ಸುದ್ದಿ ಬ್ಲಾಗ್‌ಗಳು ಮತ್ತು ಸಾಮಾಜಿಕ ಮಾಧ್ಯಮ ಪೋಷ್ಟ್ ಗಳು ರೈಲ್ವೆ ನೇಮಕಾತಿ ಡ್ರೈವ್‌ಗಾಗಿ ಫೇಕ್ ಅಧಿಸೂಚನೆಯನ್ನು ಹಂಚಿಕೊಂಡಿವೆ
ಸಾರಾಂಶ:
ಸಾಮಾಜಿಕ ಮಾಧ್ಯಮ ಪೋಷ್ಟ್ ಗಳು ಮತ್ತು ಸುದ್ದಿ ಬ್ಲಾಗ್‌ಗಳು ಭಾರತೀಯ ರೈಲ್ವೇ ಅಥವಾ ರೈಲ್ವೆ ನೇಮಕಾತಿಗೆ ಸಂಬಂಧಿಸಿದ ಯಾವುದೇ ಅಧಿಕೃತ ಪ್ರಾಧಿಕಾರದಿಂದ ಅಧಿಕೃತ ಅಧಿಸೂಚನೆಯನ್ನು ತೋರಿಸುವುದಿಲ್ಲ. ರೈಲ್ವೇ ಸಂರಕ್ಷಣಾ ಪಡೆಗೆ (ಆರ್‌ಪಿಎಫ್) ಸಬ್ ಇನ್‌ಸ್ಪೆಕ್ಟರ್ ಮತ್ತು ಕಾನ್‌ಸ್ಟೆಬಲ್‌ಗಳ ನೇಮಕಾತಿಗೆ ಇಂತಹ ಅಧಿಸೂಚನೆಯನ್ನು ಸರ್ಕಾರ ಹೊರಡಿಸಿಲ್ಲ ಮತ್ತು ಇದು ಕಾಲ್ಪನಿಕ ಅಧಿಸೂಚನೆ ಎಂದು ಸೌತ್ ಸೆಂಟ್ರಲ್ ರೈಲ್ವೇಸ್ ಪತ್ರಿಕಾ ಪ್ರಕಟಣೆಯನ್ನು ಸಹ ಬಿಡುಗಡೆ ಮಾಡಿದೆ.
ಹೇಳಿಕೆ:
ವಿಜಯ ಕರ್ನಾಟಕ, ಝೀ ನ್ಯೂಸ್ ಕನ್ನಡ, ಮತ್ತು ಒನ್ಇಂಡಿಯಾ ಕನ್ನಡದಂತಹ ಹಲವಾರು ಸುದ್ದಿವಾಹಿನಿಗಳು ಫೆಬ್ರವರಿ ೨೦೨೪ ರ ಕೊನೆಯಲ್ಲಿ ಆರ್‌ಪಿಎಫ್ ನಿಂದ ನೇಮಕಾತಿ ಅಧಿಸೂಚನೆಯ ಕುರಿತು ಸುದ್ದಿ ಬ್ಲಾಗ್‌ಗಳನ್ನು ಪ್ರಕಟಿಸಿವೆ. ಈ ನೇಮಕಾತಿ ಡ್ರೈವ್‌ನಲ್ಲಿ ೪,೨೦೮ ಕಾನ್ಸ್ಟೇಬಲ್ ಹುದ್ದೆಗಳು ಮತ್ತು ೪೫೨ ರೈಲ್ವೆ ಸಬ್-ಇನ್ಸ್ಪೆಕ್ಟರ್ ಹುದ್ದೆಗಳು ಖಾಲಿ ಇವೆ ಎಂದು ಈ ಬ್ಲಾಗ್‌ಗಳು ಗಮನಿಸಿವೆ. ಭಾರತೀಯ ರೈಲ್ವೆಗೆ ಉದ್ಯೋಗ ನೇಮಕಾತಿಗಳನ್ನು ನಿರ್ವಹಿಸುವ ರೈಲ್ವೆ ನೇಮಕಾತಿ ಮಂಡಳಿ (ಆರ್‌ಆರ್‌ಬಿ) ಗೆ ಅಧಿಸೂಚನೆಯನ್ನು ನೀಡಲಾಗಿದೆ. ಹಲವಾರು ಜನರು ಇತ್ತೀಚೆಗೆ ಎಕ್ಸ್ (ಹಿಂದೆ ಟ್ವಿಟ್ಟರ್) ಮತ್ತು ಇತರೆ ಪ್ಲಾಟ್‌ಫಾರ್ಮ್‌ಗಳಲ್ಲಿ ಇದೇ ರೀತಿಯ ಅಧಿಸೂಚನೆ ವಿವರಗಳನ್ನು ಹಂಚಿಕೊಂಡಿದ್ದಾರೆ.
