ಸುದ್ದಿಗಾರರೊಂದಿಗೆ ಮಾತನಾಡುವಾಗ ತೇಜಸ್ವಿ ಯಾದವ್ "ಕುಡಿದಿದ್ದರು" ಎಂದು ತಪ್ಪಾಗಿ ಈ ವೀಡಿಯೋ ಚಿತ್ರಿಸಲಾಗಿದೆ
ಸಾರಾಂಶ:
ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ನಾಯಕ ತೇಜಸ್ವಿ ಯಾದವ್ ಅವರು ಕುಡಿದು ಮಾತನಾಡುವಂತೆ ಕಾಣುವ ವೀಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗಿದೆ. ಆದರೆ ಈ ವೀಡಿಯೋ ಫೇಕ್ ಎಂಬುದು ಸಾಬೀತಾಗಿದೆ. ತೇಜಸ್ವಿ ಯಾದವ್ ಅವರು ಮದ್ಯದ ಅಮಲಿನಲ್ಲಿದ್ದಾರೆ ಎಂಬ ತಪ್ಪು ಅಭಿಪ್ರಾಯವನ್ನು ಚಿತ್ರಿಸುವುದಕ್ಕೆ ಮೂಲ ವೀಡಿಯೋವನ್ನು ನಿಧಾನಗೊಳಿಸಿ ಎಡಿಟ್ ಮಾಡಲಾಗಿದೆ.
ಹೇಳಿಕೆ:
ಮಾಧ್ಯಮದೊಂದಿಗಿನ ಸಂವಾದದ ಸಮಯದಲ್ಲಿ ತೇಜಸ್ವಿ ಯಾದವ್ ಕುಡಿದಿದ್ದರು ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ ಒಂದು ವೀಡಿಯೋ ಪೋಷ್ಟ್ ಅನ್ನು ಹಂಚಿಕೊಂಡಿದ್ದಾರೆ. ವೀಡಿಯೋ ೪೩ ಸೆಕೆಂಡ್‌ಗಳಷ್ಟು ಉದ್ದವಾಗಿದೆ ಮತ್ತು ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡುವಾಗ ಆರ್‌ಜೆಡಿ ನಾಯಕರು ಕುಡಿದಿದ್ದನ್ನು ಸೂಚಿಸುತ್ತದೆ. ಅಂತಹ ಒಂದು ಪೋಷ್ಟ್ ನ ಶೀರ್ಷಿಕೆ ಹೀಗಿದೆ - “ಬಿಹಾರದ ಮಾಜಿ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಕುಡಿದಿದ್ದಾರೆ, ಆದರೆ ಬಿಹಾರದಲ್ಲಿ ಮದ್ಯಪಾನವನ್ನು ನಿಷೇಧಿಸಲಾಗಿದೆ” (ಅನುವಾದಿಸಲಾಗಿದೆ).
ಜೂನ್ ೧೩, ೨೦೨೪ ರಂದು ತೇಜಸ್ವಿ ಯಾದವ್ ಅವರ ವೈರಲ್ ವೀಡಿಯೋವನ್ನು ಹಂಚಿಕೊಳ್ಳುವ ಎಕ್ಸ್ ಪೋಷ್ಟ್ ನ ಸ್ಕ್ರೀನ್‌ಶಾಟ್.
ಪುರಾವೆ:
ವೈರಲ್ ವೀಡಿಯೋದ ಮೇಲಿನ ಬಲಭಾಗದಲ್ಲಿರುವ ಲೋಗೋದಿಂದ ಸುಳಿವನ್ನು ತೆಗೆದುಕೊಂಡಾಗ, ರಿಪಬ್ಲಿಕ್ ಭಾರತ್ ತನ್ನ ಯೂಟ್ಯೂಬ್ ಚಾನೆಲ್‌ಗೆ ಜೂನ್ ೧೧, ೨೦೨೪ ರಂದು ಮೂಲ ವೀಡಿಯೋವನ್ನು ಅಪ್‌ಲೋಡ್ ಮಾಡಿದೆ ಎಂದು ನಾವು ಕಂಡುಕೊಂಡಿದ್ದೇವೆ. ಈ ಮೂಲ ವೀಡಿಯೋ ೩೦ ಸೆಕೆಂಡುಗಳಷ್ಟು ಉದ್ದವಾಗಿದೆ ಮತ್ತು ತೇಜಸ್ವಿ ಯಾದವ್ ಮದ್ಯದ ಅಮಲಿನಲ್ಲಿ ಇರಲಿಲ್ಲ ಎಂದು ತೋರಿಸುತ್ತದೆ.
ಮೂಲ ವೀಡಿಯೋವನ್ನು ೦.೫x ರಷ್ಟು ನಿಧಾನಗೊಳಿಸಿದಾಗ, ತೇಜಸ್ವಿ ಯಾದವ್ ಅವರ ಮಾತು ಅಸ್ಪಷ್ಟವಾಗಿ ಕಂಡುಬರುತ್ತದೆ ಮತ್ತು ವೀಡಿಯೋದ ಉದ್ದವು ೪೩ ಸೆಕೆಂಡುಗಳವರೆಗೆ ವಿಸ್ತರಿಸುತ್ತದೆ, ಇದು ಬದಲಾಯಿಸಲಾದ ವೈರಲ್ ವೀಡಿಯೋಗೆ ಹೊಂದಿಕೆಯಾಗುತ್ತದೆ.
