ಸಟ್ಟಾ ಬಜಾರ್ ಗಳ ಇಂಡಿಯಾ ಬ್ಲಾಕ್ ಗೆಲುವಿನ ಮುನ್ಸೂಚನೆಗಳನ್ನು ತೋರಿಸುವ ನ್ಯೂಸ್24ನ ಗ್ರಾಫಿಕ್ ನಕಲಿಯಾಗಿದೆ
ಸಾರಾಂಶ:
ಹಿಂದಿ ಸುದ್ದಿ ವಾಹಿನಿ ನ್ಯೂಸ್24 ಸಟ್ಟಾ ಬಜಾರ್‌ಗಳಿಂದ (ಅಕ್ರಮ ಬೆಟ್ಟಿಂಗ್ ಮಾರುಕಟ್ಟೆಗಳು) ಮುನ್ಸೂಚನೆಗಳನ್ನು ಹೊಂದಿದೆ ಎಂದು ಹೇಳಿಕೊಳ್ಳುವ ಚಿತ್ರವನ್ನು ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಂಡಿದ್ದಾರೆ, ಇದು ಇಂಡಿಯಾ ಬ್ಲಾಕ್ ಮತ್ತು ಎನ್‌ಡಿಎ ಒಕ್ಕೂಟದ ನಡುವೆ ನಿಕಟ ಸ್ಪರ್ಧೆಯನ್ನು ಸೂಚಿಸುತ್ತದೆ. ಆದರೆ, ಇದು ನಕಲಿ ಚಿತ್ರವಾಗಿದೆ. ನ್ಯೂಸ್24 ಪ್ರಸ್ತುತ ನಡೆಯುತ್ತಿರುವ ಲೋಕಸಭಾ ಚುನಾವಣೆಯ ಬಗ್ಗೆ ಅಂತಹ ಯಾವುದೇ ಮುನ್ಸೂಚನೆಗಳನ್ನು ಬಿಡುಗಡೆ ಮಾಡಿಲ್ಲ. ಆದ್ದರಿಂದ ಈ ಚಿತ್ರ ಫೇಕ್.
ಹೇಳಿಕೆ:
ಲೋಕಸಭಾ ಚುನಾವಣೆಯ ಅಂತಿಮ ಹಂತವು ಜೂನ್ ೧ ರಂದು ಮುಕ್ತಾಯಗೊಳ್ಳಲಿದೆ ಮತ್ತು ಜೂನ್ ೪ ರಂದು ಫಲಿತಾಂಶಗಳನ್ನು ಪ್ರಕಟಿಸುವ ನಿರೀಕ್ಷೆಯಿದೆ. ಎಕ್ಸ್ (ಹಿಂದೆ ಟ್ವಿಟ್ಟರ್), ಇನ್ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ನಲ್ಲಿನ ಪೋಷ್ಟ್ ಗಳು ಹಿಂದಿ ಸುದ್ದಿ ಚಾನೆಲ್ ನ್ಯೂಸ್24ನ ಇನ್ಫೋಗ್ರಾಫಿಕ್‌ನಂತೆ ಕಂಡುಬರುವ ಚಿತ್ರವನ್ನು ಹಂಚಿಕೊಂಡಿವೆ. ಇದು ವಿವಿಧ ಸಟ್ಟಾ ಬಜಾರ್‌ಗಳಿಂದ (ಅಕ್ರಮ ಬೆಟ್ಟಿಂಗ್ ಮಾರುಕಟ್ಟೆಗಳು) ಭವಿಷ್ಯವನ್ನು ತೋರಿಸುತ್ತದೆ, ಇದು ಕಾಂಗ್ರೆಸ್ ನೇತೃತ್ವದ ಇಂಡಿಯಾ ಬ್ಲಾಕ್ ಮತ್ತು ಭಾರತೀಯ ಜನತಾ ಪಕ್ಷದ (ಬಿಜೆಪಿ) ನೇತೃತ್ವದ ಎನ್‌ಡಿಎ ಒಕ್ಕೂಟದ ನಡುವೆ ನಿಕಟ ಸ್ಪರ್ಧೆಯನ್ನು ಸೂಚಿಸುತ್ತದೆ. ಇದು ಚುನಾವಣೆಯಲ್ಲಿ ೪೦೦ ಕ್ಕೂ ಹೆಚ್ಚು ಸ್ಥಾನಗಳನ್ನು ಗಳಿಸುವ ಬಿಜೆಪಿಯ ಹಿಂದಿನ ಹೇಳಿಕೆಗೆ ಸವಾಲಾಗಿದೆ.
