ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರು ಪ್ರಧಾನಿ ಮೋದಿಯನ್ನು ಟೀಕಿಸಿರುವ ವಿಡಿಯೋ ಇತ್ತೀಚಿನದಲ್ಲ

Update: 2024-06-06 08:20 GMT

ಸಾರಾಂಶ:

೨೦೨೪ ರ ಲೋಕಸಭಾ ಚುನಾವಣೆಯ ಫಲಿತಾಂಶದ ನಂತರ ತೆಲುಗು ದೇಶಂ ಪಕ್ಷದ (ಟಿಡಿಪಿ) ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸುತ್ತಿರುವುದನ್ನು ತೋರಿಸಲು ಸಾಮಾಜಿಕ ಮಾಧ್ಯಮ ಬಳಕೆದಾರರು ವೀಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಆದರೆ, ವೈರಲ್ ವೀಡಿಯೋವನ್ನು ಕ್ಲಿಪ್ ಮಾಡಲಾಗಿದೆ ಮತ್ತು ಫೆಬ್ರವರಿ ೧೨, ೨೦೧೯ ರಂದು ಟಿಡಿಪಿಯು ನವದೆಹಲಿಯಲ್ಲಿ ನಡೆಸಿದ ಪ್ರತಿಭಟನೆಯದ್ದು. ಆನ್‌ಲೈನ್‌ನಲ್ಲಿ ಈ ಬಗ್ಗೆ ಪ್ರಸಾರವಾಗುತ್ತಿರುವ ಹೇಳಿಕೆಗಳು ತಪ್ಪು.


ಹೇಳಿಕೆ:

ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರು ಪ್ರಧಾನಿ ಮೋದಿಯವರ ಇತ್ತೀಚೆಗೆ ಟೀಕಿಸಿದ್ದಾರೆ ಎಂದು ತೋರಿಸಲು ವೀಡಿಯೋವೊಂದನ್ನು ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ ಬಳಕೆದಾರರು ಹಂಚಿಕೊಂಡಿದ್ದಾರೆ. ಟಿಡಿಪಿ ಒಂದು ಜಾತ್ಯತೀತ ಪಕ್ಷವಾಗಿದ್ದು ರಾಜಕೀಯ ಬಲವಂತದಿಂದ ಈ ಹಿಂದೆ ಭಾರತೀಯ ಜನತಾ ಪಕ್ಷದೊಂದಿಗೆ (ಬಿಜೆಪಿ) ಕೈಜೋಡಿಸಿದೆ ಮತ್ತು ನರೇಂದ್ರ ಮೋದಿಯವರಿಗಿಂತ ಟಿಡಿಪಿಯ ಎಲ್ಲಾ ನಾಯಕರು ಉತ್ತಮರು ಎಂದು ಎನ್‌ಡಿಟಿವಿ ಹಿರಿಯ ಪತ್ರಕರ್ತ ಶ್ರೀನಿವಾಸನ್ ಜೈನ್ ಅವರ ಪ್ರಶ್ನೆಗೆ ನಾಯ್ಡು ಪ್ರತಿಕ್ರಯಿಸಿರುವುದನ್ನು ವೀಡಿಯೋ ತೋರಿಸುತ್ತದೆ. ಪರಿಶೀಲಿಸಿದ ಬಳಕೆದಾರರು ಜೂನ್ ೪, ೨೦೨೪ ರಂದು ಪ್ರಧಾನಿಯವರನ್ನು ಟ್ಯಾಗ್ ಮಾಡುವ ಮೂಲಕ ಹೀಗೆ ಹೇಳಿಕೊಂಡು ವೀಡಿಯೋವನ್ನು ಹಂಚಿಕೊಂಡಿದ್ದಾರೆ, "ಎಲ್ಲಾ ನಾಯಕರು @narendramodi ಗಿಂತ ಉತ್ತಮರು" - ಚಂದ್ರಬಾಬು ನಾಯ್ಡು (ಅನುವಾದಿಸಲಾಗಿದೆ)." ಈ ಪೋಷ್ಟ್ ೫೨೩.೬ ಸಾವಿರ ವೀಕ್ಷಣೆಗಳು, ೧೮ ಸಾವಿರ ಇಷ್ಟಗಳು ಮತ್ತು ೫.೪ ಸಾವಿರ ಮರುಪೋಷ್ಟ್ ಗಳನ್ನು ಗಳಿಸಿದೆ.

ಜೂನ್ ೪, ೨೦೨೪ ರಂದು ಎಕ್ಸ್ ನಲ್ಲಿ ಪೋಷ್ಟ್ ಮಾಡಿದ ವೀಡಿಯೋದ ಸ್ಕ್ರೀನ್‌ಶಾಟ್.


ಮತ್ತೊಬ್ಬ ಎಕ್ಸ್ ಬಳಕೆದಾರರು ಮೇ ೯, ೨೦೨೪ ರಂದು ಇದೇ ಕ್ಲಿಪ್ ಅನ್ನು ಬ್ರೇಕಿಂಗ್ ನ್ಯೂಸ್ ಎಂದು ಹೇಳಿಕೊಳ್ಳುವ ತೆಲುಗು ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ. ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್‌ ಮೊದಲಾದ ಇತರ ಸಾಮಾಜಿಕ ಮಾಧ್ಯಮ ಬಳಕೆದಾರರು ಕೂಡ ಈ ವೀಡಿಯೋವನ್ನು ಹಂಚಿಕೊಂಡಿದ್ದಾರೆ.


