ಭಾರತ ರತ್ನ ಪ್ರಶಸ್ತಿಗಳನ್ನು ಪ್ರದಾನ ಮಾಡುವ ಸಂದರ್ಭದಲ್ಲಿ ರಾಷ್ಟ್ರಪತಿ ಮುರ್ಮು ಅವರಿಗೆ ಅವಮಾನ ಮಾಡಲಾಯಿತು, ಮಲ್ಲಿಕಾರ್ಜುನ ಖರ್ಗೆಯವರು ಚಪ್ಪಾಳೆ ತಟ್ಟಲಿಲ್ಲ ಮೊದಲಾದ ಆರೋಪಗಳು ಸುಳ್ಳು.

Update: 2024-04-02 06:09 GMT

ಸಾರಾಂಶ:

ದೆಹಲಿಯ ನಿವಾಸದಲ್ಲಿ ಎಲ್‌ ಕೆ ಅಡ್ವಾಣಿ ಅವರಿಗೆ ಭಾರತ ರತ್ನ ಪ್ರದಾನ ಮಾಡುವಾಗ ರಾಷ್ಟ್ರಪತಿ ಮುರ್ಮು ನಿಂತಿರುವ ಚಿತ್ರ ಮತ್ತು ರಾಷ್ಟ್ರಪತಿ ಭವನದಲ್ಲಿ ನಡೆದ ಭಾರತ ರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರ ಮತ್ತೊಂದು ಚಿತ್ರ, ಇವೆರಡನ್ನೂ ತಪ್ಪಾದ ಸಂದರ್ಭದೊಂದಿಗೆ ಹಂಚಿಕೊಳ್ಳಲಾಗಿದೆ.

ಹೇಳಿಕೆ:

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತರತ್ನವನ್ನು ಮಾರ್ಚ್ ೩೦, ೨೦೨೪ ರಂದು ಪ್ರದಾನ ಮಾಡಿದರು. ಪ್ರಶಸ್ತಿ ಪುರಸ್ಕೃತರು ದಿವಂಗತ ಸ್ವಾತಂತ್ರ್ಯ ಹೋರಾಟಗಾರ ಮತ್ತು ರಾಜಕಾರಣಿ ಚೌಧರಿ ಚರಣ್ ಸಿಂಗ್, ಮಾಜಿ ಪ್ರಧಾನಿ ಪಿವಿ ನರಸಿಂಹ ರಾವ್, ಬಿಹಾರದ ಮಾಜಿ ಮುಖ್ಯಮಂತ್ರಿ ಕರ್ಪುರಿ ಠಾಕೂರ್, ಎಂಎಸ್ ಸ್ವಾಮಿನಾಥನ್, ಮತ್ತು ಎಲ್ ಕೆ ಅಡ್ವಾಣಿ. ಇವರಲ್ಲಿ ಅಡ್ವಾಣಿ ಅವರು ಅನಾರೋಗ್ಯದ ಕಾರಣ ಸಮಾರಂಭದಲ್ಲಿ ಭಾಗವಹಿಸಲು ಸಾಧ್ಯವಾಗದ ಕಾರಣ ಮಾರ್ಚ್ ೩೧, ೨೦೨೪ ರಂದು ರಾಷ್ಟ್ರಪತಿ ಮುರ್ಮು ಅವರು ದೆಹಲಿಯಲ್ಲಿರುವ ಅಡ್ವಾಣಿಯವರ ಮನೆಯಲ್ಲಿ ಪ್ರಶಸ್ತಿಯನ್ನು ಪ್ರದಾನ ಮಾಡಿದರು.

