ಹಿಂದೂ ಒಡೆತನದ ಅಂಗಡಿಯಿಂದ ವಸ್ತುಗಳನ್ನು ಖರೀದಿಸಿದಕ್ಕೆ ಮುಸ್ಲಿಂ ಮಹಿಳೆಯರಿಗೆ ಕಿರುಕುಳ ನೀಡುವುದರ ವೀಡಿಯೋ ಇತ್ತೀಚಿನದ್ದಲ್ಲ.
ಸಾರಾಂಶ:
ಎಕ್ಸ್ (ಹಿಂದೆ ಟ್ವಿಟರ್), ಫೇಸ್‌ಬುಕ್ ಮತ್ತು ಯೂಟ್ಯೂಬ್ ಬಳಕೆದಾರರು ಇತ್ತೀಚೆಗೆ ರಂಜಾನ್ ಸಮಯದಲ್ಲಿ ಹಿಂದೂ ಒಡೆತನದ ಅಂಗಡಿಯಿಂದ ಸರಕುಗಳನ್ನು ಖರೀದಿಸಿದ್ದಕ್ಕಾಗಿ ಅಲ್ಪಸಂಖ್ಯಾತ ಸಮುದಾಯದ ಪುರುಷರ ಗುಂಪು ಕರ್ನಾಟಕದಲ್ಲಿ ತಮ್ಮ ಸಮುದಾಯದ ಇಬ್ಬರು ಮಹಿಳೆಯರಿಗೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಈ ಘಟನೆ ನಡೆದಿದ್ದರೂ, ಅದು ೨೦೨೦ ರಲ್ಲಿ ಸಂಭವಿಸಿದೆ, ಮತ್ತು ದೃಶ್ಯಗಳು ಪ್ರಸ್ತುತ ಪರಿಸ್ಥಿತಿಯನ್ನು ಪ್ರತಿಬಿಂಬಿಸುವುದಿಲ್ಲ. ಹೀಗಾಗಿ ಇತ್ತೀಚಿನ ಘಟನೆ ಎಂದು ಹಂಚಿಕೊಂಡ ಹೇಳಿಕೆಗಳು ತಪ್ಪು.
ಹೇಳಿಕೆ:
ಎಕ್ಸ್ ನಲ್ಲಿನ ಬಳಕೆದಾರರು ಕರ್ನಾಟಕದ ಒಂದು ಸ್ಥಳದಲ್ಲಿ ಅಲ್ಪಸಂಖ್ಯಾತ ಸಮುದಾಯದ ಕೆಲವು ವ್ಯಕ್ತಿಗಳು ಮಹಿಳೆಯರನ್ನು ಟೀಕಿಸುವ ವೀಡಿಯೋ ಪೋಷ್ಟ್ ಅನ್ನು ಹಂಚಿಕೊಂಡಿದ್ದಾರೆ. ಬಳಕೆದಾರರು ಏಪ್ರಿಲ್ ೦೮, ೨೦೨೪ ರಂದು ವೀಡಿಯೋವನ್ನು ಪೋಷ್ಟ್ ಮಾಡಿದ್ದಾರೆ. ಮೂಲತಃ ಹಿಂದಿಯಲ್ಲಿರುವ ಇದರ ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ ಹೀಗೆ ಹೇಳುತ್ತದೆ, “ಕರ್ನಾಟಕದಲ್ಲಿ ಶಾಂತಿಪ್ರಿಯ ಯುವಕರ ದೊಡ್ಡ ಗುಂಪು ಯಾವುದೇ ಹಿಂದೂ ಒಡೆತನದ ಅಂಗಡಿಗಳಿಂದ ಬುರ್ಖಾ ಧರಿಸಿದ ಮಹಿಳೆಯರನ್ನು ಶಾಪಿಂಗ್ ಮಾಡದಂತೆ ತಡೆಯುವ ಮೂಲಕ ನೈತಿಕ ಪೊಲೀಸ್‌ಗಿರಿಯಲ್ಲಿ ತೊಡಗಿದೆ. ರಂಜಾನ್ ಹಬ್ಬದಂದು ಶಾಪಿಂಗ್ ಮಾಡಲು ಬಂದ ಮಹಿಳೆಯರಿಗೆ ಅವರು ಸಂಪೂರ್ಣವಾಗಿ ಬೆದರಿಕೆ ಹಾಕುತ್ತಿದ್ದಾರೆ!” ಪೋಷ್ಟ್ ೧೯.೭ ಸಾವಿರ ವೀಕ್ಷಣೆಗಳು, ೧.೧ ಸಾವಿರ ಇಷ್ಟಗಳು ಮತ್ತು ೯೩೫ ಮರುಪೋಷ್ಟ್ ಗಳನ್ನು ಗಳಿಸಿದೆ. ಭಾರತದಲ್ಲಿನ ಅಲ್ಪಸಂಖ್ಯಾತ ಗುಂಪುಗಳನ್ನು ಗುರಿಯಾಗಿಸಿಕೊಂಡು ಕೋಮುವಾದಿ ಪೋಷ್ಟ್ ಗಳನ್ನು ಹಂಚಿಕೊಳ್ಳುವ ಸ್ವಭಾವ ಈ ಬಳಕೆದಾರರು ಹೊಂದಿದ್ದಾರೆ ಎಂಬುದಾಗ ಕಂಡುಬಂದಿದೆ.
ಹಿಂದೂ ಒಡೆತನದ ಅಂಗಡಿಯಿಂದ ಖರೀದಿಗಳನ್ನು ಮಾಡಿದ್ದಕ್ಕೆ ಪುರುಷರ ಗುಂಪೊಂದು ಮಹಿಳೆಯರನ್ನು ಪ್ರಶ್ನಿಸಿದ ಇತ್ತೀಚಿನ ಘಟನೆಯನ್ನು ತೋರಿಸುತ್ತದೆ ಎಂದು ಎಕ್ಸ್ ನಲ್ಲಿ ಪೋಷ್ಟ್ ಮಾಡಲಾದ ವೀಡಿಯೋದ ಸ್ಕ್ರೀನ್‌ಶಾಟ್.
ಅದೇ ವೀಡಿಯೋವನ್ನು ಫೇಸ್‌ಬುಕ್‌ನಲ್ಲಿ ಪ್ರಸಾರ ಮಾಡಲಾಗಿದೆ. ಅಲ್ಲಿ ಬಳಕೆದಾರರು ಹಿಂದಿಯಲ್ಲಿರುವ ಶೀರ್ಷಿಕೆಯೊಂದಿಗೆ ವೀಡಿಯೋವನ್ನು ಪೋಷ್ಟ್ ಮಾಡಿದ್ದಾರೆ. ಅದನ್ನು ಕನ್ನಡಕ್ಕೆ ಅನುವಾದಿಸಿದಾಗ ಹೀಗೆ ಹೇಳುತ್ತದೆ, “ಕರ್ನಾಟಕದ ಶಾಂತಿ ಪ್ರಿಯ ಸಮುದಾಯದ ಯುವಕರು ಯಾವುದೇ ಹಿಂದೂ ಅಂಗಡಿಗಳಿಂದ ಬುರ್ಖಾ ಧರಿಸಿದ ಮಹಿಳೆಯರಿಗೆ ಶಾಪಿಂಗ್ ಮಾಡಲು ಅನುಮತಿಸುವುದಿಲ್ಲ. ರಂಜಾನ್ ಹಬ್ಬದಂದು ಶಾಪಿಂಗ್‌ಗೆ ತೆರಳಿದ್ದ ಮಹಿಳೆಯರಿಗೆ ಬೆದರಿಕೆ! ಇದು ತಪ್ಪಲ್ಲವೇ?? ಅವರಿಗೆ ಬಹಿಷ್ಕಾರ ಹಾಕಿದರೆ ???”