ವ್ಯಾಪಕವಾಗಿ ಹಂಚಿಕೊಂಡ ಚಿತ್ರವು ರಾಷ್ಟ್ರದ ಸಟ್ಟಾ ಬಜಾರ್‌ಗಳಿಂದ ಪ್ರಕ್ಷೇಪಣಗಳನ್ನು ಪ್ರಸ್ತುತಪಡಿಸುತ್ತದೆ, ಎನ್ ಡಿಎ ಯ ಸಂಖ್ಯೆಯನ್ನು ನಿರ್ಣಾಯಕ ೨೭೨ ಬಹುಮತದ ಮಿತಿಗಿಂತ ಕೆಳಗೆ ಇರಿಸುತ್ತದೆ ಮತ್ತು ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟಕ್ಕೆ ಬಹುಮತವನ್ನು ಸೂಚಿಸುತ್ತದೆ. ಈ ಮುನ್ಸೂಚನೆಗಳು ಫಲೋಡಿ, ಪಾಲನ್‌ಪುರ್, ಕರ್ನಾಲ್, ಬೋಹ್ರಿ, ಬೆಳಗಾವಿ, ಕೋಲ್ಕತ್ತಾ, ವಿಜಯವಾಡ ಮತ್ತು ಅಹಮದಾಬಾದ್ ಮಾರುಕಟ್ಟೆಗಳಲ್ಲಿ ನಿಕಟ ಸ್ಪರ್ಧೆಯನ್ನು ಸೂಚಿಸುತ್ತವೆ ಆದರೆ ಇಂದೋರ್ ಸರಾಫಾ ಮತ್ತು ಸೂರತ್ ಮಾಘೋಬಿಯಲ್ಲಿ ಎನ್‌ಡಿಎ ಪ್ರಬಲ ಮುನ್ನಡೆ ಸಾಧಿಸಿದೆ. ನಿರ್ದಿಷ್ಟವಾಗಿ ಹೇಳುವುದಾದರೆ, ರಾಜಸ್ಥಾನದ ಫಲೋಡಿ ಸಟ್ಟಾ ಬಜಾರ್ ಭಾರತೀಯ ಚುನಾವಣಾ ಫಲಿತಾಂಶಗಳಿಗೆ ಪ್ರಸಿದ್ಧವಾದ ಮಾಪಕವಾಗಿದೆ.
ಮೇ ೨೯, ೨೦೨೪ ರಂದು ಎಕ್ಸ್ ನಲ್ಲಿ ಹಂಚಿಕೊಳ್ಳಲಾದ ವೈರಲ್ ಚಿತ್ರದ ಸ್ಕ್ರೀನ್‌ಶಾಟ್.
