ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಕರ್ನಾಟಕದಲ್ಲಿ ವಿದ್ಯುತ್ ಶುಲ್ಕ ರೂ.೩.೫ ರಿಂದ ರೂ.೭ ಕ್ಕೆ ಏರಿದೆ ಎಂಬುದು ತಪ್ಪು.

Update: 2024-04-16 13:10 GMT

ಸಾರಾಂಶ:

ಕಾಂಗ್ರೆಸ್ ಸರ್ಕಾರವು ವಿದ್ಯುತ್ ದರವನ್ನು ₹೩.೫ ರಿಂದ ₹೭.00 ಕ್ಕೆ ಹೆಚ್ಚಿಸಿರುವಂತೆ ಹೇಳಿಕೊಳ್ಳುವ ಪೋಷ್ಟ್ ಗಳು ತಪ್ಪಾಗಿವೆ ಮತ್ತು ತಪ್ಪುದಾರಿಗೆಳೆಯುವಂತಿದೆ. ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ (ಕೆಇಆರ್‌ಸಿ) ಅನುಮೋದಿಸಿದ ಹೊಸ ದರವನ್ನು ಮೇ ೧೨, ೨೦೨೩ ರಂದು ಬಿಜೆಪಿ ಅಧಿಕಾರದಲ್ಲಿರುವಾಗಲೇ ಅದರ ಅಧಿಕೃತ ಜಾಲತಾಣದಲ್ಲಿ ಪ್ರಕಟಿಸಲಾಗಿತ್ತು. ಆದರೆ ಹೊಸ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಈ ಹೊಸ ದರವು ಜಾರಿಗೆ ಬಂದಿದೆ.


ಹೇಳಿಕೆ:

ಫೇಸ್‌ಬುಕ್‌, ಎಕ್ಸ್‌ (ಹಿಂದೆ ಟ್ವಿಟರ್), ಮತ್ತು ಇನ್‌ಸ್ಟಾಗ್ರಾಮ್ ನಲ್ಲಿ ಪೋಷ್ಟ್ ಗಳು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯಾ ರೆಡ್ಡಿ ಪರ ಕೆಲಸ ಮಾಡುವುದಾಗಿ ಹೇಳುವ ಕಾರ್ಯಕರ್ತ ಮತ್ತು ಒಂದು ವ್ಯಕ್ತಿ ನಡುವಿನ ಸಂಭಾಷಣೆಯ ೨.೫ ನಿಮಿಷಗಳ ಆಡಿಯೋ ಕ್ಲಿಪ್ ಅನ್ನು ಹಂಚಿಕೊಳ್ಳಲಾಗಿದೆ. ಪ್ರಸ್ತುತ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ವಿದ್ಯುತ್ ದರವನ್ನು ಹೆಚ್ಚಿಸಲಾಗಿದೆ ಮತ್ತು ಪಕ್ಷವು "ಉಚಿತ ಕೊಡುಗೆಯ" ಹೆಸರಿನಲ್ಲಿ ಜನರನ್ನು ಲೂಟಿ ಮಾಡುತ್ತಿದೆ ಎಂದು ವ್ಯಕ್ತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತನಿಗೆ ಕೋಪದಿಂದ ಹೇಳುತ್ತಾನೆ. ಇದರೊಂದಿಗೆ ಹಂಚಿಕೊಂಡಿರುವ ಕನ್ನಡದ ಶೀರ್ಷಿಕೆಯು, “ಬಿಜೆಪಿ ಆಡಳಿತದಲ್ಲಿ ಪ್ರತಿ ಯೂನಿಟ್‌ಗೆ ವಿದ್ಯುತ್ ಬೆಲೆ ೩.೭೫ ಆಗಿತ್ತು ಮತ್ತು ಕಾಂಗ್ರೆಸ್ ಕೇವಲ ೧೧ ತಿಂಗಳಲ್ಲಿ ₹೭ ಮಾಡಿದೆ” ಎಂದು ಹೇಳಲಾಗಿದೆ.

ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ವಿದ್ಯುತ್ ದರ ₹೭ ಕ್ಕೆ ಏರಿಕೆಯಾಗಿದೆ ಎಂಬ ಫೇಸ್‌ಬುಕ್‌ ಪೋಷ್ಟ್ ಗಳ ಸ್ಕ್ರೀನ್‌ಶಾಟ್ ಗಳು.


