ಇಲ್ಲ, ಪ್ರಧಾನಿ ಮೋದಿಯವರನ್ನು ಬೆಂಬಲಿಸಿದ್ದಕ್ಕಾಗಿ ಟಿಡಿಪಿ ಬೆಂಬಲಿಗರು ಚಂದ್ರಬಾಬು ನಾಯ್ಡು ಅವರ ಫೋಟೋವನ್ನು ಸುಟ್ಟು ಹಾಕಲಿಲ್ಲ

Update: 2024-06-07 10:30 GMT

ಸಾರಾಂಶ:

ಪ್ರಧಾನಿ ನರೇಂದ್ರ ಮೋದಿ ಅವರನ್ನು ಬೆಂಬಲಿಸಿದ್ದಕ್ಕಾಗಿ ತೆಲುಗು ದೇಶಂ ಪಕ್ಷದ (ಟಿಡಿಪಿ) ಬೆಂಬಲಿಗರು ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರ ಫೋಟೋವನ್ನು ಸುಟ್ಟು ಹಾಕಿದ ಘಟನೆಯನ್ನು ತೋರಿಸುವ ವೀಡಿಯೋವೊಂದನ್ನು ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಂಡಿದ್ದಾರೆ. ಆದರೆ, ಆಂಧ್ರಪ್ರದೇಶದ ಗುಂತಕಲ್‌ನಲ್ಲಿ ಪಕ್ಷದ ಟಿಕೆಟ್ ಹಂಚಿಕೆಯ ಕುರಿತು ಟಿಡಿಪಿ ಕಾರ್ಯಕರ್ತರ ಚುನಾವಣಾ ಪೂರ್ವ ಆಕ್ರೋಶವನ್ನು ವೀಡಿಯೋ ತೋರಿಸುತ್ತದೆ. ಆದ್ದರಿಂದ ಮೋದಿಯವರನ್ನು ಬೆಂಬಲಿಸಿದಕ್ಕೆ ಹೀಗೆ ಮಾಡಲಾಗಿದೆ ಎಂಬ ಆರೋಪಗಳು ತಪ್ಪು.


ಹೇಳಿಕೆ:

ಜನರು ಚಂದ್ರಬಾಬು ನಾಯ್ಡು ಅವರ ಫೋಟೋಗೆ ಚಪ್ಪಲಿಯಿಂದ ಹೊಡೆದು ಸುಟ್ಟು ಹಾಕುತ್ತಿರುವ ವೀಡಿಯೋವನ್ನು ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಂಡಿದ್ದಾರೆ. ೨೦೨೪ ರ ಲೋಕಸಭಾ ಚುನಾವಣೆಯ ನಂತರ ಪ್ರಧಾನಿ ಮೋದಿಯವರನ್ನು ಬೆಂಬಲಿಸಿದ ಟಿಡಿಪಿ ಮುಖ್ಯಸ್ಥರ ಬಗ್ಗೆ ಆಂಧ್ರಪ್ರದೇಶದಲ್ಲಿನ ಆಕ್ರೋಶವನ್ನು ವೀಡಿಯೋ ತೋರಿಸುತ್ತದೆ. ಜೂನ್ ೬, ೨೦೨೪ ರಂದು ಎಕ್ಸ್ (ಹಿಂದಿನ ಟ್ವಿಟರ್) ನಲ್ಲಿ ಬಳಕೆದಾರರೊಬ್ಬರು ಹೀಗೆ ಹೇಳಿಕೊಂಡು ವೀಡಿಯೋವನ್ನು ಹಂಚಿಕೊಂಡಿದ್ದಾರೆ, "ಮೋದಿಯನ್ನು ಬೆಂಬಲಿಸಿದ್ದಕ್ಕಾಗಿ ಕೋಪಗೊಂಡ ಆಂಧ್ರಪ್ರದೇಶದ ಜನರು ಚಂದ್ರಬಾಬು ನಾಯ್ಡು ಅವರ ಫೋಟೋಗಳನ್ನು ಸುಡುತ್ತಿದ್ದಾರೆ. #Congress #NitishKumar #indiallinace #Election2024 #ChandraBabuNaidu (ಅನುವಾದಿಸಲಾಗಿದೆ)." ಈ ಪೋಷ್ಟ ೨.೮ ಸಾವಿರ ವೀಕ್ಷಣೆಗಳನ್ನು ಪಡೆದುಕೊಂಡಿದೆ.

