ಅಸ್ಸಾಂನ ಮಣಿಪುರ ನಿರಾಶ್ರಿತರ ಶಿಬಿರಗಳಿಗೆ ರಾಹುಲ್ ಗಾಂಧಿಯವರ ಭೇಟಿಯ ಫೋಟೋಗಳನ್ನು ಪ್ರವಾಹ ಸಂತ್ರಸ್ತರೊಂದಿಗಿನ ಸಭೆ ಎಂದು ತಪ್ಪಾಗಿ ಬಿಂಬಿಸಲಾಗಿದೆ

Update: 2024-07-18 09:30 GMT

ಸಾರಾಂಶ:

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಅಸ್ಸಾಂನ ಪ್ರವಾಹ ಪರಿಹಾರ ಶಿಬಿರಗಳಿಗೆ ಭೇಟಿ ನೀಡಿ ಪ್ರವಾಹ ಸಂತ್ರಸ್ತರನ್ನು ಭೇಟಿ ಮಾಡಿದ್ದಾರೆ ಎಂಬ ಹೇಳಿಕೆಯೊಂದಿಗೆ ಸಾಮಾಜಿಕ ಮಾಧ್ಯಮ ಬಳಕೆದಾರರು ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಆದರೆ, ಜುಲೈ ೮, ೨೦೨೪ ರಂದು ಮಣಿಪುರ ಹಿಂಸಾಚಾರದ ನಿರಾಶ್ರಿತ ಶಿಬಿರಗಳಿಗೆ ಗಾಂಧಿ ಭೇಟಿ ನೀಡಿದ ಚಿತ್ರಗಳನ್ನು ಅವರು ಇತ್ತೀಚೆಗೆ ಪ್ರವಾಹ ಸಂತ್ರಸ್ತರನ್ನು ಭೇಟಿ ಮಾಡಿದ್ದಾರೆ ಎಂದು ಹೇಳಲು ಹಂಚಿಕೊಳ್ಳಲಾಗುತ್ತಿದೆ. ಆದ್ದರಿಂದ, ಈ ಹೇಳಿಕೆ ತಪ್ಪುದಾರಿಗೆಳೆಯುವಂತಿದೆ.


ಹೇಳಿಕೆ:

ಅಸ್ಸಾಂನಲ್ಲಿ ಇತ್ತೀಚಿನ ಪ್ರವಾಹಗಳು ೨೭ ಜಿಲ್ಲೆಗಳಲ್ಲಿ ೧೮.೮ ಲಕ್ಷಕ್ಕೂ ಹೆಚ್ಚು ಜನರನ್ನು ಬಾಧಿಸಿವೆ. ಧಾರಾಕಾರ ಮಳೆಯಿಂದ ಉಂಟಾದ ಪ್ರವಾಹವು ೭೨ ಸಾವುಗಳಿಗೆ ಮತ್ತು ಗಮನಾರ್ಹ ಸ್ಥಳಾಂತರಕ್ಕೆ ಕಾರಣವಾಗಿದೆ, ಸಾವಿರಾರು ಜನರು ಪರಿಹಾರ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ. ಎಕ್ಸ್ (ಹಿಂದೆ ಟ್ವಿಟರ್) ಮತ್ತು ಇತರ ವೇದಿಕೆಗಳಲ್ಲಿ ಸಾಮಾಜಿಕ ಮಾಧ್ಯಮ ಬಳಕೆದಾರರು ರಾಹುಲ್ ಗಾಂಧಿಯವರು ಅಸ್ಸಾಂನ ಫುಲೆರ್ಟಲ್‌ನಲ್ಲಿ ಪ್ರವಾಹ ಪರಿಹಾರ ಶಿಬಿರಗಳಿಗೆ ಭೇಟಿ ನೀಡಿದರು ಮತ್ತು ಪ್ರವಾಹ ಸಂತ್ರಸ್ತರನ್ನು ಭೇಟಿಯಾದರು ಎಂಬ ಹೇಳಿಕೆಯೊಂದಿಗೆ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಗಾಂಧಿ ಪ್ರವಾಹ ಪೀಡಿತ ಜನರ ಕುಂದುಕೊರತೆಗಳನ್ನು ಆಲಿಸಿದರು ಮತ್ತು ಬೆಂಬಲ ನೀಡಿದರು ಎಂದು ಪೋಷ್ಟ್ ಗಳು ಸೂಚಿಸಿವೆ.

