- Home
- /
- ಸತ್ಯ ಪರಿಶೀಲನೆಗಳು
- /
- ಚುನಾವಣೆ
- /
- ರಾಹುಲ್ ಗಾಂಧಿಯವರು...
ರಾಹುಲ್ ಗಾಂಧಿಯವರು ಚುನಾವಣೆಯಲ್ಲಿ ಗೆದ್ದರೆ ಕಾಂಗ್ರೆಸ್ ಸಂವಿಧಾನವನ್ನು ಕೊನೆಗಾಣಿಸುತ್ತದೆ ಎಂದು ಹೇಳಿದರೆಂದು ಕ್ಲಿಪ್ ಮಾಡಲಾದ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ.
ಸಾರಾಂಶ:
ಕಾಂಗ್ರೆಸ್ ಸರ್ಕಾರ ರಚಿಸಿದರೆ ಸಂವಿಧಾನವನ್ನೇ ಅಂತ್ಯಗೊಳಿಸಿದಂತಾಗುತ್ತದೆ ಎಂದು ರಾಹುಲ್ ಗಾಂಧಿ ಹೇಳುವ ವೀಡಿಯೋವನ್ನು ಸಾಮಾಜಿಕ ಜಾಲತಾಣ ಬಳಕೆದಾರರು ಹಂಚಿಕೊಂಡಿದ್ದಾರೆ. ಆದರೆ, ಛತ್ತೀಸ್‌ಗಢದಲ್ಲಿ ಅವರು ಮಾಡಿದ ಭಾಷಣದ ಮೂಲ ವೀಡಿಯೋದಲ್ಲಿ, ಭಾರತೀಯ ಜನತಾ ಪಕ್ಷದ (ಬಿಜೆಪಿ) ನಾಯಕರು ಸರ್ಕಾರ ರಚಿಸಿದರೆ ಸಂವಿಧಾನವನ್ನು ಕೊನೆಗೊಳಿಸುವುದಾಗಿ ಹೇಳಿದ್ದರು ಎಂದು ಅವರು ಹೇಳುವುದನ್ನು ಕೇಳಬಹುದು. ವೀಡಿಯೋವನ್ನು ಕ್ಲಿಪ್ ಮಾಡಿ ಸಂದರ್ಭದಿಂದ ಹೊರಗಿಟ್ಟು ಹಂಚಿಕೊಳ್ಳಲಾಗಿದೆ, ಆದ್ದರಿಂದ ಈ ಹೇಳಿಕೆ ತಪ್ಪು.
ಹೇಳಿಕೆ:
ಪ್ರಸ್ತುತ ನಡೆಯುತ್ತಿರುವ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಹಿಂದಿಯಲ್ಲಿ "ಈ ಬಾರಿ ನಾವು ಸರ್ಕಾರವನ್ನು ರಚಿಸಿದರೆ, ನಾವು ಸಂವಿಧಾನವನ್ನು ಕೊನೆಗೊಳಿಸುತ್ತೇವೆ" (ಅನುವಾದಿಸಲಾಗಿದೆ) ಎಂದು ಹೇಳುವ ೧೦ ಸೆಕೆಂಡುಗಳ ವೀಡಿಯೋ ಕ್ಲಿಪ್ ಅನ್ನು ಇನ್ಸ್ಟಾಗ್ರಾಮ್ ಮತ್ತು ಫೇಸ್‌ಬುಕ್ ನಲ್ಲಿ ಹಂಚಿಕೊಳ್ಳಲಾಗುತ್ತಿದೆ. "ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಂವಿಧಾನ ಮುಗಿದಂತೆ" ಎಂಬ ಶೀರ್ಷಿಕೆಗಳೊಂದಿಗೆ ಈ ವೀಡಿಯೋ ಕ್ಲಿಪ್ ಅನ್ನು ಹಂಚಿಕೊಳ್ಳಲಾಗಿದೆ.
ಮೇ ೧, ೨೦೨೪ ರಂದು ವೀಡಿಯೋ ಕ್ಲಿಪ್ ಅನ್ನು ಹಂಚಿಕೊಳ್ಳುವ ಇನ್ಸ್ಟಾಗ್ರಾಮ್ ರೀಲ್‌ನ ಸ್ಕ್ರೀನ್‌ಶಾಟ್.
