೨೦೨೪ರ ಚುನಾವಣೆಯ ಸಮಯದಲ್ಲಿ ಇವಿಎಂ ಬೂತ್‌ನಲ್ಲಿ ಮತಗಟ್ಟೆ ಏಜೆಂಟ್ ಮತದಾರರ ಕೈ ಹಿಡಿದು ಮತ ಚಲಾಯಿಸಲಾಗುತ್ತಿದೆ ಎಂದು ಹೇಳಿಕೊಂಡು ಹಳೆಯ ವೀಡಿಯೋವನ್ನು ಹಂಚಿಕೊಳ್ಳಲಾಗಿದೆ.
ಸಾರಾಂಶ:
೨೦೨೪ ರ ಲೋಕಸಭಾ ಚುನಾವಣೆಯಲ್ಲಿ ಮತದಾರರು ನಿರ್ದಿಷ್ಟ ರಾಜಕೀಯ ಪಕ್ಷಕ್ಕೆ ಮತ ಹಾಕುವಂತೆ ಒತ್ತಾಯಿಸಲಾಗಿದೆ ಎಂದು ಹೇಳುವ ಮೂಲಕ ಮತಗಟ್ಟೆ ಏಜೆಂಟ್ ಮತದಾರರ ಕೈ ಹಿಡಿದು ಇವಿಎಂನಲ್ಲಿ ಮತ ಚಲಾಯಿಸುವಂತೆ ಮಾಡುವ ವೀಡಿಯೋವನ್ನು ಇತ್ತೀಚೆಗೆ ಸಾಮಾಜಿಕ ಮಾಧ್ಯಮ ಪ್ಲಾಟ್ಫಾರ್ಮ್ ಗಳಲ್ಲಿ ಹಂಚಿಕೊಳ್ಳಲಾಗಿದೆ. ಆದರೆ, ಈ ವೀಡಿಯೋ ಕನಿಷ್ಠ ಮೇ ೨೦೧೯ ರ ಹಿಂದಿನದು. ಇದು ಪ್ರಸ್ತುತ ನಡೆಯುತ್ತಿರುವ ಚುನಾವಣೆಗಳಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ. ಆದ್ದರಿಂದ ಈ ಹೇಳಿಕೆ ತಪ್ಪುದಾರಿಗೆಳೆಯುವಂತಿದೆ.
ಹೇಳಿಕೆ:
ಎಕ್ಸ್ (ಹಿಂದೆ ಟ್ವಿಟ್ಟರ್) ಮತ್ತು ಯೂಟ್ಯೂಬ್‌ನಲ್ಲಿ ಹಂಚಿಕೊಳ್ಳಲಾದ ೨೮ ಸೆಕೆಂಡುಗಳ ವೀಡಿಯೋ (ಇಲ್ಲಿ, ಇಲ್ಲಿ, ಇಲ್ಲಿ ಮತ್ತು ಇಲ್ಲಿ ಆರ್ಕೈವ್ ಮಾಡಲಾಗಿದೆ) ಇವಿಎಂ ಬಳಸಿ ಮತ ಚಲಾಯಿಸಲು ಇಬ್ಬರು ಮಹಿಳೆಯರ ಕೈ ಹಿಡಿದು ಪೋಲಿಂಗ್ ಏಜೆಂಟ್ ಸಹಾಯ ಮಾಡುವುದನ್ನು ತೋರಿಸುತ್ತದೆ. ನಿರ್ದಿಷ್ಟ ಪಕ್ಷಕ್ಕೆ ಬಲವಂತವಾಗಿ ಮತ ಹಾಕುವ ಮೂಲಕ ಏಜೆಂಟ್ ಅವರ ಮತಗಳ ಮೇಲೆ ಪ್ರಭಾವ ಬೀರುತ್ತಿದ್ದಾರೆ ಮತ್ತು ಸಾಮಾನ್ಯ ಜನರಿಂದ ಮತದಾನದ ಹಕ್ಕನ್ನು ಕಸಿದುಕೊಳ್ಳಲಾಗಿದೆ ಎಂದು ವೀಡಿಯೋದ ಜೊತೆಗಿನ ಶೀರ್ಷಿಕೆಗಳು ಹೇಳುತ್ತವೆ. ಭಾರತೀಯ ಜನತಾ ಪಕ್ಷ (ಬಿಜೆಪಿ) ದ "ಅಬ್ ಕಿ ಬಾರ್ ೪೦೦ ಪಾರ್" ಧ್ಯೇಯವಾಕ್ಯವನ್ನು ಉಲ್ಲೇಖಿಸಿ ಬಿಜೆಪಿಯು ೪೦೦ ಸೀಟ್ ಗಳನ್ನು ಹೀಗೆ ಪಡೆಯುವುದೆಂದು ಕೆಲವು ಶೀರ್ಷಿಕೆಗಳು ಹೇಳುತ್ತವೆ.
