- Home
- /
- ಸತ್ಯ ಪರಿಶೀಲನೆಗಳು
- /
- ಚುನಾವಣೆ
- /
- ಕರ್ನಾಟಕದ ಕಾಂಗ್ರೆಸ್...
ಕರ್ನಾಟಕದ ಕಾಂಗ್ರೆಸ್ ನಾಯಕರೊಬ್ಬರು ಬಿಜೆಪಿ ನಾಯಕರನ್ನು ಉಲ್ಲೇಖಿಸಿ ಮಾಡಿದ ಭಾಷಣದ ವೀಡಿಯೋವನ್ನು ಎಡಿಟ್ ಮಾಡಿ ಕೋಮುವಾದಿ ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ
ಸಾರಾಂಶ:
ಈ ವೈರಲ್ ವೀಡಿಯೋವನ್ನು ರಚಿಸಲು ಕರ್ನಾಟಕ ಕಾಂಗ್ರೆಸ್ ವಕ್ತಾರರು ಬಿಜೆಪಿ ನಾಯಕರನ್ನು ಉಲ್ಲೇಖಿಸಿ ಮಾಡಿದ ಭಾಷಣದ ವೀಡಿಯೋ ತುಣುಕುಗಳನ್ನು ಆಯ್ದವಾಗಿ ಎಡಿಟ್ ಮಾಡಲಾಗಿದೆ. ದೇವರ ಹೆಸರಿನಲ್ಲಿ ಮತ ಕೇಳುವುದು ಕಾಂಗ್ರೆಸ್ ಪಕ್ಷದ ಅಜೆಂಡಾ ಎಂದು ತೋರಿಸಲು ಸಾಮಾಜಿಕ ಮಾಧ್ಯಮ ಬಳಕೆದಾರರು ಈ ಎಡಿಟ್ ಮಾಡಿದ ಕ್ಲಿಪ್ ಅನ್ನು ತಪ್ಪಾಗಿ ಹಂಚಿಕೊಂಡಿದ್ದಾರೆ.
ಹೇಳಿಕೆ:
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ವಕ್ತಾರ ಸುಧೀರ್ ಕುಮಾರ್ ಅವರು ದೇವರ ಹೆಸರಿನಲ್ಲಿ ಮತ ಕೇಳುತ್ತಿರುವುದಾಗಿ ತೋರಿಸುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅದೇ ವೀಡಿಯೋದೊಂದಿಗೆ ಎಕ್ಸ್‌ನಲ್ಲಿ ಹಂಚಿಕೊಂಡ ಅಂತಹ ಒಂದು ಪೋಷ್ಟ್ ನ ಶೀರ್ಷಿಕೆ ಹೀಗಿದೆ, “ಅವರು ಕರ್ನಾಟಕದ ಉಡುಪಿ ಜಿಲ್ಲೆಯ ಕಾರ್ಕಳದ ಕಾಂಗ್ರೆಸ್ಸಿಗರು. ಈ ಚುನಾವಣೆಯು ಅಲ್ಲಾ ಮತ್ತು ರಾಮ ಮತ್ತು ಜೀಸಸ್ ಮತ್ತು ಇತರರು ಚುನಾವಣೆ ಗೆಲ್ಲಲು ಸಹಾಯ ಮಾಡುತ್ತಾರೆ ಎಂದು ಬಹಿರಂಗವಾಗಿ ಹೇಳುತ್ತಿದ್ದಾರೆ. ಕನಿಷ್ಠ ಈಗಲಾದರೂ ಜನರು ಕಾಂಗ್ರೆಸ್‌ನ ಅಜೆಂಡಾ ಮತ್ತು ಅವರ ಆದ್ಯತೆಗಳು ಎಲ್ಲಿವೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು (ಕನ್ನಡಕ್ಕೆ ಅನುವಾದಿಸಲಾಗಿದೆ)."
ಫೇಸ್‌ಬುಕ್‌ನಲ್ಲಿ ಕಂಡುಬಂದ ವೈರಲ್ ಪೋಷ್ಟ್ ಗಳ ಸ್ಕ್ರೀನ್‌ಶಾಟ್‌ಗಳು.
