ನಟ ದುನಿಯಾ ವಿಜಯ್ ಅವರು ನಟ ದರ್ಶನ್ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಎಡಿಟ್ ಮಾಡಿದ ವೀಡಿಯೋವನ್ನು ಹಂಚಿಕೊಂಡಿದ್ದಾರೆ

Update: 2024-06-24 13:20 GMT

ಸಾರಾಂಶ:

ಕನ್ನಡ ನಟ ದುನಿಯಾ ವಿಜಯ್ ಕೊಲೆ ಆರೋಪಿ ನಟ ದರ್ಶನ್ ತೂಗುದೀಪ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಿರುವುದನ್ನು ತೋರಿಸುವ ವೀಡಿಯೋವನ್ನು ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಂಡಿದ್ದಾರೆ. ಆದರೆ ಈ ವೀಡಿಯೋವು ೨೦೧೯ ರದ್ದು ಮತ್ತು ವೈರಲ್ ವೀಡಿಯೋದ ಆಡಿಯೋವನ್ನು ದರ್ಶನ್ ಅವರ ಹೆಸರನ್ನು ಸೇರಿಸಲು ಎಡಿಟ್ ಮಾಡಲಾಗಿದೆ, ಆದರಿಂದ ಈ ಹೇಳಿಕೆ ತಪ್ಪು.

ಹೇಳಿಕೆ:

ಜೂನ್ ೨೨, ೨೦೨೪ ರಂದು ಬೆಂಗಳೂರು ನ್ಯಾಯಾಲಯದ ಆದೇಶದ ಪ್ರಕಾರ, ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್ ತೂಗುದೀಪ ಮತ್ತು ಇತರ ಮೂವರನ್ನು ಜುಲೈ ೪, ೨೦೨೪ ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ನಟ ದರ್ಶನ್ ತೂಗುದೀಪ ಕುರಿತು ನಟ ದುನಿಯಾ ವಿಜಯ್ ಅವರ ಇತ್ತೀಚಿನ ಕಾಮೆಂಟ್‌ಗಳನ್ನು ತೋರಿಸುವ ಐವತ್ತೊಂಬತ್ತು ಸೆಕೆಂಡುಗಳ ಕ್ಲಿಪ್ ಅನ್ನು ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಂಡಿದ್ದಾರೆ.

ಎಕ್ಸ್‌ (ಹಿಂದೆ ಟ್ವಿಟ್ಟರ್) ನಲ್ಲಿ ಬಳಕೆದಾರರು ಜೂನ್ ೧೩, ೨೦೨೪ ರಂದು “ರೇಣುಕಾಸ್ವಾಮಿ ಅವರಿಗೆ ನ್ಯಾಯ #BoycottCriminalDarshan #HandOverMurderCaseToCBI” ಎಂಬ ಶೀರ್ಷಿಕೆಯೊಂದಿಗೆ ಈ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಆ ವೀಡಿಯೋದ ಪಠ್ಯದಲ್ಲಿ “ದರ್ಶನ್ ಹಾಗೂ ಅವರ ಕಚಾಡ ಫ್ಯಾನ್ಸ್ ಗಳಿಗೆ ಹಿಗ್ಗಮುಗ್ಗ ಜಾಡಿಸಿದ ದುನಿಯಾ ವಿಜಯ್” ಎಂಬ ವಾಕ್ಯಗಳನ್ನು ನೋಡಬಹುದು.

