Begin typing your search above and press return to search.
    ಚುನಾವಣೆ

    ಕರ್ನಾಟಕದಲ್ಲಿ ೨೦೨೩ ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಒಬ್ಬ ವ್ಯಕ್ತಿ ಇವಿಎಂ ಮಷೀನ್ ಒಡೆದ ಘಟನೆಯ ವೀಡಿಯೋವನ್ನು ಇತ್ತೀಚಿನದು ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ

    IDTU - Karnataka
    29 April 2024 6:28 AM GMT
    ಕರ್ನಾಟಕದಲ್ಲಿ ೨೦೨೩ ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಒಬ್ಬ ವ್ಯಕ್ತಿ ಇವಿಎಂ ಮಷೀನ್ ಒಡೆದ ಘಟನೆಯ ವೀಡಿಯೋವನ್ನು ಇತ್ತೀಚಿನದು ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ
    x

    ಸಾರಾಂಶ:

    ಎಕ್ಸ್ (ಹಿಂದೆ ಟ್ವಿಟ್ಟರ್) ನಲ್ಲಿ ಬಳಕೆದಾರರು ಇವಿಎಂ ಮಷೀನ್ ಅನ್ನು ಎತ್ತಿ ಎಸೆಯುತ್ತಿರುವ ವ್ಯಕ್ತಿಯ ವೀಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಪೋಷ್ಟ್ ಗಳು ಈ ತುಣುಕನ್ನು ಇತ್ತೀಚಿನದು ಎಂದು ಹೇಳಿಕೊಂಡಿವೆ. ಘಟನೆ ನಡೆದಿದ್ದು ನಿಜವಾದರೂ, ಇದು ೨೦೨೩ ರ ಕರ್ನಾಟಕ ವಿಧಾನಸಭಾ ಚುನಾವಣೆಯದ್ದಾಗಿದೆ ಎಂಬುದನ್ನು ಗಮನಿಸುವುದು ಅತ್ಯಗತ್ಯ ಮತ್ತು ದೃಶ್ಯಗಳು ಪ್ರಸ್ತುತ ಪರಿಸ್ಥಿತಿಯನ್ನು ಪ್ರತಿನಿಧಿಸುವುದಿಲ್ಲ. ಹೀಗಾಗಿ ಈ ಹೇಳಿಕೆಗಳು ತಪ್ಪು.

    ಹೇಳಿಕೆ:

    ೧೧.೬ ಸಾವಿರ ಅನುಯಾಯಿಗಳಿರುವ ಎಕ್ಸ್ ಬಳಕೆದಾರರೊಬ್ಬರು ಒಬ್ಬ ವ್ಯಕ್ತಿಯು ಇವಿಎಂ ಘಟಕವನ್ನು ಮುರಿಯುತ್ತಿರುವುದನ್ನು ತೋರಿಸುವ ವೀಡಿಯೋ ಪೋಷ್ಟ್ ಅನ್ನು ಹಂಚಿಕೊಂಡಿದ್ದಾರೆ. ಬಳಕೆದಾರರು ಏಪ್ರಿಲ್ ೨೫, ೨೦೨೪ ರಂದು ವೀಡಿಯೋವನ್ನು ಪೋಷ್ಟ್ ಮಾಡಿದ್ದಾರೆ. ಹಿಂದಿಯಲ್ಲಿರುವ ಇದರ ಶೀರ್ಷಿಕೆಯನ್ನು ಕನ್ನಡಕ್ಕೆ ಅನುವಾದಿಸಿದಾಗ, “ಅಧ್ಯಕ್ಷ ಅಧಿಕಾರಿ ಜಾಗರೂಕರಾಗಿರಬೇಕು... ಸೋಲಿನ ಹತಾಶೆಯಿಂದ ಈ ಇಂಡಿ ಅಲೈಯನ್ಸ್ ಜನರು ಏನು ಬೇಕಾದರೂ ಮಾಡಬಹುದು..." ಪೋಷ್ಟ್ ೧೬೫.೩ ಸಾವಿರ ವೀಕ್ಷಣೆಗಳು, ೩.೭ ಸಾವಿರ ಇಷ್ಟಗಳು ಮತ್ತು ೨.೨ ಸಾವಿರ ಮರುಪೋಷ್ಟ್ ಗಳನ್ನು ಗಳಿಸಿದೆ.

