ಸಿದ್ದರಾಮಯ್ಯ ಅವರಿಗೆ ಹಿಂದೂ ಮತಗಳು ಬೇಡ ಎಂದು ಹೇಳಿರುವುದರ ಬಗ್ಗೆಯ ಪತ್ರಿಕೆ ಕ್ಲಿಪ್ಪಿಂಗ್ ನಕಲಿ.

Update: 2024-04-12 07:20 GMT

ಸಾರಾಂಶ:

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿಂದೂ ಮತಗಳನ್ನು ಬಯಸುವುದಿಲ್ಲ ಎಂದು ಹೇಳುವ ಒಂದು ವರದಿಯನ್ನು ತೋರಿಸಲು ಆನ್‌ಲೈನ್‌ನಲ್ಲಿ ಪತ್ರಿಕೆ ಕ್ಲಿಪ್ಪಿಂಗ್ ಒಂದನ್ನು ಹಂಚಿಕೊಳ್ಳಲಾಗಿದೆ. ಯಾವುದೇ ಸುದ್ದಿ ಪ್ರಕಟಣೆಯು ಅಂತಹ ಲೇಖನವನ್ನು ಪ್ರಕಟಿಸಿಲ್ಲ ಮತ್ತು ಒಂದು ಫೇಕ್ ನ್ಯೂಸ್ ಪೇಪರ್ ಪ್ರಕಟಣೆಯ ಚಿತ್ರವನ್ನು ಆನ್‌ಲೈನ್‌ನಲ್ಲಿ ಹಂಚಿಕೊಳ್ಳಲಾಗಿದೆ.


ಹೇಳಿಕೆ:

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಸ್ಲಿಂ ಮತಗಳಿಂದ ತೃಪ್ತರಾಗಿರುವುದರಿಂದ ಹಿಂದೂಗಳ ಮತಗಳನ್ನು ಬಯಸುವುದಿಲ್ಲ ಎಂದು ತೋರಿಸುವ ಕನ್ನಡದ ಪತ್ರಿಕೆಯೊಂದರ ವರದಿಯ ಉದ್ದೇಶಿತ ಚಿತ್ರವೊಂದು ತೋರಿಸುತ್ತದೆ. ಫೇಸ್‌ಬುಕ್ ಮತ್ತು ಎಕ್ಸ್ (ಹಿಂದೆ ಟ್ವಿಟರ್) ನಂತಹ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಚಿತ್ರವನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ಕನ್ನಡದಲ್ಲಿ ವೈರಲ್ ಆಗಿರುವ ಪತ್ರಿಕೆಯ ಕ್ಲಿಪ್ಪಿಂಗ್‌ನ ಹೆಡರ್, “ನಮಗೆ ಹಿಂದೂಗಳ ಮತಗಳು ಅಗತ್ಯವಿಲ್ಲ. ಮುಸ್ಲಿಮರ ಮತ ಸಾಕು: ಸಿದ್ದರಾಮಯ್ಯ." ಈ ಕ್ಲಿಪ್ಪಿಂಗ್‌ನ ವಿಷಯವು ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆದ ಸಭೆಯಲ್ಲಿ ಕೆಲವು ಕಾಂಗ್ರೆಸ್ ಕಾರ್ಯಕರ್ತರು ಹಿಂದೂಗಳು ತಮಗೆ ಮತ ನೀಡದಿದ್ದರೆ ಪಕ್ಷಕ್ಕೆ ಹೊಡೆತ ಎಂದು ಹೇಳಿದರ ವಿರುದ್ಧ ಸಿದ್ದರಾಮಯ್ಯನವರು ಸಿಟ್ಟಿಗೆದ್ದರು ಎಂದು ಹೇಳಿಕೊಂಡಿದೆ. ಪಕ್ಷಕ್ಕೆ ಹಿಂದೂಗಳ ಮತಗಳ ಅಗತ್ಯವಿಲ್ಲ ಎಂದು ಹೇಳುವ ಮೂಲಕ ಅವರು ಅಂತಹ ಕಳವಳಗಳಿಗೆ ಪ್ರತಿಕ್ರಿಯಿಸಿದರು ಎಂದು ಅದು ಗಮನಿಸಿದೆ. ನರೇಂದ್ರ ಮೋದಿ ಅವರನ್ನು ಪರೋಕ್ಷವಾಗಿ ಉಲ್ಲೇಖಿಸುವ ಮೂಲಕ ಯಾರೂ ಅಮರರಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು ಎಂದು ಕೂಡ ಈ ಚಿತ್ರದಲ್ಲಿನ ವರದಿಯು ಹೇಳಿಕೊಂಡಿದೆ.

