ಕಂಗನಾ ರನೌತ್‌ಗೆ ಕಪಾಳಮೋಕ್ಷ ಮಾಡಿದ ಮಾಜಿ ಸಿಐಎಸ್‌ಎಫ್ ಅಧಿಕಾರಿಯೊಂದಿಗೆ ಗಾಂಧಿ ಕುಟುಂಬದವರು ಪೋಸ್ ನೀಡುತ್ತಿರುವುದನ್ನು ತೋರಿಸಲು ಸಂಬಂಧವಿಲ್ಲದ ಚಿತ್ರವನ್ನು ಹಂಚಿಕೊಳ್ಳಲಾಗಿದೆ

Update: 2024-06-15 08:03 GMT

ಸಾರಾಂಶ:

ಚಂಡೀಗಢ ವಿಮಾನ ನಿಲ್ದಾಣದಲ್ಲಿ ಸಂಸದೆ ಕಂಗನಾ ರಣಾವತ್‌ಗೆ ಕಪಾಳಮೋಕ್ಷ ಮಾಡಿದ ಮಾಜಿ ಸಿಐಎಸ್‌ಎಫ್ (ಕೇಂದ್ರ ಕೈಗಾರಿಕಾ ಭದ್ರತಾ ಪಡೆ) ಕಾನ್‌ಸ್ಟೆಬಲ್ ಕುಲ್ವಿಂದರ್ ಕೌರ್ ಎಂದು ಹೇಳುವ ಮೂಲಕ ರಾಹುಲ್, ಪ್ರಿಯಾಂಕಾ ಮತ್ತು ಸೋನಿಯಾ ಗಾಂಧಿಯವರು ಒಬ್ಬ ಮಹಿಳೆಯೊಂದಿಗೆ ಫೋಟೋಗೆ ಪೋಸ್ ನೀಡುತ್ತಿರುವ ಚಿತ್ರವನ್ನು ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಂಡಿದ್ದಾರೆ. ಆದರೆ, ವೈರಲ್ ಚಿತ್ರದಲ್ಲಿರುವ ಮಹಿಳೆ ರಾಜಸ್ಥಾನದ ಮಾಜಿ ಕಾಂಗ್ರೆಸ್ ಶಾಸಕಿ ದಿವ್ಯಾ ಮಡೆರ್ನಾ ಆಗಿದ್ದು, ಈ ಚಿತ್ರವನ್ನು ತಪ್ಪು ನಿರೂಪಣೆಗಳೊಂದಿಗೆ ಹಂಚಿಕೊಳ್ಳಲಾಗಿದೆ.

ಹೇಳಿಕೆ:

ಇತ್ತೀಚೆಗೆ ಚುನಾಯಿತ ಸಂಸದೆ ಕಂಗನಾ ರನೌತ್ ಚಂಡೀಗಢ ವಿಮಾನ ನಿಲ್ದಾಣದಲ್ಲಿ ಸಿಐಎಸ್‌ಎಫ್ ಕಾನ್‌ಸ್ಟೆಬಲ್ (ಈಗ ಅಮಾನತುಗೊಂಡಿದ್ದಾರೆ) ರೈತರ ಪ್ರತಿಭಟನೆಯ ಬಗ್ಗೆ ರನೌತ್ ಅವರ ಕಾಮೆಂಟ್‌ಗಳ ಹಿನ್ನಲೆಯಲ್ಲಿ ಅವರಿಗೆ ಕಪಾಳಮೋಕ್ಷ ಮಾಡಿದ್ದಾರೆ. ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿಯವರು ಒಬ್ಬ ಮಹಿಳೆಯೊಂದಿಗೆ ಪೋಸ್ ನೀಡಿರುವ ಚಿತ್ರವು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವೈರಲ್ ಆಗಿದ್ದು, ಗಾಂಧಿ ಕುಟುಂಬದವರು ಮಾಜಿ ಸಿಐಎಸ್‌ಎಫ್ ಕಾನ್‌ಸ್ಟೆಬಲ್ ಕುಲ್ವಿಂದರ್ ಕೌರ್ ಅವರೊಂದಿಗೆ ಫೋಟೋಗೆ ಪೋಸ್ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಎಕ್ಸ್ (ಹಿಂದೆ ಟ್ವಿಟ್ಟರ್) ನಲ್ಲಿ ಹಂಚಿಕೊಂಡ ಅಂತಹ ಒಂದು ಪೋಷ್ಟ್ ನ ಶೀರ್ಷಿಕೆಯು ಹೀಗೆ ಹೇಳುತ್ತದೆ, “ಅವರನ್ನು ಹೆಸರಿಸಿ ಮತ್ತು ಅವರನ್ನು ಪ್ರಸಿದ್ಧ ಮಾಡಿ. ಸೋನಿಯಾ ಖಾನ್ - ರಾಹುಲ್ ಖಾನ್ ಮತ್ತು ಪ್ರಿಯಾಂಕಾ ವಾದ್ರಾ ಅವರೊಂದಿಗೆ ನಿಂತಿರುವ ಮಹಿಳೆಯರನ್ನು ಗುರುತಿಸಲಾಗಿದೆ, ಅವರು #Kangna_Ranawat ಮೇಲೆ ದಾಳಿ ಮಾಡಿದ ಅದೇ #Gurvirnder_Kaur ಇನ್ನೂ ಯಾರೋ ಮನಸ್ಸಿನಲ್ಲಿ ಪ್ರಶ್ನೆಗಳನ್ನು ಹೊಂದಿದ್ದೀರಾ (ಅನುವಾದಿಸಲಾಗಿದೆ).”

ಫೇಸ್‌ಬುಕ್‌ನಲ್ಲಿ ಹಂಚಿಕೊಂಡ ವೈರಲ್ ಚಿತ್ರದ ಸ್ಕ್ರೀನ್‌ಶಾಟ್.


ಇತರ ಸಾಮಾಜಿಕ ಮಾಧ್ಯಮ ಬಳಕೆದಾರರು ಇದೇ ರೀತಿಯ ಶೀರ್ಷಿಕೆಗಳೊಂದಿಗೆ ಫೇಸ್‌ಬುಕ್‌ನಲ್ಲಿ ಇದೇ ಚಿತ್ರವನ್ನು ಹಂಚಿಕೊಂಡಿದ್ದಾರೆ.

ಪುರಾವೆ:

ನಾವು ವೈರಲ್ ಚಿತ್ರದ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದ್ದೇವೆ ಮತ್ತು ಅದೇ ಚಿತ್ರದೊಂದಿಗೆ ಜೂನ್ ೬, ೨೦೨೪ ರಂದು ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡ ಪೋಷ್ಟ್ ಒಂದನ್ನು ಕಂಡುಕೊಂಡಿದ್ದೇವೆ. ಈ ಪೋಷ್ಟ್ ನಲ್ಲಿನ ಚಿತ್ರದ ಮೇಲೆ "@DIVYA_MAHIPAL_MADERNA" ಎಂದು ಓದುವ ವಾಟರ್‌ಮಾರ್ಕ್ ಅನ್ನು ನಾವು ಗಮನಿಸಿದ್ದೇವೆ. ಮತ್ತಷ್ಟು ಹುಡುಕಾಟವು ದಿವ್ಯಾ ಮಹಿಪಾಲ್ ಮಡೆರ್ನಾ ಅವರ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಗೆ ನಮ್ಮನ್ನು ಕರೆದೊಯ್ಯಿತು. ಈ ಖಾತೆಯ ಬಯೋನಲ್ಲಿ ಅವರು ರಾಜಸ್ಥಾನದ ಓಸಿಯಾನ್‌ನ ಮಾಜಿ ಶಾಸಕಿ ಎಂದು ಹೇಳಿಕೊಳ್ಳಲಾಗಿದೆ. ಫೆಬ್ರವರಿ ೧೪, ೨೦೨೪ ರಂದು ಅವರು ಹಂಚಿಕೊಂಡ ಅದೇ ಚಿತ್ರವನ್ನು ನಾವು ಈ ಖಾತೆಯಲ್ಲಿ ನೋಡಿದ್ದೇವೆ. ಇದರ ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ, “ಜೊತೆಗೆ ಬಂದ ಶ್ರೀ ರಾಹುಲ್ ಗಾಂಧಿ ಮತ್ತು ಶ್ರೀಮತಿ ಪ್ರಿಯಾಂಕಾ ಗಾಂಧಿ ಅವರನ್ನು ಸ್ವಾಗತಿಸುತ್ತೇನೆ. ಪ್ರಿಯಾಂಕಾ ಗಾಂಧಿ ವಾದ್ರಾ ರಾಹುಲ್ ಗಾಂಧಿ," ಎಂದು ಹೇಳಿಕೊಂಡಿದೆ.

