ಬಾಂಗ್ಲಾದೇಶದ ಚಲಿಸುವ ರೈಲುಗಳ ಮೇಲಿರುವ ಜನರ ವೀಡಿಯೋವನ್ನು ಭಾರತದಲ್ಲಿಯದು ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದ

Update: 2024-05-25 12:20 GMT

ಸಾರಾಂಶ:

ಎರಡು ಹೆಚ್ಚು ಜನನಿಬಿಡ ರೈಲುಗಳು - ಒಂದು ಸೇತುವೆಯ ಮೇಲೆ ಮತ್ತು ಒಂದು ಅಡಿಯಲ್ಲಿ ಚಲಿಸುತ್ತಿರುವುದನ್ನು ಒಳಗೊಂಡಿರುವ ವೀಡಿಯೋ ಕ್ಲಿಪ್ ಅನ್ನು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಹಂಚಿಕೊಳ್ಳಲಾಗಿದೆ, ಇದು ಭಾರತದಿಂದ ಬಂದಿದೆ ಎಂದು ಹೇಳಿಕೊಳ್ಳಲಾಗಿದೆ. ಆದರೆ, ಈ ವೀಡಿಯೋ ಬಾಂಗ್ಲಾದೇಶದ್ದು, ರಂಜಾನ್ ಸಮಯದಲ್ಲಿ ತೆಗೆದದ್ದು ಮತ್ತು ಭಾರತವನ್ನು ಟೀಕಿಸಲು ಆನ್‌ಲೈನ್‌ನಲ್ಲಿ ಪ್ರಸಾರ ಮಾಡಲಾಗಿದೆ. ಇದು ಹೇಳಿಕೆಯನ್ನು ತಪ್ಪುದಾರಿಗೆಳೆಯುವಂತೆ ಮಾಡುತ್ತದೆ.


ಹೇಳಿಕೆ:

ಇನ್ಸ್ಟಾಗ್ರಾಮ್ ಮತ್ತು ಫೇಸ್‌ಬುಕ್‌ನಲ್ಲಿನ ಪೋಷ್ಟ್ ಗಳು ಎರಡು ರೈಲುಗಳು ಒಂದರ ಮೇಲೊಂದರಂತೆ ಚಲಿಸುವ ವೀಡಿಯೋವನ್ನು ಹಂಚಿಕೊಂಡಿವೆ. ವೀಡಿಯೋದಲ್ಲಿ ಹಸಿರು ಮತ್ತು ನೀಲಿ - ಎರಡು ರೈಲುಗಾಡಿಗಳ ಮೇಲೆ ಅನೇಕ ಪ್ರಯಾಣಿಕರು ಕಾಣಿಸಿಕೊಳ್ಳುತ್ತಾರೆ. ಈ ಕ್ಲಿಪ್‌ನ ಜೊತೆಗೆ ಹಂಚಿಕೊಳ್ಳಲಾದ ಶೀರ್ಷಿಕೆಗಳು #India ನಂತಹ ಹ್ಯಾಶ್‌ಟ್ಯಾಗ್‌ಗಳನ್ನು ಬಳಸಿವೆ ಮತ್ತು ದೇಶದಲ್ಲಿ ಸುರಕ್ಷತೆಯು ಪ್ರಮುಖ ಕಾಳಜಿಯಲ್ಲ ಎಂದು ಸೂಚಿಸುತ್ತವೆ.

ಮೇ ೨೨, ೨೦೨೪ ರಂದು ಫೇಸ್‌ಬುಕ್‌ನಲ್ಲಿ ಹಂಚಿಕೊಳ್ಳಲಾದ ವೈರಲ್ ವೀಡಿಯೋದ ಸ್ಕ್ರೀನ್‌ಶಾಟ್.


