ದೇವಸ್ಥಾನದ ಆವರಣದಲ್ಲಿ ಧೂಮಪಾನ ಮಾಡುವ ಹುಡುಗಿಯ ಸ್ಕ್ರಿಪ್ಟೆಡ್ ವೀಡಿಯೋವನ್ನು ನೈಜ ಘಟನೆ ಎಂದು ಹಂಚಿಕೊಳ್ಳಲಾಗಿದೆ

Update: 2024-06-12 07:44 GMT

ಸಾರಾಂಶ:

ದೇವಸ್ಥಾನದೊಳಗೆ ಹುಡುಗಿಯೊಬ್ಬಳು ಧೂಮಪಾನ ಮಾಡುತ್ತಿರುವ ವಿಶೇಷ ಸಿಸಿಟಿವಿ ದೃಶ್ಯಗಳನ್ನು ತೋರಿಸುವ ೫೫ ಸೆಕೆಂಡ್‌ಗಳ ವೀಡಿಯೋವನ್ನು ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಂಡಿದ್ದಾರೆ. ಆದರೆ, ಇದು ಸಾರ್ವಜನಿಕ ಜಾಗೃತಿ ಮೂಡಿಸಲು ರಚಿಸಲಾದ ಸ್ಕ್ರಿಪ್ಟ್ ಮಾಡಲಾದ ವೀಡಿಯೋ ಮತ್ತು ಇದು ನೈಜ ಘಟನೆಯನ್ನು ತೋರಿಸುವುದಿಲ್ಲ. ಆದ್ದರಿಂದ, ಆನ್‌ಲೈನ್‌ನಲ್ಲಿ ಹಂಚಿಕೊಳ್ಳುತಿರುವ ಹೇಳಿಕೆಗಳು ತಪ್ಪು.

ಹೇಳಿಕೆ:

ದೇವಸ್ಥಾನದ ಒಳಗೆ ಸಿಗರೇಟು ಹಚ್ಚಿದ ನಂತರ ಮಹಿಳೆಯು ತನ್ನ ಫೋನ್‌ನಲ್ಲಿ ಮಾತನಾಡುವ ಮತ್ತು ಬಿದ್ದು ಗಾಯಗೊಂಡಿರುವ ಸಿಸಿಟಿವಿ ದೃಶ್ಯಗಳನ್ನು ತೋರಿಸುವ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಫೇಸ್‌ಬುಕ್ ಬಳಕೆದಾರರು ಈ ವೀಡಿಯೋವನ್ನು ಜೂನ್ ೧೧, ೨೦೨೪ ರಂದು ಈ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ, “ಬಾಯ್ ಫ್ರೆಂಡ್ ಜೊತೆ ಮೊಬೈಲ್ ನಲ್ಲಿ ಮಾತನಾಡುತ್ತಾ ದೇವಸ್ಥಾನದಲ್ಲಿ ಇಟ್ಟಿದ್ದ ಆರತಿ ತಟ್ಟೆಯಲ್ಲಿ ಸಿಗರೇಟ್ ಹಚ್ಚಿ ದೇವಸ್ಥಾನದಲ್ಲೇ ಸೇದಲು ಶುರು ಮಾಡಿದಳು. ಕಾಲು ಜಾರಿ ಬಿದ್ದಾಗ ಮೂಳೆ ಮುರಿದಿತ್ತು. ಅಂತಹ TRRISM ಅನ್ನು ಬೇರೆ ಯಾವುದೇ ಧಾರ್ಮಿಕ ಸ್ಥಳದಲ್ಲಿ ಹರಡುವುದು ಸುರಕ್ಷಿತವಾಗಿದೆಯೇ? ಘಟನೆ - ದೇವಸ್ಥಾನದ ಸಿಸಿ ಟಿವಿ ಫೂಟೇಜ್‌ನಲ್ಲಿ ಸೆರೆಯಾಗಿದೆ.”

