ವಾರಣಾಸಿ ಕ್ಷೇತ್ರದ ೨೦೨೪ ರ ಲೋಕಸಭಾ ಚುನಾವಣೆಯ ಸಮಯದಲ್ಲಿ ಮತಗಳ ಹೊಂದಾಣಿಕೆಯಿಲ್ಲ ಎಂದು ಒಂದು ಹಳೆಯ ವೀಡಿಯೋಗೆ ತಪ್ಪಾಗಿ ಸಂಬಂಧಿಸಲಾಗಿದೆ

Update: 2024-06-11 11:10 GMT

ಸಾರಾಂಶ:

ಆನ್‌ಲೈನ್‌ನಲ್ಲಿ ಹಂಚಿಕೊಳ್ಳಲಾದ ವೀಡಿಯೋ ವಾರಣಾಸಿ ಕ್ಷೇತ್ರದಲ್ಲಿ ಮತ ಎಣಿಕೆಯ ವ್ಯತ್ಯಾಸವಾಗಿದೆ ಎಂದು ಹೇಳುತ್ತದೆ, ಎಣಿಕೆಯಾದ ಒಟ್ಟು ಮತಗಳು ೨೦೨೪ ರ ಲೋಕಸಭಾ ಚುನಾವಣೆಯಲ್ಲಿ ಒಟ್ಟು ಮತದಾರರ ಸಂಖ್ಯೆಯನ್ನು ಮೀರಿದೆ ಎಂದು ಸೂಚಿಸುತ್ತದೆ. ಭಾರತೀಯ ಚುನಾವಣಾ ಆಯೋಗವು (ಇಸಿಐ) ಈ ವೀಡಿಯೋ ಹಳೆಯದು ಮತ್ತು ಈ ಹೇಳಿಕೆಗಳು ತಪ್ಪುದಾರಿಗೆಳೆಯುವಂತಿವೆ ಎಂದು ಸ್ಪಷ್ಟಪಡಿಸಿದೆ.


ಹೇಳಿಕೆ:

ವಾರಣಾಸಿಯ ೨೦೨೪ ರ ಲೋಕಸಭಾ ಚುನಾವಣೆಯ ಸಮಯದಲ್ಲಿ ಎಣಿಕೆಯಾದ ಒಟ್ಟು ಮತಗಳ ಸಂಖ್ಯೆ (೧೨,೮೭,೦೦೦) ಒಟ್ಟು ನೋಂದಾಯಿತ ಮತದಾರರ ಸಂಖ್ಯೆಯನ್ನು (೧೧,೦೦,೦೦೦) ಮೀರಿದೆ ಎಂದು ಆರೋಪಿಸಿ ಸಾಮಾಜಿಕ ಮಾಧ್ಯಮ ಬಳಕೆದಾರರು ಎಕ್ಸ್‌ (ಹಿಂದೆ ಟ್ವಿಟ್ಟರ್) ಮತ್ತು ಫೇಸ್‌ಬುಕ್‌ ನಲ್ಲಿ ಒಂದು ವೀಡಿಯೋ ಪೋಷ್ಟ್ ಅನ್ನು ಹಂಚಿಕೊಂಡಿದ್ದಾರೆ. ಇದು ಗಮನಾರ್ಹ ವ್ಯತ್ಯಾಸ ಮತ್ತು ಸಂಭಾವ್ಯ ಚುನಾವಣಾ ವಂಚನೆಯನ್ನು ಸೂಚಿಸುತ್ತದೆ.

ಅಂತಹ ಒಂದು ಪೋಷ್ಟ್ ನ ಹಿಂದಿ ಶೀರ್ಷಿಕೆಯು ಹೀಗಿದೆ - “೧೧ ಲಕ್ಷ ಜನರು ವಾರಣಾಸಿಯಲ್ಲಿ ಮತ ಚಲಾಯಿಸಿದ್ದಾರೆ, ಆದರೆ ಇವಿಎಂನಲ್ಲಿ ೧೨,೮೭೦೦೦ ಮತಗಳನ್ನು ಎಣಿಸಲಾಗಿದೆ. ಇದರಂತೆ ಈ ೨೪೦ ಸ್ಥಾನಗಳನ್ನು ಸಾಧಿಸಲಾಗಿದೆ. ಇಲ್ಲದಿದ್ದರೆ ೧೦೦ ಸೀಟುಗಳಿಗೆ ಸೀಮಿತವಾಗುವುದು ಖಚಿತವಾಗಿತ್ತು. ಯಾವತ್ತೂ ವಿಚಾರಣೆ ನಡೆಯಲಿಲ್ಲವೇ?"೨೦೨೪ ರ ಲೋಕಸಭಾ ಚುನಾವಣೆಯ ಸಮಯದಲ್ಲಿ ವಾರಣಾಸಿ ಕ್ಷೇತ್ರದ ಮತದಾರರ ಸಂಖ್ಯೆಗೆ ಹೋಲಿಸಿದರೆ ಸುಮಾರು ೧.೮೭ ಲಕ್ಷ ಹೆಚ್ಚುವರಿ ಮತಗಳ ಗಮನಾರ್ಹ ವ್ಯತ್ಯಾಸವಿದೆ ಎಂದು ವೈರಲ್ ವೀಡಿಯೋ ಹೇಳುತ್ತದೆ.

