Begin typing your search above and press return to search.
    Others

    ೨೦೨೦ರ ಪತ್ರಿಕೆ ಕ್ಲಿಪ್ಪಿಂಗ್ ಅನ್ನು ೨೦೨೪ರ ಲೋಕಸಭಾ ಚುನಾವಣೆಯ ಸಮಯದಲ್ಲಿ ಬಿಜೆಪಿ ನಾಯಕರ ಹೇಳಿಕೆ ಎಂದು ಹೇಳಿಕೊಂಡು ತಪ್ಪಾಗಿ ಹಂಚಿಕೊಳ್ಳಲಾಗಿದೆ.

    IDTU - Karnataka
    11 May 2024 10:00 AM GMT
    ೨೦೨೦ರ ಪತ್ರಿಕೆ ಕ್ಲಿಪ್ಪಿಂಗ್ ಅನ್ನು ೨೦೨೪ರ ಲೋಕಸಭಾ ಚುನಾವಣೆಯ ಸಮಯದಲ್ಲಿ ಬಿಜೆಪಿ ನಾಯಕರ ಹೇಳಿಕೆ ಎಂದು ಹೇಳಿಕೊಂಡು ತಪ್ಪಾಗಿ ಹಂಚಿಕೊಳ್ಳಲಾಗಿದೆ.
    x

    ಸಾರಾಂಶ:

    ಬಿಹಾರದ ಬಕ್ಸಾರ್‌ನಲ್ಲಿ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡುವಾಗ ೩೦೦ “ಭಯೋತ್ಪಾದಕರು” ದೇಶವನ್ನು ಪ್ರವೇಶಿಸಲು ಪ್ರಯತ್ನಿಸುತ್ತಿದ್ದಾರೆ ಮತ್ತು ಬಿಜೆಪಿಗೆ ಮತ ಹಾಕುವಂತೆ ಜನರಲ್ಲಿ ಮನವಿ ಮಾಡಿದ್ದಾರೆ ಎಂದು ಹೇಳಿಕೊಂಡು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರ ಹೇಳಿಕೆಯನ್ನು ಉಲ್ಲೇಖಿಸುವ ಪತ್ರಿಕೆಯ ಕ್ಲಿಪ್ಪಿಂಗ್ ಅನ್ನು ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಂಡಿದ್ದಾರೆ. ಘಟನೆಯು ೨೦೨೦ರಲ್ಲಿ ನಡೆದಿದ್ದು, ನಡ್ಡಾ ಅವರ ಹೇಳಿಕೆಗಳು ಇತ್ತೀಚಿನವು ಎಂಬ ಆರೋಪಗಳು ತಪ್ಪು.


    ಹೇಳಿಕೆ:

    ಬಿಹಾರದ ಬಕ್ಸಾರ್‌ನಲ್ಲಿ ಬಿಜೆಪಿಯ ಸಾರ್ವಜನಿಕ ರ‍್ಯಾಲಿಯಲ್ಲಿ ಜೆಪಿ ನಡ್ಡಾ ಅವರು ಮಾಡಿದ ಹೇಳಿಕೆಯನ್ನು ವಿವರಿಸುವ ಪತ್ರಿಕೆಯ ಕ್ಲಿಪ್ಪಿಂಗ್‌ನ ಚಿತ್ರವನ್ನು ಎಕ್ಸ್‌ನಲ್ಲಿನ ಬಳಕೆದಾರರು ಹಂಚಿಕೊಂಡಿದ್ದಾರೆ. ೨.೬ ಸಾವಿರ ಅನುಯಾಯಿಗಳನ್ನು ಹೊಂದಿರುವ ಬಳಕೆದಾರರು ಮೇ ೬, ೨೦೨೪ ರಂದು ಚಿತ್ರವನ್ನು ಹಂಚಿಕೊಂಡಿದ್ದಾರೆ ಹಿಂದಿ ಭಾಷೆಯಲ್ಲಿರುವ ಇದರ ಶೀರ್ಷಿಕೆಯು ಹೀಗಿದೆ, "ದೇಶದಲ್ಲಿ ಏನಾಗುತ್ತಿದೆ? ಏನಾಗುತ್ತಿದೆ? ಚುನಾವಣಾ ಸಮಯದಲ್ಲಿ ಭಯೋತ್ಪಾದಕನು ಬಂದಿದ್ದಾನೆ ... ಆದರೆ ಹೇಗೆ ೩೦೦ ಭಯೋತ್ಪಾದಕರು ದೇಶವನ್ನು ಪ್ರವೇಶಿಸಲಿದ್ದಾರೆ ಎಂದು ನಡ್ಡಾಗೆ ತಿಳಿದಿದೆಯೇ? (ಕನ್ನಡಕ್ಕೆ ಅನುವಾದಿಸಲಾಗಿದೆ)."

    ಬಿಹಾರದ ಬಕ್ಸಾರ್‌ನಲ್ಲಿ ನಡ್ಡಾ ಅವರ ಹೇಳಿಕೆಯ ಕುರಿತು ಪತ್ರಿಕೆ ಕ್ಲಿಪ್ಪಿಂಗ್ ಅನ್ನು ತೋರಿಸುವ ಎಕ್ಸ್ ಪೋಷ್ಟ್ ಗಳ ಸ್ಕ್ರೀನ್‌ಶಾಟ್‌.