    ಎಕ್ಸ್ ನಲ್ಲಿ ಹಂಚಿಕೊಳ್ಳಲಾದ ವೀಡಿಯೋ ಪೋಷ್ಟ್ ನ ಸ್ಕ್ರೀನ್‌ಶಾಟ್.


    ೧೨.೩ ಸಾವಿರ ಅನುಯಾಯಿಗಳಿರುವ ಎಕ್ಸ್ ನಲ್ಲಿನ ಮತ್ತೊಬ್ಬ ದೃಢೀಕೃತ ಬಳಕೆದಾರರು ಏಪ್ರಿಲ್ ೨೬, ೨೦೨೪ ರಂದು ಇದೇ ಕ್ಲಿಪ್ ಅನ್ನು ಹಂಚಿಕೊಂಡಿದ್ದಾರೆ. ಅದರ ಶೀರ್ಷಿಕೆಯು ಹೀಗಿದೆ, "ವಿರೋಧದ ಬೆಂಬಲಿಗರೊಬ್ಬರು ಇವಿಎಂ ಅನ್ನು ಹೇಗೆ ಹಾನಿಗೊಳಿಸಿದ್ದಾರೆ ಎಂಬುದನ್ನು ನೋಡಿ, ಈಗ ಆ ನಿರ್ದಿಷ್ಟ ಬೂತ್‌ನಲ್ಲಿ ಆ ಯಂತ್ರದಲ್ಲಿನ ಎಲ್ಲಾ ಮತಗಳು ವ್ಯರ್ಥವಾಗಿವೆ ... @ECISVEEP ಅಲ್ಲಿ ನಿಯೋಜಿಸಲಾಗಿರುವ ಎಲ್ಲಾ ಅಧ್ಯಕ್ಷರು ಮತ್ತು ಪೊಲೀಸ್-ಅರೆಸೈನಿಕ ತಂಡವನ್ನು ಬಹಳ ಎಚ್ಚರಿಕೆಯಿಂದ ಇರುವಂತೆ ನಿರ್ದೇಶಿಸುವ ಅಗತ್ಯವಿದೆ ... ಕಾಂಗ್ರೆಸ್ ಮತ್ತು ಗ್ಯಾಂಗ್ ಅವರು ಸೋಲುತ್ತಿದ್ದಾರೆ ಎಂದು ತಿಳಿದಾಗ ಅವರು ಯಾವುದೇ ಕೆಳಮಟ್ಟಕ್ಕೆ ಇಳಿಯಬಹುದು #LokSabhaElections2024 (ಕನ್ನಡಕ್ಕೆ ಅನುವಾದಿಸಲಾಗಿದೆ).”

    ಪರಿಶೀಲಿಸಿದ ಬಳಕೆದಾರರೊಬ್ಬರು ಎಕ್ಸ್ ನಲ್ಲಿ ಹಂಚಿಕೊಂಡ ಪೋಷ್ಟ್ ನ ಸ್ಕ್ರೀನ್‌ಶಾಟ್.


    ಎಕ್ಸ್ ಬಳಕೆದಾರರು #LokSabhaElection2024 ಮೊದಲಾದ ಹ್ಯಾಶ್‌ಟ್ಯಾಗ್‌ಗಳನ್ನು ಬಳಸಿದ್ದಾರೆ ಮತ್ತು ಭಾರತದ ಚುನಾವಣಾ ಆಯೋಗದ ಅಧಿಕೃತ ಎಕ್ಸ್ ಖಾತೆಯನ್ನು ಸಹ ಟ್ಯಾಗ್ ಮಾಡಿರುವುದು, ಇದು ಇತ್ತೀಚಿನ ಘಟನೆ ಎಂದು ಸೂಚಿಸುತ್ತದೆ.