ಪ್ರಸ್ತುತ ನಡೆಯುತ್ತಿರುವ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಯೂಟ್ಯೂಬ್‌ನಲ್ಲಿ ಹಂಚಿಕೊಳ್ಳಲಾದ ವೈರಲ್ ವೀಡಿಯೋದ ಸ್ಕ್ರೀನ್‌ಶಾಟ್‌ಗಳು.
ಪುರಾವೆ:
ರಿವರ್ಸ್ ಇಮೇಜ್ ಸರ್ಚ್‌ಗಾಗಿ ವೈರಲ್ ವೀಡಿಯೋದಿಂದ ಕೀವರ್ಡ್‌ಗಳನ್ನು ಬಳಸುವುದರಿಂದ ನಾವು ಮೇ ೧೫, ೨೦೧೯ ರ ಒಂದು ಎಕ್ಸ್ ಪೋಷ್ಟ್ (ಆರ್ಕೈವ್) ಅನ್ನು ಕಂಡುಕೊಂಡೆವು. ಇದನ್ನು ಹಿಂದೂಸ್ತಾನ್ ಟೈಮ್ಸ್‌ನ ರಾಜಕೀಯ ಸಂಪಾದಕ ವಿನೋದ್ ಶರ್ಮಾ ಅವರು ಹಂಚಿಕೊಂಡಿದ್ದಾರೆ. ವೀಡಿಯೋ ಜೊತೆಗೆ ಈ ಶೀರ್ಷಿಕೆಯನ್ನು ಹಂಚಿಕೊಂಡಿದ್ದಾರೆ, “ಇನ್ನೊಂದು ಸಾಧನೆ #ElectionCommission. ಕನಿಷ್ಠ ಹೇಳಲು ಆಘಾತಕಾರಿ. (ಅನುವಾದಿಸಲಾಗಿದೆ).” ಅದೇ ವೈರಲ್ ವೀಡಿಯೋವನ್ನು ಕುರಿತು ೨೦೧೯ ರ ಇದೇ ರೀತಿಯ ಎಕ್ಸ್ ಪೋಷ್ಟ್ ಗಳು ಅದರಲ್ಲಿ ತೋರುವ ಘಟನೆಯು ಪಶ್ಚಿಮ ಬಂಗಾಳದಲ್ಲಿ ಸಂಭವಿಸಿತ್ತು ಎಂದು ಹೇಳುತ್ತವೆ.
ಮೇ ೨೦೧೯ ರಲ್ಲಿ ವೈರಲ್ ವೀಡಿಯೋವನ್ನು ಹಂಚಿಕೊಂಡಿರುವ ಎಕ್ಸ್ ಪೋಷ್ಟ್ ಗಳ ಸ್ಕ್ರೀನ್‌ಶಾಟ್‌ಗಳು.
ಆನ್‌ಲೈನ್ ಸುದ್ದಿವಾಹಿನಿ ಸಿಯಾಸತ್ ಡೈಲಿಯ ಅಧಿಕೃತ ಯೂಟ್ಯೂಬ್ ಚಾನೆಲ್ ನಲ್ಲಿ ಪಶ್ಚಿಮ ಬಂಗಾಳದಲ್ಲಿ ಸೆರೆಹಿಡಿಯಲಾದ ೧-ನಿಮಿಷ ೪೯-ಸೆಕೆಂಡ್‌ಗಳ ವೀಡಿಯೋ ವೈರಲ್ ಕ್ಲಿಪ್ ಅನ್ನು ಒಳಗೊಂಡಿದೆ ಮತ್ತು ಮೇ ೧೮, ೨೦೧೯ ರಂದು ಅಪ್‌ಲೋಡ್ ಮಾಡಲಾಗಿದೆ. ಈ ವೀಡಿಯೋದಲ್ಲಿ ಪೋಲಿಂಗ್ ಏಜೆಂಟ್ ಹಲವಾರು ಮತದಾರರೊಂದಿಗೆ (ಪುರುಷರು ಮತ್ತು ಮಹಿಳೆಯರು) ಅದೇ ರೀತಿ ಮಾಡುವುದನ್ನು ಕಾಣಬಹುದು.