ಯೂಟ್ಯೂಬ್ ಚಾನೆಲ್ @HindutvaLive ಅದೇ ವೀಡಿಯೋವನ್ನು ಹಿಂದಿ ಶೀರ್ಷಿಕೆಯೊಂದಿಗೆ ಹಂಚಿಕೊಂಡಿರುವುದನ್ನು ನಾವು ಗಮನಿಸಿದ್ದೇವೆ. ಅದರ ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ, “#ಹಿಂದೂ: ಈದ್‌ನಲ್ಲಿ ಮುಸ್ಲಿಮರು ಮುಸ್ಲಿಂ ಮಹಿಳೆಯರನ್ನು ಹಿಂದೂ ಅಂಗಡಿಗಳಿಂದ ಶಾಪಿಂಗ್ ಮಾಡುವುದನ್ನು ನಿಲ್ಲಿಸಿದರು,” ಎಂದು ಹೇಳುತ್ತದೆ.
ಯೂಟ್ಯೂಬ್ ವೀಡಿಯೋದ ಸ್ಕ್ರೀನ್‌ಶಾಟ್.
ಪುರಾವೆ:
ನಾವು ವೈರಲ್ ವೀಡಿಯೋದ ಕೀಫ್ರೇಮ್‌ಗಳ ರಿವರ್ಸ್ ಇಮೇಜ್ ಸರ್ಚ್ ನಡೆಸಿದಾಗ, ಮೇ ೧೭, ೨೦೨೦ ರಂದು ಎಕ್ಸ್ ನಲ್ಲಿನ ಥ್ರೆಡ್‌ಗೆ ನಮ್ಮನ್ನು ಕರೆದೊಯ್ಯಿತು. ಪೋಷ್ಟ್ ನ ಶೀರ್ಷಿಕೆ ಹೀಗಿದೆ, “ಕರ್ನಾಟಕದ ದಾವಣಗೆರೆಯಲ್ಲಿ! ಯಾವುದೇ ಹಿಂದೂ ಅಥವಾ ಇತರ ಅಂಗಡಿಗಳಿಂದ ಶಾಪಿಂಗ್ ಮಾಡಲು ಮಹಿಳೆಯರನ್ನು ನಿಲ್ಲಿಸುವ ಮೂಲಕ ನೈತಿಕ ಪೊಲೀಸ್‌ಗಿರಿಯಲ್ಲಿ ತೊಡಗಿರುವ ಮುಸ್ಲಿಂ ಯುವಕರ ದೊಡ್ಡ ಗುಂಪುಗಳಿವೆ. ಹಬ್ಬಕ್ಕೆ ಶಾಪಿಂಗ್ ಮಾಡಲು ಬರುವ ಮಹಿಳೆಯರನ್ನು ಅವರು ಸಂಪೂರ್ಣವಾಗಿ ಬೆದರಿಸುತ್ತಿದ್ದಾರೆ! (ಕನ್ನಡಕ್ಕೆ ಅನುವಾದಿಸಲಾಗಿದೆ).”
ಮೇ ೧೭, ೨೦೨೦ ರ ಎಕ್ಸ್ ಪೋಷ್ಟ್ ನ ಸ್ಕ್ರೀನ್‌ಶಾಟ್.
ವೀಡಿಯೋದಲ್ಲಿ “ಹರಿಹರ” ಎಂದು ಹೇಳಿಕೊಂಡಿದ್ದು, ನಾವು ಈ ತುಣುಕಿನಲ್ಲಿರುವ ಜಾಗವನ್ನು ಜಿಯೋಲೊಕೇಟ್ ಮಾಡಿದ್ದೇವೆ ಮತ್ತು ಘಟನೆಯು ಟೆಂಪಲ್ ರೋಡ್, ಬಜಾರ್ ಮೊಹಲ್ಲಾ, ಗಾಂಧಿ ನಗರ, ಹರಿಹರ, ಕರ್ನಾಟಕದಿಂದ ಎಂದು ಕಂಡುಬಂದಿದೆ. ಮೀನಾ ಕಟ್ ಪೀಸ್ ಮತ್ತು ಲೇಸ್ ಸೆಂಟರ್‌ನ ಬಳಿ ಕೆಲವು ವ್ಯಕ್ತಿಗಳು ಮಹಿಳೆಯರನ್ನು ತಡೆದರು ಎಂದು ಇದು ಸ್ಪಷ್ಟಪಡಿಸಿದೆ.
