಿಯೋವನ್ನು ಈಗ ದೇಶ ಮತ್ತು ಪ್ರಪಂಚದಾದ್ಯಂತ ಫಾರ್ವರ್ಡ್ ಮಾಡಿ. ೬ ತಿಂಗಳ ನಂತರ ಫಾರ್ವರ್ಡ್ ಮಾಡುವುದರಲ್ಲಿ ಯಾವುದೇ ಅರ್ಥವಿಲ್ಲ. ನನ್ನ ಯಾವುದೇ ಪೋಷ್ಟ್ ಗಳನ್ನು ಫಾರ್ವರ್ಡ್ ಮಾಡಲು ನಾನು ಹಿಂದೆಂದೂ ಕೇಳಿಲ್ಲ. ಆದರೆ ನಾನು ಇಂದು ಹೇಳುತ್ತಿದ್ದೇನೆ. (ಕನ್ನಡಕ್ಕೆ ಅನುವಾದಿಸಲಾಗಿದೆ)"
ಈ ವೀಡಿಯೋವನ್ನು ಫೇಸ್‌ಬುಕ್ ಮತ್ತು ಎಕ್ಸ್ (ಹಿಂದೆ ಟ್ವಿಟ್ಟರ್) ನಲ್ಲಿ ಒಂದೇ ರೀತಿಯ ಶೀರ್ಷಿಕೆಗಳೊಂದಿಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ.
ವೈರಲ್ ವೀಡಿಯೊದೊಂದಿಗೆ ಹಂಚಿಕೊಂಡ ಸಾಮಾಜಿಕ ಮಾಧ್ಯಮ ಪೋಷ್ಟ್ ಗಳ ಸ್ಕ್ರೀನ್‌ಶಾಟ್‌ಗಳು.
ಪುರಾವೆ:
ವೈರಲ್ ವೀಡಿಯೋದ ಕೆಲವು ಕೀಫ್ರೇಮ್‌ಗಳ ರೆವೆರಿಸೆ ಇಮೇಜ್ ಸರ್ಚ್ಚಿ ನಡೆಸುವ ಮೂಲಕ, ನಾವು ಕೇರಳ ಮತ್ತು ತಮಿಳುನಾಡಿನಲ್ಲಿ ನಡೆದ ಘಟನೆ ಎಂದು ಹೇಳಿಕೊಂಡು ಹಂಚಿಕೊಳ್ಳಲಾದ ಜೂನ್ ೨೦೨೨ ರ ಹಲವಾರು ಪೋಷ್ಟ್ ಗಳನ್ನು ನೋಡಿದ್ದೇವೆ. ವೀಡಿಯೋ ಇತ್ತೀಚಿನದಲ್ಲ ಮತ್ತು ಭಾರತದ ವಿವಿಧ ಸ್ಥಳಗಳಿಂದ ಬಂದಿದೆ ಎಂದು ಹೇಳಿಕೊಂಡು ಕೆಲವು ವರ್ಷಗಳಿಂದ ಆನ್‌ಲೈನ್‌ನಲ್ಲಿದೆ ಎಂದು ಇದು ತೋರಿಸುತ್ತದೆ.
ಜೂನ್ ೨೦೨೨ ರಲ್ಲಿ ಕೇರಳ ಮತ್ತು ತಮಿಳುನಾಡಿನ ಘಟನೆ ಎಂದು ಹೇಳಿಕೊಂಡು ಹಂಚಿಕೊಂಡ ಅದೇ ವೀಡಿಯೋದ ಸ್ಕ್ರೀನ್‌ಶಾಟ್.
ವೈರಲ್ ವೀಡಿಯೋವನ್ನು ಇನ್ನಷ್ಟು ವಿಶ್ಲೇಷಿಸಿದಾಗ ಮಾರ್ಚ್ ೨೦೨೦ ರಲ್ಲಿ ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳಲಾದ ಕೆಲವು ವಿಡಿಯೋಗಳನ್ನು ನಾವು ಕಂಡುಕೊಂಡಿದ್ದೇವೆ. ಅಲ್ಲಿ ಘಟನೆಯು ಪಾಕಿಸ್ತಾನದಲ್ಲಿ ಸಂಭವಿಸಿದೆ ಎಂದು ಬಳಕೆದಾರರು ಹೇಳಿಕೊಂಡಿದ್ದಾರೆ. ಈ ವೀಡಿಯೋಗಳಲ್ಲಿ ಪಾಕಿಸ್ತಾನದ ಧ್ವಜವನ್ನು ಬೀಸುತ್ತಿರುವ ಹಲವಾರು ಜನರನ್ನು ನಾವು ನೋಡಬಹುದು.
ಪಾಕಿಸ್ತಾನದಲ್ಲಿ ನಡೆದ ಘಟನೆಯಿಂದ ಬಂದಿದೆ ಎಂದು ಹೇಳಿಕೊಂಡು ಮಾರ್ಚ್ ೨೦೨೦ ರಲ್ಲಿ ಹಂಚಿಕೊಳ್ಳಲಾದ ವೀಡಿಯೋದ ಸ್ಕ್ರೀನ್‌ಶಾಟ್‌ಗಳು.