ಫೆಬ್ರವರಿ ೧೪, ೨೦೨೪ ರಂದು ದಿವ್ಯಾ ಮಡೆರ್ನಾ ಅವರು ಹಂಚಿಕೊಂಡ ಇನ್ಸ್ಟಾಗ್ರಾಮ್ ಪೋಷ್ಟ್ ನ ಸ್ಕ್ರೀನ್‌ಶಾಟ್.


ನಾವು Myneta.info ವೆಬ್‌ಸೈಟ್‌ನಲ್ಲಿ ದಿವ್ಯಾ ಮಡೆರ್ನಾ ಅವರ ವಿವರಗಳನ್ನು ಕಂಡುಕೊಂಡಿದ್ದೇವೆ, ಅಲ್ಲಿ ಅವರ ಚಿತ್ರ ಕೂಡ ಇತ್ತು. ಅವರ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಚಿತ್ರಗಳನ್ನು ಹೋಲಿಸಿನೋಡಿದಾಗ ವೈರಲ್ ಚಿತ್ರದಲ್ಲಿ ಕಂಡುಬಂದಿರುವುದು ಅದೇ ವ್ಯಕ್ತಿ ಎಂದು ಕಂಡುಬಂದಿದೆ.

ಇದಲ್ಲದೆ, ಫೆಬ್ರವರಿ ೧೪, ೨೦೨೪ ರಂದು ದಿವ್ಯಾ ಮಡೆರ್ನಾ ಅವರ ಎಕ್ಸ್ (ಹಿಂದೆ ಟ್ವಿಟರ್) ಪೋಷ್ಟ್ ಅನ್ನು ನಾವು ಕಂಡುಕೊಂಡಿದ್ದೇವೆ. ಅದರಲ್ಲಿ ಅವರು ಅದೇ ವೈರಲ್ ಚಿತ್ರವನ್ನು ಹಂಚಿಕೊಂಡಿದ್ದಾರೆ. ಸೋನಿಯಾ ಗಾಂಧಿ ಅವರು ರಾಜ್ಯಸಭೆಗೆ ನಾಮನಿರ್ದೇಶನ ಮಾಡಲು ರಾಜಸ್ಥಾನಕ್ಕೆ ಆಗಮಿಸಿದಾಗ ಈ ಚಿತ್ರವನ್ನು ತೆಗೆಯಲಾಗಿತ್ತು ಎಂದು ಈ ಪೋಷ್ಟ್ ನ ಶೀರ್ಷಿಕೆಯು ಗಮನಿಸಿದೆ.

ಫೆಬ್ರವರಿ ೧೪, ೨೦೨೪ ರಂದು ದಿವ್ಯ ಮಡೆರ್ನಾ ಅವರು ಹಂಚಿಕೊಂಡಎಕ್ಸ್ ಪೋಷ್ಟ್ ನ ಸ್ಕ್ರೀನ್‌ಶಾಟ್.


