ಹಾಲು ತುಂಬಿದ ಟಬ್‌ನಲ್ಲಿ ಸ್ನಾನ ಮಾಡುತ್ತಿರುವ ವ್ಯಕ್ತಿಯ ಟರ್ಕಿ ದೇಶದ ವೀಡಿಯೋವನ್ನು ಕೇರಳದಲ್ಲಿ ಮುಸ್ಲಿಂ ವ್ಯಕ್ತಿಯನ್ನು ಒಳಗೊಂಡ ಘಟನೆಯಂದು ಹಂಚಿಕೊಳ್ಳಲಾಗಿದೆ.

Update: 2024-05-07 05:39 GMT

ಸಾರಾಂಶ:

೨೦೨೦ ರಲ್ಲಿ ಟರ್ಕಿಯಲ್ಲಿ ಚಿತ್ರೀಕರಿಸಲಾದ ವೀಡಿಯೋವನ್ನು ಭಾರತದಲ್ಲಿ ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಂಡಿದ್ದಾರೆ. ಕೇರಳದ ಮುಸ್ಲಿಂ ವ್ಯಕ್ತಿಯೊಬ್ಬ ಹಾಲಿನಲ್ಲಿ ಸ್ನಾನ ಮಾಡಿ ಅದನ್ನು ಹಿಂದೂಗಳಿಗೆ ನೀಡುವ ಮೊದಲು ಹಲಾಲ್ ಮಾಡುತ್ತಿದ್ದಾನೆ ಎಂದು ಹೇಳಿಕೊಂಡು ಈ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಆದರೆ, ಈ ಹೇಳಿಕೆ ತಪ್ಪು.

ಹೇಳಿಕೆ:

ಈ ಘಟನೆ ಕೇರಳದಲ್ಲಿ ನಡೆದಿದೆ ಎಂದು ಹೇಳಿಕೊಂಡು ವ್ಯಕ್ತಿಯೊಬ್ಬರು ಹಾಲಿನಲ್ಲಿ ಸ್ನಾನ ಮಾಡುತ್ತಿರುವ ವೀಡಿಯೋವನ್ನು ಭಾರತದಲ್ಲಿನ ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಇತ್ತೀಚೆಗೆ ಹಂಚಿಕೊಂಡಿದ್ದಾರೆ. ಕೆಲವು ಬಳಕೆದಾರರು ಇದಕ್ಕೆ ಕೋಮು ಕೋಣವನ್ನು ಸೇರಿಸಿದ್ದಾರೆ ಮತ್ತು ಹಾಲನ್ನು ಹಲಾಲ್ ಮಾಡುವುದು ಹೀಗೆ ಮಾಡಲಾಗಿದೆ ಎಂದು ವ್ಯಂಗ್ಯವಾಗಿ ಗಮನಿಸಿದ್ದಾರೆ. ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ ಹಂಚಿಕೊಂಡ ಅಂತಹ ಒಂದು ಪೋಷ್ಟ್ ನ ಶೀರ್ಷಿಕೆ ಹೀಗಿದೆ, “ಹಾಲು ಹಲಾಲ್ ಮಾಡಲು ಅವರು ಏನು ಮಾಡುತ್ತಾರೆ? ಹಾಲಿನಲ್ಲಿ ಸ್ನಾನ ಮಾಡಿ ಹಿಂದೂಗಳಿಗೆ ಹಂಚುತ್ತಾರೆ (ಕನ್ನಡಕ್ಕೆ ಅನುವಾದಿಸಲಾಗಿದೆ)."

ಎಕ್ಸ್ ನಲ್ಲಿ ಹಂಚಿಕೊಂಡಿರುವ ಪೋಷ್ಟ್ ಗಳ ಸ್ಕ್ರೀನ್‌ಶಾಟ್‌ಗಳು.