ಪುರಾವೆ:

ವೈರಲ್ ವೀಡಿಯೋದಿಂದ ಕೀಫ್ರೇಮ್‌ಗಳನ್ನು ಬಳಸಿ ಮಡಿದ ರಿವರ್ಸ್ ಇಮೇಜ್ ಸರ್ಚ್ ಏಪ್ರಿಲ್ ೨೦೨೪ ರಿಂದ ಬಹು ಸುದ್ದಿ ವರದಿಗಳಿಗೆ ನಮ್ಮನ್ನು ಕರೆದೊಯ್ಯಿತು. ಅದೇ ದೃಶ್ಯಗಳನ್ನು ಹೊಂದಿರುವ ಏಪ್ರಿಲ್ ೧೪ ರ ಎನ್ ಡಿಟಿವಿ ವರದಿಯು ರಂಜಾನ್ ಕೊನೆಯಲ್ಲಿ ಬಾಂಗ್ಲಾದೇಶದಲ್ಲಿ ಈದ್ ಸಮಯದಲ್ಲಿ ಎರಡು ಕಿಕ್ಕಿರಿದ ರೈಲುಗಳನ್ನು ಚಿತ್ರಿಸುತ್ತದೆ ಎಂದು ಎತ್ತಿಹೇಳಿದೆ. ವೀಡಿಯೋವು ಬಾಂಗ್ಲಾದೇಶದಲ್ಲಿ ಹುಟ್ಟಿಕೊಂಡಿದೆ ಎಂದು ಹೇಳುವ ಇತರ ವರದಿಗಳನ್ನು ಸಹ ನಾವು ಕಂಡುಕೊಂಡಿದ್ದೇವೆ.

ಬಾಂಗ್ಲಾದೇಶದ ವೈರಲ್ ವೀಡಿಯೋ ಕುರಿತು ಏಪ್ರಿಲ್ ೧೪, ೨೦೨೪ ರಂದು ಎನ್ ಡಿಟಿವಿ ವರದಿಯ ಸ್ಕ್ರೀನ್‌ಶಾಟ್.


ಎನ್ ಡಿಟಿವಿ ಪ್ರಕಟಿಸಿದಂತಹ ವರದಿಗಳು ವೀಡಿಯೋವನ್ನು @saudalissa ಎಂಬ ಹ್ಯಾಂಡಲ್‌ ನ ಇನ್ಸ್ಟಾಗ್ರಾಮ್ ಖಾತೆಗೆ ಸೇರಿದೆ ಎಂದು ಹೇಳಿವೆ. ವೈರಲ್ ವೀಡಿಯೋ ಅದೇ ಹೆಸರಿನ ವಾಟರ್‌ಮಾರ್ಕ್ ಅನ್ನು ಸಹ ಒಳಗೊಂಡಿದೆ. ಆದರೆ, ಈ ಇನ್ಸ್ಟಾಗ್ರಾಮ್ ಖಾತೆಯು ಪ್ರಸ್ತುತ ಸಕ್ರಿಯವಾಗಿಲ್ಲ ಅಥವಾ ಪ್ಲಾಟ್‌ಫಾರ್ಮ್‌ನಲ್ಲಿ ಲಭ್ಯವಿಲ್ಲ.

ಏಪ್ರಿಲ್ ೧೨ ರಂದು 'ದಿ ನ್ಯೂಸ್ ಹಬ್ ಡಿಜಿಟಲ್' ಚಾನೆಲ್‌ನಿಂದ ಯೂಟ್ಯೂಬ್ ಶಾರ್ಟ್ ನ ರೂಪದಲ್ಲಿ ಹಂಚಿಕೊಳ್ಳಲಾದ ವಾಟರ್‌ಮಾರ್ಕ್ ಇಲ್ಲದ ಅದೇ ವೀಡಿಯೋವನ್ನು ನಾವು ಕಂಡುಕೊಂಡಿದ್ದೇವೆ. ಈ ಚಾನಲ್ ಪ್ರಾಥಮಿಕವಾಗಿ ಪಾಕಿಸ್ತಾನದ ಸ್ಥಳೀಯ ಘಟನೆಗಳನ್ನು ಒಳಗೊಂಡಿದೆ. ಅದರ ಶೀರ್ಷಿಕೆ "ಈದ್ ದಿನದಂದು ಬಾಂಗ್ಲಾದೇಶದಲ್ಲಿ ಕಿಕ್ಕಿರಿದ ರೈಲುಗಳು #shorts #viral" (ಅನುವಾದಿಸಲಾಗಿದೆ) ಮತ್ತು ವೀಡಿಯೋ ವಿವರಣೆಯು ಹೀಗೆ ಹೇಳುತ್ತದೆ, "ಪ್ರಯಾಣಿಕರು ಸ್ಥಳಾವಕಾಶ ಮತ್ತು ಸುರಕ್ಷತೆಗಾಗಿ ಹೆಣಗಾಡುತ್ತಿರುವಾಗ ಬಾಂಗ್ಲಾದೇಶದಲ್ಲಿ ಹೆಚ್ಚು ಜನಸಂದಣಿ ಇರುವ ರೈಲುಗಳ ಅವ್ಯವಸ್ಥೆ ಮತ್ತು ಅಪಾಯವನ್ನು ಅನುಭವಿಸಿ. ಕಿಕ್ಕಿರಿದ ಪ್ಲಾಟ್‌ಫಾರ್ಮ್‌ಗಳಿಂದ ಪ್ಯಾಕ್ ಮಾಡಿದ ಕಂಪಾರ್ಟ್‌ಮೆಂಟ್‌ಗಳವರೆಗೆ, ಬಾಂಗ್ಲಾದೇಶದಲ್ಲಿ ಸಾರ್ವಜನಿಕ ಸಾರಿಗೆ ಓವರ್‌ಲೋಡ್‌ನ ನೈಜತೆಯನ್ನು ವೀಕ್ಷಿಸಿ. ಮಾಹಿತಿಯಲ್ಲಿರಿ ಮತ್ತು ಸುರಕ್ಷಿತವಾಗಿರಿ!" (ಅನುವಾದಿಸಲಾಗಿದೆ).