ವಾರಣಾಸಿ ಕ್ಷೇತ್ರದ ೨೦೨೪ ರ ಲೋಕಸಭಾ ಚುನಾವಣೆಯಲ್ಲಿ ಮತಗಳ ಹೊಂದಾಣಿಕೆಯಿಲ್ಲ ಎಂದು ಹೇಳಿಕೊಳ್ಳುವ ವೈರಲ್ ವೀಡಿಯೋವನ್ನು ಹಂಚಿಕೊಳ್ಳುವ ಎಕ್ಸ್‌ ಪೋಷ್ಟ್ ನ ಸ್ಕ್ರೀನ್‌ಶಾಟ್‌ಗಳು.


ಪುರಾವೆ:

ವೀಡಿಯೋದ ಕೀಫ್ರೇಮ್ ಗಳ ರಿವರ್ಸ್ ಇಮೇಜ್ ಸರ್ಚ್ ಏಪ್ರಿಲ್ ೭, ೨೦೨೪ ರಂದು ಭಾರತೀಯ ಚುನಾವಣಾ ಆಯೋಗ (ಇಸಿಐ) ದ ಅಧಿಕೃತ ಎಕ್ಸ್‌ (ಹಿಂದೆ ಟ್ವಿಟರ್) ಪೋಷ್ಟ್ ಗೆ ಕರೆದೊಯ್ಯಿತು. ಈ ಪೋಷ್ಟ್ ನಲ್ಲಿ, ಇಸಿಐ ಹೀಗೆ ಹೇಳಿದೆ - "ವಾಸ್ತವ: ಈ ಹೇಳಿಕೆ ತಪ್ಪುದಾರಿಗೆಳೆಯುವಾತಿದೆ ಮತ್ತು ನಕಲಿ ಆಗಿದೆ. ವಾರಣಾಸಿ ಕ್ಷೇತ್ರ ದಲ್ಲಿ ಒಟ್ಟು ಮತದಾರರ ಸಂಖ್ಯೆ ೧೮,೫೬,೭೯೧. ಒಟ್ಟು ಇವಿಎಂನ ಮತಗಳು- ೧೦,೫೮,೭೪೪ ಮತ್ತು ಅಂಚೆ ಮತಗಳು- ೨೦೮೫ ಎಂದು ಎಣಿಸಲಾಗಿದೆ." (ಅಂದರೆ ಇದು ೨೦೧೯ ರ ಲೋಕಸಭಾ ಚುನಾವಣೆಯದು)

ಇಸಿಐ ನ ಅಧಿಕೃತ ಹ್ಯಾಂಡಲ್‌ನಿಂದ ಎಕ್ಸ್‌ ಪೋಷ್ಟ್ ನ ಸ್ಕ್ರೀನ್‌ಶಾಟ್‌ಗಳು ಮತಗಳ ಹೊಂದಾಣಿಕೆಯ ವೈರಲ್ ವೀಡಿಯೋವನ್ನು ತಪ್ಪುದಾರಿಗೆಳೆಯುವ ಮತ್ತು ತಪ್ಪು ಮಾಹಿತಿ ಎಂದು ತಿಳಿಸುತ್ತದೆ.