    ಮತ್ತೊಬ್ಬ ಬಳಕೆದಾರರು ಮೇ ೬, ೨೦೨೪ ರಂದು ಇದೇ ರೀತಿಯ ಶೀರ್ಷಿಕೆಯೊಂದಿಗೆ ಅದೇ ಚಿತ್ರವನ್ನು ಹಂಚಿಕೊಂಡಿದ್ದಾರೆ.

    ಇದೇ ರೀತಿಯ ಶೀರ್ಷಿಕೆಯೊಂದಿಗೆ ಕಂಡುಬಂದ ಎಕ್ಸ್ ಪೋಷ್ಟ್ ನ ಸ್ಕ್ರೀನ್‌ಶಾಟ್‌.


    ಚಿತ್ರವನ್ನು ಹಂಚಿಕೊಳ್ಳಲು ಬಳಕೆದಾರರು #लोकसभा_चुनाव2024 ಮತ್ತು #LokSabhaElections2024 ಮೊದಲಾದ ಹ್ಯಾಶ್‌ಟ್ಯಾಗ್‌ಗಳನ್ನು ಬಳಸಿರುವುದನ್ನು ನಾವು ಗಮನಿಸಿದ್ದೇವೆ.


    ಪುರಾವೆ:

    ನಾವು ವೈರಲ್ ನ್ಯೂಸ್ ಪೇಪರ್ ಕ್ಲಿಪ್ಪಿಂಗ್‌ನ ರಿವರ್ಸ್ ಇಮೇಜ್ ಹುಡುಕಾಟವನ್ನು ನಡೆಸಿದ್ದೇವೆ, ಮತ್ತು ಅದು ಅಕ್ಟೋಬರ್ ೨೨, ೨೦೨೦ ರ ಫೇಸ್‌ಬುಕ್ ಪೋಷ್ಟ್ ಗೆ ನಮ್ಮನ್ನು ಕರೆದೊಯ್ದಿದೆ.

    ಅಕ್ಟೋಬರ್ ೨೨, ೨೦೨೦ ರಂದು ಫೇಸ್‌ಬುಕ್ ನಲ್ಲಿ ಹಂಚಿಕೊಂಡ ಪೋಷ್ಟ್ ನ ಸ್ಕ್ರೀನ್‌ಶಾಟ್‌.


    ವರದಿಯ ಹಿಂದಿ ಶೀರ್ಷಿಕೆಯು ಹೀಗಿದೆ, "ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಬಕ್ಸಾರ್‌ನಲ್ಲಿ ಎನ್‌ಡಿಎ ಪರವಾಗಿ ಸಭೆ ನಡೆಸಿದರು. ನಡ್ಡಾ ಹೇಳಿದರು - ೩೦೦ ಭಯೋತ್ಪಾದಕರು ದೇಶವನ್ನು ಪ್ರವೇಶಿಸಲಿದ್ದಾರೆ, ಎನ್‌ಡಿಎ ಗೆಲ್ಲುವಂತೆ ಮನವಿ ಮಾಡಿದ್ದಾರೆ. (ಕನ್ನಡಕ್ಕೆ ಅನುವಾದಿಸಲಾಗಿದೆ)" ಇದರಿಂದ ಸುಳಿವುಗಳನ್ನು ತೆಗೆದುಕೊಂಡು ಕೀವರ್ಡ್ ಹುಡುಕಾಟವನ್ನು ನಡೆಸುವಾಗ, ೨೦೨೦ ರ ಅಕ್ಟೋಬರ್ ೨೧ ರಂದು ಅದೇ ಶೀರ್ಷಿಕೆಯೊಂದಿಗೆ ಭಾಸ್ಕರ್ ಪ್ರಕಟಿಸಿದ ವರದಿಯನ್ನು ನಾವು ಕಂಡುಕೊಂಡಿದ್ದೇವೆ.

    ಕೀವರ್ಡ್ ಹುಡುಕಾಟವನ್ನು ನಿರ್ವಹಿಸಲು ನಾವು "ಬಿಜೆಪಿ," "ಬಕ್ಸಾರ್," "ಜೆಪಿ ನಡ್ಡಾ," ಮತ್ತು "೩೦೦ ಭಯೋತ್ಪಾದಕರು" ಮೊದಲಾದ ಕೀವರ್ಡ್‌ಗಳನ್ನು ಸಹ ಬಳಸಿದ್ದೇವೆ. ಇದು ಬಿಜೆಪಿಯ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಲಾದ ಅಕ್ಟೋಬರ್ ೨೦, ೨೦೨೦ ರ ಯೂಟ್ಯೂಬ್ ವೀಡಿಯೋವಿಗೆ ನಮ್ಮನ್ನು ಕರೆದೊಯ್ಯಿತು. ಇದರ ಶೀರ್ಷಿಕೆಯು, "ಬಿಹಾರದ ಬಕ್ಸಾರ್‌ನಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಶ್ರೀ ಜೆಪಿ ನಡ್ಡಾ ಸಾರ್ವಜನಿಕ ರ‍್ಯಾಲಿಯನ್ನು ಉದ್ದೇಶಿಸಿ ಮಾತನಾಡುತ್ತಾರೆ (ಕನ್ನಡಕ್ಕೆ ಅನುವಾದಿಸಲಾಗಿದೆ)."