ಪುರಾವೆ:

ನಾವು ವೈರಲ್ ವೀಡಿಯೋವನ್ನು ವಿಶ್ಲೇಷಿಸಿದ್ದೇವೆ ಮತ್ತು ಇದು ನವದೆಹಲಿಯ ಆಂಧ್ರ ಭವನದಿಂದ ಎನ್‌ಡಿಟಿವಿ ವರದಿಯ ಕ್ಲಿಪ್ ಮಾಡಿದ ಆವೃತ್ತಿಯಾಗಿದೆ ಎಂದು ಗಮನಿಸಿದ್ದೇವೆ. ನಾವು "ಟಿಡಿಪಿ," "ಚಂದ್ರಬಾಬು ನಾಯ್ಡು," "ಆಂಧ್ರ ಭವನ," "ನವದೆಹಲಿ," ಮತ್ತು "ಎನ್‌ಡಿಟಿವಿ" ಮೊದಲಾದ ಪದಗಳನ್ನು ಬಳಸಿಕೊಂಡು ಕೀವರ್ಡ್ ಹುಡುಕಾಟವನ್ನು ನಡೆಸಿದ್ದೇವೆ. ಇದು ಫೆಬ್ರವರಿ ೧೨, ೨೦೧೯ ರ ಎನ್‌ಡಿಟಿವಿಯ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿನ ಹಂಚಿಕೊಂಡ ವರದಿಯ ವಿಸ್ತೃತ ಆವೃತ್ತಿಗೆ ನಮ್ಮನ್ನು ಕರೆದೊಯ್ಯಿತು. ಈ ವೀಡಿಯೋದ ಟೈಟಲ್ ಹೀಗಿದೆ, "ಚಂದ್ರಬಾಬು ನಾಯ್ಡು ವರ್ಸಸ್ ಪಿಎಂ ಮೋದಿ: ಬ್ಯಾಟಲ್ ಟರ್ನ್ಸ್ ಪರ್ಸನಲ್? (ಅನುವಾದಿಸಲಾಗಿದೆ)" ಎಂದು ಓದುತ್ತದೆ.

ಫೆಬ್ರವರಿ ೧೨, ೨೦೧೯ ರಂದು ಎನ್‌ಡಿಟಿವಿ ಯೂಟ್ಯೂಬ್ ನಲ್ಲಿ ಹಂಚಿಕೊಂಡ ವೀಡಿಯೋದ ಸ್ಕ್ರೀನ್‌ಶಾಟ್.


ವೀಡಿಯೋದ ೭:೦೪ ನಿಮಿಷಗಳ ಟೈಮ್‌ಸ್ಟ್ಯಾಂಪ್‌ನಲ್ಲಿ, ವೈರಲ್ ಕ್ಲಿಪ್ ಪ್ರಾರಂಭವಾಗುತ್ತದೆ. ೨೦೧೪ ರಲ್ಲಿ ತೆಲಂಗಾಣ ರಚನೆಯ ಸಂದರ್ಭದಲ್ಲಿ ಕೇಂದ್ರವು ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವಂತೆ ಒತ್ತಾಯಿಸಿ ಫೆಬ್ರವರಿ ೧೧, ೨೦೧೯ ರಂದು ನವದೆಹಲಿಯ ಆಂಧ್ರ ಭವನದಲ್ಲಿ ಟಿಡಿಪಿ ಒಂದು ದಿನದ ಪ್ರತಿಭಟನೆ ನಡೆಸಿತ್ತು. ಫೆಬ್ರವರಿ ೧೧, ೨೦೧೯ ರ ಎನ್‌ಡಿಟಿವಿ ವರದಿಯ ಪ್ರಕಾರ, ಇತರೆ ಪ್ರಮುಖ ವಿರೋಧ ಪಕ್ಷದ ನಾಯಕರು ಧರಣಿಯಲ್ಲಿ ಪಾಲ್ಗೊಂಡರು. ಟಿಡಿಪಿ ಮಾರ್ಚ್ ೧೬, ೨೦೧೮ ರಂದು ಆಂಧ್ರಪ್ರದೇಶದ ವಿಶೇಷ ಸ್ಥಾನಮಾನದ ವಿಷಯಕ್ಕೆ ಸಂಬಂಧಿಸಿ ಉಂಟಾದ ಅಭಿಪ್ರಾಯ ವ್ಯತ್ಯಾಸದಿಂದಾಗಿ ಎನ್‌ಡಿಎ ಮೈತ್ರಿಕೂಟದಿಂದ ಹೊರಬಂದಿತು.

ಇತರ ಸುದ್ದಿ ಮಾಧ್ಯಮಗಳಾದ ದಿ ಟೈಮ್ಸ್ ಆಫ್ ಇಂಡಿಯಾ ಮತ್ತು ದಿ ಹಿಂದೂ ಕೂಡ ಟಿಡಿಪಿ ಪ್ರತಿಭಟನೆಯ ಬಗ್ಗೆ ವರದಿ ಮಾಡಿದೆ.


ತೀರ್ಪು:

ವೀಡಿಯೋದ ವಿಶ್ಲೇಷಣೆಯು ಫೆಬ್ರವರಿ ೧೨, ೨೦೧೮ ರಂದು ನವದೆಹಲಿಯ ಆಂಧ್ರ ಭವನದಲ್ಲಿ ನಡೆದ ಟಿಡಿಪಿ ಪ್ರತಿಭಟನೆಯದ್ದು ಎಂದು ಬಹಿರಂಗಪಡಿಸುತ್ತದೆ. ಆದ್ದರಿಂದ, ವೀಡಿಯೋ ಇತ್ತೀಚಿನದು ಎಂದು ಹೇಳಿಕೊಂಡು ಆನ್ಲೈನ್ ನಲ್ಲಿ ಮಾಡಿರುವ ಆರೋಪಗಳು ತಪ್ಪು.

Claim :  Video of TDP chief Chandrababu Naidu criticizing PM Modi is not recent
Claimed By :  X user
Fact Check :  False
Tags:    

Similar News