ಕರ್ನಾಟಕದಲ್ಲಿ ವ್ಯಕ್ತಿಯೊಬ್ಬ ಪೊಲೀಸ್ ಅಧಿಕಾರಿಗೆ ಬೆದರಿಕೆ ಹಾಕುತ್ತಿದ್ದಾನೆ ಎಂದು ತೋರಿಸಲು ಮಹಾರಾಷ್ಟ್ರದ ಘಟನೆಯ ವೀಡಿಯೋವನ್ನು ತಪ್ಪಾಗಿ ಹಂಚಿಕೊಳ್ಳಲಾಗಿದೆ.
ಸಾರಾಂಶ:
ಎಕ್ಸ್ (ಹಿಂದೆ ಟ್ವಿಟರ್) ಬಳಕೆದಾರರು ಅಲ್ಪಸಂಖ್ಯಾತ ಸಮುದಾಯದ ವ್ಯಕ್ತಿಯೊಬ್ಬ ಕರ್ನಾಟಕದಲ್ಲಿ ಪೊಲೀಸ್ ಅಧಿಕಾರಿಗೆ ಬೆದರಿಕೆ ಹಾಕುತ್ತಿದ್ದಾನೆ ಎಂದು ಆರೋಪಿಸಿ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ೨೦೧೮ ರಲ್ಲಿ ಮಹಾರಾಷ್ಟ್ರದಲ್ಲಿ ನಡೆದ ಘಟನೆಯನ್ನು ವೀಡಿಯೋ ತೋರಿಸುತ್ತದೆ ಮತ್ತು ಕರ್ನಾಟಕದಲ್ಲಿ ಇತ್ತೀಚಿನ ಘಟನೆ ಎಂದು ಪ್ರಸಾರವಾದ ಹೇಳಿಕೆಗಳು ತಪ್ಪು.
ಹೇಳಿಕೆ:
ಅಲ್ಪಸಂಖ್ಯಾತ ಸಮುದಾಯದ ವ್ಯಕ್ತಿಯೊಬ್ಬ ಬಸ್ ನಿಲ್ದಾಣದಂತೆ ಕಾಣುವ ಪ್ರದೇಶದಲ್ಲಿ ಪೊಲೀಸ್ ಅಧಿಕಾರಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಹೇಳಿಕೊಂಡು ಎಕ್ಸ್ ನಲ್ಲಿ ಒಂದು ವೀಡಿಯೋ ಹಂಚಿಕೊಳ್ಳಲಾಗಿದೆ. ಏಪ್ರಿಲ್ ೦೮, ೨೦೨೪ ರಂದು ಈ ವೀಡಿಯೋವನ್ನು ಎಕ್ಸ್ ನಲ್ಲಿ ಹಂಚಿಕೊಳ್ಳಲಾಗಿದೆ. ಹಿಂದಿಯಲ್ಲಿರುವ ಇದರ ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ಹೀಗೆ ಹೇಳುತ್ತದೆ, "ಕರ್ನಾಟಕದಲ್ಲಿ ಮೆಶ್ ಕ್ಯಾಪ್ ಧರಿಸಿದ ವ್ಯಕ್ತಿಯೊಬ್ಬರು "ನಿಮ್ಮ ಸಮವಸ್ತ್ರವನ್ನು ತೆಗೆದುಹಾಕಿ ಮತ್ತೆ ನನ್ನನ್ನು ಭೇಟಿ ಮಾಡಿ" ಎಂದು ಪೊಲೀಸರಿಗೆ ಬಹಿರಂಗವಾಗಿ ಬೆದರಿಕೆ ಹಾಕುತ್ತಿದ್ದಾರೆ." ಪೋಷ್ಟ್ ೯೦.೨ ಸಾವಿರ ವೀಕ್ಷಣೆಗಳು, ೩.೧ ಸಾವಿರ ಇಷ್ಟಗಳು ಮತ್ತು ೨.೨ ಸಾವಿರ ಮರುಪೋಷ್ಟ್ ಗಳನ್ನು ಸ್ವೀಕರಿಸಿದೆ. ಬಳಕೆದಾರರು ತಪ್ಪಾದ, ತಪ್ಪುದಾರಿಗೆಳೆಯುವ ಮತ್ತು ಕೋಮುವಾದಿ ಪೋಷ್ಟ್ ಗಳನ್ನು ವಿಶೇಷವಾಗಿ ಅಲ್ಪಸಂಖ್ಯಾತ ಸಮುದಾಯಗಳನ್ನು ಗುರಿಯಾಗಿಸಿಕೊಂಡು ನಿಯಮಿತವಾಗಿ ಹಂಚಿಕೊಳ್ಳುತ್ತಾರೆ ಎಂದು ಕಂಡುಬಂದಿದೆ.