ಜೂನ್ ೧೧, ೨೦೨೪ ರಂದು ರಿಪಬ್ಲಿಕ್ ಭಾರತ್ ಯೂಟ್ಯೂಬ್ ಚಾನೆಲ್‌ಗೆ ಅಪ್‌ಲೋಡ್ ಮಾಡಲಾದ ತೇಜಸ್ವಿ ಯಾದವ್ ಅವರ ಮೂಲ ವೀಡಿಯೋದ ಸ್ಕ್ರೀನ್‌ಶಾಟ್.
ಹೆಚ್ಚಿನ ಹುಡುಕಾಟವು ಜೂನ್ ೧೧, ೨೦೨೪ ರಂದು ಏನ್ಐ ಮತ್ತು ನ್ ಡಿಟಿವ್ ಯಿಂದ ಅಪ್‌ಲೋಡ್ ಮಾಡಿದ ಅದೇ ಸಂವಾದದ ಮತ್ತೊಂದು ವೀಡಿಯೋಗೆ ನಮ್ಮನ್ನು ಕರೆದೊಯ್ಯಿತು. ಇದರಲ್ಲಿ ತೇಜಸ್ವಿ ಯಾದವ್ ಮದ್ಯದ ಯಾವುದೇ ಪ್ರಭಾವವಿಲ್ಲದೆ ಮಾತನಾಡುವುದನ್ನು ಕಂಡುಬರುತ್ತದೆ. ವೈರಲ್ ವೀಡಿಯೋ ಮತ್ತು ಮೂಲ ವೀಡಿಯೋ ನಡುವಿನ ಹೋಲಿಕೆಯನ್ನು ತೋರಿಸುವ ಎಕ್ಸ್ ಪೋಷ್ಟ್ ಮತ್ತು ಯೂಟ್ಯೂಬ್ ವೀಡಿಯೋವನ್ನು ಸಹ ನಾವು ಕಂಡುಕೊಂಡಿದ್ದೇವೆ.
ಅಂತಹ ಒಂದು ಎಕ್ಸ್ ಪೋಷ್ಟ್ ನ ಶೀರ್ಷಿಕೆ ಹೀಗಿದೆ, “ಮೊದಲ ವೀಡಿಯೋದಲ್ಲಿ ತೇಜಸ್ವಿ ಯಾದವ್ ಅವರು ಮದ್ಯ ಸೇವಿಸಿದ್ದರೇ ಎಂದು ತೋರಿಸುತ್ತದೆ. ಆದರೆ ಇದು ಸಂಪೂರ್ಣವಾಗಿ ನಕಲಿ! ಈ ವೀಡಿಯೋವನ್ನು ಎಡಿಟ್ ಮಾಡಲಾಗಿದೆ. ಸುಳ್ಳು ಮತ್ತು ಸತ್ಯದ ಆಟವನ್ನು ಅರ್ಥಮಾಡಿಕೊಳ್ಳಿ!” (ಅನುವಾದಿಸಲಾಗಿದೆ).
ತೇಜಸ್ವಿ ಯಾದವ್ ಅವರ ನಕಲಿ ಮತ್ತು ಮೂಲ ವೀಡಿಯೋದ ಹೋಲಿಕೆಯನ್ನು ಹಂಚಿಕೊಳ್ಳುವ ಎಕ್ಸ್ ಪೋಷ್ಟ್ ನ ಸ್ಕ್ರೀನ್‌ಶಾಟ್.
ತೀರ್ಪು:
ಸುದ್ದಿಗಾರರೊಂದಿಗೆ ಮಾತನಾಡುವಾಗ ತೇಜಸ್ವಿ ಯಾದವ್ ಕುಡಿದಿದ್ದರು ಎಂದು ಹೇಳುವ ವೈರಲ್ ವೀಡಿಯೋವನ್ನು ಬದಲಾಯಿಸಲಾಗಿದೆ. ಅಸ್ಪಷ್ಟ ಭಾಷಣದ ತಪ್ಪು ಅಭಿಪ್ರಾಯವನ್ನು ಸೃಷ್ಟಿಸಲು ಮೂಲ ವೀಡಿಯೋವನ್ನು ಉದ್ದೇಶಪೂರ್ವಕವಾಗಿ ನಿಧಾನಗೊಳಿಸಲಾಗಿದೆ. ವೈರಲ್ ವೀಡಿಯೋವನ್ನು ಬಹು ಸುದ್ದಿ ವರದಿಗಳು ಪ್ರಕಟಿಸಿದ ಮೂಲ ವೀಡಿಯೋದೊಂದಿಗೆ ಹೋಲಿಸುವಾಗ ಅದು ನಕಲಿ ಎಂದು ಸಾಬೀತುಪಡಿಸುತ್ತದೆ.