ಯೂಟ್ಯೂಬ್ ಮತ್ತು ಫೇಸ್‌ಬುಕ್‌ನಲ್ಲಿ ಸಮಾನವಾದ ಶೀರ್ಷಿಕೆಗಳೊಂದಿಗೆ ಹಲವರು ಅದೇ ವೀಡಿಯೋವನ್ನು ಹಂಚಿಕೊಂಡಿದ್ದಾರೆ.
ಪುರಾವೆ:
ನಾವು ವೀಡಿಯೋದ ಕೀಫ್ರೇಮ್‌ಗಳ ರಿವರ್ಸ್ ಇಮೇಜ್ ಸರ್ಚ್ ನಡೆಸಿದ್ದೇವೆ ಮತ್ತು ಅದೇ ವೀಡಿಯೋ ಕ್ಲಿಪ್ ಅನ್ನು ಹೊಂದಿರುವ ಮೇ ೩, ೨೦೨೩ ರ ಫೇಸ್‌ಬುಕ್ ಪೋಷ್ಟ್ ಅನ್ನು ಕಂಡುಕೊಂಡಿದ್ದೇವೆ. ಈ ಪೋಷ್ಟ್ ನ ಶೀರ್ಷಿಕೆ ಹೀಗಿದೆ: "ಕಾರ್ಕಳ ಕಾಂಗ್ರೆಸ್ಸಿಗರು ಅಂತಿಮವಾಗಿ ಇದು ಅಲ್ಲಾ ವರ್ಸಸ್ ರಾಮನ ಚುನಾವಣೆ ಎಂದು ಒಪ್ಪಿಕೊಂಡರು." ಈ ಪೋಷ್ಟ್ ನ ಶೀರ್ಷಿಕೆಯು ಕಾಂಗ್ರೆಸ್ ನಾಯಕರೊಬ್ಬರು ಚುನಾವಣೆಗಳು ಅಲ್ಲಾ ಮತ್ತು ರಾಮನ ಹೆಸರಿನಲ್ಲಿ ನಡೆಯುತ್ತಿದೆ ಎಂದು ಉಲ್ಲೇಖಿಸಿದ್ದಾರೆ ಎಂದು ಸೂಚಿಸುತ್ತದೆ.
ಮೇ ೨೦೨೩ ರಲ್ಲಿ ಫೇಸ್‌ಬುಕ್‌ನಲ್ಲಿ ಕಂಡುಬಂದ ವೈರಲ್ ವೀಡಿಯೋದ ಸ್ಕ್ರೀನ್‌ಶಾಟ್‌ಗಳು.
ಅದೇ ಕೀಫ್ರೇಮ್‌ಗಳನ್ನು ಬಳಸಿಕೊಂಡು ನಡೆಸಿದ ಹೆಚ್ಚಿನ ಹುಡುಕಾಟವು ಮೇ ೩, ೨೦೨೩ ರಂದು “ಟೈಮ್ಸ್ ಆಫ್ ಕಾರ್ಕಳ ಡಿಜಿಟಲ್” ಹಂಚಿಕೊಂಡ ಯೂಟ್ಯೂಬ್ ವೀಡಿಯೋದತ್ತ ನಮ್ಮನ್ನು ಕರೆದೊಯ್ಯಿತು. ಅದರ ಶೀರ್ಷಿಕೆಯು, “ಸುನೀಲ್ ಕುಮಾರ್ ಅವರನ್ನು ಸುಧೀರ್ ಕುಮಾರ್ ತರಾಟೆಗೆ ತೆಗೆದುಕೊಂಡಿದ್ದಾರೆ. ಸುಧೀರ್ ಕುಮಾರ್ ಮರೊಳ್ಳಿ ಭಾಷಣ.” ಭಾಷಣವನ್ನು ಆಲಿಸಿದ ನಂತರ, ವಿಡಿಯೋದ ಸುಮಾರು ನಾಲ್ಕು ನಿಮಿಷಗಳ ಸಮಯದಲ್ಲಿ, ಸುಧೀರ್ ಕುಮಾರ್ ಅವರು ಕಾರ್ಕಳದ ಬಿಜೆಪಿ ನಾಯಕ ಸುನೀಲ್ ಕುಮಾರ್ ಅವರನ್ನು ಉದ್ದೇಶಿಸಿ "ಇದು ಅಲ್ಲಾ v/s ರಾಮರ ಮಧ್ಯೆ ನಡೆಯುವ ಚುನಾವಣೆ, ಮತ್ತು ನಾವೆಲ್ಲರೂ ರಾಮಭಕ್ತರು," ಎಂದು ಹೇಳಿರುವುದಾಗಿ ಹೇಳುವುದನ್ನು ಕೇಳಬಹುದು. ಸುಧೀರ್ ಕುಮಾರ್ ಅವರು ವಿವಿಧ ಧರ್ಮಗಳ ಹಲವಾರು ದೇವರುಗಳನ್ನು ಹೆಸರಿಸಿದರು ಮತ್ತು ಈ ಎಲ್ಲಾ ದೇವರುಗಳ ಆಶೀರ್ವಾದ ಕಾಂಗ್ರೆಸ್ ಪಕ್ಷದ ಮೇಲಿದೆ ಎಂದು ಕೂಡ ಹೇಳಿದ್ದಾರೆ.