ಕೇರಳದ ಕಾಂಗ್ರೆಸ್ ಸಂಸದ ಕೆ.ಸಿ.ವೇಣುಗೋಪಾಲ್ ಅವರು ಜುಲೈ ೮ ರಂದು ರಾಹುಲ್ ಗಾಂಧಿ ಅವರು ಅಸ್ಸಾಂ ಪ್ರವಾಹ ಸಂತ್ರಸ್ತರನ್ನು ಭೇಟಿಯಾದರು ಮತ್ತು ಮಣಿಪುರಿ ನಿರಾಶ್ರಿತರ ಶಿಬಿರಗಳಿಗೆ ಭೇಟಿ ನೀಡಿದರು ಎಂದು ವೈರಲ್ ಫೋಟೋಗಳನ್ನು ಎಕ್ಸ್ ನಲ್ಲಿ ಹಂಚಿಕೊಂಡಿದ್ದಾರೆ. ಈ ಬಿಕ್ಕಟ್ಟುಗಳ ಬಗ್ಗೆ ಕ್ರಮ ಕೈಗೊಳ್ಳುವಲ್ಲಿ ಬಿಜೆಪಿ ಸರ್ಕಾರ ವಿಫಲವಾಗಿದೆ ಎಂದರು. ಎಎನ್‌ಐ ಮತ್ತು ದಿ ವೈರ್‌ನಂತಹ ಸುದ್ದಿವಾಹಿನಿಗಳು ಆ ಚಿತ್ರಗಳನ್ನು ಬಳಸಿ ಹೀಗೆಂದೇ ವರದಿ ಮಾಡಿವೆ.

\

ಜುಲೈ ೮, ೨೦೨೪ ರಂದು ಪ್ರಕಟವಾದ ಎಏನ್ಐ ಲೇಖನದ ಸ್ಕ್ರೀನ್‌ಶಾಟ್.


ಪುರಾವೆ:

ಕೀವರ್ಡ್ ಸರ್ಚ್ ಮೂಲಕ, ನಾವು ಜುಲೈ ೮ ರಿಂದ ರಾಹುಲ್ ಗಾಂಧಿಯವರ ಅಧಿಕೃತ ಇನ್‌ಸ್ಟಾಗ್ರಾಮ್ ವೀಡಿಯೋಗಳಲ್ಲಿ ಒಂದನ್ನು ಕಂಡುಕೊಂಡಿದ್ದೇವೆ, ಇದು ವೈರಲ್ ಫೋಟೋಗಳಲ್ಲಿರುವ ದೃಶ್ಯಗಳನ್ನು ಒಳಗೊಂಡಿದೆ. ಈ ಇನ್‌ಸ್ಟಾಗ್ರಾಮ್ ಪೋಷ್ಟ್ ನ ಶೀರ್ಷಿಕೆಯು, "ಆತ್ಮೀಯ ಮಣಿಪುರದ ಜನರೇ, ನಾನು ನಿಮ್ಮ ಸಹೋದರನಾಗಿ ನಿಮ್ಮ ಬಳಿಗೆ ಬರುತ್ತೇನೆ. ನಿಮ್ಮ ಜೀವನದಲ್ಲಿ ಶಾಂತಿಯನ್ನು ಮರಳಿ ತರಲು ನಾನು ಎಲ್ಲವನ್ನೂ ಮಾಡುತ್ತೇನೆ. ಪ್ರೀತಿಯು ನಮ್ಮನ್ನು ಪರಿಹಾರಕ್ಕೆ ಕರೆದೊಯ್ಯುತ್ತದೆ - ನನಗೆ ಖಾತ್ರಿಯಿದೆ." ಅದೇ ದಿನಾಂಕದಿಂದ ಕಾಂಗ್ರೆಸ್‌ನ ಒಂದು ಅಧಿಕೃತ ಎಕ್ಸ್ ಪೋಷ್ಟ್ ಅನ್ನು ನಾವು ಕಂಡುಕೊಂಡಿದ್ದೇವೆ - ಅದು ವೈರಲ್ ಫೋಟೋಗಳಿಗೆ ಹೋಲುವ ಚಿತ್ರಗಳನ್ನು ಈ ಹಿಂದಿ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದೆ - "ಪ್ರತಿಪಕ್ಷದ ನಾಯಕ ಶ್ರೀ @RahulGandhi ಅವರು ಅಸ್ಸಾಂನ ಪರಿಹಾರ ಶಿಬಿರದಲ್ಲಿ ಮಣಿಪುರ ಹಿಂಸಾಚಾರದ ನಿರಾಶ್ರಿತರನ್ನು ಭೇಟಿಯಾದರು. ಫುಲೆರ್ಟಲ್, ಅಸ್ಸಾಂ" (ಅನುವಾದಿಸಲಾಗಿದೆ). ಈ ಚಿತ್ರಗಳಲ್ಲಿ ರಾಹುಲ್ ಗಾಂಧಿ ಅವರ ಉಡುಗೆ ತೊಡುಗೆಗಳು, ಅವರ ಸುತ್ತಲಿನ ಜನರು ಮತ್ತು ಅವರಿಗೆ ನಮಸ್ಕರಿಸುತ್ತಿರುವ ಮಹಿಳೆಯವರಂತಹ ದೃಶ್ಯಗಳು ವೈರಲ್ ಫೋಟೋಗಳಂತೆಯೇ ಇವೆ.


ಜುಲೈ ೮, ೨೦೨೪ ರಿಂದ ರಾಹುಲ್ ಗಾಂಧಿ ಅವರ ಇನ್ಸ್ಟಾಗ್ರಾಮ್ ಪೋಷ್ಟ್ (ಎಡ) ಮತ್ತು ಕಾಂಗ್ರೆಸ್‌ನ ಎಕ್ಸ್ ಪೋಷ್ಟ್ (ಬಲ) ಗಳ ಸ್ಕ್ರೀನ್‌ಶಾಟ್‌ಗಳು.


ಜುಲೈ ೮, ೨೦೨೪ ರಂದು, ಬಿಜೆಪಿ ಶಾಸಕ ಮತ್ತು ಜಲಸಂಪನ್ಮೂಲ ಸಚಿವ ಪಿಜುಶ್ ಹಜಾರಿಕಾ ಅವರು ಎಕ್ಸ್ ನಲ್ಲಿ ತಪ್ಪುದಾರಿಗೆಳೆಯುವ ಹೇಳಿಕೆಗಳನ್ನು ಉದ್ದೇಶಿಸಿ ಮಾತನಾಡಿದರು. ಅವರು ಈ ಹೇಳಿಕೆಯನ್ನು ಹಂಚಿಕೊಂಡಿರುವ ವಿವಿಧ ಸಾಮಾಜಿಕ ಮಾಧ್ಯಮ ಖಾತೆಗಳ ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಂಡಿದ್ದಾರೆ. "ಶ್ರೀ ರಾಹುಲ್ ಗಾಂಧಿ ಅವರು ಇಂದು ಅಸ್ಸಾಂನ ಯಾವುದೇ ಪ್ರವಾಹ ಪರಿಹಾರ ಶಿಬಿರ ಅಥವಾ ಯಾವುದೇ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿಲ್ಲ ಎಂದು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ. ಮಾಧ್ಯಮದ ಸದಸ್ಯರು ಪೋಷ್ಟ್ ಮಾಡುವ ಮೊದಲು ವಾಟ್ಸಾಪ್ ಫಾರ್ವರ್ಡ್‌ಗಳು, ಸಾಮಾಜಿಕ ಮಾಧ್ಯಮ ಮಾಹಿತಿ/ಪ್ರಚಾರವನ್ನು ದಯವಿಟ್ಟು ಪರಿಶೀಲಿಸಲು ವಿನಂತಿಸಲಾಗಿದೆ" (ಅನುವಾದಿಸಲಾಗಿದೆ) ಎಂದು ಪೋಷ್ಟ್ ನ ಶೀರ್ಷಿಕೆಯಲ್ಲಿ ಹೇಳಿದ್ದಾರೆ.