ಪುರಾವೆ:

ಈ ಹೇಳಿಕೆಯನ್ನು ಪರಿಶೀಲಿಸಲು, ಮೇ ೧೩, ೨೦೨೩ ರಂದು ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುವ ಮೊದಲು ಮತ್ತು ನಂತರ ನಾವು ಕರ್ನಾಟಕದ ವಿದ್ಯುತ್ ದರಗಳ ದರಗಳನ್ನು ಪರಿಶೀಲಿಸಿದ್ದೇವೆ. ೨೦೨೩-೨೦೨೪ ರಲ್ಲಿ ಬಿಜೆಪಿ ಆಡಳಿತದ ಅಂತ್ಯದ ವೇಳೆಗೆ, ಕೆಇಆರ್‌ಸಿ ಮೇ ೧೨, ೨೦೨೩ ರಂದು ಗ್ರಾಹಕರಿಗೆ ಹೊಸ ವಿದ್ಯುತ್ ದರಗಳನ್ನು ವಿವರಿಸುವ ದಾಖಲೆಯನ್ನು ಪ್ರಕಟಿಸಿತು. ಈ ದಾಖಲೆಗಳ ಪ್ರಕಾರ, ಸುಂಕದ ಪರಿಷ್ಕರಣೆಯು ಎಲ್ಲಾ ವಿದ್ಯುತ್ ಸರಬರಾಜು ಕಂಪನಿಗಳಿಗೆ (ಎಸ್ಕಾಮ್ಸ್) ಅಸ್ತಿತ್ವದಲ್ಲಿರುವ ಮತ್ತು ಹೊಸದಾಗಿ ಅನುಮೋದಿಸಲಾದ ಸುಂಕಗಳನ್ನು ಸ್ಪಷ್ಟವಾಗಿ ತೋರಿಸುತ್ತದೆ.

ಮೇ ೧೨, ೨೦೨೩ ರಂದು ಅಸ್ತಿತ್ವದಲ್ಲಿರುವ ಸುಂಕದ ಪ್ರಕಾರ, ಗ್ರಾಹಕರಿಗೆ ೫೦ ಯೂನಿಟ್‌ಗಳವರೆಗೆ ₹೪.೧೫, ೫೧-೧೦೦ ಯೂನಿಟ್‌ಗಳ ವರಗೆ ₹೫.೬೦ ಮತ್ತು ೧೦೦-೨೦೦ ಯೂನಿಟ್‌ಗಳ ವರಗೆ ₹೭.೧೫ ಮತ್ತು ೨೦೦ ಯೂನಿಟ್‌ಗಳನ್ನು ಮೀರಿದರೆ ₹೮.೨೦ ಶುಲ್ಕ ವಿಧಿಸಲಾಗಿದೆ. ಆದರೆ, ಕೆಇಆರ್‌ಸಿ ಅನುಮೋದಿಸಿದ ಹೊಸದಾಗಿ ಪರಿಷ್ಕೃತ ದರಗಳ ಪ್ರಕಾರ, ಗ್ರಾಹಕರಿಗೆ ೦-೧೦೦ ಯುನಿಟ್‌ಗಳಿಗೆ ₹೪.೭೫ ಶುಲ್ಕ ವಿಧಿಸಲಾಗುತ್ತದೆ. ಆದರೆ, ಬಳಕೆ ೧೦೦ ಯೂನಿಟ್‌ಗಳನ್ನು ಮೀರಿದರೆ, ೦ ಯಿಂದ ಪ್ರಾರಂಭಿಸಿ ಸೇವಿಸುವ ಪ್ರತಿ ಯೂನಿಟ್‌ಗೆ ₹೭ ಅನ್ನು ವಿಧಿಸಲಾಗುತ್ತದೆ.

ಮೇ ೧೨, ೨೦೨೩ ರಂತೆ ಅಸ್ತಿತ್ವದಲ್ಲಿರುವ ಸುಂಕಗಳ ಸ್ಕ್ರೀನ್‌ಶಾಟ್ ಗಳು ಮತ್ತು ಆ ದಿನದಂದು ಹೊಸದಾಗಿ ಅನುಮೋದಿಸಲಾದ ಸುಂಕಗಳು.


