ವಾರಣಾಸಿಯಲ್ಲಿ ಜನರು ಪ್ರಧಾನಿ ಮೋದಿಯವರನ್ನು ನಿಂದಿಸುವ ವೀಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ತಪ್ಪಾಗಿ ಹಂಚಿಕೊಳ್ಳಲಾಗಿದೆ
ಸಾರಾಂಶ:
ವಾರಣಾಸಿಯಿಂದ ಜನರು ಪ್ರಧಾನಿ ನರೇಂದ್ರ ಮೋದಿಯವರನ್ನು ನಿಂದಿಸುತ್ತಿರುವ ವೀಡಿಯೋ ಕ್ಲಿಪ್ ಅನ್ನು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ಆದರೆ, ವೈರಲ್ ವೀಡಿಯೋದಲ್ಲಿನ ಆಡಿಯೊವನ್ನು ಎಡಿಟ್ ಮಾಡಲಾಗಿದೆ ಮಾಡಲಾಗಿದ್ದು ಅದು ಆರೋಪವನ್ನು ತಪ್ಪು ಹಾಗು ವೀಡಿಯೋವನ್ನು ಫೇಕ್ ಆಗಿಸುತ್ತದೆ.
ಹೇಳಿಕೆ:
ಉತ್ತರ ಪ್ರದೇಶದ ವಾರಣಾಸಿಯಲ್ಲಿ ಜನರು ಪ್ರಧಾನಿ ನರೇಂದ್ರ ಮೋದಿ ಅವರನ್ನು ನಿಂದಿಸುತ್ತಿರುವುದನ್ನು ತೋರಿಸುವ ೧೫ ಸೆಕೆಂಡುಗಳ ಕ್ಲಿಪ್ ಅನ್ನು ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಂಡಿದ್ದಾರೆ. ಎಕ್ಸ್ (ಹಿಂದೆ ಟ್ವಿಟ್ಟರ್) ನಲ್ಲಿ ವೆರಿಫೈಎಡ್ ಬಳಕೆದಾರರು ಜೂನ್ ೧, ೨೦೨೪ ರಂದು ವೀಡಿಯೋವನ್ನು "ನಾವು ವಾರಣಾಸಿಯಿಂದ ಏನನ್ನು ನೋಡುತ್ತಿದ್ದೇವೆ" (ಅನುವಾದಿಸಲಾಗಿದೆ) ಎಂಬ ಹಿಂದಿ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ. ಪೋಷ್ಟ್ ೩೪೭.೨ ಸಾವಿರ ವೀಕ್ಷಣೆಗಳು, ೪.೩ ಸಾವಿರ ಇಷ್ಟಗಳು ಮತ್ತು ೧.೩ ಸಾವಿರ ಮರುಹಂಚಿಕೆಗಳನ್ನು ಗಳಿಸಿದೆ.
ಜೂನ್ ೧, ೨೦೨೪ ರಂದು ವೈರಲ್ ವೀಡಿಯೋವನ್ನು ಹಂಚಿಕೊಂಡಿರುವ ಎಕ್ಸ್ ಪೋಷ್ಟ್ ನ ಸ್ಕ್ರೀನ್‌ಶಾಟ್.
ಇನ್ನೊಬ್ಬ ವೆರಿಫೈಎಡ್ ಎಕ್ಸ್ ಬಳಕೆದಾರರು ಜೂನ್ ೧, ೨೦೨೪ ರಂದು ಇದೇ ರೀತಿಯ ಶೀರ್ಷಿಕೆಯೊಂದಿಗೆ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಯೂಟ್ಯೂಬ್ ಮತ್ತು ಇನ್ಸ್ಟಾಗ್ರಾಮ್ ನಲ್ಲಿ ಇತರ ಸಾಮಾಜಿಕ ಮಾಧ್ಯಮ ಬಳಕೆದಾರರು ಸಹ ವೈರಲ್ ವೀಡಿಯೋಗಳನ್ನು ಹಂಚಿಕೊಂಡಿದ್ದಾರೆ.
ಪುರಾವೆ:
ನಾವು ವೈರಲ್ ವೀಡಿಯೋವನ್ನು ವಿಶ್ಲೇಷಿಸಿದ್ದೇವೆ ಮತ್ತು ವೀಡಿಯೋದಲ್ಲಿ ಗೋಚರಿಸುವ ಹಿಂದಿ ಜಾಹೀರಾತು ಫಲಕವು "ಕಾರ್ಯಾಲಯ ಜಿಲ್ಲಾಧಿಕಾರಿ ವಾರಣಾಸಿ" (ಅನುವಾದಿಸಲಾಗಿದೆ) ಎಂದು ಹೇಳುವುದನ್ನು ಗಮನಿಸಿದ್ದೇವೆ. ಅದು ಜಿಲ್ಲಾ ಮ್ಯಾಜಿಸ್ಟ್ರೇಟ್ ಕಚೇರಿಯಾಗಿದೆ. ವೀಡಿಯೋ ವಾರಣಾಸಿಯಿಂದ ಬಂದಿದೆ ಎಂದು ಸೂಚಿಸುತ್ತದೆ.