ಇದರ ಮಧ್ಯೆ, ಬಿಜೆಪಿಯ ಹಿರಿಯ ನಾಯಕ ಎಲ್‌ಕೆ ಅಡ್ವಾಣಿ ಅವರಿಗೆ ದೆಹಲಿಯ ನಿವಾಸದಲ್ಲಿ ಭಾರತ ರತ್ನ ಪ್ರಶಸ್ತಿ ಪ್ರದಾನ ಮಾಡುವಾಗ ರಾಷ್ಟ್ರಪತಿ ಮುರ್ಮು ಅವರಿಗೆ ಅಗೌರವ ತೋರಲಾಗಿದೆ ಎಂಬ ಹೇಳಿಕೆಗಳು ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡತೊಡಗಿದವು. ಮಾರ್ಚ್ ೩೧, ೨೦೨೪ ರಂದು ಹಂಚಿಕೊಂಡ ಎಕ್ಸ್ (ಹಿಂದೆ ಟ್ವಿಟರ್) ಪೋಷ್ಟ್ ಒಂದರ ಶೀರ್ಷಿಕೆ ಹೀಗಿದೆ, “ಮೋದಿಯಿಂದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಅವಮಾನಿಸಿರುವುದು ಪ್ರತ್ಯೇಕ ಘಟನೆಯಲ್ಲ, ಇದು ಅವರ ಸ್ವಭಾವದ ಅಂತರ್ಗತ ಲಕ್ಷಣವಾಗಿದೆ - ಅವರು ಹಿಂದಿನ ರಾಷ್ಟ್ರಪತಿಗಳಿಗೆ ಅದೇ ರೀತಿ ಮಾಡಿದ್ದಾರೆ. ರಾಷ್ಟ್ರಪತಿಯ ಘನತೆ ರಾಷ್ಟ್ರದ ಘನತೆ. (ಕನ್ನಡಕ್ಕೆ ಅನುವಾದಿಸಲಾಗಿದೆ)” ಅದೇ ಚಿತ್ರವನ್ನು ಹೊಂದಿರುವ ಸಮಾನವಾದ ಪೋಷ್ಟ್ ಗಳನ್ನು ರಾಷ್ಟ್ರಪತಿಯವರನ್ನು ಅಗೌರವಿಸಲಾಗಿದೆ ಎಂದು ಸೂಚಿಸುವ ಇತರ ನಿರೂಪಣೆಗಳೊಂದಿಗೆ ಹಂಚಿಕೊಳ್ಳಲಾಗಿದೆ.

ಎಲ್ ಕೆ ಅಡ್ವಾಣಿ ಅವರಿಗೆ ಭಾರತ ರತ್ನ ನೀಡುವ ಸಂದರ್ಭದಲ್ಲಿ ರಾಷ್ಟ್ರಪತಿ ಮುರ್ಮು ಅವರನ್ನು ಅಗೌರವಿಸಲಾಯಿತು ಎಂದು ಹೇಳಿಕೊಳ್ಳುವ ಎಕ್ಸ್ ಪೋಷ್ಟ್ ನ ಸ್ಕ್ರೀನ್‌ಶಾಟ್‌.


ಈ ಪೋಷ್ಟ್ ಅನ್ನು ಫೇಸ್‌ಬುಕ್ ಮತ್ತು ಯೂಟ್ಯೂಬ್‌ನಲ್ಲಿ ಕೂಡ ತಪ್ಪುದಾರಿಗೆಳೆಯುವ ಹೇಳಿಕೆಗಳೊಂದಿಗೆ ಹಂಚಿಕೊಳ್ಳಲಾಗಿದೆ.

ಮಾಜಿ ಪ್ರಧಾನಿ ನರಸಿಂಹರಾವ್ ಅವರ ಪುತ್ರ ದಿವಂಗತ ಸಚಿವರ ಪರವಾಗಿ ಭಾರತ ರತ್ನ ಸ್ವೀಕರಿಸಿದಾಗ ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಚಪ್ಪಾಳೆ ತಟ್ಟಲಿಲ್ಲ ಎಂದು ಹೇಳಿಕೊಂಡು ಮತ್ತೊಂದು ಚಿತ್ರವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿದೆ.

ಎಕ್ಸ್‌ನಲ್ಲಿ ಹಂಚಿಕೊಳ್ಳಯಾದ ಅಂತಹ ಒಂದು ಪೋಷ್ಟ್ ನ ಶೀರ್ಷಿಕೆಯು, “ಇದು @INCIndia ಸಂಸ್ಕೃತಿ. #Pvnarsimharao ಅವರ ಗೌರವಕ್ಕೆ ಚಪ್ಪಾಳೆ ತಟ್ಟದ @ಖರ್ಗೆ ಅವರಿಗೆ ಅವಮಾನ. #italykigulaamgiri #GeneralElectionN0W #BharatRatnaAwards @BJP4Telangana" ಎಂದು ಹೇಳಿಕೊಂಡಿದೆ.

ನರಸಿಂಹ ರಾವ್ ಅವರಿಗೆ ಎಐಸಿಸಿ ಅಧ್ಯಕ್ಷರಾದ ಖರ್ಗೆ ಅವರಿಂದ ಅಪಮಾನ ಎಂದು ಹೇಳಿಕೊಂಡು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ಪೋಷ್ಟ್ ನ ಸ್ಕ್ರೀನ್‌ಶಾಟ್‌.