ಈ ಹೇಳಿಕೆಯಲ್ಲಿ ಉಲ್ಲೇಖಿಸಿರುವಂತೆ ₹೩.೫ ರ ಸಮೀಪವಿರುವ ಅಂಕಿ ಅಂಶದ ಏಕೈಕ ಉಲ್ಲೇಖವು ಬಿಜೆಪಿ ಆಡಳಿತದಲ್ಲಿ, ಕೆಇಆರ್‌ಸಿ ಯಿಂದ FY ೨೦೨೦ ಕ್ಕೆ ನೀಡಲಾದ ಟ್ಯಾರಿಫ್ ಆರ್ಡರ್ ೨೦೧೯ ರಲ್ಲಿ ಕಂಡುಬರುತ್ತದೆ. ಒಟ್ಟಾರೆಯಾಗಿ ಪ್ರತಿ ಯೂನಿಟ್‌ಗೆ ೨೫ ಪೈಸೆ ದರ ಏರಿಕೆಯಾಗಿದೆ. ಬೆಲೆ ಏರಿಕೆ ನಂತರ, ೦-೩೦ ಯೂನಿಟ್ ಗಳ ಮಾಸಿಕ ಬಳಕೆಯ ಸುಂಕವು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (ಬೆಸ್ಕಾಂ) ನ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಸ್ಥಾಪನೆಗಳು / ದತ್ತಿ ಶಿಕ್ಷಣ ಸಂಸ್ಥೆಗಳು ಮತ್ತು ಆಸ್ಪತ್ರೆಗಳಿಗೆ ₹೩.೭೫ ಕ್ಕೆ ಏರಿತು, ಬೆಸ್ಕಾಂನ ಗ್ರಾಮೀಣ ಪ್ರದೇಶಗಳಲ್ಲಿನ ಗೃಹಬಳಕೆಯ ಗ್ರಾಹಕರಿಗೆ ₹೩.೬೫, ಮುನ್ಸಿಪಲ್ ಕಾರ್ಪೊರೇಶನ್‌ಗಳು ಮತ್ತು ಇತರ ಎಸ್ಕಾಂಗಳ ನಗರ ಸ್ಥಳೀಯ ಸಂಸ್ಥೆಗಳ ಅಡಿಯಲ್ಲಿ ಬರುವ ಪ್ರದೇಶಗಳಲ್ಲಿನ ಗೃಹಬಳಕೆಯ ಗ್ರಾಹಕರಿಗೆ ₹೩.೭೦, ಇತರ ಎಸ್ಕಾಂಗಳ ಗ್ರಾಮ ಪಂಚಾಯತಿ ಪ್ರದೇಶಗಳಲ್ಲಿನ ಗೃಹಬಳಕೆದಾರರಿಗೆ ₹೩.೭೦.

ಇದಲ್ಲದೆ, ಕೆಇಆರ್‌ಸಿ ಜಾಲತಾಣ ದಾಖಲೆಯ ಪ್ರಕಾರ, ಅನುಮೋದಿತ ಹೊಸ ಸುಂಕ ದರಗಳನ್ನು ಮೇ ೧೨, ೨೦೨೩ ರಂದು ಘೋಷಿಸಲಾಯಿತು - ಇದು ೨೦೨೩ ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಗೆಲ್ಲುವ ಒಂದು ದಿನದ ಮೊದಲು. ಇದರರ್ಥ ಕೆಇಆರ್‌ಸಿ ತಮ್ಮ ಆಯೋಗವು ಅನುಮೋದಿಸಿದ ಪರಿಷ್ಕೃತ ದರಗಳನ್ನು ಪ್ರಕಟಿಸಿದಾಗ ಬಿಜೆಪಿಯ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದರು.


ತೀರ್ಪು:

ಈ ಹೇಳಿಕೆಯ ವಿಶ್ಲೇಷಣೆ ಬಿಜೆಪಿ ಅಧಿಕಾರದಲ್ಲಿರುವಾಗಲೇ ಕೆಇಆರ್‌ಸಿ ಪರಿಷ್ಕೃತ ವಿದ್ಯುತ್ ದರಗಳನ್ನು ಮೇ ೧೨, ೨೦೨೩ ರಂದು ತಿದ್ದುಪಡಿ ಮಾಡಿ ಪ್ರಕಟಿಸಿದೆ ಎಂದು ಸ್ಪಷ್ಟಪಡಿಸುತ್ತದೆ. ಹಿಂದಿನ ಸುಂಕವು ಮೂರು ವಿಭಿನ್ನ ಸ್ಲ್ಯಾಬ್‌ಗಳನ್ನು ಹೊಂದಿತ್ತು, ಆದರೆ ಹೊಸ ಸುಂಕವು ೧೦೦ ಯೂನಿಟ್‌ಗಳವರೆಗೆ ಬಳಸುವ ಗ್ರಾಹಕರಿಗೆ ಕೇವಲ ಒಂದು ಸ್ಲ್ಯಾಬ್ (ಪ್ರತಿ ಯೂನಿಟ್‌ಗೆ ₹೪.೭೫) ನೀಡಲಾಗಿದೆ. ೧೦೦ ಯೂನಿಟ್‌ಗಳಿಗಿಂತ ಹೆಚ್ಚು ಬಳಸಿದ್ದಲ್ಲಿ, ಪ್ರತಿ ಯೂನಿಟ್‌ಗೆ ತಲಾ ₹೭ ಅನ್ನು ವಿಧಿದಲಾಗಿದೆ. ಹಾಗಾಗಿ ಈ ಹೇಳಿಕೆ ತಪ್ಪುದಾರಿಗೆಳೆಯುವಂತಿದೆ.


Claim :  ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಕರ್ನಾಟಕದಲ್ಲಿ ವಿದ್ಯುತ್ ಶುಲ್ಕ ರೂ.೩.೫ ರಿಂದ ರೂ.೭ ಕ್ಕೆ ಏರಿದೆ ಎಂಬುದು ತಪ್ಪು.
Claimed By :  Anonymous
Fact Check :  Misleading

Similar News