ಇದರಿಂದ ಸುಳುಹುಗಳನ್ನು ತೆಗೆದುಕೊಂಡು, ನಾವು "ಹರಿಹರ," "ಮಹಿಳೆಯರು," ಮತ್ತು "ಅಂಗಡಿ" ಮುಂತಾದ ಕೀವರ್ಡ್‌ಗಳನ್ನು ಬಳಸಿಕೊಂಡು ಕೀವರ್ಡ್ ಸರ್ಚ್ ನಡೆಸಿದಾಗ, ಮೇ ೧೮, ೨೦೨೦ ರಂದು ಪ್ರಕಟವಾದ ಟೈಮ್ಸ್ ಆಫ್ ಇಂಡಿಯಾ ವರದಿಯನ್ನು ನಾವು ಕಂಡುಕೊಂಡಿದ್ದೇವೆ.
ಏಪ್ರಿಲ್ ೨೨, ೨೦೨೩ ರಂದು ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ಪ್ರಕಟಿಸಿದ ವರದಿಯ ಸ್ಕ್ರೀನ್‌ಶಾಟ್.
ಈ ವರದಿಯು ಮುಖ್ಯವಾಗಿ ದಾವಣಗೆರೆಯಲ್ಲಿ ಸಂಭವಿಸಿದ ಮತ್ತೊಂದು ಅಂತಹುದೇ ಘಟನೆಯನ್ನು ಕೇಂದ್ರೀಕರಿಸಿದೆಯಾದರೂ, ಹರಿಹರದ ಈ ನಿರ್ದಿಷ್ಟ ಘಟನೆಯನ್ನು ದಾವಣಗೆರೆ ಪೊಲೀಸರು ಉಲ್ಲೇಖಿಸಿ, ಹರಿಹರದ ಅಂತಹ ಸಮಾನವಾದ ಘಟನೆಯೂ ತಮ್ಮ ಗಮನಕ್ಕೆ ಬಂದಿದೆ ಎಂದು ಹೇಳಿದ್ದಾರೆ.
ಆದ್ದರಿಂದ, ದೃಶ್ಯಗಳು ಇತ್ತೀಚಿನವು ಎಂದು ಹೇಳುವ ಸಾಮಾಜಿಕ ಮಾಧ್ಯಮ ಪೋಷ್ಟ್ ಗಳು ತಪ್ಪು ಎಂದು ಸ್ಪಷ್ಟವಾಗಿದೆ.
ತೀರ್ಪು:
ವೀಡಿಯೋದ ವಿಶ್ಲೇಷಣೆಯು ವೀಡಿಯೋವು ೨೦೨೦ ರ ಘಟನೆಯದ್ದು ಎಂದು ತೋರಿಸುತ್ತದೆ. ಆದ್ದರಿಂದ, ಹಿಂದೂಗಳ ಮಾಲೀಕತ್ವದ ಅಂಗಡಿಯಲ್ಲಿ ಶಾಪಿಂಗ್ ಮಾಡಿದ ಅಲ್ಪಸಂಖ್ಯಾತ ಮಹಿಳೆಯರಿಗೆ ಕಿರುಕುಳ ನೀಡಲಾಯಿತು ಎಂದು ಆನ್‌ಲೈನ್‌ನಲ್ಲಿ ಪ್ರಸಾರವಾಗುತ್ತಿರುವ ಹೇಳಿಕೆ ತಪ್ಪು.