ಕಾಂಗ್ರೆಸ್‌ ಪಕ್ಷದ ಹೆಸರಿನಲ್ಲಿ ನಕಲಿ ಜಾಹಿರಾತು ಹಂಚಿಕೆ

Update: 2024-05-01 07:58 GMT


ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ರಾಮ ಮಂದಿರ ಕೆಡವಿ ಬಾಬರಿ ಮಸೀದಿ ನಿರ್ಮಣ ಮಾಡುತ್ತೇವೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಜಾಹಿರಾತೊಂದನ್ನು ವ್ಯಾಕವಾಗಿ ಪ್ರಸಾರ ಮಾಡಲಾಗುತ್ತಿದೆ. “ರಾಮ ಮಂದಿರದ ಮೇಲೆ ಬಾಬರಿ ಮಸೀದಿ, ರಾಹುಲ್‌ ಗಾಂಧಿಗೆ ಮತ ಚಲಾಯಿಸಿ : ವಯನಾಡ್‌ ಕಾಂಗ್ರೆಸ್‌ ಕಮಿಟಿ” ಎಂದು ವಿಡಿಯೋ ಜಾಹಿರಾತು ಒಂದನ್ನು ವ್ಯಾಪಕವಾಗಿ ವಾಟ್ಸ್‌ಆಪ್‌ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ.

ರಾಹುಲ್‌ ಗಾಂಧಿ ಕುಟುಂಬ ಕೇವಲ ಮುಸಲ್ಮಾನರ ಪರವಾಗಿ ಇದೆ, ಇವರಿಗೆ ಹಿಂದೂಗಳ ಅವಶ್ಯಕತೆ ಇಲ್ಲಾ. ಇವರು ಮತ್ತೆ ಅಧಿಕಾರಕ್ಕೆ ಬಂದರೆ ರಾಮ ಮಂದಿರವನ್ನು ಧ್ವಂಸ ಮಾಡಿ ಅದೇ ಜಾಗದಲ್ಲಿ ಬಾಬರಿ ಮಸೀದಿಯನ್ನು ನಿರ್ಮಿಸುವ ಸಾಧ್ಯತೆ ಹೆಚ್ಚಿದೆ ಎಂದು ಜಾಹಿರಾತಿನಲ್ಲಿ  ಬಿಂಬಿಸಲಾಗಿದೆ.

ಹಾಗಿದ್ದರೆ, 2024ರ ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಕಾಂಗ್ರೆಸ್‌ ನೀಡಿರುವ ಜಾಹಿರಾತಿನಲ್ಲಿ ರಾಮ ಮಂದಿರ ಕೆಡವಿ ಬಾಬರಿ ಮಸೀದಿ ನಿರ್ಮಣ ಮಾಡುತ್ತೇವೆ ಎಂದು ಹೇಲಲಾಗಿದೆಯೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್‌ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಕಾಂಗ್ರೆಸ್‌ ಪಕ್ಷ ಪ್ರಕಟಿಸಿದೆ ಎನ್ನಲಾದ ವಿಡಿಯೋವನ್ನು ಪರಿಶೀಲಿಸಲು ಗೂಗಲ್‌ ರಿವರ್ಸ್‌ ಇಮೇಜಸ್‌ನಲ್ಲಿಸರ್ಚ್ ಮಾಡಿದಾಗ,  ವಯನಾಡ್‌ ಕಾಂಗ್ರೆಸ್‌ ವೈರಲ್ ಜಾಹಿರಾತು ನೀಡಿರುವ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಬಳಿಕ ಇದೊಂದು ವಿವಾದಾತ್ಮಕ ಜಾಹಿರಾತು ಎಂಬ ಕಾರಣಕ್ಕಾಗಿ ಯಾವುದಾದರೂ ವರದಿ ಪ್ರಕಟವಾಗಿದೆಯೇ ಎಂದು ಪರಿಶೀಲನೆ ನಡೆಸಿದಾಗ ಅಂತಹ ಯಾವುದೇ ವರದಿಗಳು ಲಭ್ಯವಾಗಿಲ್ಲ.

ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಕಂಡು ಬಂದ ಸುಳ್ಳು ಸುದ್ದಿಗಳು

ಆದರೆ ಈ ಜಾಹಿರಾತನ್ನು ಕಾಂಗ್ರೆಸ್‌ ಹೆಸರಿನಲ್ಲಿ ಪ್ರಕಟಿಸುವ ಮೂಲಕ ಕಾಂಗ್ರೆಸ್ ಹಿಂದೂ ವಿರೋಧಿ ಎಂದು ಬಿಂಬಿಸಲು ಈ ಕೃತ್ಯ ಎಸಗಿದ್ದಾರೆ ಎಂದು ಕನ್ನಡ ಫ್ಯಾಕ್ಟ್‌ಚೆಕ್ ವರದಿಯನ್ನು ಪ್ರಕಟಿಸಿದೆ.

ಇನ್ನು ಇದೊಂದು ಎಡಿಟೆಡ್‌ ವಿಡಿಯೋ ಎಂಬುದು ಸ್ಪಷ್ಟವಾಗಿದೆ. ಜೊತೆಗೆ ಈ ಸುಳ್ಳು ವಿಡಿಯೋವನ್ನು ಹಂಚಿಕೊಂಡವರ ಮೇಲೆ FIR ದಾಖಲಾಗಿರುವ ಬಗ್ಗೆ @rebelliousdogra ಎಂಬವವರು ತಮ್ಮ ಎಕ್ಸ್‌ ಖಾತೆಯಲ್ಲಿ ತಿಳಿಸಿದ್ದಾರೆ.  ಇದೇ ವೇಳೆ ಪ್ಯಾಕ್ಟ್‌ಚೆಕರ್‌  ಮೊಹಮದ್‌ ಜು಼ಬೈರ್‌ ಕೂಡ ಈ ಕುರಿತು ಟ್ವಿಟ್‌ ಮಾಡಿರುವುದು ಕಂಡು ಬಂದಿದೆ.

ಹೆಚ್ಚಿನ ಮಾಹಿತಿಗಾಗಿ ವಯನಾಡ್‌ ಕಾಂಗ್ರೆಸ್‌ನ ಎಕ್ಸ್‌ ಖಾತೆಯನ್ನು ಪರಿಶೀಲಿಸಿದಾಗ, 26 ಏಪ್ರಿಲ್‌ 2024ರಂದು “ಇದೊಂದು ಪ್ರೊಪಗೆಂಡ ವಿಡಿಯೋವಾಗಿದೆ. ರಾಹುಲ್‌ ಗಾಂಧಿ ವಿರುದ್ಧ ಬಿಜೆಪಿ ಹೂಡಿದ ಷಡ್ಯಂತ್ರ ವಿಫಲವಾಗಿದೆ” ಎಂಬ ಹೇಳಿಕೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಂಡಿದೆ.

ಇನ್ನು ಈ ರೀತಿಯ ಜಾಹಿರಾತುಗಳು ಚುನಾವಣೆ ನೀತಿ ಸಂಹಿತೆಯ ಉಲ್ಲಂಘನೆಯಾಗಲಿದ್ದು, ಕೇವಲ ಕಾಂಗ್ರೆಸ್‌ ಮಾತ್ರವಲ್ಲ ಯಾವುದೇ ಪಕ್ಷಗಳು ಕೂಡ ಈ ರೀತಿಯ ವಿವೇಚನ ರಹಿತ ಜಾಹಿರಾತನ್ನು ನೀಡುವುದಿಲ್ಲ. ಹಾಗಾಗಿ ವೈರಲ್‌ ವಿಡಿಯೋದಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

Claim :  fake and misleading advertisement shred the name of Congress party
Claimed By :  X user
Fact Check :  Fake
Tags:    

Similar News