ಬೆಂಗಳೂರಿನಲ್ಲಿ ಅಪರಾಧಿಯನ್ನು ಪೊಲೀಸರು ಬಂಧಿಸುವ ವೀಡಿಯೋವನ್ನು ಚೈನ್ ಸ್ನ್ಯಾಚಿಂಗ್ ಘಟನೆ ಎಂದು ಹಂಚಿಕೊಳ್ಳಲಾಗಿದೆ
ಸಾರಾಂಶ:
ಸಾಮಾಜಿಕ ಮಾಧ್ಯಮ ಬಳಕೆದಾರರು ಜನರು ಮತ್ತು ಟ್ರಾಫಿಕ್ ಪೋಲೀಸರ ಗುಂಪು ಜನನಿಬಿಡ ರಸ್ತೆಯಲ್ಲಿ ವ್ಯಕ್ತಿಯನ್ನು ಸೆರೆಹಿಡಿಯುತ್ತಿರುವ ವೀಡಿಯೋವನ್ನು ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿನ ಪಠ್ಯವು ವೀಡಿಯೋ ಚೈನ್-ಸ್ನಾಚಿಂಗ್ ಘಟನೆಯನ್ನು ತೋರಿಸುತ್ತದೆ ಎಂದು ಸೂಚಿಸುತ್ತದೆ. ಆದರೆ, ಬೆಂಗಳೂರಿನ ಸದಾಶಿವನಗರ ಟ್ರಾಫಿಕ್ ಪೊಲೀಸ್ ಠಾಣೆ ಬಳಿಯ ಟ್ರಾಫಿಕ್ ಸಿಗ್ನಲ್‌ನಿಂದ ತುಮಕೂರಿನ ಕೊರಟೆಗೆರೆ ಪೊಲೀಸ್ ಠಾಣೆಯ ಪೊಲೀಸರು ಯೋಜಿತ ಕಾರ್ಯಾಚರಣೆಯಲ್ಲಿ ವಾಂಟೆಡ್ ವ್ಯಕ್ತಿಯನ್ನು ಸೆರೆಹಿಡಿದ ಘಟನೆ ವೀಡಿಯೋ ತೋರಿಸುತ್ತದೆ. ಆದ್ದರಿಂದ, ಈ ಹೇಳಿಕೆ ತಪ್ಪುದಾರಿಗೆಳೆಯುವಂತಿದೆ.
ಹೇಳಿಕೆ:
ಬೆಂಗಳೂರಿನ ಜನನಿಬಿಡ ರಸ್ತೆಯಲ್ಲಿ ಪೊಲೀಸರು ಮತ್ತು ಜನರು ಚೈನ್ ಸ್ನ್ಯಾಚರ್‌ನನ್ನು ಹಿಡಿದಿದ್ದಾರೆ ಎಂದು ಸೂಚಿಸುವ ಪಠ್ಯವನ್ನು ಹೊಂದಿರುವ ವೀಡಿಯೋವನ್ನು ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಂಡಿದ್ದಾರೆ. "ಚೈನ್ ಸ್ನ್ಯಾಚಿಂಗ್ ಬಿ ಜಾಗರೂಕರಾಗಿರಿ #trending #shorts #youtubeshorts #reels #chain #help #emotional" ಎಂಬ ಶೀರ್ಷಿಕೆಯೊಂದಿಗೆ ಆಗಸ್ಟ್ ೯, ೨೦೨೪ ರಂದು ಯೂಟ್ಯೂಬ್ ನಲ್ಲಿ ವೀಡಿಯೋವನ್ನು ಹಂಚಿಕೊಂಡಿದೆ. "ಚೈನ್ ಸ್ನ್ಯಾಚಿಂಗ್, ತಕ್ಷಣವೇ ಪ್ರತಿಕ್ರಿಯಿಸಿದ ಎಲ್ಲಾ ನಾಗರಿಕರು ಮತ್ತು ಪೊಲೀಸರಿಗೆ ಧನ್ಯವಾದಗಳು" ಎಂದು ವೀಡಿಯೋದ ಪಠ್ಯವು ಹೇಳುತ್ತದೆ. ಫೇಸ್‌ಬುಕ್ ಮತ್ತು ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ ಇತರ ಸಾಮಾಜಿಕ ಮಾಧ್ಯಮ ಬಳಕೆದಾರರು ಆಗಸ್ಟ್ ೮ ರಂದು ವೀಡಿಯೋವನ್ನು ಹಂಚಿಕೊಂಡಿದ್ದಾರೆ.