ಜೂನ್ ೧೧, ೨೦೨೪ ರಂದು ಹಂಚಿಕೊಂಡ ವೈರಲ್ ವೀಡಿಯೋವನ್ನು ಹೊಂದಿರುವ ಫೇಸ್‌ಬುಕ್‌ ಪೋಷ್ಟ್ ನ ಸ್ಕ್ರೀನ್‌ಶಾಟ್.

ಎಕ್ಸ್‌ (ಹಿಂದೆ ಟ್ವಿಟ್ಟರ್) ನಲ್ಲಿ ಮತ್ತೊಬ್ಬ ಬಳಕೆದಾರರು ಜೂನ್ ೧೪, ೨೦೨೪ ರಂದು ಹಿಂದಿಯಲ್ಲಿ ಇದೇ ರೀತಿಯ ಶೀರ್ಷಿಕೆಯೊಂದಿಗೆ ವೀಡಿಯೋವನ್ನು ಹಂಚಿಕೊಂಡಿದ್ದಾರೆ.

ಪುರಾವೆ:

ವೈರಲ್ ವೀಡಿಯೋದ ಕೀಫ್ರೇಮ್ಸ್ ಗಳ ರಿವರ್ಸ್ ಇಮೇಜ್ ಸರ್ಚ್ ಅದೇ ವೀಡಿಯೋದ ವಿಸ್ತೃತ ಆವೃತ್ತಿಯ ಒಂದು ಯೂಟ್ಯೂಬ್ ವೀಡಿಯೋವಿಗೆ ನಮ್ಮನ್ನು ಕರೆದೊಯ್ಯಿತು. ಅದನ್ನು ಮೇ ೨೪, ೨೦೨೪ ರಂದು ಅಪ್‌ಲೋಡ್ ಮಾಡಲಾಗಿದೆ. ಈ ವೀಡಿಯೋದ ಶೀರ್ಷಿಕೆ ಹೀಗಿದೆ, "ಈ ರೀತಿಯ ಜನರು ಇರಬಹುದು..! ಈ ಹುಡುಗಿ ದೇವಸ್ಥಾನದಲ್ಲಿ ಭಯವಿಲ್ಲದೆ ಏನು ಮಾಡಿದ್ದಾಳೆಂದು ನೋಡಿ (ಅನುವಾದಿಸಲಾಗಿದೆ).”

ಮೇ ೨೪, ೨೦೨೪ ರಂದು ಅಪ್‌ಲೋಡ್ ಮಾಡಲಾಗಿರುವ ಯೂಟ್ಯೂಬ್ ವೀಡಿಯೋದ ಸ್ಕ್ರೀನ್‌ಶಾಟ್.


ಈ ವೀಡಿಯೋದ ೩:೨೫ ಟೈಮ್‌ಸ್ಟ್ಯಾಂಪ್‌ನಲ್ಲಿ, ಇದು ಸಾಮಾಜಿಕ ಜಾಗೃತಿಗಾಗಿ ರಚಿಸಲಾದ ಸ್ಕ್ರಿಪ್ಟೆಡ್ ವೀಡಿಯೋ ಎಂದು ಸ್ಪಷ್ಟಪಡಿಸುವ ಡಿಸ್ಕಿಲೈಮರ್ ತೋರಿಸುತ್ತದೆ. ಶೈಕ್ಷಣಿಕ ಉದ್ದೇಶಗಳಿಗಾಗಿ ವೀಡಿಯೋವನ್ನು ಸ್ಕ್ರಿಪ್ಟ್ ಮಾಡಿ ಪ್ರಕಟಿಸಲಾಗಿದೆ ಮತ್ತು ಸಾಮಾಜಿಕ ಜಾಗೃತಿಯ ಗುರಿಯನ್ನು ಹೊಂದಿದೆ ಎಂದು ಹೇಳಿಕೊಂಡಿದೆ..