ವೈರಲ್ ಆಗಿರುವ ವೀಡಿಯೋದಲ್ಲಿ ದುನಿಯಾ ವಿಜಯ್ ವಿರುದ್ಧದ ವೈಯಕ್ತಿಕ ಟೀಕೆಗಳ ಬಗ್ಗೆ ವರದಿಗಾರರು ಕೇಳಿದ್ದರು, ಅದಕ್ಕೆ ಪ್ರತಿಕ್ರಿಯಿಸಿದ ಅವರು, "ನಾನು ಶೂಟಿಂಗ್‌ನಲ್ಲಿ ನಿರತನಾಗಿದ್ದರಿಂದ ನನಗೆ ತಿಳಿದಿರಲಿಲ್ಲ. ಯಾರು ದರ್ಶನ್? ಅವರಿಗೆ ಇಬ್ಬರು ಹೆಂಡತಿಯರು ಮತ್ತು ನಾಲ್ಕು ಮಕ್ಕಳಿದ್ದಾರೆ. ಅವರಿಗೆ ಪ್ರಜಿಯನೆಇಲ್ಲ.”

ಜೂನ್ ೧೩, ೨೦೨೪ ರ ಎಕ್ಸ್‌ ಪೋಷ್ಟ್ ನ ಸ್ಕ್ರೀನ್‌ಶಾಟ್.


ವೀಡಿಯೋವನ್ನು ಹಂಚಿಕೊಳ್ಳಲು #BoycottCriminalDarshan and #HandOverMurderCaseToCBI ನಂತಹ ಹ್ಯಾಶ್‌ಟ್ಯಾಗ್‌ಗಳನ್ನು ಬಳಸುವುದನ್ನು ನಾವು ಗಮನಿಸಿದ್ದೇವೆ, ಈ ಕಾಮೆಂಟ್‌ಗಳು ದರ್ಶನ್ ಬಂಧನದ ನಂತರ ಬಂದಿವೆ ಎಂದು ಸೂಚಿಸುತ್ತದೆ.

ಪುರಾವೆ:

ನಾವು ರಿವರ್ಸ್ ಇಮೇಜ್ ಸರ್ಚ್ ನಡೆಸಿದ್ದೇವೆ ಮತ್ತು ಇದೇ ವೀಡಿಯೋ ಏಪ್ರಿಲ್ ೨೦೨೪ ರಲ್ಲಿ ವೈರಲ್ ಆಗಿರುವುದನ್ನು ಕಂಡುಕೊಂಡಿದ್ದೇವೆ. ಎಕ್ಸ್‌ ಬಳಕೆದಾರರು ಏಪ್ರಿಲ್ ೪, ೨೦೨೪ ರಂದು ಈ ವೀಡಿಯೋವನ್ನು "#DBossDuniyaVijay ದರ್ಶನ್ ಅವರ ಕೊಳಕು ಮನಸ್ಸಿನ ಅಭಿಮಾನಿಗಳ ವಿರುದ್ಧ ಕಿಡಿಕಾರಿದರು #DuniyaVijay #Darshan #SlumFans #DrugPeddlerDarshan" ಎಂಬ ಶೀರ್ಷಿಕೆಹೊಂದಿಗೆ ಹಂಚಿಕೊಂಡಿದ್ದಾರೆ.

ಜೂನ್ ೯, ೨೦೨೪ ರಂದು ಬೆಂಗಳೂರಿನ ಸುಮನಹಳ್ಳಿಯ ಅಪಾರ್ಟ್‌ಮೆಂಟ್‌ನ ಪಕ್ಕದ ಮಳೆನೀರಿನ ಚರಂಡಿಯ ಬಳಿ ರೇಣುಕಾಸ್ವಾಮಿ ಅವರ ಶವವನ್ನು ಪೊಲೀಸರು ಪತ್ತೆ ಮಾಡಿದರು. ಈ ವೀಡಿಯೋ ರೇಣುಕಾಸ್ವಾಮಿ ಅವರ ಹತ್ಯೆಯ ಮುಂಚಿನದ್ದು ಎಂದು ಇದು ಸ್ಪಷ್ಟಪಡಿಸುತ್ತದೆ.

ಏಪ್ರಿಲ್ ೪, ೨೦೨೪ ರ ಎಕ್ಸ್‌ ಪೋಷ್ಟ್ ನ ಸ್ಕ್ರೀನ್‌ಶಾಟ್.