ಜುಲೈ ೮, ೨೦೨೪ ರಂದು ಬಿಜೆಪಿ ಶಾಸಕ ಪಿಜುಶ್ ಹಜಾರಿಕಾ ಅವರ ಎಕ್ಸ್ ಪೋಷ್ಟ್ ನ ಸ್ಕ್ರೀನ್‌ಶಾಟ್.


ಹೆಚ್ಚಿನ ತನಿಖೆಯಿಂದ ಜುಲೈ ೮, ೨೦೨೪ ರಂದು ಮಣಿಪುರದಿಂದ ನಿರಾಶ್ರಿತರು ನೆಲೆಸಿರುವ ಪ್ರದೇಶದಲ್ಲಿ ಗಾಂಧಿಯವರು ಎರಡು ಶಿಬಿರಗಳಿಗೆ ಭೇಟಿ ನೀಡಿದ್ದರು ಎಂದು ತಿಳಿದುಬಂದಿದೆ. ವ್ಯಾಪಕವಾಗಿ ಪ್ರಸಾರವಾದ ಫೋಟೋಗಳ ರೆವೆರಿಸೆ ಇಮೇಜ್ ಸರ್ಚ್ ಅವುಗಳನ್ನು ಲಖಿಪುರ್ ಬ್ಲಾಕ್‌ನಲ್ಲಿರುವ ಶಿಬಿರದಲ್ಲಿ ತೆಗೆದದ್ದು ಎಂದು ದೃಢಪಡಿಸಿತು. ಚಿತ್ರಗಳು ನಿಜಕ್ಕೂ ಮಣಿಪುರದ ನಿರಾಶ್ರಿತರ ಭೇಟಿಯದು, ಪ್ರವಾಹ ಸಂತ್ರಸ್ತರದಲ್ಲ.


ತೀರ್ಪು:

ಜುಲೈ ೮ ರಂದು ಅಸ್ಸಾಂನ ನಿರಾಶ್ರಿತರ ಶಿಬಿರಗಳಿಗೆ ರಾಹುಲ್ ಗಾಂಧಿ ಭೇಟಿ ನೀಡಿದ ಫೋಟೋಗಳನ್ನು ಅವರು ಪ್ರವಾಹ ಸಂತ್ರಸ್ತರನ್ನು ಭೇಟಿ ಮಾಡಿದ್ದಾರೆ ಎಂದು ತಪ್ಪಾಗಿ ಹೇಳಲು ಹಂಚಿಕೊಳ್ಳಲಾಗಿದೆ ಎಂದು ಈ ಹೇಳಿಕೆಯ ವಿಶ್ಲೇಷಣೆ ಬಹಿರಂಗಪಡಿಸುತ್ತದೆ. ಆದ್ದರಿಂದ, ಈ ಫೋಟೋಗಳೊಂದಿಗೆ ಹಂಚಿಕೊಳ್ಳಲಾದ ಹೇಳಿಕೆ ತಪ್ಪುದಾರಿಗೆಳೆಯುವಂತಿದೆ.

Claim :  Photos of Rahul Gandhi's visit to Manipur refugee camps in Assam misrepresented as meeting with flood victims
Claimed By :  X user
Fact Check :  Misleading
Tags:    

Similar News