ಜೂನ್ ೬, ೨೦೨೪ ರಂದು ಹಂಚಿಕೊಂಡ ಎಕ್ಸ್ ಪೋಷ್ಟ್ ನ ಸ್ಕ್ರೀನ್‌ಶಾಟ್‌.


ಮತ್ತೊಬ್ಬ ಪರಿಶೀಲಿಸಿದ ಎಕ್ಸ್ ಬಳಕೆದಾರರು ಜೂನ್ ೬, ೨೦೨೪ ರಂದು ಇದೇ ರೀತಿಯ ಶೀರ್ಷಿಕೆಗಳೊಂದಿಗೆ ಈ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಯೂಟ್ಯೂಬ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಮ್ ನಲ್ಲಿ ಸಹ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. #Congress, #NitishKumar, # IndiaAlliance, #Election2024, ಮತ್ತು # ChandraBabuNaidu ಮೊದಲಾದ ಹ್ಯಾಶ್‌ಟ್ಯಾಗ್‌ಗಳನ್ನು ಈ ವಿಡಿಯೋ ಜೊತೆ ಬಳಸುತ್ತಿರುವುದನ್ನು ನಾವು ಗುರುತಿಸಿದ್ದೇವೆ.


ಪುರಾವೆ:

ವೈರಲ್ ವೀಡಿಯೋದ ಕೀಫ್ರೇಮ್‌ಗಳನ್ನು ಬಳಸಿ ನಾವು ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದ್ದೇವೆ. ಇದು ಮಾರ್ಚ್ ೨೯, ೨೦೨೪ ರ ಎಕ್ಸ್ ಪೋಷ್ಟ್ ಗೆ ನಮ್ಮನ್ನು ಕರೆದೊಯ್ಯಿತು. ಈ ಪೋಷ್ಟ್ ವೈರಲ್ ವೀಡಿಯೋವನ್ನು ಹೊಂದಿದ್ದು, ಅದರ ಶೀರ್ಷಿಕೆ ಹೀಗಿದೆ: "ಗುಂತಕಲ್ ಟಿಡಿಪಿಯಲ್ಲಿ ಭಿನ್ನಾಭಿಪ್ರಾಯ! #EndOfTDP (ಅನುವಾದಿಸಲಾಗಿದೆ)."

ಮಾರ್ಚ್ ೨೯, ೨೦೨೪ ರ ಎಕ್ಸ್ ಪೋಷ್ಟ್ ನ ಸ್ಕ್ರೀನ್‌ಶಾಟ್.


ಆಂಧ್ರಪ್ರದೇಶದ ಗುಂತಕಲ್‌ನಲ್ಲಿ ಈ ಘಟನೆ ನಡೆದಿದೆ ಎಂದು ಪೋಷ್ಟ್ ನಲ್ಲಿ ಹೇಳಲಾಗಿದೆ. ನಾವು ನಂತರ "ಗುಂತಕಲ್," "ಚಂದ್ರಬಾಬು ನಾಯ್ಡು," "ಫೋಟೋ," ಮತ್ತು "ಸುಡಲಾಯಿತು" ಮೊದಲಾದ ಕೀವರ್ಡ್ ಗಳನ್ನು ಬಳಸಿಕೊಂಡು ಹುಡುಕಾಟವನ್ನು ನಡೆಸಿದ್ದೇವೆ. ಅದು ನಮ್ಮನ್ನು ಮಾರ್ಚ್ ೨೯, ೨೦೨೪ ರಂದು ಯೂಟ್ಯೂಬ್‌ನಲ್ಲಿ ಹಂಚಿಕೊಂಡ ಟೈಮ್ಸ್ ಆಫ್ ಇಂಡಿಯಾದ ತೆಲುಗು ಆವೃತ್ತಿಯಾದ ಸಮಯಂ ತೆಲುಗುವಿನ ವೀಡಿಯೋ ವರದಿಗೆ ಕರೆದೊಯ್ಯಿತು. ಅದರ ಶೀರ್ಷಿಕೆಯು ಹೀಗಿದೆ, "ಗುಂತಕಲ್ ಟಿಡಿಪಿ ನಾಯಕರು ಚಂದ್ರಬಾಬು ಫೋಟೋ ಸುಟ್ಟು ಹಾಕಿದರು (ಅನುವಾದಿಸಲಾಗಿದೆ)." ಈ ವರದಿಯು ವೈರಲ್ ವೀಡಿಯೋವನ್ನು ಹೊಂದಿದೆ.