    ಅಕ್ಟೋಬರ್ ೨೦, ೨೦೨೦ ರ ಯೂಟ್ಯೂಬ್ ವೀಡಿಯೋದ ಸ್ಕ್ರೀನ್‌ಶಾಟ್‌.


    ಈ ವೀಡಿಯೋದ ೪೩:೦೮ ನಿಮಿಷಗಳ ಸಮಯದಲ್ಲಿ ಜೆಪಿ ನಡ್ಡಾ ಹೀಗೆ ಹೇಳುತ್ತಾರೆ, "ಮೋದಿಜಿ ನಾಯಕತ್ವದಲ್ಲಿ ಭಾರತವು, ಒಂದು ಕಣ್ಣು ಎತ್ತಿ ನೋಡಿದರೂ ಕೂಡ ನಮ್ಮನ್ನು ನಾಶಪಡಿಸುತ್ತದೆ ಎಂದು ಪಾಕಿಸ್ತಾನಕ್ಕೆ ತಿಳಿದಿದೆ. ನಮ್ಮ ಪ್ರಧಾನಿ ನರೇಂದ್ರ ಮೋದಿ ಈ ಶಕ್ತಿಯನ್ನು ಸೃಷ್ಟಿಸಿದರು. ಇಂದಿನ ಸುದ್ದಿ ಅದು ೩೦೦ ಭಯೋತ್ಪಾದಕರು ಗಡಿಯುದ್ದಕ್ಕೂ ಇರುವ ಸ್ಥಳಗಳಿಂದ ಪ್ರವೇಶಿಸಲು ಪ್ರಯತ್ನಿಸುತ್ತಿದ್ದಾರೆ ಮತ್ತು ನಮ್ಮ ವೀರ ಸೈನಿಕರು ಅವರಿಗೆ ಕಠಿಣ ಸಮಯವನ್ನು ನೀಡುತ್ತಿದ್ದಾರೆ (ಕನ್ನಡಕ್ಕೆ ಅನುವಾದಿಸಲಾಗಿದೆ)."

    ಅಕ್ಟೋಬರ್ ೨೧, ೨೦೨೦ ರ ಇಂಡಿಯಾ ಟುಡೇ ವರದಿಯನ್ನು ಸಹ ನಾವು ಕಂಡುಕೊಂಡಿದ್ದೇವೆ. ಇದು ಎಚ್.ಎಸ್ ಸಾಹಿ, ಜಿಓಸಿ, ಕೌಂಟರ್ ಇನ್ಸರ್ಜೆನ್ಸಿ ಫೋರ್ಸ್ (ಸಿಐಎಫ್) ಕಿಲೋವನ್ನು ಉಲ್ಲೇಖಿಸಿ ಪಾಕ್ ಅಧೀನ ಕಾಶ್ಮೀರದ ಲಾಂಚ್‌ಪ್ಯಾಡ್‌ಗಳಲ್ಲಿ ೨೫೦-೩೦೦ ಭಯೋತ್ಪಾದಕರು ಭಾರತಕ್ಕೆ ನುಸುಳಲು ಕಾಯುತ್ತಿದ್ದಾರೆ ಎಂದು ವರದಿ ಮಾಡಿದೆ.


    ತೀರ್ಪು:

    ವೈರಲ್ ಪತ್ರಿಕೆಯ ಕ್ಲಿಪ್ಪಿಂಗ್‌ನ ವಿಶ್ಲೇಷಣೆಯು ಇದು ೨೦೨೦ ರದ್ದು ಮತ್ತು ಬಿಹಾರದ ಬಕ್ಸರ್‌ನಲ್ಲಿ ಚುನಾವಣಾ ರ‍್ಯಾಲಿಯಲ್ಲಿ ಜೆಪಿ ನಡ್ಡಾ ಅವರ ಹೇಳಿಕೆಯನ್ನು ವಿವರಿಸುತ್ತದೆ ಎಂದು ಬಹಿರಂಗಪಡಿಸುತ್ತದೆ. ಆದ್ದರಿಂದ, ೨೦೨೪ ರ ಲೋಕಸಭೆ ಚುನಾವಣೆಗೆ ಈ ಹೇಳಿಕೆಯು ಸಂಬಂಧಿಸಿದೆ ಎಂದು ಆನ್‌ಲೈನ್ ನಲ್ಲಿ ಕಂಡುಬಂದ ಹೇಳಿಕೆಗಳು ತಪ್ಪು.

    Claim Review :   2020 newspaper clipping on BJP leader’s remark falsely linked to the 2024 Lok Sabha polls
    Claimed By :  Anonymous
    Fact Check :  False
    IDTU - Karnataka

    IDTU - Karnataka