    ಪುರಾವೆ:

    ನಾವು ವೈರಲ್ ವೀಡಿಯೋದ ಕೀಫ್ರೇಮ್‌ಗಳ ರಿವರ್ಸ್ ಇಮೇಜ್ ಸರ್ಚ್ ನಡೆಸಿದ್ದೇವೆ, ಮತ್ತು ಏಪ್ರಿಲ್ ೨೬, ೨೦೨೩ ರಂದು ಹಂಚಿಕೊಂಡಿರುವ ಎಕ್ಸ್ ಪೋಷ್ಟ್ ಗೆ ನಮ್ಮನ್ನು ಕರೆದೊಯ್ಯಿತು. ಈ ವೀಡಿಯೋ ಹನ್ನೊಂದು ತಿಂಗಳ ಹಿಂದಿನದ್ದು ಎಂದು ಇದು ಸೂಚಿಸುತ್ತದೆ. ಮೇ ೧೨, ೨೦೨೩ ರ ನ್ಯೂಸ್ ೧೮ ವೈರಲ್‌ಗಳ ಯೂಟ್ಯೂಬ್ ವೀಡಿಯೋವಿಗೆ ಈ ಪೋಷ್ಟ್ ನಲ್ಲಿರುವ ಲಿಂಕ್‌ಗಳು ನಮ್ಮನು ಕರೆದೊಯ್ಯುತ್ತದೆ. ವೀಡಿಯೋದ ಶೀರ್ಷಿಕೆಯು ಹಿಂದಿಯಲ್ಲಿದ್ದು ಅದು ಹೀಗೆ ಹೇಳುತ್ತದೆ, "ಕರ್ನಾಟಕ ಚುನಾವಣೆ ೨೦೨೩. ಮೈಸೂರಿನಲ್ಲಿ ಮತ ಚಲಾಯಿಸಲು ಬಂದ ವ್ಯಕ್ತಿ ಇವಿಎಂ ಯಂತ್ರವನ್ನು ಒಡೆದರು, ಪೊಲೀಸರು ಆತನನ್ನು ಬಂಧಿಸಿದ್ದಾರೆ (ಕನ್ನಡಕ್ಕೆ ಅನುವಾದಿಸಲಾಗಿದೆ)."

    ಮೇ ೧೨, ೨೦೨೩ ರಂದು "ನ್ಯೂಸ್ ೧೮ ವೈರಲ್‌" ಹಂಚಿಕೊಂಡ ಯೂಟ್ಯೂಬ್ ವೀಡಿಯೊದ ಸ್ಕ್ರೀನ್‌ಶಾಟ್.


    ೨೦೨೩ ರ ಕರ್ನಾಟಕ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಮೈಸೂರಿನಲ್ಲಿ ಈ ಘಟನೆ ಸಂಭವಿಸಿದೆ ಎಂದು ವೀಡಿಯೋದ ಶೀರ್ಷಿಕೆ ಸೂಚಿಸುತ್ತದೆ. ವೈರಲ್ ವೀಡಿಯೋ ದಿಗ್ವಿಜಯನ್ಯೂಸ್ ಲೋಗೋವನ್ನು ಹೊಂದಿರುವುದನ್ನು ನಾವು ಗಮನಿಸಿದ್ದೇವೆ. ಇದರಿಂದ ಸುಳಿವುಗಳನ್ನು ತೆಗೆದುಕೊಂಡು, ನಾವು "ವ್ಯಕ್ತಿ," "ಒದೆದನು," "ಇವಿಎಂ," ಮತ್ತು "ದಿಘ್ವಿಜಯನ್ಯೂಸ್" ನಂತಹ ಕೀವರ್ಡ್‌ಗಳನ್ನು ಬಳಸಿ ನಡೆಸಿದ ಹುಡುಕಾಟವು, ಇದು ೨೦೨೩ ರ ಮೇ ೧೨ ರಂದು ಕನ್ನಡ ಸುದ್ದಿವಾಹಿನಿಯಾದ ವಿಜಯವಾಣಿ ಯೂಟ್ಯೂಬ್ ನಲ್ಲಿ ಹಂಚಿಕೊಂಡ ವೀಡಿಯೋವಿಗೆ ನಮ್ಮನ್ನು ಕರೆದೊಯ್ಯಿತು.