ಮಾರ್ಚ್ ೨೯, ೨೦೨೪ ರ ಸಮಯ ತೆಲುಗುವಿನ ಯೂಟ್ಯೂಬ್ ವೀಡಿಯೋದ ಸ್ಕ್ರೀನ್‌ಶಾಟ್.


ವರದಿಯ ಪ್ರಕಾರ, ಮಾರ್ಚ್ ೨೯, ೨೦೨೪ ರಂದು ಗುಂತಕಲ್‌ನಲ್ಲಿ ಈ ಘಟನೆ ಸಂಭವಿಸಿದೆ. ಟಿಡಿಪಿ ಕಾರ್ಯಕರ್ತರು ಟಿಡಿಪಿ ಕಚೇರಿಯನ್ನು ಧ್ವಂಸಗೊಳಿಸಿದರು ಮತ್ತು ಪ್ರಚಾರ ಸಾಮಗ್ರಿಗಳಿಗೆ ಬೆಂಕಿ ಹಚ್ಚಿದರು. ಗುಂತಕಲ್‌ನಲ್ಲಿ ಗುಮ್ಮನೂರು ಜಯರಾಮ್‌ ಅವರು ಪಕ್ಷದ ಟಿಕೆಟ್‌ ಹಂಚಿಕೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಚಂದ್ರಬಾಬು ನಾಯ್ಡು ಮತ್ತು ಪ್ರಧಾನ ಕಾರ್ಯದರ್ಶಿ ನಾರಾ ಲೋಕೇಶ್ ಅವರ ಫೋಟೋಗಳನ್ನು ಸುಟ್ಟುಹಾಕಿದರು. ಪಕ್ಷದ ನಾಯಕತ್ವವು ಸಮರ್ಪಿತ ನಾಯಕರನ್ನು ಗುರುತಿಸುತ್ತಿಲ್ಲ ಎಂದು ಟಿಡಿಪಿ ಕಾರ್ಯಕರ್ತರು ಆರೋಪಿಸಿದ್ದಾರೆ ಎಂದು ಕೂಡ ವರದಿಯು ಹೇಳಿಕೊಂಡಿದೆ. ಇತರ ಸುದ್ದಿವಾಹಿನಿಗಳಾದ ದಿ ಹಿಂದೂ ಮತ್ತು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ಕೂಡ ಘಟನೆಯನ್ನು ವರದಿ ಮಾಡಿವೆ.


ತೀರ್ಪು:

ವೈರಲ್ ವೀಡಿಯೋದ ವಿಶ್ಲೇಷಣೆಯು ಮಾರ್ಚ್ ೨೯, ೨೦೨೪ ರಂದು ಗುಂತಕಲ್‌ನಲ್ಲಿ ಟಿಡಿಪಿಯೊಳಗೆ ಪಕ್ಷದ ಟಿಕೆಟ್ ಹಂಚಿಕೆಗೆ ಸಂಬಂಧಿಸಿದಂತೆ ಚುನಾವಣಾ ಪೂರ್ವ ಘರ್ಷಣೆಯ ವೀಡಿಯೋ ಎಂದು ಬಹಿರಂಗಪಡಿಸುತ್ತದೆ. ಆದ್ದರಿಂದ, ೨೦೨೪ ರ ಲೋಕಸಭಾ ಚುನಾವಣೆಯ ನಂತರದ ಘಟನೆಯನ್ನು ವೀಡಿಯೋ ತೋರಿಸುತ್ತದೆ ಎಂದು ಆನ್‌ಲೈನ್ ನಲ್ಲಿ ಕಂಡುಬಂದಿರುವ ಆರೋಪಗಳು ತಪ್ಪು.

Claim :  No,TDP supporters did not burn Chandrababu Naidu's photo for supporting PM Modi
Claimed By :  X user
Fact Check :  False
Tags:    

Similar News