ಜಮ್ಮೂ ಕಾಶೀರಾದಲ್ಲಿ ಜನರು ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸುವ ಹಳೆಯ ವೀಡಿಯೋವನ್ನು ಪಾಕಿಸ್ತಾನದಲ್ಲಿ ಮೋದಿಯವರ ಗೆಲುವಿನ ಸಂಭ್ರಮಾಚರಣೆಯಾಗಿ ಹಂಚಿಕೊಳ್ಳಲಾಗಿದೆ

Update: 2024-06-06 08:40 GMT

ಸಾರಾಂಶ:

ಸಾಮಾಜಿಕ ಮಾಧ್ಯಮ ಬಳಕೆದಾರರು ಭಾರತೀಯ ಜನತಾ ಪಕ್ಷದ (ಬಿಜೆಪಿ) ಧ್ವಜವನ್ನು ಬೀಸುತ್ತಿರುವ ವೀಡಿಯೋ ಕ್ಲಿಪ್ ಅನ್ನು ಹಂಚಿಕೊಂಡಿದ್ದಾರೆ, ಇದು ಪಾಕಿಸ್ತಾನದ ಜನರು ೨೦೨೪ ರ ಸಾರ್ವತ್ರಿಕ ಚುನಾವಣೆಯಲ್ಲಿ ನರೇಂದ್ರ ಮೋದಿಯವರ ವಿಜಯವನ್ನು ಆಚರಿಸುತ್ತಿರುವುದನ್ನು ತೋರಿಸುತ್ತದೆ ಎಂದು ಹೇಳಿಕೊಂಡಿದ್ದಾರೆ. ಆದರೆ, ಇದು ೨೦೧೯ ರ ಜಮ್ಮು ಕಾಶ್ಮೀರದ ವೀಡಿಯೋವಾಗಿದ್ದು, ಅದರಲ್ಲಿ ೨೦೧೯ ರ ಸಾರ್ವತ್ರಿಕ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಸೋಫಿ ಯೂಸುಫ್ ತನ್ನ ನಾಮಪತ್ರವನ್ನು ಸಲ್ಲಿಸಲು ಜನರು ಬೆಂಬಲವನ್ನು ತೋರಿಸುತ್ತಿದ್ದಾರೆ. ಇದು ಹೇಳಿಕೆಯನ್ನು ತಪ್ಪಾಗಿಸುತ್ತದೆ.


ಹೇಳಿಕೆ:

ಪ್ರಧಾನಿ ನರೇಂದ್ರ ಮೋದಿ ಅವರ ಬೆಂಬಲಿಗರು ಬಿಜೆಪಿ ಧ್ವಜವನ್ನು ಬೀಸುತ್ತಿರುವುದನ್ನು ಮತ್ತು ಘೋಷಣೆಗಳನ್ನು ಎತ್ತುತ್ತಿರುವುದನ್ನು ತೋರಿಸುವ ೧ ನಿಮಿಷ ೫೫ ಸೆಕೆಂಡುಗಳ ವೀಡಿಯೋ ಕ್ಲಿಪ್ ಇನ್ಸ್ಟಾಗ್ರಾಮ್ ಮತ್ತು ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ ಹರಿದಾಡುತ್ತಿದೆ. ವೀಡಿಯೋದೊಳಗಿನ ಪಠ್ಯವು ಅದು ಪಾಕಿಸ್ತಾನದ್ದು ಮತ್ತು ೨೦೨೪ ರ ಲೋಕಸಭಾ ಚುನಾವಣೆಯಲ್ಲಿ ಮೋದಿಯವರ ವಿಜಯವನ್ನು ಬಲೂಚಿಸ್ತಾನದ ಜನರು ಸಂಭ್ರಮಿಸುತ್ತಿರುವುದನ್ನು ತೋರಿಸುತ್ತದೆ ಎಂದು ಹೇಳುತ್ತದೆ.

ಜೂನ್ ೩, ೨೦೨೪ ರಂದು ವೈರಲ್ ವೀಡಿಯೋವನ್ನು ಹಂಚಿಕೊಂಡಿರುವ ಎಕ್ಸ್ ಪೋಷ್ಟ್ ನ ಸ್ಕ್ರೀನ್‌ಶಾಟ್.