"Tathvam-asi (నేనూ మోడీ కుటుంబమే मोदी का परिवार)" ಎಂಬ ಎಕ್ಸ್ ಖಾತೆ - ೩೦,೦೦೦ ಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದು, ಇದೇ ವೀಡಿಯೋವನ್ನು ಹಂಚಿಕೊಂಡಿದೆ. ಅದು ಈ ಫ್ಯಾಕ್ಟ್-ಚೆಕ್ ಬರೆಯುವ ಸಮಯದಲ್ಲಿ ೨೫೩ ಸಾವಿರ ವೀಕ್ಷಣೆಗಳನ್ನು ಹೊಂದಿದೆ. ಈ ಬಳಕೆದಾರರು ಈ ಹಿಂದೆ ಕೂಡ ಕೆಲವು ಕೋಮು ಕೋನದೊಂದಿಗೆ ಸೇರಿದ ತಪ್ಪು ಮಾಹಿತಿಯನ್ನು ಹಂಚಿಕೊಂಡಿದ್ದಾರೆ ಎಂಬುದು ಗಮನಿಸಬೇಕಾದ ಸಂಗತಿ.


ಪುರಾವೆ:

ವೀಡಿಯೋದ ಕೀಫ್ರೇಮ್‌ಗಳ ರಿವರ್ಸ್ ಇಮೇಜ್ ಸರ್ಚ್ ನಡೆಸಿದಾಗ, ನಾವು ಟರ್ಕಿಶ್ ಭಾಷೆಯಲ್ಲಿ ೨೦೨೦ ರಲ್ಲಿ ಪ್ರಕಟಿಸಲಾದ ಕೆಲವು ಸುದ್ದಿ ವರದಿಗಳನ್ನು ಕಂಡುಕೊಂಡಿದ್ದೇವೆ. ಈ ವರದಿಗಳು ಟರ್ಕಿಯ ಕೊನ್ಯಾದಲ್ಲಿ ನವೆಂಬರ್ ೨೦೨೦ ರಲ್ಲಿ ಈ ಘಟನೆ ಸಂಭವಿಸಿದೆ ಎಂದು ಗಮನಿಸಿವೆ. ಟರ್ಕಿ ಮೂಲದ ವೆಬ್‌ಸೈಟ್ ಟಿಆರ್ಟಿ ಹೇಬರ್ ಅವರ ಅಂತಹ ಒಂದು ವರದಿ, ಈ ವೀಡಿಯೋವನ್ನು ನವೆಂಬರ್ ೬, ೨೦೨೦ ರಂದು ಟಿಕ್‌ಟಾಕ್‌ನಲ್ಲಿ ಹಂಚಿಕೊಳ್ಳಲಾಗಿದೆ ಎಂದು ಗಮನಿಸಿದೆ. ಪೊಲೀಸರು ವೀಡಿಯೋದಲ್ಲಿರುವ ವ್ಯಕ್ತಿ ಮತ್ತು ಅದನ್ನು ಚಿತ್ರೀಕರಿಸಿದ ಇನ್ನೊಬ್ಬ ವ್ಯಕ್ತಿಯನ್ನು ಬಂಧಿಸಿದ್ದಾರೆ ಮತ್ತು ಈ ಘಟನೆ ನಡೆದ ಕಂಪನಿಯ ಪರವಾನಗಿಯನ್ನು ಸಹ ರದ್ದುಗೊಳಿಸಲಾಗಿದೆ ಎಂದು ವರದಿಯು ಗಮನಿಸಿದೆ.

ಟಿಆರ್ಟಿ ಹೇಬರ್ ಅವರ ಸುದ್ದಿ ವರದಿಯ ಸ್ಕ್ರೀನ್‌ಶಾಟ್‌.


ಡಿಎಚ್ಎ ಎಂಬ ಮತ್ತೊಂದು ಟರ್ಕಿಶ್ ಸುದ್ದಿ ವರದಿಯು ಘಟನೆಗಳ ಸರಣಿಯನ್ನು ವಿವರಿಸುತ್ತಾ ಅದೇ ವೀಡಿಯೋವನ್ನು ಹೊಂದಿದೆ ಮತ್ತು ಟರ್ಕಿಯ ಕೊನ್ಯಾದಲ್ಲಿರುವ ಮೆರಮ್ ಇಂಡಸ್ಟ್ರಿಯಲ್ ಸೈಟ್‌ನಲ್ಲಿ ಈ ಘಟನೆ ಸಂಭವಿಸಿದೆ ಎಂದು ಗಮನಿಸಿದೆ. ಕೊನ್ಯಾದ ೫ನೇ ಹೈ ಕ್ರಿಮಿನಲ್ ಕೋರ್ಟ್ ಇಬ್ಬರು ಆರೋಪಿತರನ್ನೂ ಖುಲಾಸೆಗೊಳಿಸಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಡಿಎಚ್ಎ ಪ್ರಕಟಿಸಿದ ಸುದ್ದಿ ವರದಿಯ ಸ್ಕ್ರೀನ್‌ಶಾಟ್‌.