"ಟೈಮ್ಸ್ ಆಫ್ ಕಾರ್ಕಳ ಡಿಜಿಟಲ್" ಹಂಚಿಕೊಂಡಿರುವ ಯೂಟ್ಯೂಬ್ ವೀಡಿಯೋದ ಸ್ಕ್ರೀನ್‌ಶಾಟ್.
ವೈರಲ್ ವೀಡಿಯೋದಲ್ಲಿ ತೋರಿಸಿರುವಂತೆ ಸುಧೀರ್ ಕುಮಾರ್ ಈ ವಿಡಿಯೋದಲ್ಲಿ ಯಾವುದೇ ಉಲ್ಲೇಖವನ್ನು ಮಾಡಿಲ್ಲ. ಬದಲಾಗಿ, ಸುಧೀರ್ ಕುಮಾರ್ ಅವರು ನಿಜವಾಗಿಯೂ ಅಂತಹ ಹೇಳಿಕೆಗಳನ್ನು ನೀಡಿದ್ದಾರೆ ಎಂದು ತೋರಿಸಲು ವಿವಿಧ ಸಮಯದ ಚೌಕಟ್ಟಿನಲ್ಲಿ ಅವರ ಈ ಭಾಷಣದ ಕ್ಲಿಪ್ಪಿಂಗ್‌ಗಳನ್ನು ಸಂಪಾದಿಸಲಾಗಿದೆ ಮತ್ತು ಎಡಿಟ್ ಮಾಡಿ ಮತ್ತೊಂದು ವೀಡಿಯೋವನ್ನು ರಚಿಸಲಾಗಿದೆ.
ತೀರ್ಪು:
ಕೆಪಿಸಿಸಿ ವಕ್ತಾರರೊಬ್ಬರು ಕಾರ್ಕಳದ ಬಿಜೆಪಿ ನಾಯಕರೊಬ್ಬರನ್ನು (ವಿ. ಸುನೀಲ್ ಕುಮಾರ್) ಉಲ್ಲೇಖಿಸಿದ ವೀಡಿಯೋವನ್ನು ಎಡಿಟ್ ಮಾಡಲಾಗಿದೆ ಮತ್ತು ಇದನ್ನು ಸುಧೀರ್ ಕುಮಾರ್ ಹೇಳಿದ್ದಾರೆ ಎಂದು ಆರೋಪಿಸುವ ಮೂಲಕ ಹಂಚಿಕೊಳ್ಳಲಾಗಿದೆ. ಸುಧೀರ್ ಕುಮಾರ್ ಅಂತಹ ಹೇಳಿಕೆಯನ್ನು ತಾವಾಗಿಯೇ ಮಾಡಿಲ್ಲ. ಆದ್ದರಿಂದ, ನಾವು ಈ ಹೇಳಿಕೆಯನ್ನು ತಪ್ಪು ಎಂದು ಗುರುತಿಸಿದ್ದೇವೆ.