ಮಾದಕವಸ್ತು ಕಳ್ಳಸಾಗಣೆಗೆ ಸಂಬಂಧಿಸಿದಂತೆ ಮಣಿಪುರದಲ್ಲಿ ಮಹಿಳೆಯೊಬ್ಬರನ್ನು ಥಳಿಸಿರುವ ವೀಡಿಯೋವನ್ನು ಕೋಮುವಾದಿ ತಪ್ಪಾಗಿ ಆರೋಪಿಸಲಾಗಿದೆ

Update: 2024-07-26 12:00 GMT

ಸಾರಾಂಶ:

ಒಬ್ಬ ಮಹಿಳೆಯೊಬ್ಬರನ್ನು ಅಮಾನುಷವಾಗಿ ಥಳಿಸುತ್ತಿರುವ ವೀಡಿಯೋವನ್ನು ಮಣಿಪುರದಲ್ಲಿ ಹಿಂದೂ ಉಗ್ರಗಾಮಿಗಳು ಮುಸ್ಲಿಂ ಮಹಿಳೆಯ ಮೇಲೆ ದಾಳಿ ನಡೆಸುತ್ತಿರುವುದನ್ನು ಚಿತ್ರಿಸಿಸುತ್ತದೆ ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಂಡಿದ್ದಾರೆ. ಆದರೆ, ಅಧಿಕೃತ ಮೂಲಗಳು ಮತ್ತು ಸ್ಥಳೀಯ ಸತ್ಯ-ಪರೀಕ್ಷಕರು ಘಟನೆಯು ಮುಸ್ಲಿಂ ಸಮುದಾಯದೊಳಗಿನ ಮಾದಕವಸ್ತು ಕಳ್ಳಸಾಗಣೆ ಚಟುವಟಿಕೆಗಳಿಗೆ ಸಂಬಂಧಿಸಿದೆ ಎಂದು ದೃಢಪಡಿಸಿದ್ದಾರೆ. ಆದ್ದರಿಂದ ಈ ಹೇಳಿಕೆ ತಪ್ಪು.


ಹೇಳಿಕೆ:

ಮಣಿಪುರದಲ್ಲಿ ಮುಸ್ಲಿಂ ಮಹಿಳೆಯ ಮೇಲೆ ಹಿಂದೂ ಉಗ್ರಗಾಮಿಗಳು ದಾಳಿ ನಡೆಸುತ್ತಿರುವುದನ್ನು ವೀಡಿಯೋ ಬಿಂಬಿಸುತ್ತದೆ ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಒಬ್ಬ ಮಹಿಳೆಯನ್ನು ಹಿಂಸಾತ್ಮಕವಾಗಿ ಥಳಿಸುತ್ತಿರುವುದನ್ನು ತೋರಿಸುವ ವೀಡಿಯೋ ಕ್ಲಿಪ್ ಅನ್ನು ಹಂಚಿಕೊಂಡಿದ್ದಾರೆ. ಈ ಹೇಳಿಕೆ ಹೊಂದಿರುವ ಹಲವಾರು ಪೋಷ್ಟ್ ಗಳು ವೈರಲ್ ಆಗಿವೆ. ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ "ಭಾರತದ ಮಣಿಪುರ ರಾಜ್ಯದಲ್ಲಿ ಹಸುವಿನ ಆರಾಧಕರಿಂದ ಮುಸುಕುಧಾರಿ ಮುಸ್ಲಿಂ ಮಹಿಳೆಯನ್ನು ಕ್ರೂರವಾಗಿ ಥಳಿಸಿದ ವೀಡಿಯೋವನ್ನು ಜಗತ್ತಿಗೆ ತೋರಿಸಬೇಕು" ಎಂದು ಹೇಳಲಾಗಿದೆ. ಈ ಪೋಷ್ಟ್ ಸುಮಾರು ೧೦,೦೦೦ ವೀಕ್ಷಣೆಗಳನ್ನು ಹೊಂದಿದೆ. "ಇಸ್ಲಾಮಿಕ್ ಡಾ ನೆಟ್‌ವರ್ಕ್" ಚಾನೆಲ್‌ನ ಯೂಟ್ಯೂಬ್ ವೀಡಿಯೋದಲ್ಲಿ ಮಣಿಪುರದಲ್ಲಿ ಮುಸ್ಲಿಮರ ವಿರುದ್ಧ ಕೋಮು ಹಿಂಸಾಚಾರವನ್ನು ಸೂಚಿಸುವ ಹಿಂದಿ ಪಠ್ಯದೊಂದಿಗೆ ಅದೇ ಕ್ಲಿಪ್ ಅನ್ನು ಒಳಗೊಂಡಿತ್ತು. ಎಕ್ಸ್ ನಲ್ಲಿ ಅಬು ಆಲಾ ಅಜ್ಮಿ ಅವರಿಂದ ಅತ್ಯಂತ ವೈರಲ್ ಪೋಷ್ಟ್ ಬಂದಿದ್ದು, ಅವರು ಈ ಹಿಂದಿ ಶೀರ್ಷಿಕೆಯೊಂದಿಗೆ ವೀಡಿಯೋವನ್ನು ಹಂಚಿಕೊಂಡಿದ್ದಾರೆ - "ಇಡೀ ಜಗತ್ತು ನೋಡಬೇಕಾದ ವೀಡಿಯೋ, ಭಾರತದ ಮಣಿಪುರ ರಾಜ್ಯದಲ್ಲಿ ಹುಚ್ಚು ಹಸುವಿನ ಆರಾಧಕರು ಮುಸ್ಲಿಂ ಮಹಿಳೆಯನ್ನು ನಿರ್ದಯವಾಗಿ ಹೊಡೆಯುತ್ತಿದ್ದಾರೆ" (ಅನುವಾದಿಸಲಾಗಿದೆ). ಈ ಪೋಷ್ಟ್ ಸುಮಾರು ೧.೭೫ ಲಕ್ಷ ವೀಕ್ಷಣೆಗಳನ್ನು ಗಳಿಸಿದೆ.