ಮೇ ೧೮, ೨೦೧೯ ರಂದು ವೈರಲ್ ವೀಡಿಯೋವನ್ನು ಕುರಿತು ಯೂಟ್ಯೂಬ್‌ಗೆ ಅಪ್‌ಲೋಡ್ ಮಾಡಲಾದ ಸಿಯಾಸತ್ ಡೈಲಿಯ ಸುದ್ದಿ ವರದಿಯ ಸ್ಕ್ರೀನ್‌ಶಾಟ್.
ನ್ಯೂಸ್ ಸೆಂಟ್ರಲ್ 24x7 ಹೆಸರಿನ ಜಾಲತಾಣದಿಂದ ವೈರಲ್ ವೀಡಿಯೋ ಬಗ್ಗೆ ಮೇ ೧೬, ೨೦೧೯ ರಂದು ಪ್ರಕಟವಾದ ವರದಿಯ ಆರ್ಕೈವ್ ಅನ್ನು ಸಹ ನಾವು ಕಂಡುಕೊಂಡಿದ್ದೇವೆ. ವೈರಲ್ ವೀಡಿಯೋವು ಪಶ್ಚಿಮ ಬಂಗಾಳದ ಯಾವುದೊ ಗ್ರಾಮೀಣ ಪ್ರದೇಶದಿಂದ ಹುಟ್ಟಿಕೊಂಡಿರಬಹುದು ಎಂದು ಆ ವರದಿಯು ಹೇಳಿದೆ. ಆ ಜಾಲತಾಣ ಪ್ರಸ್ತುತ ಕಾರ್ಯನಿರ್ವಹಿಸುತ್ತಿಲ್ಲ ಎಂದು ಕಂಡುಬರುತ್ತದೆ.
ಮೇ ೧೬, ೨೦೧೯ ರ ಮಾಡಿದ ನ್ಯೂಸ್ ಸೆಂಟ್ರಲ್ 24x7 ನ ವರದಿಯ ಆರ್ಕೈವ್ ನ ಸ್ಕ್ರೀನ್‌ಶಾಟ್.
ವೈರಲ್ ವೀಡಿಯೋದ ಮೂಲವನ್ನು ಸ್ವತಂತ್ರವಾಗಿ ಪರಿಶೀಲಿಸಲು ನಮಗೆ ಸಾಧ್ಯವಾಗಲಿಲ್ಲ. ಆದರೆ ಇದು ಪ್ರಸ್ತುತ ನಡೆಯುತ್ತಿರುವ ಸಾರ್ವತ್ರಿಕ ಚುನಾವಣೆಗೆ ಮುಂಚಿತವಾಗಿರುತ್ತದೆ.
ತೀರ್ಪು:
ಈ ಹೇಳಿಕೆಯ ವಿಶ್ಲೇಷಣೆಯು ಇವಿಎಂನಲ್ಲಿ ಇಬ್ಬರು ಮಹಿಳೆಯರ ಕೈ ಹಿಡಿದು ಮತ ಚಲಾಯಿಸಲು ಪ್ರಭಾವ ಬೀರುವ ಪೋಲಿಂಗ್ ಏಜೆಂಟ್ ಅನ್ನು ತೋರಿಸುವ ವೈರಲ್ ಕ್ಲಿಪ್ ೨೦೧೯ ರ ಹಳೆಯ ವೀಡಿಯೋ ಮತ್ತು ಪ್ರಸ್ತುತ ನಡೆಯುತ್ತಿರುವ ಲೋಕಸಭಾ ಚುನಾವಣೆಗೆ ಸಂಬಂಧ ಹೊಂದಿಲ್ಲ ಎಂದು ಸ್ಪಷ್ಟಪಡಿಸುತ್ತದೆ. ಆದ್ದರಿಂದ, ಈ ಹೇಳಿಕೆ ತಪ್ಪುದಾರಿಗೆಳೆಯುವಂತಿದೆ.