ಏಪ್ರಿಲ್ ೧೨, ೨೦೨೪ ರಂದು ದಿ ನ್ಯೂಸ್ ಹಬ್ ಡಿಜಿಟಲ್ ಹಂಚಿಕೊಂಡ ಯೂಟ್ಯೂಬ್ ಶಾರ್ಟ್ ನ ಸ್ಕ್ರೀನ್‌ಶಾಟ್.


bdnews24.com ಮತ್ತು ದಿ ಇಂಡಿಯನ್ ಎಕ್ಸ್‌ಪ್ರೆಸ್‌ನಂತಹ ಅನೇಕ ಇತರ ಸುದ್ದಿವಾಹಿನಿಗಳು ಈ ಕಿಕ್ಕಿರಿದ ಘಟನೆಯನ್ನು ವರದಿ ಮಾಡಿವೆ ಮತ್ತು ಇದೇ ರೀತಿಯ ವರದಿಗಳು ಬಾಂಗ್ಲಾದೇಶದ ಹಸಿರು ರೈಲುಗಾಡಿಗಳ ದೃಶ್ಯಗಳನ್ನು ಒಳಗೊಂಡಿವೆ. ಈದ್ ಆಚರಣೆಗಾಗಿ ಜನರು ತಮ್ಮ ಊರುಗಳಿಗೆ ಹಿಂತಿರುಗುವುದರಿಂದ ಈ ರೀತಿಯ ಜನದಟ್ಟಣೆ ಉಂಟಾಗುತ್ತದೆ. ಆನ್‌ಲೈನ್‌ನಲ್ಲಿ ಭಾರತದ ಇಂತಹ ಹಲವಾರು ದೃಶ್ಯಗಳನ್ನು ಹಂಚಿಕೊಳ್ಳಲಾಗಿದ್ದರೂ, ಈ ನಿರ್ದಿಷ್ಟ ವೈರಲ್ ಕ್ಲಿಪ್ ಭಾರತದದ್ದಲ್ಲ.


ತೀರ್ಪು:

ವೈರಲ್ ವೀಡಿಯೋದ ವಿಶ್ಲೇಷಣೆಯು ಬಾಂಗ್ಲಾದೇಶದಿಂದ ಕಿಕ್ಕಿರಿದ ರೈಲುಗಳ ಕ್ಲಿಪ್ ಅನ್ನು ಭಾರತದಿಂದ ಬಂದಿದೆ ಎಂದು ಹೇಳಿಕೊಂಡು ಹಂಚಿಕೊಳ್ಳಲಾಗಿದೆ ಎಂದು ತೋರಿಸುತ್ತದೆ. ಆದ್ದರಿಂದ, ಈ ಹೇಳಿಕೆ ತಪ್ಪುದಾರಿಗೆಳೆಯುವಂತಿದೆ.

Claim :  Video of people on top of moving trains from Bangladesh falsely shared as India
Claimed By :  Facebook User
Fact Check :  Misleading
Tags:    

Similar News