ಇಂಗ್ಲಿಷ್‌ನಲ್ಲಿ ಕೀವರ್ಡ್‌ಗಳೊಂದಿಗೆ ಈ ಘಟನೆಯ ಬಗ್ಗೆ ಹುಡುಕಿದಾಗ ನಾವು ಇದರ ಬಗ್ಗೆ ಬಹು ಹಲವಾರು ಸುದ್ದಿ ವರದಿಗಳು ಮತ್ತು ವೀಡಿಯೋಗಳನ್ನು ಕಂಡುಕೊಂಡಿದ್ದೇವೆ. ನವೆಂಬರ್ ೯, ೨೦೨೦ ರಂದು ಎನ್‌ಡಿಟಿವಿ ಯ ಅಂತಹ ಒಂದು ವರದಿಯು ವೈರಲ್ ವೀಡಿಯೋವಿನ ಬಗ್ಗೆ ಜನರು ಆಕ್ರೋಶ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಡೈರಿ ಕಂಪನಿಯು ವೀಡಿಯೋದಲ್ಲಿ ಕಾಣಿಸಿಕೊಂಡಿರುವ ವ್ಯಕ್ತಿಯನ್ನು ಕೆಲಸದಿಂದ ತೆಗೆದುಹಾಕಿದೆ ಎಂದು ಗಮನಿಸಿದೆ. ಹಲವಾರು ಯೂಟ್ಯೂಬ್ ಚಾನೆಲ್‌ಗಳು ಈ ವೀಡಿಯೋವನ್ನು ೨೦೨೦ ರಲ್ಲಿ ಹಂಚಿಕೊಂಡಿದ್ದು, ಇದು ಟರ್ಕಿಯಿಂದ ಬಂದಿದೆ ಎಂದು ಹೇಳಿಕೊಂಡಿವೆ.

ಎನ್‌ಡಿಟಿವಿ ಸುದ್ದಿ ವರದಿಯ ಸ್ಕ್ರೀನ್‌ಶಾಟ್‌.


ಈ ವೀಡಿಯೋ ಹಲಾಲ್ ಅಥವಾ ಭಾರತಕ್ಕೆ ಸಂಬಂಧಿಸಿಲ್ಲ ಮತ್ತು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ತಪ್ಪಾಗಿ ಹಂಚಿಕೊಳ್ಳಲಾಗಿದೆ ಎಂಬುದು ಈ ವೀಡಿಯೋದ ವಿಶ್ಲೇಷಣೆಯು ಸ್ಪಷ್ಟಪಡಿಸಿದೆ.


ತೀರ್ಪು:

ಹಾಲು ತುಂಬಿದ ಟಬ್‌ನಲ್ಲಿ ಸ್ನಾನ ಮಾಡುತ್ತಿರುವ ವ್ಯಕ್ತಿಯ ವೀಡಿಯೋ ಟರ್ಕಿಯಿಂದ ಬಂದಿದೆ, ಮತ್ತು ಘಟನೆಯು ನವೆಂಬರ್ ೨೦೨೦ ರಲ್ಲಿ ನಡೆದದ್ದು ಎಂದು ಸ್ಪಷ್ಟವಾಗಿದೆ. ಇದನ್ನು ಕೆಲವು ಭಾರತೀಯ ಸಾಮಾಜಿಕ ಮಾಧ್ಯಮ ಬಳಕೆದಾರರು ಕೋಮು ಕೋನದಿಂದ ಹಂಚಿಕೊಂಡಿದ್ದಾರೆ. ಕೇರಳದಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬರು ಹಾಲಿನಲ್ಲಿ ಸ್ನಾನ ಮಾಡುವ ಮೂಲಕ ಅದನ್ನು ಹಲಾಲ್ ಮಾಡುತ್ತಿದ್ದಾನೆ ಎಂದು ಹೇಳಿಕೊಂಡು ಈ ವೀಡಿಯೋವನ್ನು ತಪ್ಪಾಗಿ ಹಂಚಿಕೊಳ್ಳಲಾಗಿದೆ.

Claim :  A video from Turkey of a man bathing in a tub full of milk has been shared as an incident involving a Muslim man in Kerala.
Claimed By :  X user
Fact Check :  False
Tags:    

Similar News