ಕರ್ನಾಟಕದಲ್ಲಿ ವ್ಯಕ್ತಿಯೊಬ್ಬ ಪೊಲೀಸ್ ಅಧಿಕಾರಿಗೆ ಬೆದರಿಕೆ ಹಾಕಿರುವ ಘಟನೆ ನಡೆದಿದೆ ಎಂದು ಎಕ್ಸ್ ನಲ್ಲಿ ಪೋಷ್ಟ್ ಮಾಡಲಾದ ವೀಡಿಯೋದ ಸ್ಕ್ರೀನ್‌ಶಾಟ್.
ಎಕ್ಸ್ ನಲ್ಲಿ “Saffron Army” ಎಂಬ ಮತ್ತೊಬ್ಬ ಬಳಕೆದಾರರು ಇದೇ ರೀತಿಯ ಶೀರ್ಷಿಕೆಯೊಂದಿಗೆ ಕ್ಲಿಪ್ ಅನ್ನು ಹಂಚಿಕೊಂಡಿದ್ದಾರೆ.
“Saffron Army” ಹಂಚಿಕೊಂಡ ಪೋಷ್ಟ್ ನ ಸ್ಕ್ರೀನ್‌ಶಾಟ್.
ಇದೇ ವೀಡಿಯೋ ಏಪ್ರಿಲ್ ೮, ೨೦೨೪ ರಂದು ಫೇಸ್‌ಬುಕ್‌ನಲ್ಲಿ ವೈರಲ್ ಆಗಿದ್ದು, ಹಿಂದಿಯಲ್ಲಿರುವ ಇದರ ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ಹೀಗೆ ಹೇಳುತ್ತದೆ, “ಸುದ್ದಿ........ * * * *ಕಾಂಗ್ರೆಸ್ ಆಡಳಿತದ ಕರ್ನಾಟಕದಿಂದ* ನೆಟ್ ಕ್ಯಾಪ್ ಮ್ಯಾನ್ ಬಹಿರಂಗವಾಗಿ ಪೊಲೀಸರಿಗೆ ಬೆದರಿಕೆ ಹಾಕುತ್ತಾನೆ “ತೆಗೆದುಕೊಳ್ಳಿ ಸಮವಸ್ತ್ರವನ್ನು ಬಿಟ್ಟು ನನ್ನನ್ನು ಒಬ್ಬಂಟಿಯಾಗಿ ಭೇಟಿ ಮಾಡಿ."
ಪುರಾವೆ:
ನಾವು ವೈರಲ್ ವೀಡಿಯೋದ ಕೀಫ್ರೇಮ್‌ಗಳ ರಿವರ್ಸ್ ಇಮೇಜ್ ಸರ್ಚ್ ನಡೆಸಿದಾಗ, ಇದು ಮೇ ೧೬, ೨೦೨೩ ರ ಎಕ್ಸ್ ಪೋಷ್ಟ್ ಗೆ ನಮ್ಮನ್ನು ಮುನ್ನಡೆಸಿದೆ. ಈ ಪೋಷ್ಟ್ ನ ಶೀರ್ಷಿಕೆ, ಮೂಲತಃ ಹಿಂದಿಯಲ್ಲಿದ್ದು, ಕನ್ನಡಕ್ಕೆ ಅನುವಾದಿಸಿದಾಗ ಹೀಗೆ ಹೇಳುತ್ತದೆ, "*ಕಾಂಗ್ರೆಸ್‌ನ ಗೆಲುವು: ಮುಖ್ಯಮಂತ್ರಿ ತೆಗೆದುಕೊಂಡಿಲ್ಲ ಪ್ರಮಾಣ ಇನ್ನೂ ಮತ್ತು ಇದು ಕರ್ನಾಟಕದ ಪರಿಸ್ಥಿತಿ."
ಚಿತ್ರವು ಮೇ ೧೬, ೨೦೨೩ ರ ಎಕ್ಸ್ ಪೋಷ್ಟ್ ನ ಸ್ಕ್ರೀನ್‌ಶಾಟ್ ಅನ್ನು ತೋರಿಸುತ್ತದೆ.
೨೦೨೩ ರಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರ ಅದೇ ವೀಡಿಯೋವನ್ನು ಕರ್ನಾಟಕದ್ದು ಎಂದು ಹೇಳಿಕೊಂಡು ಆನ್‌ಲೈನ್‌ನಲ್ಲಿ ಹಂಚಿಕೊಳ್ಳಲಾಗಿತ್ತು ಎಂದು ಪೋಷ್ಟ್ ಸೂಚಿಸುತ್ತದೆ.