ದೃಶ್ಯ ಹೆಗ್ಗುರುತುಗಳಿಗಾಗಿ ವೀಡಿಯೋವನ್ನು ಇನ್ನಷ್ಟು ವಿಶ್ಲೇಷಿಸಿದಾಗ, ಅದರಲ್ಲಿ ಕಾಣಿಸಿಕೊಳ್ಳುವ ಅಂಗಡಿಯೊಂದರ ಮೇಲೆ "ಸನಮ್ ಬೋಟಿಕ್" ಎಂದು ಬರೆಯಲಾದ ಸೈನ್‌ಬೋರ್ಡ್ ಅನ್ನು ಕಂಡುಕೊಂಡಿದ್ದೇವೆ. ಈ ಹೆಸರನ್ನು ಬಳಸಿ ಗೂಗಲ್ ಸರ್ಚ್ ನಡೆಸಿದಾಗ, ನಾವು ಪಾಕಿಸ್ತಾನದ ಕರಾಚಿಯಲ್ಲಿರುವ ವಿಳಾಸವೊಂದನ್ನು ಕಂಡುಕೊಂಡಿದ್ದೇವೆ. ಅದು ಈ ಅಂಗಡಿಯು ನಗರದ ತಾರಿಕ್ ರಸ್ತೆಯಲ್ಲಿದೆ ಎಂದು ಹೇಳಿಕೊಂಡಿದೆ. ಇದರಿಂದ ಸುಳಿವುಗಳನ್ನು ತೆಗೆದುಕೊಂಡು, ನಾವು ಈ ಅಂಗಡಿಯ ಸ್ಥಳವನ್ನು ಕರಾಚಿಯ ತಾರಿಕ್ ರಸ್ತೆಗೆ ಜಿಯೋಲೊಕೇಟ್ ಮಾಡಲು ಸಾಧ್ಯವಾಯಿತು. ಗೂಗಲ್ ಅರ್ಥ್ ನ "ಸ್ಟ್ರೀಟ್ ವ್ಯೂ" ಈ ಅಂಗಡಿಯ ಸೈನ್‌ಬೋರ್ಡ್ ವೈರಲ್ ವಿಡಿಯೋದಲ್ಲಿರುವಂತೆಯೇ ಇತ್ತು. ಇದಲ್ಲದೆ, ಈ ಅಂಗಡಿಯ ಬಲಭಾಗದಲ್ಲಿರುವ ಕಟ್ಟಡಗಳು ಕೂಡ ವೈರಲ್ ವೀಡಿಯೋದಲ್ಲಿ ಕಂಡುಬರುವಂತೆಯೇ ಇವೆ ಎಂದು ಕಂಡುಕೊಂಡಿದ್ದೇವೆ.
ವೈರಲ್ ವೀಡಿಯೋ ಮತ್ತು ಗೂಗಲ್ ಅರ್ಥ್ ಚಿತ್ರದ ಅಂಗಡಿಯ ಹೆಸರಿನ ಸ್ಕ್ರೀನ್‌ಶಾಟ್ ಗಳ ಹೋಲಿಕೆ.
ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಹೇಳಿಕೊಂಡಂತೆ ಈ ಘಟನೆ ನಡೆದಿರುವುದು ಪಾಕಿಸ್ತಾನದ ಕರಾಚಿಯಲ್ಲಿಯೇ ಹೊರತು ಭಾರತದಲ್ಲ ಎಂಬುದನ್ನು ಇದು ದೃಢಪಡಿಸುತ್ತದೆ. ವೀಡಿಯೋ ಕನಿಷ್ಠ ಮಾರ್ಚ್ ೨೦೨೦ ರದ್ದು; ಆಗ ಹಂಚಿಕೊಂಡ ಅದೇ ವೀಡಿಯೋವನ್ನು ನಾವು ಕಂಡುಕೊಂಡಿದ್ದೇವೆ.
ತೀರ್ಪು:
ಕೇರಳದಲ್ಲಿ ಭಾರತೀಯ ತ್ರಿವರ್ಣ ಧ್ವಜದ ಮೇಲೆ ವಾಹನಗಳು ಓಡುತ್ತಿರುವುದನ್ನು ತೋರಿಸುವ ವೀಡಿಯೋ ಎಂದು ಹೇಳಿಕೊಂಡು ಕಂಚಿಕೊಳ್ಳಲಾದ ಪೋಷ್ಟ್ ಗಳು ತಪ್ಪು. ವೈರಲ್ ವೀಡಿಯೋದ ನಮ್ಮ ವಿಶ್ಲೇಷಣೆಯು ಇದು ಪಾಕಿಸ್ತಾನದ ಕರಾಚಿಯಿಂದ ಬಂದಿದೆ ಎಂದು ಕಂಡುಹಿಡಿದಿದೆ ಮತ್ತು ಈ ವೀಡಿಯೋ ಮಾರ್ಚ್ 2020 ರಿಂದ ಆನ್‌ಲೈನ್‌ನಲ್ಲಿದೆ. ಈ ವೀಡಿಯೋ ಹಲವಾರು ಸಂದರ್ಭಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಭಾರತದ ವಿವಿಧ ಸ್ಥಳಗಳಿಂದ ಬಂದಿದೆ ಎಂದು ಹೇಳಿಕೊಂಡು ಮರುಹಂಚಿಕೊಳ್ಳಲಾಗಿದೆ.