ಪುರಾವೆ:

ನಾವು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ನಡೆಸಿದಾಗ ರಾಷ್ಟ್ರಪತಿ ಮುರ್ಮು, ಎಲ್‌ಕೆ ಅಡ್ವಾಣಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ಚಿತ್ರವು ಭಾರತ ರತ್ನ ನೀಡುವ ಸಮಾರಂಭದ ಚಿತ್ರಗಳ ಸರಣಿಯ ಭಾಗವಾಗಿದೆ ಎಂದು ಕಂಡುಬಂದಿದೆ. ರಾಷ್ಟ್ರಪತಿಯವರ ಅಧಿಕೃತ ಎಕ್ಸ್ ಖಾತೆಯು ಪ್ರಶ್ನೆಯಲ್ಲಿರುವ ವೈರಲ್ ಚಿತ್ರ ಸೇರಿದಂತೆ ಹಲವಾರು ಚಿತ್ರಗಳನ್ನು ಎಕ್ಸ್ ಪೋಷ್ಟ್ ಮೂಲಕ ಹಂಚಿಕೊಂಡಿದೆ.

ಇದರಲ್ಲಿರುವ ಒಂದು ಚಿತ್ರವು ರಾಷ್ಟ್ರಪತಿಯವರು ಪ್ರಧಾನಿ ಮೋದಿ ಹಾಗು ಅಡ್ವಾಣಿಯವರ ಜೊತೆ ಕುಳಿತಿರುವುದನ್ನು ಕೂಡ ತೋರಿಸುತ್ತದೆ.

ರಾಷ್ಟ್ರಪತಿಯವರ ಅಧಿಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಚಿತ್ರದ ಸ್ಕ್ರೀನ್‌ಶಾಟ್.


ಪ್ರಧಾನಮಂತ್ರಿಯವರ ಅಧಿಕೃತ ಯೂಟ್ಯೂಬ್ ಚಾನೆಲ್ ಪೋಷ್ಟ್ ಮಾಡಿದ ಲೈವ್ ವೀಡಿಯೋದಲ್ಲಿ ರಾಷ್ಟ್ರಪತಿ ಮುರ್ಮು ಅವರು ಪ್ರಶಸ್ತಿಯನ್ನು ಪ್ರದಾನ ಮಾಡಲು ಸಂಕ್ಷಿಪ್ತವಾಗಿ ಎದ್ದುನಿಂತ ನಂತರ ಎಲ್ ಕೆ ಅಡ್ವಾಣಿ ಮತ್ತು ಪ್ರಧಾನಮಂತ್ರಿ ಅವರೊಂದಿಗೆ ಕುಳಿತಿದ್ದಾರೆ. ಅಡ್ವಾಣಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡುವಾಗ ರಾಷ್ಟ್ರಪತಿ ಮುರ್ಮು ಅವರನ್ನು ಅವಮಾನಿಸಲಾಗಿದೆ ಎಂಬ ಹೇಳಿಕೆಯು ತಪ್ಪುದಾರಿಗೆಳೆಯುವಂತಿದೆ ಎಂದು ಇದು ಸ್ಪಷ್ಟಪಡಿಸುತ್ತದೆ.

ಮಾಜಿ ಪ್ರಧಾನಿ ಪಿ.ವಿ.ನರಸಿಂಹರಾವ್ ಅವರ ಪುತ್ರ ತನ್ನ ತಂದೆಯ ಪರವಾಗಿ ಭಾರತ ರತನ್ ಪ್ರಶಸ್ತಿಯನ್ನು ಸ್ವೀಕರಿಸಿದಾಗ ಚಪ್ಪಾಳೆ ತಟ್ಟಲಿಲ್ಲ ಎಂದು ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರನ್ನು ಗುರಿಯಾಗಿಸಿಕೊಂಡು ಮತ್ತೊಂದು ಪೋಷ್ಟ್ ವೈರಲ್ ಆಗಿದೆ.ಈ ಪೋಷ್ಟ್ ನಲ್ಲಿ ಹಂಚಿಕೊಂಡಿರುವ ಚಿತ್ರವು ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿಯವರಿಂದ ಪ್ರಶಸ್ತಿ ಸ್ವೀಕರಿಸಿದ ಮಾಜಿ ಪ್ರಧಾನಿ ಪಿವಿ ನರಸಿಂಹರಾವ್ ಅವರ ಪುತ್ರ ಪಿವಿ ಪ್ರಭಾಕರ್ ರಾವ್ ಅವರದ್ದು. ಖರ್ಗೆ ಅವರು ಚಪ್ಪಾಳೆ ತಟ್ಟದೆ ಮಾಜಿ ಪ್ರಧಾನಿಗೆ ಗೌರವ ಸಲ್ಲಿಸಿಲ್ಲ ಎಂದು ಈ ಹೇಳಿಕೆಯು ಆರೋಪಿಸಿದೆ.