ವೈರಲ್ ವೀಡಿಯೋದ ಕೀಫ್ರೇಮ್‌ಗಳ ಹೆಚ್ಚಿನ ಹುಡುಕಾಟವು "ದರ್ಶನ್ ಹೆಂಡ್ತಿ ನನ್ನ ಹೆಂಡ್ತಿ ಮಾತ್ರ ನಿನ್ ಕಣ್ಣಿಗೆ ಕಾಣೋದ.?" ಎಂಬ ಶೀರ್ಷಿಕೆಯ ಆಗಸ್ಟ್ ೨೩, ೨೦೧೯ ರ ಯೂಟ್ಯೂಬ್‌ ವೀಡಿಯೋಗೆ ನಮ್ಮನು ಕರೆದುಕೊಂಡುಹೋಯಿತು.

ಆಗಸ್ಟ್ ೨೩, ೨೦೧೯ ರ ಯೂಟ್ಯೂಬ್ ವೀಡಿಯೋದ ಸ್ಕ್ರೀನ್‌ಶಾಟ್.


ವೀಡಿಯೋದ ೨:೨೫ ಟೈಮ್‌ಸ್ಟ್ಯಾಂಪ್‌ನಲ್ಲಿ, ಬರಹಗಾರ ಮತ್ತು ಪತ್ರಕರ್ತ ರವಿ ಬೆಳಗೆರೆ ಅವರ ವಿರುದ್ಧ ವೈಯಕ್ತಿಕವಾಗಿ ಪ್ರತಿಕ್ರಿಯಿಸಿರುವ ಬಗ್ಗೆ ಕೇಳಿದಾಗ, ದುನಿಯಾ ವಿಜಯ್ ಹೀಗೆ ಹೇಳಿದರು: “ಯಾರು? ರವಿ ಬೆಳಗೆರೆ? ಅವನಿಗೆ ಇಬ್ಬರು ಹೆಂಡತಿಯರು ಮತ್ತು ನಾಲ್ಕು ಮಕ್ಕಳಿದ್ದಾರೆ. ಅವನು ಪ್ರಜ್ನ್ಯೆಧಾಳಿಯೆಲ್ಲ; ಒಮ್ಮೆ ಪುಲ್ವಾಮಾ ಎಂದು ಹೇಳುತ್ತಾರೆ, ನಂತರ ಅವನು ಯಾರೊಬ್ಬರ ಹೆಂಡತಿಯ ಬಗ್ಗೆ ಮಾತನಾಡುತ್ತಾನೆ; ಅವನು ತನ್ನ ಪ್ರಜ್ನ್ಯೆಧಾಳಿಯೆಲ್ಲ. ಅವನಿಗೆ ಏನಾಗಿದೆ? ಅವನಿಗೆ ಏನಾದರೂ ಸಮಸ್ಯೆ ಇದೆಯೇ? ದಯವಿಟ್ಟು ಅವನನ್ನು ಕೇಳಿ. ಅವನ ವಯಸ್ಸಿಗೆ ಸ್ವಲ್ಪ ಘನತೆ ಮತ್ತು ಗೌರವ ಇರಬೇಕಲ್ಲವೇ? ತಿಂಗಳಿಗೆ ೨೦ ದಿನ ಮದ್ಯ ಸೇವಿಸಿ ಮಾನಸ ಆಸ್ಪತ್ರೆಯಲ್ಲಿ ಅನಾರೋಗ್ಯಕ್ಕೆ ತುತ್ತಾಗುತ್ತಾರೆ. ನಂತರ ಪ್ರಜ್ಞೆ ಬಂದಾಗ ಇಲ್ಲಿಗೆ ಬಂದು ಏನೇನೋ ಬರೆಯುತ್ತಾರೆ. ಬುದ್ದಿ ಬಂದಾಗಲೆಲ್ಲ ದರ್ಶನ್ ಮತ್ತು ದುನಿಯಾ ವಿಜಯ್ ಪತ್ನಿ ಬಗ್ಗೆ ಮಾತನಾಡುತ್ತಾರೆ. ಅವನು ತನ್ನ ಹೆಂಡತಿಯನ್ನು ನೋಡುವುದಿಲ್ಲವೇ? ಇದು ಅವರಿಗೆ ನನ್ನ ಕೊನೆಯ ಎಚ್ಚರಿಕೆ. ಮೊದಲನೆಯದಾಗಿ, ಇತರರ ಬಗ್ಗೆ ಮಾತನಾಡುವ ಮೊದಲು ಅವನು ಸರಿಯಾದ ಜೀವನವನ್ನು ಹೊಂದಿರಬೇಕು.”