ವೈರಲ್ ನ್ಯೂಸ್ ಪೇಪರ್ ಕ್ಲಿಪ್ಪಿಂಗ್‌ನ ಚಿತ್ರದೊಂದಿಗೆ ಫೇಸ್‌ಬುಕ್ ಮತ್ತು ಎಕ್ಸ್‌ನಲ್ಲಿ ಕಂಡುಬರುವ ವೈರಲ್ ಪೋಷ್ಟ್ ಗಳ ಸ್ಕ್ರೀನ್‌ಶಾಟ್.


ಪುರಾವೆ:

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಇಂತಹ ಹೇಳಿಕೆಗಳ ಬಗ್ಗೆ ಸುದ್ದಿ ವರದಿಗಳನ್ನು ಹುಡುಕಿದಾಗ, ನಮಗೆ ಕನ್ನಡದಲ್ಲಾಗಲಿ ಅಥವಾ ಇತರ ಭಾಷೆಗಳಲ್ಲಾಗಲಿ ಯಾವುದೇ ವಿಶ್ವಾಸಾರ್ಹ ವರದಿಗಳು ಕಂಡುಬಂದಿಲ್ಲ. ಕ್ಲಿಪ್ಪಿಂಗ್ ನ ಒಳಗಿನ ಚಿತ್ರವನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಕನ್ನಡದಲ್ಲಿ “ಖದೀಮ ಕಾಂಗ್ರೆಸ್” ಎಂದು ಓದುವ ವಾಟರ್‌ಮಾರ್ಕ್ ಅನ್ನು ನಾವು ಗಮನಿಸಿದ್ದೇವೆ. ಇದು ಈ ಪತ್ರಿಕೆ ಕ್ಲಿಪ್ಪಿಂಗ್ ಅನ್ನು ಡಿಜಿಟಲ್ ಆಗಿ ಎಡಿಟ್ ಮಾಡಲಾಗಿದೆ ಎಂದು ಸೂಚಿಸುತ್ತದೆ.

"ಖದೀಮಾ ಕಾಂಗ್ರೆಸ್" ಎಂಬ ವಾಟರ್‌ಮಾರ್ಕ್ ಅನ್ನು ಹೊಂದಿರುವ ವೈರಲ್ ನ್ಯೂಸ್ ಪೇಪರ್ ಕ್ಲಿಪ್ಪಿಂಗ್ ಒಳಗಿರುವ ಚಿತ್ರದ ಸ್ಕ್ರೀನ್‌ಶಾಟ್.


ಇದಲ್ಲದೆ, ನಾವು ವೈರಲ್ ನ್ಯೂಸ್ ಪೇಪರ್ ಕ್ಲಿಪ್‌ನಲ್ಲಿನ ಚಿತ್ರದ ರಿವರ್ಸ್ ಇಮೇಜ್ ಸರ್ಚ್ ನಡೆಸಿದ್ದೇವೆ ಮತ್ತು ಜೂನ್ ೨, ೨೦೨೩ ರಂದು “CM Of Karnataka” ಅವರ ಎಕ್ಸ್ ಪೋಷ್ಟ್ ಅನ್ನು ಕಂಡುಕೊಂಡಿದ್ದೇವೆ. ಈ ಪೋಷ್ಟ್ ನೊಂದಿಗೆ ಹಂಚಿಕೊಂಡ ಚಿತ್ರಗಳಲ್ಲಿ ಒಂದು ವೈರಲ್‌ ಚಿತ್ರದಲ್ಲಿ ಕಂಡುಬಂದ ಚಿತ್ರಕ್ಕೆ ಹೋಲುತ್ತದೆ. ಮುಖ್ಯಮಂತ್ರಿಯ ಎರಡೂ ಬದಿಯಲ್ಲಿ ಕುಳಿತಿದ್ದ ಇಬ್ಬರು ವ್ಯಕ್ತಿಗಳು ಮತ್ತು ಅವರ ಬಟ್ಟೆಯ ಬಣ್ಣ ಎಲ್ಲವೂ ಒಂದೇ ಆಗಿವೆ ಎಂಬುದು ಗಮನಾರ್ಹ. ಈ ಪೋಷ್ಟ್ ನ ಶೀರ್ಷಿಕೆಯು, “ಸಚಿವ ಸಂಪುಟ ಸಭೆಗೂ ಮುನ್ನ ಮುಖ್ಯಮಂತ್ರಿ @siddaramaiah ಅವರು ವಿಧಾನಸೌಧದ ತಮ್ಮ ಕಚೇರಿಯಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಗ್ಯಾರೆಂಟಿ ಯೋಜನೆಗಳ ಜಾರಿ ಕುರಿತಾಗಿ ಚರ್ಚಿಸಿದರು.” ಎಂದು ಹೇಳುತ್ತದೆ.

ಜೂನ್ ೨, ೨೦೨೩ ರಂದು “CM of Karnataka” ಹಂಚಿಕೊಂಡ ಎಕ್ಸ್ ಪೋಷ್ಟ್ ನಲ್ಲಿರುವ ಚಿತ್ರದ ಸ್ಕ್ರೀನ್‌ಶಾಟ್.


