ಸಿಂಗಾಪುರದ ಚಿತ್ರವನ್ನು ಭಾರತದಲ್ಲಿ ಮೆಟ್ರೋ ರೈಲು ಅಭಿವೃದ್ಧಿ ಎಂದು ಹೇಳಿಕೊಂಡು ತಪ್ಪಾಗಿ ಹಂಚಿಕೊಳ್ಳಲಾಗಿದೆ

Update: 2024-05-21 12:50 GMT

ಸಾರಾಂಶ:

ಸಾಮಾಜಿಕ ಮಾಧ್ಯಮ ಬಳಕೆದಾರರು ಭಾರತದಲ್ಲಿ ಮೆಟ್ರೋ ರೈಲು ವ್ಯವಸ್ಥೆಯ ಅಭಿವೃದ್ಧಿಯನ್ನು ತೋರಿಸುವ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ. ಆದರೆ, ಪೋಸ್ಟರ್‌ ನಲ್ಲಿ ಕಾಣಿಸಿಕೊಂಡಿರುವ ಚಿತ್ರವು ಸಿಂಗಾಪುರದ ಮೆಟ್ರೋ ಆಗಿದ್ದು, ಚಿತ್ರವೂ ೨೦೨೦ರದ್ದು. ಆದ್ದರಿಂದ ಈ ಹೇಳಿಕೆಗಳು ತಪ್ಪು.

ಹೇಳಿಕೆ:

ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ ಬಳಕೆದಾರರು ಮೆಟ್ರೋ ರೈಲು ಸೇವೆಯಲ್ಲಿ ಕೇಂದ್ರದ ಬಿಜೆಪಿ ಸರ್ಕಾರದ ಸಾಧನೆಗಳನ್ನು ಪ್ರದರ್ಶಿಸುವ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ. ೪೫೩.೪ ಸಾವಿರ ಅನುಯಾಯಿಗಳನ್ನು ಹೊಂದಿರುವ ಪರಿಶೀಲಿಸಿದ ಬಳಕೆದಾರರು ಮೇ ೧೨, ೨೦೨೪ ರಂದು ಬಂಗಾಳಿ ಭಾಷೆಯಲ್ಲಿ ಶೀರ್ಷಿಕೆಯೊಂದಿಗೆ ಚಿತ್ರವನ್ನು ಪೋಷ್ಟ್ ಮಾಡಿದ್ದಾರೆ, ಇದರ ಶೀರ್ಷಿಕೆ ಹೀಗಿದೆ, "ಉದ್ಯೋಗವು ಹೆಚ್ಚಾಗದಿದ್ದರೆ, ಮೆಟ್ರೋ ಸೇವೆಯು ಭಾರತದ ನಗರಗಳನ್ನು ಹೇಗೆ ತಲುಪಿತು? ಕಾಂಗ್ರೆಸ್ ಹೇಳುತ್ತದೆ, ಬಿಜೆಪಿ ಮಾಡುತ್ತದೆ (ಕನ್ನಡಕ್ಕೆ ಅನುವಾದಿಸಲಾಗಿದೆ)." ಈ ಪೋಷ್ಟ್ ೧೫೩.೯ ಸಾವಿರ ವೀಕ್ಷಣೆಗಳು, ೨೨೭ ಇಷ್ಟಗಳು ಮತ್ತು ೧೧೨ ಮರುಪೋಷ್ಟ್ ಗಳನ್ನು ಸ್ವೀಕರಿಸಿದೆ.

ಮೇ ೧೨, ೨೦೨೪ ರಂದು ಎಕ್ಸ್ ನಲ್ಲಿ ಪೋಷ್ಟ್ ಮಾಡಿದ ಪೋಸ್ಟರ್‌ನ ಸ್ಕ್ರೀನ್‌ಶಾಟ್.


ಎಕ್ಸ್ ನಲ್ಲಿ ಮತ್ತೊಬ್ಬ ಪರಿಶೀಲಿಸಿದ ಬಳಕೆದಾರರು ಮೇ ೧೫, ೨೦೨೪ ರಂದು ಇದೇ ರೀತಿಯ ಶೀರ್ಷಿಕೆಯೊಂದಿಗೆ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ. ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಮ್ ನಂತಹ ಸಾಮಾಜಿಕ ಮಾಧ್ಯಮ ಬಳಕೆದಾರರು ಸಹ ಇದೇ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ.

ಪೋಸ್ಟರ್ ಅನ್ನು ಹಂಚಿಕೊಳ್ಳಲು #Vote4BJP ಮತ್ತು #PhirEkBaarModiSarkarto ಮೊದಲಾದ ಹ್ಯಾಶ್‌ಟ್ಯಾಗ್‌ಗಳನ್ನು ಬಳಸಲಾಗುತ್ತಿದೆ ಎಂದು ನಾವು ಗುರುತಿಸಿದ್ದೇವೆ.