ಪುರಾವೆ:
ಪರಿಶೀಲನೆ ನಂತರ, ವೈರಲ್ ವೀಡಿಯೋವು ಏಪ್ರಿಲ್ ೨೯, ೨೦೨೪ ರಂದು ಛತ್ತೀಸ್‌ಗಢದ ಬಿಲಾಸ್‌ಪುರದಲ್ಲಿ ಸಾರ್ವಜನಿಕ ಸಭೆಯೊಂದರಲ್ಲಿ ರಾಹುಲ್ ಗಾಂಧಿಯವರು ಮಾಡಿದ ಭಾಷಣದಲ್ಲಿನ ಹೇಳಿಕೆಗಳನ್ನು ಒಳಗೊಂಡಿದೆ ಎಂದು ನಾವು ಕಂಡುಕೊಂಡಿದ್ದೇವೆ. ನಾವು ಈ ಕಾರ್ಯಕ್ರಮದ ಮೂಲ ವೀಡಿಯೋವನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧಿಕೃತ ಯೂಟ್ಯೂಬ್ ಚಾನೆಲ್ ನಲ್ಲಿ ಲೈವ್-ಸ್ಟ್ರೀಮ್ ಮಾಡಲಾಗಿತ್ತು ಎಂದು ಪತ್ತೆಮಾಡಿದ್ದೇವೆ. ವೀಡಿಯೋದಲ್ಲಿ ೧೧:೦೫ ನಿಮಿಷದ ಅವಧಿಯಿಂದ ಅವರು ಸಂವಿಧಾನವನ್ನು "ಈ ಬಾರಿ" ಚುನಾವಣೆಯಲ್ಲಿ ಹೇಗೆ ಉಳಿಸುವರೆಂದು ಹೇಳುತ್ತಾರೆ ಮತ್ತು ಬಿಜೆಪಿಯ ಬಗ್ಗೆ ಮಾತನಾಡುತ್ತಾರೆ.
ಏಪ್ರಿಲ್ ೨೯, ೨೦೨೪ ರಂದು ಛತ್ತೀಸ್‌ಗಢದಲ್ಲಿ ರಾಹುಲ್ ಗಾಂಧಿಯವರು ಮಾಡಿದ ಭಾಷಣವನ್ನು ಲೈವ್-ಸ್ಟ್ರೀಮ್ ಮಾಡಲಾದ ಯೂಟ್ಯೂಬ್ ವೀಡಿಯೋ ದ ಸ್ಕ್ರೀನ್‌ಶಾಟ್.
ವೈರಲ್ ವೀಡಿಯೋವನ್ನು ಹೋಲುವ ಅವರ ಹೇಳಿಕೆಗಳನ್ನು ಯೂಟ್ಯೂಬ್ ವೀಡಿಯೋದಲ್ಲಿ ೧೩:೧೧ ನಿಮಿಷದ ಅವಧಿಯಿಂದ ಗಮನಿಸಬಹುದು. ಅದರಲ್ಲಿ ಅವರು ಬಿಜೆಪಿಯನ್ನು ಉಲ್ಲೇಖಿಸುತ್ತಾ “ಸಾರ್ವಜನಿಕರು ವೀಕ್ಷಿಸುತ್ತಿರಬೇಕು; ನಮ್ಮ ಸರ್ಕಾರ ರಚನೆಯಾದರೆ ಈ ಬಾರಿ ಸಂವಿಧಾನವನ್ನು ಕೊನೆಗಾಣಿಸುತ್ತೇವೆ ಎಂದು ಬಿಜೆಪಿ ನಾಯಕರು ಒಂದಲ್ಲ ಅನೇಕರು ಹೇಳುತ್ತಲೇ ಇದ್ದಾರೆ” (ಅನುವಾದಿಸಲಾಗಿದೆ) ಎಂದು ಹೇಳಿದ್ದಾರೆ.