ಇಸಿಐ ನ ಅಧಿಕೃತ ಮಾಹಿತಿಯ ಪ್ರಕಾರ, ೨೦೨೪ ರ ಲೋಕಸಭಾ ಚುನಾವಣೆಯಲ್ಲಿ ವಾರಣಾಸಿಯಲ್ಲಿ ಚಲಾವಣೆಯಾದ ಒಟ್ಟು ಮತಗಳ ಸಂಖ್ಯೆ ೧೧,೩೦,೧೪೩. ಇದರಲ್ಲಿ ೧೧,೨೭,೦೮೧ ವಿದ್ಯುನ್ಮಾನ ಮತಯಂತ್ರಗಳು (ಇವಿಎಂ) ಮತ್ತು ೩,೦೬೨ ಅಂಚೆ ಮತಗಳು ಸೇರಿವೆ. ಅರ್ಹ ಮತದಾರರ ಸಂಖ್ಯೆ ೧೮,೫೬,೭೯೧ ಆಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ೧,೫೨,೫೧೩ ಮತಗಳ ಗಮನಾರ್ಹ ಅಂತರದಿಂದ ಸ್ಥಾನವನ್ನು ಭದ್ರಪಡಿಸಿಕೊಂಡು ವಿಜೇತರಾಗಿ ಹೊರಹೊಮ್ಮಿದ್ದಾರೆ.

೨೦೨೪ ರ ಲೋಕಸಭಾ ಚುನಾವಣೆಯಲ್ಲಿ ವಾರಣಾಸಿ ಕ್ಷೇತ್ರದ ಫಲಿತಾಂಶಗಳನ್ನು ಪ್ರಕಟಿಸುವ ಅಧಿಕೃತ ಇಸಿಐ ಜಾಲತಾಣದ ಸ್ಕ್ರೀನ್‌ಶಾಟ್.


ವೈರಲ್ ವೀಡಿಯೋದಲ್ಲಿರುವ ವ್ಯಕ್ತಿಯನ್ನು ಅಖಿಲ ಭಾರತ ಹಿಂದುಳಿದ ಮತ್ತು ಅಲ್ಪಸಂಖ್ಯಾತ ಸಮುದಾಯಗಳ ನೌಕರರ ಒಕ್ಕೂಟದ ಅಧ್ಯಕ್ಷ ವಾಮನ್ ಮೆಶ್ರಾಮ್ ಎಂದು ಗುರುತಿಸಲಾಗಿದೆ, ಅವರು ೨೦೨೪ ರ ಚುನಾವಣೆಗಳಿಗೆ ಸಂಬಂಧಿಸದ ವಿಭಿನ್ನ ಸನ್ನಿವೇಶದಲ್ಲಿ ಈ ಹೇಳಿಕೆಯನ್ನು ಮಾಡಿದ್ದಾರೆ ಎಂದು ಸ್ಪಷ್ಟಪಡಿಸಿದೆ. ಅಧಿಕೃತ ಇಸಿಐ ಹೇಳಿಕೆ ಮತ್ತು ಮತದಾರರ ಎಣಿಕೆ ದಾಖಲೆಗಳು ನಿಜವಾದ ಅಂಕಿಅಂಶಗಳನ್ನು ದೃಢೀಕರಿಸುತ್ತವೆ ಮತ್ತು ವೈರಲ್ ವೀಡಿಯೋದಲ್ಲಿ ಮಾಡಿದ ಹೇಳಿಕೆಗಳನ್ನು ತಿರಸ್ಕರಿಸುತ್ತದೆ.


ತೀರ್ಪು:

ವಾರಣಾಸಿಯ ಮತ ಎಣಿಕೆಯಲ್ಲಿ ವ್ಯತ್ಯಾಸವಿದೆ ಎಂದು ಆರೋಪಿಸಿ ೨೦೨೪ ರ ಲೋಕಸಭಾ ಚುನಾವಣೆಗೆ ಸಂಬಂಧಿಸಿರುವ ಹಳೆಯ ವೀಡಿಯೋ ತಪ್ಪುದಾರಿಗೆಳೆಯುವಂತಿದೆ. ಭಾರತೀಯ ಚುನಾವಣಾ ಆಯೋಗವು ವೀಡಿಯೋದಲ್ಲಿ ಮಾಡಿದ ಹೇಳಿಕೆಗಳಿಗೆ ವಿರುದ್ಧವಾದ ಅಧಿಕೃತ ಅಂಕಿಗಳನ್ನು ಒದಗಿಸಿದೆ, ಇದು ಹಿಂದಿನ ಚುನಾವಣೆಯ ಹಳೆಯ ಘಟನೆ ಎಂದು ಸಾಬೀತುಪಡಿಸುತ್ತದೆ.

Claim :  Old video falsely claims voting discrepancy in Varanasi during 2024 polls
Claimed By :  X user
Fact Check :  Misleading
Tags:    

Similar News