ಪುರಾವೆ:

ರಿವರ್ಸ್ ಇಮೇಜ್ ಹುಡುಕಾಟದ ಮೂಲಕ, ಮಾರ್ಚ್ ೩೦, ೨೦೧೯ ರಂದು ಹಂಚಿಕೊಳ್ಳಲಾದ ಜಮ್ಮು ಕಾಶ್ಮೀರದ ಬಿಜೆಪಿ ಉಪಾಧ್ಯಕ್ಷರಾದ ಸೋಫಿ ಯೂಸುಫ್ ಅವರ ಅಧಿಕೃತ ಎಕ್ಸ್ ಖಾತೆಯಲ್ಲಿ ವೀಡಿಯೋವನ್ನು ನಾವು ಕಂಡುಕೊಂಡಿದ್ದೇವೆ. ೨೦೧೯ ರ ಲೋಕಸಭಾ ಚುನಾವಣೆಗೆ ಯೂಸುಫ್ ತನ್ನ ನಾಮಪತ್ರವನ್ನು ಸಲ್ಲಿಸುತ್ತಿರುವುದನ್ನು ಇದು ಒಳಗೊಂಡಿದೆ. ಈ ವೀಡಿಯೋದ ದೃಶ್ಯಗಳು ವೈರಲ್ ವೀಡಿಯೋದ ೦:೫೦ ಸೆಕೆಂಡುಗಳ ಅವಧಿಯಲ್ಲಿರುವ ದೃಶ್ಯಗಳಿಗೆ ಹೊಂದಿಕೆಯಾಗುತ್ತವೆ, ಅದರಲ್ಲಿ ವ್ಯಕ್ತಿಯೊಬ್ಬರು ಘೋಷಣೆಗಳನ್ನು ಮುನ್ನಡೆಸುತ್ತಿದ್ದಾರೆ.

ಹೆಚ್ಚುವರಿಯಾಗಿ, ಬಿಜೆಪಿ ಜಮ್ಮು ಕಾಶ್ಮೀರದ ಎಕ್ಸ್ ಖಾತೆಯು ಮಾರ್ಚ್ ೩೧, ೨೦೧೯ ರಂದು ಯೂಸುಫ್ ತನ್ನ ಲೋಕಸಭಾ ಚುನಾವಣಾ ನಾಮಪತ್ರವನ್ನು ಸಲ್ಲಿಸುವ ಅದೇ ರೀತಿಯ ವೀಡಿಯೋವನ್ನು ಹಂಚಿಕೊಂಡಿದೆ. ಈ ವೀಡಿಯೋದಲ್ಲಿ, ಅವರು ಹಲವಾರು ಪಕ್ಷದ ಬೆಂಬಲಿಗರೊಂದಿಗೆ ಇದ್ದಾರೆ. "#PhirEkBaarModiSarkar ಅನಂತನಾಗ್‌ನಲ್ಲಿ ಮೋದಿ ಮೋದಿ" ಎಂಬಾ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ. ಎರಡೂ ವೀಡಿಯೋಗಳು ಉರ್ದು ಮತ್ತು ಕಶ್ಮೀರಿ ಭಾಷೆಯಲ್ಲಿ “ಜೀತ್ ಹಮಾರಿ, ಇನ್ ಶಾ ಅಲ್ಲಾ,” “ಭಾರತೀಯ ಜನತಾ ಪಾರ್ಟಿ ಜಿಂದಾಬಾದ್” ಮತ್ತು ಇತರ ಬಿಜೆಪಿ ಪರ, ಮೋದಿ ಮತ್ತು ಯೂಸುಫ್ ಘೋಷಣೆಗಳನ್ನು ಒಳಗೊಂಡಿವೆ.

ಮಾರ್ಚ್ ೩೦, ೨೦೧೯ ರ ಸೋಫಿ ಯೂಸುಫ್ ಅವರ ಎಕ್ಸ್ ಪೋಷ್ಟ್ ನ ಸ್ಕ್ರೀನ್‌ಶಾಟ್.


ಬಿಜೆಪಿ ಧ್ವಜದ ಜೊತೆಗೆ ಎರಡೂ ವೀಡಿಯೋಗಳ ಹಿನ್ನೆಲೆಯಲ್ಲಿ ಹಸಿರು ಮನೆಯೊಂದನ್ನು ಗುರುತಿಸಬಹುದು. ಮೂಲ ಮತ್ತು ವೈರಲ್ ಕ್ಲಿಪ್‌ಗಳು ಮೋದಿ ಮುಖವಾಡವನ್ನು ಧರಿಸಿರುವ ವ್ಯಕ್ತಿಯನ್ನು ಒಳಗೊಂಡಿವೆ ಮತ್ತು ನೀಲಿ ಬಟ್ಟೆಯನ್ನು ಧರಿಸಿದ ವ್ಯಕ್ತಿಯೊಬ್ಬರು ಪಠಣವನ್ನು ನಡೆಸುತ್ತಿರುವುದನ್ನು ಒಳಗೊಂಡಿದೆ. ಎರಡೂ ವೀಡಿಯೋಗಳಲ್ಲಿ, ಯೂಸುಫ್ ಅವರು ಕಾಮನಬಿಲ್ಲಿನ ಬಣ್ಣದ ಹಾರವನ್ನು ಧರಿಸಿ ಬಿಜೆಪಿ ಧ್ವಜದ ಮುಂದೆ ಜನಸಂದಣಿಯ ಮೂಲಕ ಚಲಿಸುವಾಗ ಸ್ಪಷ್ಟವಾಗಿ ಗೋಚರಿಸುತ್ತಾರೆ. ಮೂಲ ವೀಡಿಯೋ ಮತ್ತು ವೈರಲ್ ಆವೃತ್ತಿ ಎರಡರಲ್ಲೂ ಅವರು ಹಲವಾರು ದೃಶ್ಯಗಳಲ್ಲಿ ಕಾಣಬಹುದು.