ವೈರಲ್ ಎಕ್ಸ್ ಪೋಷ್ಟ್ ನ ಶೀರ್ಷಿಕೆಯಿಂದ ಸುಳುಹುಗಳನ್ನು ತೆಗೆದುಕೊಂಡು, ನಾವು “वर्दी उतारकर मिल” ಎಂಬ ಹಿಂದಿ ಪದಗುಚ್ಛವನ್ನು ಬಳಸಿಕೊಂಡು ಕೀವರ್ಡ್ ಸರ್ಚ್ ನಡೆಸಿದ್ದೇವೆ ಮತ್ತು ಘಟನೆಯು ಮಹಾರಾಷ್ಟ್ರ ದಲ್ಲಿ ಸಂಭವಿಸಿದೆ ಎಂದು ಸೂಚಿಸುವ ಶೀರ್ಷಿಕೆಗಳೊಂದಿಗೆ ೨೦೧೯ ರ ಫೇಸ್‌ಬುಕ್ ಪೋಷ್ಟ್ ಅನ್ನು ಕಂಡುಕೊಂಡಿದ್ದೇವೆ.
೨೦೧೯ ರ ಫೇಸ್‌ಬುಕ್ ಪೋಷ್ಟ್ ನ ಸ್ಕ್ರೀನ್‌ಶಾಟ್.
ನಾವು ಫೇಸ್‌ಬುಕ್ ಪೋಷ್ಟ್ ನ ಕೀಫ್ರೇಮ್‌ಗಳ ರಿವರ್ಸ್ ಇಮೇಜ್ ಸರ್ಚ್ ನಡೆಸಿದಾಗ ಸೆಪ್ಟೆಂಬರ್ ೨೦, ೨೦೧೮ ರಂದು ಹಂಚಿಕೊಂಡ ಈ ವೀಡಿಯೋದ ಹೆಚ್ಚು ನಿಖರವಾದ ಆವೃತ್ತಿಯನ್ನು ಕಂಡುಕೊಂಡಿದ್ದೇವೆ.
೨೦೧೮ ರ ಫೇಸ್‌ಬುಕ್ ಪೋಷ್ಟ್ ನ ಸ್ಕ್ರೀನ್‌ಶಾಟ್.
ಈ ವೀಡಿಯೋವಿನ ಮತ್ತೊಂದು ಆವೃತ್ತಿಯನ್ನು ವಿಶ್ಲೇಸಿದಾಗ, ಮರಾಠಿಯಲ್ಲಿ ಬರೆಯಲಾದ ಪಠ್ಯದೊಂದಿಗೆ ನಾವು ಸೈನ್‌ಬೋರ್ಡ್ ಅನ್ನು ಕಂಡುಕೊಂಡಿದ್ದೇವೆ.
ಮರಾಠಿ ಸೈನ್‌ಬೋರ್ಡ್ ಅನ್ನು ತೋರಿಸುವ ವೀಡಿಯೋದ ಸ್ಕ್ರೀನ್‌ಶಾಟ್.
ಪೊಲೀಸ್ ಸಮವಸ್ತ್ರದ ಮೇಲಿನ ಚಿಹ್ನೆಯು ಮಹಾರಾಷ್ಟ್ರ ಪೊಲೀಸರಿಗೆ (ಕೆಳಗೆ) ಹೊಂದಿಕೆಯಾಗುತ್ತದೆ ಎಂದು ನಾವು ಕಂಡುಕೊಂಡಿದ್ದೇವೆ.
ಇದು ಈ ಘಟನೆಯು ಮಹಾರಾಷ್ಟ್ರದಲ್ಲಿ ಸಂಭವಿಸಿದೆ ಎಂದು ಸ್ಪಷ್ಟಪಡಿಸುತ್ತದೆ; ಆದ್ದರಿಂದ, ದೃಶ್ಯಗಳು ಕರ್ನಾಟಕದ ಇತ್ತೀಚಿನ ಘಟನೆ ಎಂದು ಹೇಳುವ ಸಾಮಾಜಿಕ ಮಾಧ್ಯಮ ಪೋಷ್ಟ್ ಗಳಲ್ಲಿನ ಹೇಳಿಕೆ ತಪ್ಪು.
ತೀರ್ಪು:
ವೈರಲ್ ವೀಡಿಯೋದ ವಿಶ್ಲೇಷಣೆಯು ಇದು ೨೦೧೮ ರಲ್ಲಿ ಮಹಾರಾಷ್ಟ್ರದಲ್ಲಿ ನಡೆದ ಘಟನೆ ಎಂದು ಸೂಚಿಸುತ್ತದೆ; ಆದ್ದರಿಂದ, ಅಲ್ಪಸಂಖ್ಯಾತ ಸಮುದಾಯದ ವ್ಯಕ್ತಿಗಳು ಇತ್ತೀಚೆಗೆ ಕರ್ನಾಟಕದ ಪೊಲೀಸ್ ಅಧಿಕಾರಿಗೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಆನ್‌ಲೈನ್‌ನಲ್ಲಿ ಪ್ರಸಾರವಾಗುತ್ತಿರುವ ಹೇಳಿಕೆಗಳು ತಪ್ಪು.