ವೈರಲ್ ವೀಡಿಯೋದ ಕೀಫ್ರೇಮ್‌ಗಳ ರಿವರ್ಸ್ ಇಮೇಜ್ ಸರ್ಚ್ ನಮ್ಮನ್ನು ಪ್ರಧಾನಿ ಮೋದಿಯವರ ಅಧಿಕೃತ ಯೂಟ್ಯೂಬ್ ಚಾನೆಲ್‌ಗೆ ಕರೆದೊಯ್ದಿತು, ಅಲ್ಲಿ ನಾವು ಮೇ ೧೪, ೨೦೨೪ ರ ವೈರಲ್ ಕ್ಲಿಪ್ ನ ಸಂಪೂರ್ಣ ವೀಡಿಯೋವನ್ನು ಕಂಡುಕೊಂಡಿದ್ದೇವೆ. ಅದರಲ್ಲಿ ಯಾವುದೇ ಅಸಭ್ಯ ಭಾಷೆ ಕೇಳಿಬರುವುದಿಲ್ಲ.
ಪ್ರಧಾನಿ ಮೋದಿಯವರ ಯೂಟ್ಯೂಬ್ ಚಾನೆಲ್ ನಲ್ಲಿ ಮೇ ೧೪, ೨೦೨೪ ರಂದು ಅಪ್ಲೋಡ್ ಮಾಡಲಾದ ಶಾರ್ಟ್ ನ ಸ್ಕ್ರೀನ್‌ಶಾಟ್.
ವಾರಣಾಸಿಯಿಂದ ೨೦೨೪ ರ ಲೋಕಸಭಾ ಚುನಾವಣೆಗೆ ಪ್ರಧಾನಿ ಮೋದಿಯವರು ಮೇ ೧೪, ೨೦೨೪ ರಂದು ನಾಮಪತ್ರ ಸಲ್ಲಿಸಿದ್ದು, ನಾಮಪತ್ರ ಸಲ್ಲಿಸಿದ ಬಳಿಕ ಇತರ ಎನ್‌ಡಿಎ ನಾಯಕರೊಂದಿಗೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಕಛೇರಿಯಿಂದ ಹೊರನಡೆಯುತ್ತಿರುವುದನ್ನು ವೀಡಿಯೋ ತೋರಿಸುತ್ತದೆ.
ಇದಲ್ಲದೆ, ನಾವು ಫೇಸ್‌ಬುಕ್‌ನಲ್ಲಿ ಅಕ್ಟೋಬರ್ ೨೧, ೨೦೨೪ ರಂದು ಹಂಚಿಕೊಳ್ಳಲಾದ ಒಂದು ವೀಡಿಯೋವನ್ನು ಕಂಡುಕೊಂಡಿದ್ದೇವೆ, ಅದು ವೈರಲ್ ವೀಡಿಯೋದಲ್ಲಿನ ಆಡಿಯೊದ ಸಂಪೂರ್ಣ ಭಾಗವನ್ನು ಹೊಂದಿದೆ. ವೀಡಿಯೋದಲ್ಲಿನ ಹಿಂದಿ ಪಠ್ಯವು, "ಬಿಹಾರದಲ್ಲಿ ಯೋಗಿ (ಯೋಗಿ ಆದಿತ್ಯಂತ್) ಸ್ವಾಗತ" (ಅನುವಾದಿಸಲಾಗಿದೆ) ಎಂದು ಹೇಳುತ್ತದೆ. ವೀಡಿಯೋದ ಸತ್ಯಾಸತ್ಯತೆಯನ್ನು ನಾವು ಸ್ವತಂತ್ರವಾಗಿ ಪರಿಶೀಲಿಸಲು ಸಾಧ್ಯವಾಗದಿದ್ದರೂ, ಆರ್‌ಜೆ(ಡಿ) ನಾಯಕ ಲಾಲು ಯಾದವ್ ಅವರನ್ನು ಶ್ಲಾಘಿಸುವಾಗ ವ್ಯಕ್ತಿಗಳು ಯೋಗಿ ಆದಿತ್ಯನಾಥ್ ಅವರನ್ನು ನಿಂದಿಸುವುದನ್ನು ನಾವು ಕೇಳಬಹುದು.
ಜನರು ಪ್ರಧಾನಿಯನ್ನು ನಿಂದನೆ ಮಾಡುತ್ತಿದ್ದಾರೆ ಎಂದು ಆರೋಪಿಸುವುದಕ್ಕಾಗಿ ಹಳೆಯ ವೀಡಿಯೋದ ಆಡಿಯೊವನ್ನು ಎಡಿಟ್ ಮಾಡಿ ಇತ್ತೀಚಿನ ವೀಡಿಯೋಗೆ ಸೇರಿಸಲಾಗಿದೆ ಎಂದು ಇದು ದೃಢಪಡಿಸುತ್ತದೆ.
ತೀರ್ಪು:
ಉತ್ತರ ಪ್ರದೇಶದ ವಾರಣಾಸಿಯಲ್ಲಿ ಜನರು ಪ್ರಧಾನಿ ನರೇಂದ್ರ ಮೋದಿ ಅವರನ್ನು ನಿಂದಿಸುತ್ತಿರುವುದನ್ನು ತೋರಿಸುವ ವೈರಲ್ ವೀಡಿಯೋವನ್ನು ಎಡಿಟ್ ಮಾಡಲಾಗಿದೆ ಎಂದು ವಿಶ್ಲೇಷಣೆ ಬಹಿರಂಗಪಡಿಸುತ್ತದೆ. ಆದ್ದರಿಂದ, ಈ ಹೇಳಿಕೆ ತಪ್ಪು ಹಾಗು ಅದರೊಂದಿಗೆ ಹಚ್ಚಿಕೊಂಡಿರುವ ವೀಡಿಯೋ ಫೇಕ್.