ಎಕ್ಸ್ ಪೋಷ್ಟ್ ನಿಂದ ಸುಳಿವುಗಳನ್ನು ತೆಗೆದುಕೊಳ್ಳುವ ಮೂಲಕ ಮತ್ತಷ್ಟು ಹುಡುಕಾಟ ನಡೆಸಿದಾಗ ಜೂನ್ ೨, ೨೦೨೩ ರಂದು ದಿ ಪ್ರಿಂಟ್‌ನ ಸುದ್ದಿ ಲೇಖನವನ್ನು ಕಂಡುಕೊಂಡಿದ್ದೇವೆ. ಅದರ ಶೀರ್ಷಿಕೆ ಹೀಗಿದೆ, "ಕರ್ನಾಟಕ: ಕ್ಯಾಬಿನೆಟ್ ಸಭೆಯ ಮೊದಲು, ಸಿಎಂ ಸಿದ್ದರಾಮಯ್ಯ ಅವರು ೫ ಭರವಸೆಗಳ ರೋಲ್‌ ಔಟ್ ಗಾಗಿ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು." ಈ ಲೇಖನವು ವೈರಲ್ ನ್ಯೂಸ್ ಪೇಪರ್ ಕ್ಲಿಪ್ಪಿಂಗ್‌ನಲ್ಲಿ ನೋಡಿದ ಅದೇ ಚಿತ್ರವನ್ನು ಒಳಗೊಂಡಿದ್ದು ಅದರಲ್ಲಿ ಹೆಚ್ಚು ಜನರು ಕಾಣಿಸಿಕೊಂಡಿದ್ದಾರೆ. ವೈರಲ್ ನ್ಯೂಸ್ ಪೇಪರ್ ಕ್ಲಿಪ್‌ನಲ್ಲಿ ಬಳಸಲಾದ ಚಿತ್ರವು ಜೂನ್ ೨೦೨೩ ರದ್ದಾಗಿದೆ ಎಂದು ಇದು ಸಾಬೀತುಪಡಿಸುತ್ತದೆ.

ಜೂನ್ ೨, ೨೦೨೩ ರಂದು ದಿ ಪ್ರಿಂಟ್‌ನ ಸುದ್ದಿ ಲೇಖನದಲ್ಲಿ ಕಂಡುಬಂದ ಚಿತ್ರದ ಸ್ಕ್ರೀನ್‌ಶಾಟ್.


ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಕ್ಸ್ ಪೋಷ್ಟ್ ಮೂಲಕ ಇದು ನಕಲಿ ಚಿತ್ರವಾಗಿದ್ದು, ಪೊಲೀಸ್ ದೂರು ದಾಖಲಿಸಲಾಗಿದೆ ಎಂದು ಸ್ಪಷ್ಟಪಡಿಸಿದರು. ಇದಲ್ಲದೆ, ಕರ್ನಾಟಕದ ಮುಖ್ಯಮಂತ್ರಿಯನ್ನು ಗುರಿಯಾಗಿಸಿಕೊಂಡು ನಕಲಿ ಸುದ್ದಿ ಕ್ಲಿಪ್ಪಿಂಗ್ ಕುರಿತು ಕಾಂಗ್ರೆಸ್ ಪಕ್ಷವು ಚುನಾವಣಾ ಆಯೋಗಕ್ಕೆ ದೂರು ನೀಡಿದೆ ಎಂದು ದಿ ಹಿಂದೂ ಕೂಡ ವರದಿ ಮಾಡಿದೆ.


ತೀರ್ಪು:

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕುರಿತಾದ ಸುದ್ದಿಯ ವರದಿಯನ್ನು ತೋರಿಸುವ ಪತ್ರಿಕೆಯ ಕ್ಲಿಪ್ಪಿಂಗ್ ನಕಲಿಯಾಗಿದೆ. ಇದನ್ನು ಡಿಜಿಟಲ್ ಆಗಿ ರಚಿಸಲಾಗಿದೆ ಮತ್ತು ಮುಖ್ಯಮಂತ್ರಿಯ ಬಗ್ಗೆ ಕಾಲ್ಪನಿಕ ಸುದ್ದಿ ವರದಿ ಹರಡಿಸಲು ಜೂನ್ ೨೦೨೩ ರ ಹಳೆಯ ಚಿತ್ರವನ್ನು ಸೇರಿಸಿ, ನಿರೂಪಣೆಯನ್ನು ಕೋಮು ಕೋನದೊಂದಿಗೆ ಹಂಚಿಕೊಳ್ಳಲಾಗಿದೆ.

Claim :  Newspaper clipping about Siddaramaiah being told he doesn't want Hindu votes is fake.
Claimed By :  Facebook User
Fact Check :  Fake
Tags:    

Similar News