ನಮ್ಮ ಕೀವರ್ಡ್ ಸರ್ಚ್ ಯೂಸುಫ್ ಅವರ ಮಾರ್ಚ್ ೩೦, ೨೦೧೯ ರಂದು ನಾಮಪತ್ರ ಸಲ್ಲಿಕೆಗೆ ಸಂಬಂಧಿಸಿದಂತೆ ಬಹು ಸ್ಥಳೀಯ ಮಾಧ್ಯಮಗಳಿಂದ ವರದಿಗಳಿಗೆ ಕರೆದೊಯ್ಯಿತು. ವೈರಲ್ ವೀಡಿಯೋದ ಮೊದಲ ಭಾಗವನ್ನು ಯೂಟ್ಯೂಬ್‌ನಲ್ಲಿ ಎಕ್ಸೆಲ್ಸಿಯೋರ್ ನ್ಯೂಸ್‌ನ ವೀಡಿಯೋ ವರದಿಯಲ್ಲಿ ಪ್ರತಿಬಿಂಬಿಸಲಾಗಿದೆ. ಅದರ ಶೀರ್ಷಿಕೆ ಹೀಗಿದೆ - "ಅನಂತ್‌ನಾಗ್: ಬಿಜೆಪಿ ಅಭ್ಯರ್ಥಿ ಸೋಫಿ ಯೂಸುಫ್ ಲೋಕಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದಾರೆ." ೦:೧೭ ಸೆಕೆಂಡುಗಳ ಅವಧಿಯಲ್ಲಿ, ಅದೇ ಮಹಿಳೆಯರು ಹಾದಿಯಲ್ಲಿ ಅಡ್ಡಾಡುತ್ತಿರುವಾಗ ಜಪ ಮಾಡುವುದನ್ನು ಕಾಣಬಹುದು. ಈ ವೀಡಿಯೋ ನೀಲಿ ವಸ್ತ್ರ ಧರಿಸಿರುವ ವ್ಯಕ್ತಿ ಘೋಷಣೆಗಳನ್ನು ಮುನ್ನಡೆಸುತ್ತಿರುವುದನ್ನು ಮತ್ತು ಮೋದಿ ಮುಖವಾಡವನ್ನು ಧರಿಸಿರುವ ವ್ಯಕ್ತಿಯನ್ನು ಸಹ ಒಳಗೊಂಡಿದೆ.


ತೀರ್ಪು:

ವೀಡಿಯೋವನ್ನು ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ಜನರು ೨೦೨೪ ರ ಲೋಕಸಭಾ ಚುನಾವಣೆಯಲ್ಲಿ ಮೋದಿಯವರ ವಿಜಯವನ್ನು ಆಚರಿಸಿದ್ದಾರೆ ಎಂದು ಸೂಚಿಸುತ್ತದೆ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ . ಮೂಲ ವೀಡಿಯೋ ೨೦೧೯ ರಿಂದ ಜಮ್ಮು ಕಾಶ್ಮೀರದ ಅನಂತನಾಗ್‌ನಿಂದ ಹುಟ್ಟಿಕೊಂಡಿದೆ, ಆ ವರ್ಷದ ಲೋಕಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯೊಬ್ಬರು ನಾಮಪತ್ರ ಸಲ್ಲಿಸಿದಾಗ ಅಲ್ಲಿಯ ಜನರು ಅವರಿಗೆ ಬೆಂಬಲವನ್ನು ತೋರಿಸುವುದನ್ನು ಒಳಗೊಂಡಿದೆ.

Claim :  Old video of people supporting a BJP candidate in J&K shared as celebrations of Modi's win in Pakistan
Claimed By :  X user
Fact Check :  False
Tags:    

Similar News