ಅಧಿಸೂಚನೆಗೆ ಸಂಬಂಧಿಸಿದ ಈ ಬ್ಲಾಗ್ ಪೋಷ್ಟ್ ಗಳು ಸಾಮಾನ್ಯ ವರ್ಗ ಮತ್ತು ಒಬಿಸಿ (ಇತರ ಹಿಂದುಳಿದ ವರ್ಗಗಳು) ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ₹೫೦೦ ಮತ್ತು ಎಸ್‌ಸಿ/ಎಸ್‌ಟಿ ವರ್ಗಕ್ಕೆ ಸೇರಿದ ಅರ್ಜಿದಾರರು, ಮಾಜಿ ಸೈನಿಕರು ಮತ್ತು ಮಹಿಳೆಯರಿಗೆ ಶುಲ್ಕ ₹೨೫೦. ಅಧಿಸೂಚನೆಯಲ್ಲಿ ಉಲ್ಲೇಖಿಸಲಾದ ಹುದ್ದೆಗಳಿಗೆ ಅರ್ಜಿಯ ಲಿಂಕ್ ಏಪ್ರಿಲ್ ೧೫, ೨೦೨೪ ರಿಂದ ಆಯಾ ವಿಭಾಗದ ರೈಲ್ವೆ ಇಲಾಖೆಯ ಅಧಿಕೃತ ಜಾಲತಾಣಗಳಲ್ಲಿ ಲಭ್ಯವಿರುತ್ತದೆ ಎಂದು ಹೇಳಲಾಗಿದೆ.
ಆರ್‌ಪಿಎಫ್ ನೇಮಕಾತಿ ಅಧಿಸೂಚನೆಯ ಅಧಿಸೂಚನೆಗೆ ಸಂಬಂಧಿಸಿದಂತೆ ಕನ್ನಡ ಸುದ್ದಿ ಲೇಖನದ ಲಿಂಕ್ ಅನ್ನು ಹಂಚಿಕೊಳ್ಳುವ ಎಕ್ಸ್ ಪೋಷ್ಟ್ ನ ಸ್ಕ್ರೀನ್‌ಶಾಟ್.
ಪುರಾವೆ:
ಅಧಿಸೂಚನೆಯು ನಿಜವೇ ಎಂದು ಪರಿಶೀಲಿಸಲು ಆರ್‌ಆರ್‌ಬಿ ಜಾಲತಾಣವನ್ನು ಪರಿಶೀಲಿಸಿದಾಗ, ಮೇಲೆ ತಿಳಿಸಲಾದ ವಿವರಗಳೊಂದಿಗೆ ಅಂತಹ ಯಾವುದೇ ದಾಖಲೆಯನ್ನು ಪ್ರಕಟಿಸಲಾಗಿಲ್ಲ ಎಂದು ಕಂಡುಬಂದಿದೆ. ಭಾರತೀಯ ರೈಲ್ವೇಸ್ ಹೊರಡಿಸಿದ ೨೦೨೪ ರ ತಾತ್ಕಾಲಿಕ ವಾರ್ಷಿಕ ಆರ್‌ಆರ್‌ಬಿ ನೇಮಕಾತಿ ಕ್ಯಾಲೆಂಡರ್ ಸಬ್-ಇನ್‌ಸ್ಪೆಕ್ಟರ್ ಮತ್ತು ಕಾನ್‌ಸ್ಟೆಬಲ್‌ಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊಂದಿಲ್ಲ. ಜನವರಿಯಿಂದ ಮಾರ್ಚ್‌ವರೆಗೆ ಎಎಲ್ ಪಿ (ಅಸಿಸ್ಟೆಂಟ್ ಲೋಕೋ ಪೈಲಟ್) ಗಳಿಗೆ ಮತ್ತು ಏಪ್ರಿಲ್‌ನಿಂದ ಜೂನ್‌ವರೆಗೆ ತಂತ್ರಜ್ಞರಿಗೆ ನೇಮಕಾತಿ ನಡೆಯಲಿದೆ ಎಂದು ಕ್ಯಾಲೆಂಡರ್‌ನಲ್ಲಿ ತಿಳಿಸಲಾಗಿದೆ. ಈ ಕ್ಯಾಲೆಂಡರ್ ನ ಅಧಿಸೂಚನೆಯ ಕೆಳಭಾಗದಲ್ಲಿ, "ಟೌಟ್‌ಗಳು, ಬ್ರೋಕರ್‌ಗಳು ಮತ್ತು ಉದ್ಯೋಗ ದರೋಡೆಕೋರರ ಬಗ್ಗೆ ಎಚ್ಚರದಿಂದಿರಿ" ಎಂದು ಸಹ ಹೇಳಲಾಗಿದೆ.