ಮತ್ತೊಂದು ಯೂಟ್ಯೂಬ್ ಚಾನೆಲ್ ಆಗಸ್ಟ್ ೨೩, ೨೦೧೯ ರಂದು ಅದೇ ವೀಡಿಯೋವನ್ನು ಹಂಚಿಕೊಂಡಿದೆ. ಆಗಸ್ಟ್ ೨೩, ೨೦೧೯ ರ ಫಿಲ್ಮಿಬೀಟ್ ಕನ್ನಡ ವರದಿಯ ಪ್ರಕಾರ, ರವಿ ಬೆಳಗೆರೆ ದುನಿಯಾ ವಿಜಯ್ ಅವರ ಕೌಟುಂಬಿಕ ಕಲಹವನ್ನು ಟೀಕಿಸಿದ್ದಾರೆ, ಇದು ನಟನ ಆಕ್ರೋಶಕ್ಕೆ ಕಾರಣವಾಯಿತು.

ರವಿ ಬೆಳಗೆರೆ ಬಗ್ಗೆ ದುನಿಯಾ ವಿಜಯ್ ಪ್ರತಿಕ್ರಿಯಿಸಿರುವ ಹಳೆಯ ವೀಡಿಯೋದ ಆಡಿಯೋವನ್ನು ನಟ ದರ್ಶನ್ ತೂಗುದೀಪ ಅವರ ಬಗ್ಗೆ ಕಾಮೆಂಟ್ ಮಾಡಿರುವುದಾಗಿ ತೋರಿಸಲು ಎಡಿಟ್ ಮಾಡಲಾಗಿದೆ ಎಂಬುದು ಇದರಿಂದ ದೃಢಪಟ್ಟಿದೆ.

ತೀರ್ಪು:

ನಟ ದುನಿಯಾ ವಿಜಯ್ ಕೊಲೆ ಆರೋಪಿ ನಟ ದರ್ಶನ್ ತೂಗುದೀಪ ಅವರ ಬಗ್ಗೆ ಅವಹೇಳನಕಾರಿ ಕಾಮೆಂಟ್‌ಗಳನ್ನು ಮಾಡಿದ್ದಾರೆ ಎಂದು ತೋರಿಸುವ ವೈರಲ್ ವೀಡಿಯೋವನ್ನು ಎಡಿಟ್ ಮಾಡಲಾಗಿದೆ ಮತ್ತು ದರ್ಶನ ಅವರನ್ನು ಬಂಧಿಸುವ ಎರಡು ತಿಂಗಳ ಮೊದಲು ಹಂಚಿಕೊಳ್ಳಲಾಗಿದೆ ಎಂದು ಇದರ ವಿಶ್ಲೇಷಣೆ ಬಹಿರಂಗಪಡಿಸುತ್ತದೆ. ಆದ್ದರಿಂದ ಈ ಆನ್‌ಲೈನ್‌ನಲ್ಲಿ ಹಂಚಿಕೊಂಡುತಿರುವ ಹೇಳಿಕೆಗಳು ತಪ್ಪು.


Claim :  Edited video of Kannada actor Duniya Vijay making derogatory remarks about actor Darshan shared online
Claimed By :  X user
Fact Check :  False
Tags:    

Similar News