ರಾಷ್ಟ್ರಪತಿ ಭವನದಲ್ಲಿ ಪ್ರಮಾಣ ವಚನ ಸ್ವೀಕರಿಸುವ ವೇಳೆ ಕಾಣಿಸಿಕೊಂಡಿದ್ದು ನಿಗೂಢ ಪ್ರಾಣಿಯಲ್ಲ

Update: 2024-06-12 10:27 GMT

ರಾಷ್ಟ್ರಪತಿ ಭವನದಲ್ಲಿ ಮೂರನೇ ಅವಧಿಗೆ ಪ್ರಧಾನಿಯಾಗಿ ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕಾರ ಸಮಾರಂಭದ ವೇಳೆ  ನಿಗೂಢ ಪ್ರಾಣಿಯೊಂದು ಕಂಡು ಬಂದಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್‌ ಆಗುತ್ತಿದೆ. ಈ ವಿಡಿಯೋ ನೋಡಿದ ಬಹುತೇಕರು ಇದು ಚಿರತೆ ಇರಬಹುದು ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಂಡಿದ್ದಾರೆ. ಆದರೆ ಹಲವರು ರಾಷ್ಟ್ರಪತಿ ಭವನದಲ್ಲಿ ಕಾಡು ಪ್ರಾಣಿಗಳು ಕಂಡು ಬರುವುದರ ಬಗ್ಗೆ ಅನುಮಾನ ವ್ಯಕ್ತಪಡಿಸಿ ಇದು ಯಾವುದೋ ಸಾಕುಪ್ರಾಣಿ ಇರಬಹುದು ಎಂದು ಹಂಚಿಕೊಳ್ಳುತ್ತಿದ್ದಾರೆ.

 ಇದು ನಾಯಿ, ಬೆಕ್ಕು, ಅಥವಾ ಇನ್ಯಾವುದೋ ಪ್ರಾಣಿ ಇರಬಹುದು ಎಂದು ಹಲವರು ಹಂಚಿಕೊಂಡಿದ್ದರು, ವಿಡಿಯೋದಲ್ಲಿ ಪ್ರಾಣಿಯ ಎತ್ತರವನ್ನು ನೋಡಿದವರು ಇದು ಚಿರತೆಯೇ ಎಂದೆ ಭಾವಿಸಿದ್ದರು.

ರಾಷ್ಟ್ರಪತಿ ಭವನದಲ್ಲಿ ಕಾಣಿಸಿಕೊಂಡ ಪ್ರಾಣಿಯನ್ನು ಕುರಿತು ಹಲವು ಮಾಧ್ಯಮಗಳು ರಾಷ್ಟ್ರಪತಿ ಭವನದಲ್ಲಿ ಚಿರತೆ ಕಾಣಿಸಿಕೊಂಡಿದೆ ಎಂದು ಯಾರ ಬಳಿಯೂ ಯಾವುದೇ ಸ್ಪಷ್ಟನೆಯನ್ನು ತೆಗೆದುಕೊಳ್ಳದೆ ಸುದ್ದಿಯನ್ನು ಹಂಚಿಕೊಂಡಿವೆ. ಹಾಗಿದ್ದರೆ ಸಂಸತ್ ಭವನದಲ್ಲಿ ಕಾಣಿಸಿಕೊಂಡಿದ್ದು ಚಿರತೆಯೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್‌ :

ಪ್ರಮಾಣ ವಚನ ಸ್ವೀಕಾರ ಸಮಾರಂಭದ ವೇಳೆ ರಾಷ್ಟ್ರಪತಿ ಭವನದಲ್ಲಿ ಚಿರತೆ ಕಾಣಿಸಿಕೊಂಡಿದೆ ಎಂದು ಪ್ರತಿಪಾದಿಸಿ ಹಂಚಿಕೊಳ್ಳಲಾದ ಸುದ್ದಿಯ ಕುರಿತು ಪರಿಶೀಲಿಸಲು ಕೆಲವೊಂದು ಕೀ ವರ್ಡ್ಸ್‌ಗಳನ್ನು ಬಳಸಿ ಗೂಗಲ್‌ ರಿವರ್ಸ್‌ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಕನ್ನಡ ಸುದ್ದಿ ವಾಹಿನಿಯ ಮತ್ತು ಪತ್ರಿಕೆಗಳಲ್ಲಿ ಹಲವು ವರದಿಗಳು ಲಭ್ಯವಾಗಿವೆ. ಅದರಲ್ಲಿ ಕೆಲವೊಂದು ರಾಷ್ಟ್ರಪತಿ ಭವನದಲ್ಲಿ ಕಂಡು ಬಂದಿರುವುದು ಕಾಡುಪ್ರಾಣಿಯಲ್ಲ ಬದಲಿಗೆ ಅದು ಸಾಕು ಪ್ರಾಣಿ ಎಂಬ ಉಲ್ಲೇಖವಿತ್ತು.

 ಆದರೆ ಇನ್ನಷ್ಟು ಹೆಚ್ಚಿನ ಮಾಹಿತಿಗಾಗಿ ಸರ್ಚ್ ನಡೆಸಿದಾಗ ಜೂನ್‌ 10 ರಂದು ರಾತ್ರಿ 8:38ಕ್ಕೆ ದೆಹಲಿ ಪೊಲೀಸ್‌ ಇಲಾಖೆ ತನ್ನ ಅಧಿಕೃತ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡ ಪೋಸ್ಟ್‌ವೊಂದು ಲಭ್ಯವಾಗಿದೆ.

ದೆಹಲಿ ಪೊಲೀಸರು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಂತೆ “ಸಾಮಾಜಿಕ ಜಾಲತಾಣ ಮತ್ತು ಕೆಲವೊಂದು ಮಾಧ್ಯಮಗಳಲ್ಲಿ ರಾಷ್ಟ್ರಪತಿ ಭವನದಲ್ಲಿ ನಡೆದ ಪ್ರಮಾಣ ವಚನ ಸ್ವೀಕರ ಸಮಾರಂಭದಲ್ಲಿ ಕಂಡು ಬಂದ ಪ್ರಾಣಿಯನ್ನು ಕಾಡುಪ್ರಾಣಿ ಎಂದು ಉಲ್ಲೇಖಿಸಲಾಗುತ್ತಿದೆ. ಆದರೆ ಇದು ಯಾವುದೇ ಕಾಡುಪ್ರಾಣಿಯಲ್ಲ, ಇದೊಂದು ಸಮಾನ್ಯ ಸಾಕು ಬೆಕ್ಕು. ಹಾಗಾಗಿ ದಯಮಾಡಿ ಇಂತಹ ವದಂತಿಯನ್ನು ಹಬ್ಬಿಸಬೇಡಿ ಎಂದು ದೆಹಲಿ ಪೊಲೀಸರು ಮನವಿ ಮಾಡಿಕೊಂಡಿದ್ದಾರೆ.”

 ಒಟ್ಟಾರೆಯಾಗಿ ಹೇಳುವುದಾದರೆ, ಪ್ರಮಾಣ ವಚನ ಸ್ವೀಕಾರ ಸಮಾರಂಭ ವೇಳೆ ರಾಷ್ಟ್ರಪತಿ ಭವನದಲ್ಲಿ ಕಂಡು ಬಂದ ಪ್ರಾಣಿ ಚಿರತೆಯಲ್ಲ ಬೆಕ್ಕು ಎಂಬುದು ಸ್ಪಷ್ಟವಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

Claim :  It is not a mysterious animal that appeared during the swearing in at Rashtrapati Bhavan
Claimed By :  X user
Fact Check :  Misleading
Tags:    

Similar News