ಬಿಜೆಪಿ ನಾಯಕರು ಮೀಸಲಾತಿಯನ್ನು ತೆಗೆದುಹಾಕುವುದಾಗಿ ಹೇಳಿದ್ದಾರೆ ಮತ್ತು ಸಂವಿಧಾನವು ಜನರಿಗೆ ಮೀಸಲಾತಿ, ಮತದಾನದ ಹಕ್ಕು, ಸಾರ್ವಜನಿಕ ಸೇವೆಗಳು ಮತ್ತು ಅಧಿಕಾರವನ್ನು ಒದಗಿಸಿದೆ ಎಂದು ಅವರು ಹೇಳಿದ್ದಾರೆ. ಕಾಂಗ್ರೆಸ್ ಪಕ್ಷವು ಈ ಹಕ್ಕುಗಳನ್ನು ರಕ್ಷಿಸುತ್ತದೆ ಎಂದು ಹೇಳಿದ್ದಾರೆ ಹಾಗು ಆದಿವಾಸಿ ಸಮುದಾಯಗಳ ಪರವಾಗಿ ಮಾತನಾದಿದ್ದರೆ.
ಮೇಲಿನ ಪುರಾವೆಗಳ ಆಧಾರದ ಮೇಲೆ, ರಾಹುಲ್ ಗಾಂಧಿಯವರು ತಾವು ಅಥವಾ ಅವರ ಪಕ್ಷವು ಸಂವಿಧಾನವನ್ನು ಕೊನೆಗೊಳಿಸುವುದಾಗಿ ಹೇಳಿಲ್ಲ, ಬದಲಿಗೆ ಅಧಿಕಾರಕ್ಕೆ ಬಂದರೆ ಹಾಗೆ ಮಾಡುವರೆಂದು ಬಿಜೆಪಿ ನಾಯಕರು ಹೇಳಿದ್ದಾರೆ ಎಂದು ಸ್ಪಷ್ಟವಾಗುತ್ತದೆ. ಈ ರೀತಿಯ ಆರೋಪಗಳಿಗೆ ಪ್ರಧಾನಿ ನರೇಂದ್ರ ಮೋದಿಯವರು ಕಳೆದ ಮೂರು ದಶಕಗಳಿಂದ ಬಿಜೆಪಿ ವಿರುದ್ಧ ಕಾಂಗ್ರೆಸ್ ಪಕ್ಷ ಹೀಗೆಯೇ ಹೇಳುತ್ತಾ ಬರುತ್ತಿದೆ ಎಂದು ಪ್ರತಿಕ್ರಯಿಸಿದ್ದಾರೆ ಎಂದು ದಿ ಹಿಂದೂ ಇತ್ತೀಚೆಗೆ ವರದಿ ಮಾಡಿದೆ.
ತೀರ್ಪು:
ವೈರಲ್ ಕ್ಲಿಪ್‌ನ ವಿಶ್ಲೇಷಣೆಯು ಛತ್ತೀಸ್‌ಗಢದಲ್ಲಿ ರಾಹುಲ್ ಗಾಂಧಿ ಅವರ ಇತ್ತೀಚಿನ ಭಾಷಣದ ವೀಡಿಯೋವನ್ನು ಕ್ಲಿಪ್ ಮಾಡಿದ್ದು ಸಂದರ್ಭದಿಂದ ಹೊರಗಿಟ್ಟು ಹಂಚಿಕೊಳ್ಳಲಾಗಿದೆ ಎಂದು ಬಹಿರಂಗಪಡಿಸುತ್ತದೆ. ಅಧಿಕಾರಕ್ಕೆ ಚುನಾಯಿತರಾದರೆ ಸಂವಿಧಾನವನ್ನು ಅಂತ್ಯಗೊಳಿಸುತ್ತೇವೆ ಎಂದು ಬಿಜೆಪಿ ಹೇಳೀತೆಂದು ರಾಹುಲ್ ಗಾಂಧಿಯವರು ಆರೋಪಿಸಿದ್ದಾರೆ. ಆದ್ದರಿಂದ, ಈ ಹೇಳಿಕೆ ತಪ್ಪು.