ಆಗಸ್ಟ್ ೯, ೨೦೨೪ ರಂದು ಹೇಳಿಕೆಯನ್ನು ಹಂಚಿಕೊಂಡಿರುವ ಯೂಟ್ಯೂಬ್ ವೀಡಿಯೋದ ಸ್ಕ್ರೀನ್‌ಶಾಟ್.
ಪುರಾವೆ:
ವೈರಲ್ ವೀಡಿಯೋದ ಕೀಫ್ರೇಮ್‌ಗಳನ್ನು ಬಳಸಿ ನಾವು ರಿವರ್ಸ್ ಇಮೇಜ್ ಸರ್ಚ್ ನಡೆಸಿದ್ದೇವೆ, ಅದು ನಮ್ಮನ್ನು ಆಗಸ್ಟ್ ೧೮, ೨೦೨೪ ರಂದು ಸದಾಶಿವನಗರ ಟ್ರಾಫಿಕ್ ಪೊಲೀಸ್ ಠಾಣೆ ಹಂಚಿಕೊಂಡ ಎಕ್ಸ್ ಪೋಷ್ಟ್ ಗೆ ಕರೆದೊಯ್ಯಿತು. ಪೋಷ್ಟ್ ವೈರಲ್ ವೀಡಿಯೋದ ವಿಸ್ತೃತ ಆವೃತ್ತಿಯನ್ನು ಹೊಂದಿದೆ ಮತ್ತು ಅದರ ಶೀರ್ಷಿಕೆ ಹೀಗಿದೆ - "ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಮಂಜೇಶ್ ಈತನನ್ನು ಕೊರಟಗೆರೆ ಪೊಲೀಸ್ ಠಾಣೆ ಸಿಬ್ಬಂದಿ ರವರು ಪತ್ತೆಮಾಡಿ ಸದಾಶಿವನಗರ ಸಂಚಾರ ಪೊಲೀಸ್ ಠಾಣೆ ಸಿಗ್ನಲ್ ಬಳಿ ಹಿಡಿದುಕೊಂಡಾಗ ಆರೋಪಿತನು ಪರಾರಿಯಾಗಲು ಯತ್ನಿಸಿದ್ದು, ಸಿಗ್ನಲ್ ನಲ್ಲಿ ಕರ್ತವ್ಯದಲ್ಲಿದ್ದಮಾಯಮ್ಮ.ಎಲ್ ರವರು ಆರೋಪಿತನನ್ನು ಹಿಡಿಯುವಲ್ಲಿ ಸಹಕರಿಸಿರುತ್ತಾರೆ @blrcitytraffic" (ಅನುವಾದಿಸಲಾಗಿದೆ).
ಆಗಸ್ಟ್ ೮, ೨೦೨೪ ರಂದು ಸದಾಶಿವನಗರ ಸಂಚಾರ ಪೊಲೀಸ್ ಠಾಣೆಯ ಎಕ್ಸ್ ಪೋಷ್ಟ್ ನ ಸ್ಕ್ರೀನ್‌ಶಾಟ್.