ಫೆಬ್ರವರಿ ೨೮, ೨೦೨೪ ರಂದು ಸಿಕಂದರಾಬಾದ್‌ನ ರೈಲ್ವೇ ನೇಮಕಾತಿ ಮಂಡಳಿಯ ಜಾಲತಾಣದಲ್ಲಿ ಕಂಡುಬಂದ ಪತ್ರಿಕಾ ಪ್ರಕಟಣೆಯು ರೈಲ್ವೇ ಸಚಿವಾಲಯವು ಸಬ್-ಇನ್‌ಸ್ಪೆಕ್ಟರ್‌ಗಳು ಮತ್ತು ಕಾನ್‌ಸ್ಟೆಬಲ್‌ಗಳನ್ನು ಆರ್‌ಪಿಎಫ್‌ಗೆ ತಮ್ಮ ಅಧಿಕೃತ ಜಾಲತಾಣಗಳಲ್ಲೇ ಆಗಲಿ, ಯಾವುದೇ ಮುದ್ರಣ ಅಥವಾ ಎಲೆಕ್ಟ್ರಾನಿಕ್ ಮಾಧ್ಯಮದ ಮೂಲಕ ನೇಮಕಾತಿ ಮಾಡಲು ಈ ವೈರಲ್ ಅಧಿಸೂಚನೆಯನ್ನು ಹೊರಡಿಸಿದೆ ಎಂದು ನಿರಾಕರಿಸಿದೆ. "ಎಲ್ಲಾ ಸಂಬಂಧಿತ ಮಾಹಿತಿಯು ಆರ್‌ಆರ್‌ಬಿ/ ಆರ್ ಆರ್ ಸಿ/ಎಸ್ ಸಿ ಆರ್ ಜಾಲತಾಣಗಳಲ್ಲಿ ಲಭ್ಯವಿದ್ದು, ನೈಜ ಮಾಹಿತಿಗಾಗಿ ಕಾಲಕಾಲಕ್ಕೆ ಪ್ರವೇಶಿಸಬಹುದಾಗಿದೆ" ಎಂದು ಅದು ಉಲ್ಲೇಖಿಸಿದೆ.
ಆರ್‌ಪಿಎಫ್‌ಗೆ ನೇಮಕಾತಿಗಾಗಿ ಹೊರಡಿಸಲಾದ ನಕಲಿ ಅಧಿಸೂಚನೆಯ ಕುರಿತು ದಕ್ಷಿಣ ಮಧ್ಯ ರೈಲ್ವೆಯ ಪತ್ರಿಕಾ ಪ್ರಕಟಣೆಯ ಸ್ಕ್ರೀನ್‌ಶಾಟ್.
ತೀರ್ಪು:
ಈ ಅಧಿಸೂಚನೆಯ ವಿಶ್ಲೇಷಣೆಯು ಆರ್‌ಪಿಎಫ್‌ನಲ್ಲಿ ಕಾನ್‌ಸ್ಟೆಬಲ್‌ಗಳು ಮತ್ತು ಸಬ್-ಇನ್‌ಸ್ಪೆಕ್ಟರ್‌ಗಳನ್ನು ನೇಮಿಸಿಕೊಳ್ಳಲು ಬಿಡುಗಡೆಯಾದ ನಿಜವಾದ ಸೂಚನೆಯಂತೆ ರಚಿಸಲಾದ ಸುತ್ತೋಲೆಯನ್ನು ಹಂಚಿಕೊಳ್ಳಲಾಗುತ್ತಿದೆ ಎಂದು ದೃಢಪಡಿಸಿದೆ. ಭಾರತೀಯ ರೈಲ್ವೆ ಅಧಿಕಾರಿಗಳು ಅಂತಹ ಯಾವುದೇ ಅಧಿಸೂಚನೆಯನ್ನು ಬಿಡುಗಡೆ ಮಾಡಿಲ್ಲ ಎಂದು ಖಚಿತಪಡಿಸಿದ್ದಾರೆ. ಆದ್ದರಿಂದ ಈ ಚಿತ್ರ ಮತ್ತು ಹೇಳಿಕೆಯನ್ನು ನಾವು ಫೇಕ್ ಎಂದು ವರ್ಗಿಕರಿಸಿದ್ದೇವೆ.