ಪುರಾವೆ:

ನಾವು ವೈರಲ್ ಪೋಸ್ಟರ್‌ನ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದ್ದೇವೆ, ಇದು ಆಗಸ್ಟ್ ೧೯, ೨೦೨೨ ರಂದು ಸಿಂಗಾಪುರದ ಸಂವಹನ ಮತ್ತು ಮಾಹಿತಿ ಸಚಿವಾಲಯದ ಮಾನ್ಯತೆ ಪಡೆದ ಮಾಧ್ಯಮವಾದ ಏಷ್ಯಾಒನ್ ನ ವರದಿಗೆ ನಮ್ಮನ್ನು ಕರೆದೊಯ್ಯಿತು. ಅದು ವೈರಲ್ ಪೋಸ್ಟರ್‌ ನಲ್ಲಿ ಕಂಡುಬಂದ ಅದೇ ಫೋಟೋವನ್ನು ಹೊಂದಿದೆ.

ಆಗಸ್ಟ್ ೧೯, ೨೦೨೨ ರಂದು ಪ್ರಕಟವಾದ ಏಷ್ಯಾಒನ್ ವರದಿಯ ಸ್ಕ್ರೀನ್‌ಶಾಟ್.


ವರದಿಯು ಚಿತ್ರದ ಮೂಲವನ್ನು ಅನ್‌ಸ್ಪ್ಲಾಶ್‌ ಎಂಬ ಫೋಟೋ ಪ್ಲಾಟ್‌ಫಾರ್ಮ್ ಎಂದು ಉಲ್ಲೇಖಿಸಿದೆ.

ಇದರಿಂದ ಸುಳಿವುಗಳನ್ನು ತೆಗೆದುಕೊಂಡು, ನಾವು ಅನ್‌ಸ್ಪ್ಲಾಶ್‌ನಲ್ಲಿ "ಸಿಂಗಪುರ ಮೆಟ್ರೋ" ನಂತಹ ಕೀವರ್ಡ್‌ಗಳನ್ನು ಬಳಸಿದ್ದೇವೆ ಮತ್ತು ಸಿಂಗಾಪುರ ಮೂಲದ ಫೋಟೋಗ್ರಾಫರ್‌ ನವೆಂಬರ್ ೧೫, ೨೦೨೦ ರಂದು ಪ್ರಕಟಿಸಿರುವ ವೈರಲ್ ಚಿತ್ರವನ್ನು ನಾವು ಕಂಡುಕೊಂಡಿದ್ದೇವೆ.

ನವೆಂಬರ್ ೧೫, ೨೦೨೦ ರಂದು ಅನ್‌ಸ್ಪ್ಲಾಶ್‌ ನಲ್ಲಿ ಪ್ರಕಟಿಸಲಾದ ಫೋಟೋದ ಸ್ಕ್ರೀನ್‌ಶಾಟ್.


ನಾವು ವೈರಲ್ ಫೋಟೋವನ್ನು ಜಿಯೋಲೊಕೇಟ್ ಮಾಡಿದ್ದೇವೆ ಮತ್ತು ಅದು ಸಿಂಗಾಪುರದ ಜುರಾಂಗ್ ಈಸ್ಟ್ ಮಾಸ್ ರಾಪಿಡ್ ಟ್ರಾನ್ಸಿಟ್ ಸ್ಟೇಷನ್ ಅನ್ನು ತೋರಿಸುತ್ತದೆ ಎಂದು ಕಂಡುಕೊಂಡಿದ್ದೇವೆ.

ತೀರ್ಪು:

ವೈರಲ್ ಪೋಸ್ಟರ್‌ನ ವಿಶ್ಲೇಷಣೆಯು ಮೆಟ್ರೋ ರೈಲಿನ ಚಿತ್ರವು ೨೦೨೦ ರ ಹಿಂದಿನದು ಎಂದು ಸ್ಪಷ್ಟಪಡಿಸುತ್ತದೆ ಮತ್ತು ಜುರಾಂಗ್ ಈಸ್ಟ್ ಮಾಸ್ ರಾಪಿಡ್ ಟ್ರಾನ್ಸಿಟ್ ಸ್ಟೇಷನ್, ಸಿಂಗಾಪುರವನ್ನು ತೋರಿಸುತ್ತದೆ; ಆದ್ದರಿಂದ, ಪೋಸ್ಟರ್ ಭಾರತದಲ್ಲಿ ಮೆಟ್ರೋ ರೈಲು ಸೇವೆಯ ಅಭಿವೃದ್ಧಿಯನ್ನು ತೋರಿಸುತ್ತದೆ ಎಂದು ಆನ್‌ಲೈನ್ ನಲ್ಲಿ ಕಂಡುಬಂದ ಹೇಳಿಕೆಗಳು ತಪ್ಪು.


Claim :  Image from Singapore falsely shared as Metro Rail Development in India
Claimed By :  X user
Fact Check :  False
Tags:    

Similar News