    ಮೇ ೧೨, ೨೦೨೩ ರಂದು ವಿಜಯವಾಣಿಯ ಯೂಟ್ಯೂಬ್ ವೀಡಿಯೋದ ಸ್ಕ್ರೀನ್‌ಶಾಟ್.


    ವೀಡಿಯೋದಲ್ಲಿ ಕಾಣಿಸುವ ದಿನಾಂಕವು ಮೇ ೧೦, ೨೦೨೩, ಎಂದು ನೋಡಬಹುದು.

    ಮೇ ೧೨, ೨೦೨೩ ರ ದಿ ಹಿಂದೂ ವರದಿಯನ್ನು ಸಹ ನಾವು ಕಂಡುಕೊಂಡಿದ್ದೇವೆ. ಅದು ಘಟನೆಯನ್ನು ವಿವರಿಸುತ್ತದೆ. ಮೇ ೧೦, ೨೦೨೩ ರಂದು ಚಾಮುಂಡೇಶ್ವರಿ ವಿಧಾನಸಭಾ ವ್ಯಾಪ್ತಿಯ ಹೂಟಗಳ್ಳಿ ಮತಗಟ್ಟೆಯಲ್ಲಿ ವ್ಯಕ್ತಿಯೊಬ್ಬರು ಮತದಾನ ಮಾಡಲು ಬಂದಾಗ ಈ ಘಟನೆ ಸಂಭವಿಸಿದೆ. ಈ ವ್ಯಕ್ತಿ ಮಾನಸಿಕ ಅಸ್ವಸ್ಥ ಎಂದು ಪೊಲೀಸರು ಶಂಕಿಸಿದ್ದಾರೆ ಎಂದು ವರದಿಯು ಗುರುತಿಸಿದೆ.

    ಇದು ೨೦೨೩ ರ ವೀಡಿಯೋ ಎಂದು ಸ್ಪಷ್ಟಪಡಿಸುತ್ತದೆ ಮತ್ತು ಈ ವೀಡಿಯೋವನ್ನು ಬಳಸಿ ಇತ್ತೀಚಿನ ಘಟನೆಯನ್ನು ತೋರಿಸುತ್ತದೆ ಎಂದು ಹಂಚಿಕೊಳ್ಳಲಾದ ಹೇಳಿಕೆಗಳು ತಪ್ಪು.


    ತೀರ್ಪು:

    ವೀಡಿಯೋದ ವಿಶ್ಲೇಷಣೆಯು ವೀಡಿಯೋವು ಮೇ ೧೦, ೨೦೨೩ ರಲ್ಲಿ ನಡೆದ ಘಟನೆಯದ್ದು ಎಂದು ಸ್ಪಷ್ಟಪಡಿಸುತ್ತದೆ; ಆದ್ದರಿಂದ, ವ್ಯಕ್ತಿಯು ಇವಿಎಂ ಘಟಕವನ್ನು ಒಡೆಯುತ್ತಿದ್ದಾನೆ ಎಂದು ಆರೋಪಿಸಿ ಇತ್ತೀಚೆಗೆ ಆನ್‌ಲೈನ್‌ನಲ್ಲಿ ಪ್ರಸಾರವಾಗುತ್ತಿರುವ ಹೇಳಿಕೆಗಳು ತಪ್ಪು.

    Claim Review :   ಕರ್ನಾಟಕದಲ್ಲಿ ವ್ಯಕ್ತಿಯೊಬ್ಬ ಇವಿಎಂ ಮಷೀನ್ ಒಡೆಯುತ್ತಿರುವುದನ್ನು ವೀಡಿಯೋ ತೋರಿಸುತ್ತದೆ.
    Claimed By :  Anonymous
    Fact Check :  False
    IDTU - Karnataka

    IDTU - Karnataka