ತುಮಕೂರಿನ ಕೊರಟಗೆರೆ ಪೊಲೀಸ್ ಠಾಣೆಯ ಪೊಲೀಸ್ ಸಿಬ್ಬಂದಿ ಯೋಜಿತ ಕಾರ್ಯಾಚರಣೆಯಲ್ಲಿ ವ್ಯಕ್ತಿಯೊಬ್ಬನನ್ನು ಹಿಡಿದಿದ್ದಾರೆ ಎಂದು ಪೋಷ್ಟ್ ಸೂಚಿಸುತ್ತದೆ. ಇದನ್ನು ಸುಳಿವಾಗಿ ತೆಗೆದುಕೊಂ0ಡು, ನಾವು "ಮಂಜೇಶ್," "ಬೆಂಗಳೂರು," ಮತ್ತು "ಕ್ಯಾಚ್" ನಂತಹ ಇಂಗ್ಲಿಷ್ ಪದಗಳನ್ನು ಬಳಸಿಕೊಂಡು ಕೀವರ್ಡ್ ಸರ್ಚ್ ನಡೆಸಿದ್ದೇವೆ, ಇದು ವೈರಲ್ ವೀಡಿಯೋದ ಕೀಫ್ರೇಮ್ ಅನ್ನು ಹೊಂದಿರುವ ಆಗಸ್ಟ್ ೦೯, ೨೦೨೪ ರ ಇಂಡಿಯಾ ಟುಡೇ ವರದಿಗೆ ನಮ್ಮನ್ನು ಕರೆದೊಯ್ಯಿತು.
ಜುಲೈ ೧೭, ೨೦೨೪ ರ ಬಾಂಗ್ಲಾ ಔಟ್‌ಲುಕ್ ವರದಿಯ ಸ್ಕ್ರೀನ್‌ಶಾಟ್.
ವರದಿಯ ಪ್ರಕಾರ, ಪೊಲೀಸರು ೪೦ ವರ್ಷ ವಯಸ್ಸಿನ ಮಂಜೇಶ್ ಎಂಬ ವ್ಯಕ್ತಿಯನ್ನು ಹಿಡಿದಿದ್ದಾರೆ. ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆ ಬಳಿ ಪೊಲೀಸ್ ಸಿಬ್ಬಂದಿ ಮಂಜೇಶ್ ಅವರನ್ನು ವೀರೋಚಿತವಾಗಿ ಹಿಡಿದಿದ್ದಾರೆ. ಈ ವ್ಯಕ್ತಿ ಕೊರಟಗೆರೆ, ಕೊಳಲ, ಮಧುಗಿರಿ, ಹೆಬ್ಬೂರು ಸೇರಿದಂತೆ ಹಲವು ಪೊಲೀಸ್ ಠಾಣೆಗಳಲ್ಲಿ ಹಲವು ಪ್ರಕರಣಗಳಲ್ಲಿ ಶಂಕಿತ ಆರೋಪಿಯಾಗಿದ್ದಾರೆ. ಘಟನೆಯ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಇತರ ಸುದ್ದಿ ಮಾಧ್ಯಮಗಳಾದ ಇಟಿವಿ ಭಾರತ್ ಮತ್ತು ಟೈಮ್ಸ್ ನೌ, ಆಗಸ್ಟ್ ೮ ರಂದು ಘಟನೆಯನ್ನು ವರದಿ ಮಾಡಿದೆ. ವೈರಲ್ ವೀಡಿಯೋ ಚೈನ್ ಕಳ್ಳತನದ ಘಟನೆಯನ್ನು ತೋರಿಸುವುದಿಲ್ಲ ಎಂದು ಈ ವರದಿಗಳು ಸ್ಪಷ್ಟಪಡಿಸುತ್ತವೆ.
ತೀರ್ಪು:
ವೈರಲ್ ವೀಡಿಯೋದ ವಿಶ್ಲೇಷಣೆಯು ಅದು ಬೆಂಗಳೂರಿನ ಸದಾಶಿವನಗರ ಟ್ರಾಫಿಕ್ ಪೊಲೀಸ್ ಠಾಣೆ ಬಳಿ ನಡೆದ ಘಟನೆಯೆಂದು ಸ್ಪಷ್ಟಪಡಿಸುತ್ತದೆ. ತುಮಕೂರಿನ ಪೊಲೀಸ್ ಸಿಬ್ಬಂದಿ ಯೋಜಿತ ಕಾರ್ಯಾಚರಣೆಯಲ್ಲಿ ಆರೋಪಿಯನ್ನು ಸೆರೆಹಿಡಿದಿದ್ದಾರೆ. ಆದ್ದರಿಂದ, ವೀಡಿಯೋ ಚೈನ್ ಸ್ನ್ಯಾಚಿಂಗ್ ಘಟನೆಯದು ಎಂಬ ಹೇಳಿಕೆ ತಪ್ಪುದಾರಿಗೆಳೆಯುವಂತಿದೆ.