ಜುಲೈ ೨೩, ೨೦೨೪ ರಂದು ವೈರಲ್ ವೀಡಿಯೋ ಮತ್ತು ಹೇಳಿಕೆಯನ್ನು ಹಂಚಿಕೊಳ್ಳುವ ಎಕ್ಸ್ ಪೋಷ್ಟ್ ನ ಸ್ಕ್ರೀನ್‌ಶಾಟ್.


ಪುರಾವೆ:

ನಾವು ಕೀವರ್ಡ್ ಸರ್ಚ್ ನಡೆಸಿದ್ದೇವೆ ಮತ್ತು ಮಣಿಪುರ ಪೊಲೀಸರು ಅವರ ಅಧಿಕೃತ ಎಕ್ಸ್ ಖಾತೆಯಲ್ಲಿ ವೀಡಿಯೋವನ್ನು ಉದ್ದೇಶಿಸಿ ಪೋಷ್ಟ್ ಅನ್ನು ಹಂಚಿಕೊಂಡಿರುವುದನ್ನು ಕಂಡುಕೊಂಡಿದ್ದೇವೆ. ಪೋಷ್ಟ್ ನಲ್ಲಿ ಹೀಗೆ ಹೇಳಲಾಗಿದೆ - "#FAKE ದುಷ್ಕರ್ಮಿಗಳು ಮಾದಕ ದ್ರವ್ಯ ದಂಧೆಯಲ್ಲಿ ತೊಡಗಿದ್ದರು ಎನ್ನಲಾದ ಮಹಿಳೆಗೆ ಥಳಿಸಿದ್ದಾರೆ. ಪೊಲೀಸರು ಈ ಸಂಬಂಧ ಪ್ರಕರಣವನ್ನು ಕೈಗೆತ್ತಿಕೊಂಡಿದ್ದಾರೆ. ಇದರಲ್ಲಿ ಯಾವುದೇ ಕೋಮುವಾದ ಕೋನವಿಲ್ಲ."

ಜುಲೈ ೨೪, ೨೦೨೪ ರಂದು ಎಕ್ಸ್ ನಲ್ಲಿ ಮಣಿಪುರ ಪೊಲೀಸರು ನೀಡಿರುವ ಸ್ಪಷ್ಟೀಕರಣದ ಸ್ಕ್ರೀನ್‌ಶಾಟ್.