ಹೆಚ್ಚಿನ ವಿಶ್ಲೇಷಣೆಯಲ್ಲಿ, ಭಾರತದ ರಾಷ್ಟ್ರಪತಿಯವರು ಅವರ ಅಧಿಕೃತ ಯೂಟ್ಯೂಬ್ ಚಾನೆಲ್ ಮೂಲಕ ೪೧ ಸೆಕೆಂಡುಗಳ ವಿಡಿಯೋವನ್ನು ಹಂಚಿಕೊಂಡಿದ್ದಾರೆ ಎಂಬುದು ಕಂಡುಬಂದಿದೆ. ಈ ವೀಡಿಯೋವಿನ ೦:೦೭ ಸೆಕೆಂಡ್ ಟೈಮ್‌ಸ್ಟ್ಯಾಂಪ್‌ನಲ್ಲಿ, ಪಿವಿ ನರಸಿಂಹ ರಾವ್ ಅವರ ಪ್ರಶಸ್ತಿಯನ್ನು ಘೋಷಿಸಿದ ತಕ್ಷಣ ಮಲ್ಲಿಕಾರ್ಜುನ ಖರ್ಗೆ ಚಪ್ಪಾಳೆ ತಟ್ಟುವುದನ್ನು ನಾವು ನೋಡಬಹುದು. ಮಾಜಿ ಪ್ರಧಾನಿ ಪಿ.ವಿ.ನರಸಿಂಹರಾವ್ ಅವರಿಗೆ ಭಾರತ ರತ್ನ ನೀಡುವಾಗ ಖರ್ಗೆಯವರು ಚಪ್ಪಾಳೆ ತಟ್ಟದೇ ಅಪಮಾನ ಮಾಡಿದ್ದಾರೆ ಎಂಬ ಹೇಳಿಕೆಗಳನ್ನು ಈ ದೃಶ್ಯಗಳು ತಳ್ಳಿಹಾಕುತ್ತವೆ. ಈ ಸಮಾರಂಭದ ಒಂದು ಚಿತ್ರವನ್ನು ತಪ್ಪಾದ ಸಂದರ್ಭದೊಂದಿಗೆ ಹಂಚಿಕೊಂಡು ಖರ್ಗೆಯವರನ್ನು ಗುರಿಯಾಗಿಸಿ ಹಂಚಿಕೊಳ್ಳಲಾಗಿದೆ.

ರಾಷ್ಟ್ರಪತಿಯವರ ಅಧಿಕೃತ ಯೂಟ್ಯೂಬ್ ಚಾನೆಲ್ ನಲ್ಲಿ ಹಂಚಿಕೊಳ್ಳಲಾದ ಭಾರತ ರತ್ನ ಸಮಾರಂಭದ ವೀಡಿಯೋವಿನ ಸ್ಕ್ರೀನ್‌ಶಾಟ್.


ತೀರ್ಪು:

ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರನ್ನು ಗುರಿಯಾಗಿಸಿಕೊಂಡ ಹೇಳಿಕೆಗಳ ವಿಶ್ಲೇಷಣೆಯು ಈ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ಹೇಳುವಂತೆ ಅಲ್ಲ ಎಂದು ಕಂಡುಹಿಡಿದಿದೆ. ಈ ಚಿತ್ರಗಳನ್ನು ತಪ್ಪಾದ ಸಂದರ್ಭಗಳೊಂದಿಗೆ ಹಂಚಿಕೊಂಡ ಕಾರಣ, ಈ ಎರಡು ಹೇಳಿಕೆಗಳನ್ನೂ ಸಂದರ್ಭದಿಂದ ಹೊರಗಿಡಲಾಗಿದೆ ಎಂದು ಗುರುತಿಸಿದ್ದೇವೆ.

Claim :  During the presentation of the Bharat Ratna awards, allegations that President Murmu was insulted and Mallikarjuna Kharge did not clap for Narasimha Rao are false.
Claimed By :  X user
Fact Check :  Misleading
Tags:    

Similar News