ವೀಡಿಯೋದಲ್ಲಿನ ಹಕ್ಕು ನಿರಾಕರಣೆಯ (ಡಿಸ್ಕಿಲೈಮರ್) ಸ್ಕ್ರೀನ್‌ಶಾಟ್.


ಮೇ ೨೩, ೨೦೨೪ ರಂದು ವೀಡಿಯೋವನ್ನು ಹಂಚಿಕೊಂಡ ಯೂಟ್ಯೂಬ್ ಚಾನಲ್‌ಗೆ ಸಂಬಂಧಿಸಿದ ಫೇಸ್‌ಬುಕ್‌ ಖಾತೆಯನ್ನು ಸಹ ನಾವು ಗುರುತಿಸಿದ್ದೇವೆ.

೨೨ ಲಕ್ಷ ಚಂದಾದಾರರನ್ನು ಹೊಂದಿರುವ ಯೂಟ್ಯೂಬ್ ಚಾನಲ್ "3RD EYE" (೩ ರನೇ ಕಣ್ಣು) ನಿಯಮಿತವಾಗಿ ಇಂತಹ ಸ್ಕ್ರಿಪ್ಟ್ ಮಾಡಿದ ಸಾಮಾಜಿಕ ಜಾಗೃತಿ ವೀಡಿಯೋಗಳನ್ನು ಪೋಷ್ಟ್ ಮಾಡುತ್ತದೆ. ಈ ಚಾನೆಲ್ ಹಲವಾರು ದೇವಾಲಯದ ವಿಷಯದ ಸ್ಕ್ರಿಪ್ಟ್ ಮಾಡಲಾದ ವೀಡಿಯೋಗಳನ್ನು ಸಹ ಹೊಂದಿದೆ.

೩ ನೇ ಕಣ್ಣಿನ ಯೂಟ್ಯೂಬ್ ಚಾನಲ್‌ನಿಂದ ಇತರ ದೇವಾಲಯ-ವಿಷಯದ ಸ್ಕ್ರಿಪ್ಟ್ ಮಾಡಿದ ವೀಡಿಯೋಗಳ ಸ್ಕ್ರೀನ್‌ಶಾಟ್.

ವೈರಲ್ ವೀಡಿಯೋ ನೈಜ ಘಟನೆಯನ್ನು ಚಿತ್ರಿಸುವುದಿಲ್ಲ ಮತ್ತು ಇದು ಸ್ಕ್ರಿಪ್ಟ್ ಮಾಡಿದ ಸಾಮಾಜಿಕ ಜಾಗೃತಿ ವೀಡಿಯೋದ ಕ್ಲಿಪ್ ಮಾಡಿದ ಆವೃತ್ತಿಯಾಗಿದೆ ಎಂದು ಇದು ಸ್ಪಷ್ಟಪಡಿಸುತ್ತದೆ.

ತೀರ್ಪು:

ವೈರಲ್ ವೀಡಿಯೋದ ವಿಶ್ಲೇಷಣೆಯು ಸಾಮಾಜಿಕ ಮಾಧ್ಯಮ ಬಳಕೆದಾರರು ಸಾಮಾಜಿಕ ಜಾಗೃತಿ ಮೂಡಿಸುವ ಉದ್ದೇಶದ ಸ್ಕ್ರಿಪ್ಟ್ ಮಾಡಿದ ವೀಡಿಯೊವನ್ನು ಹಂಚಿಕೊಂಡಿದ್ದಾರೆ ಎಂದು ಬಹಿರಂಗಪಡಿಸುತ್ತದೆ. ಆದ್ದರಿಂದ ಈ ವೀಡಿಯೋ ದೇವಸ್ಥಾನದೊಳಗಿನ ನೈಜ ಘಟನೆಯಿಂದ ಬಂದದ್ದು ಎಂಬ ಹೇಳಿಕೆಗಳು ತಪ್ಪು.


Claim :  Scripted video of a girl smoking on temple premises shared as a real incident
Claimed By :  Facebook User
Fact Check :  False
Tags:    

Similar News