ಹೆಚ್ಚಿನ ಹುಡುಕಾಟವು ನಮ್ಮನ್ನು 'ಮಣಿಪುರ್ ಫ್ಯಾಕ್ಟ್ ಚೆಕ್' ಹೆಸರಿನ ಫೇಸ್‌ಬುಕ್ ಪುಟಕ್ಕೆ ಕರೆದೊಯ್ದವು, ಇದು ಹೆಚ್ಚುವರಿ ಸಂದರ್ಭವನ್ನು ಒದಗಿಸಿದೆ. ಅವರ ಪೋಷ್ಟ್ ಪ್ರಕಾರ, ವೀಡಿಯೋದಲ್ಲಿರುವ ಮಹಿಳೆಯನ್ನು ಮಣಿಪುರದ ಇಂಫಾಲ್‌ನ ಆಪಾದಿತ ಡ್ರಗ್ ಡೀಲರ್ ಇಬೆಮ್ ಬೇಗಂ ಎಂದು ಗುರುತಿಸಲಾಗಿದೆ. ದಾಳಿಕೋರರು ಯುನೈಟೆಡ್ ನ್ಯಾಶನಲ್ ಲಿಬರೇಶನ್ ಫ್ರಂಟ್ (ಯುಏನ್ಎಲ್ಎಫ್) ನ ಸದಸ್ಯರು ಎಂದು ಪೋಷ್ಟ್ ಹೇಳುತ್ತದೆ, ಇದು ಪ್ರದೇಶದಲ್ಲಿ ನಿಷೇಧಿತ ದಂಗೆಕೋರ ಗುಂಪು. ಮಣಿಪುರ ಮೈಟೇಯ್ ಪಂಗನ್ ರೆವಲ್ಯೂಷನರಿ ಆರ್ಮಿ (ಎಂಎಂಪಿಆರ್ ಎ) ಎಂಬ ಸಂಘಟನೆಯಿಂದ ಜುಲೈ ೧೬, ೨೦೨೪ ರಂದು ಪತ್ರಿಕಾ ಪ್ರಕಟಣೆಯನ್ನು ನಾವು ಕಂಡುಕೊಂಡಿದ್ದೇವೆ, ಅದು ವೀಡಿಯೋವನ್ನು ಮುಸ್ಲಿಂ ಸಮುದಾಯದೊಳಗಿನ ಮಾದಕವಸ್ತು ಸಂಬಂಧಿತ ಚಟುವಟಿಕೆಗಳ ಸಂದರ್ಭದಲ್ಲಿನ ಘಟನೆಎಂದು ಉಲ್ಲೇಖಿಸಿದೆ.


ಜುಲೈ ೧೭, ೨೦೨೪ ರ ಎಂಎಂಪಿಆರ್ ಎ ಪತ್ರಿಕಾ ಪ್ರಕಟಣೆಯ ಸ್ಕ್ರೀನ್‌ಶಾಟ್.


ತೀರ್ಪು:

ಈ ವೈರಲ್ ವೀಡಿಯೋದ ವಿಶ್ಲೇಷಣೆಯು ಆಪಾದಿತ ಮಾದಕವಸ್ತು ಕಳ್ಳಸಾಗಣೆ ಚಟುವಟಿಕೆಗಳಿಗೆ ಸಂಬಂಧಿಸಿದೆ ಮತ್ತು ಮುಸ್ಲಿಂ ಸಮುದಾಯದ ಸದಸ್ಯರನ್ನು ಒಳಗೊಂಡಿರುತ್ತದೆ ಎಂದು ಸೂಚಿಸುತ್ತದೆ. ಘಟನೆಯು ಸ್ಥಳೀಯ ಸಮಸ್ಯೆಗಳ ಕುರಿತಾಗಿದೆಯೇ ಹೊರತು ಕೋಮುಗಲಭೆಯಲ್ಲ. ಆದ್ದರಿಂದ, ಈ ಘಟನೆಗೆ ಕೋಮುವಾದಿ ನಿರೂಪಣೆ ನೀಡುವ ಸಾಮಾಜಿಕ ಮಾಧ್ಯಮ ಪೋಷ್ಟ್ ಗಳು ತಪ್ಪು.

Claim :  Video of a woman beaten in Manipur in relation to drug trafficking wrongly attributed to communal violence
Claimed By :  X user
Fact Check :  False
Tags:    

Similar News