ದಿವಾ ಮಡೆರ್ನಾ ಅವರು ಜೂನ್ ೧೪, ೨೦೨೪ ರಂದು ಎಕ್ಸ್ ಮತ್ತು ಫೇಸ್‌ಬುಕ್‌ನಲ್ಲಿ ಪೋಷ್ಟ್ ಗಳನ್ನು ಹಂಚಿಕೊಂಡಿದ್ದಾರೆ. ಈ ಪೋಷ್ಟ್ ಗಳಲ್ಲಿ ಈಗ ವೈರಲ್ ಆಗಿರುವ ಚಿತ್ರವನ್ನು ಹೊಂದಿದ್ದು, ಬಿಜೆಪಿ ಐಟಿ ಸೆಲ್ ತನ್ನ ಚಿತ್ರವನ್ನು ಬಳಸಿಕೊಂಡು ತಪ್ಪು ಮಾಹಿತಿಯನ್ನು ಪ್ರಚಾರ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಈ ಪೋಷ್ಟ್ ಗಳಲ್ಲಿ ಸೋನಿಯಾ ಗಾಂಧಿ ಅವರ ರಾಜ್ಯಸಭಾ ನಾಮನಿರ್ದೇಶನದ ಸಮಯದಲ್ಲಿ ತೆಗೆದ ಫೋಟೋ ಇದು ಎಂದು ಅವರು ಪುನರುಚ್ಚರಿಸಿದ್ದಾರೆ.

ಸಿಐಎಸ್‌ಎಫ್‌ನ ಮಾಜಿ ಕಾನ್‌ಸ್ಟೆಬಲ್ ಕುಲ್ವಿಂದರ್ ಕೌರ್ ಮತ್ತು ದಿವ್ಯಾ ಮಡೆರ್ನಾ ಅವರ ಚಿತ್ರಗಳನ್ನು ಹೋಲಿಸಿದಾಗ, ಗಾಂಧಿ ಕುಟುಂಬದವರೊಂದಿಗೆ ವೈರಲ್ ಚಿತ್ರದಲ್ಲಿ ಕಂಡುಬರುವ ವ್ಯಕ್ತಿ ದಿವ್ಯ ಮಡೆರ್ನಾ ಅವರೇ ಎಂದು ಸ್ಪಷ್ಟವಾಗಿದೆ.

ಕುಲ್ವಿಂದರ್ ಕೌರ್ ಮತ್ತು ದಿವ್ಯಾ ಮಡೆರ್ನಾ ಅವರ ಫೋಟೋಗಳ ಮಧ್ಯೆ ಹೋಲಿಕೆ.


ತೀರ್ಪು:

ಕಂಗನಾ ರನೌತ್ ಅವರಿಗೆ ಕಪಾಳಮೋಕ್ಷ ಮಾಡಿದ ಮಾಜಿ ಸಿಐಎಸ್‌ಎಫ್ ಕಾನ್‌ಸ್ಟೆಬಲ್‌ನೊಂದಿಗೆ ಗಾಂಧಿ ಕುಟುಂಬದವರು ಫೋಟೋಗೆ ಪೋಸ್ ನೀಡುತ್ತಿದ್ದಾರೆ ಎಂಬ ಸಾಮಾಜಿಕ ಮಾಧ್ಯಮದ ಹೇಳಿಕೆಗಳು ತಪ್ಪು. ಫೋಟೋದಲ್ಲಿರುವ ವ್ಯಕ್ತಿ ರಾಜಸ್ಥಾನದ ಓಸಿಯನ್‌ನ ಮಾಜಿ ಶಾಸಕಿ ದಿವ್ಯಾ ಮಹಿಪಾಲ್ ಮಡೆರ್ನಾ.


Claim :  Unrelated picture shared to show the Gandhis posing with former CISF official who slapped Kangana Ranaut
Claimed By :  X user
Fact Check :  False
Tags:    

Similar News