ಪುರಾವೆ:
ನಾವು ನ್ಯೂಸ್24ನ ಸಾಮಾಜಿಕ ಮಾಧ್ಯಮ ಖಾತೆಗಳನ್ನು ನೋಡಿದ್ದೇವೆ ಮತ್ತು ಕೀವರ್ಡ್ ಸರ್ಚ್ ನಡೆಸಿದ್ದೇವೆ, ಆದರೆ ಈ ಹಿಂದಿ ಟಿವಿ ನೆಟ್‌ವರ್ಕ್‌ನ ಅಧಿಕೃತ ಹ್ಯಾಂಡಲ್‌ಗಳಲ್ಲಿ ವೈರಲ್ ಚಿತ್ರವನ್ನು ಪತ್ತೆಹಚ್ಚಲು ನಮಗೆ ಸಾಧ್ಯವಾಗಲಿಲ್ಲ. ವೈರಲ್ ಚಿತ್ರದಲ್ಲಿನ ಲೋಗೋ ನ್ಯೂಸ್24 ಚಾನೆಲ್‌ನಂತೆಯೇ ಇರುವುದನ್ನು ನಾವು ಗಮನಿಸಿದ್ದೇವೆ, ಆದರೆ ಅದು ನಿಜವಾಗಿ "News2024" ಎಂದು ಓದುತ್ತದೆ. ನಂತರ, ಚಾನಲ್‌ನ ಕಾರ್ಯನಿರ್ವಾಹಕ ಸಂಪಾದಕ ಮಯಾಂಕ್ ಗುಪ್ತಾ ಅವರಿಂದ ವೈರಲ್ ಚಿತ್ರವನ್ನು ನಕಲಿ ಎಂದು ಖಂಡಿಸುವ ಮೇ ೨೯ ರ ಎಕ್ಸ್ ಪೋಷ್ಟ್ ಅನ್ನು ನಾವು ಕಂಡುಕೊಂಡಿದ್ದೇವೆ. ವೈರಲ್ ಚಿತ್ರವನ್ನು ಉಲ್ಲೇಖಿಸಿ, ಗುಪ್ತಾ ಹಿಂದಿಯಲ್ಲಿ ಹೀಗೆಂದು ಬರೆದಿದ್ದಾರೆ - “ಫೇಕ್ ಅಲರ್ಟ್: ಈ ನಕಲಿ ಸುದ್ದಿಯನ್ನು ನಮ್ಮ ಹೆಸರಿನಲ್ಲಿ ವೈರಲ್ ಮಾಡಲಾಗುತ್ತಿದೆ. ನ್ಯೂಸ್24 ಅಂತಹ ಯಾವುದೇ ಸುದ್ದಿಯನ್ನು ಪ್ರಕಟಿಸಿಲ್ಲ. ಜಾಗರೂಕರಾಗಿರಿ” (ಅನುವಾದಿಸಲಾಗಿದೆ).
ಮೇ ೨೯, ೨೦೨೪ ದಿನಾಂಕದ ನ್ಯೂಸ್24ನ ಕಾರ್ಯನಿರ್ವಾಹಕ ಸಂಪಾದಕರ ಎಕ್ಸ್ ಪೋಷ್ಟ್ ನ ಸ್ಕ್ರೀನ್‌ಶಾಟ್.
ಹೆಚ್ಚುವರಿಯಾಗಿ, ಸಟ್ಟಾ ಬಜಾರ್‌ಗಳ ಲೋಕಸಭಾ ಚುನಾವಣೆಗಳ ಮುನ್ಸೂಚನೆಗಳನ್ನು ಚರ್ಚಿಸುವ ಹಲವಾರು ಸುದ್ದಿ ವರದಿಗಳನ್ನು ನಾವು ಕಂಡುಕೊಂಡಿದ್ದೇವೆ. ಮೇ ೨೯, ೨೦೨೪ ರ ಇಂಡಿಯಾ ಟುಡೇ ವರದಿಯ ಪ್ರಕಾರ, ಬೆಟ್ಟಿಂಗ್ ಮಾರುಕಟ್ಟೆಯು ಬಿಜೆಪಿಯು ೨೦೨೪ ರ ಲೋಕಸಭಾ ಚುನಾವಣೆಯಲ್ಲಿ ಬಹಳ ಸುಲಭವಾಗಿ ಗೆಲ್ಲುತ್ತದೆ ಎಂದು ನಿರೀಕ್ಷಿಸುತ್ತದೆ. ಆದರೆ ಪ್ರಧಾನಿ ನರೇಂದ್ರ ಮೋದಿ ಮೂರನೇ ಬಾರಿಗೆ ಗೆಲ್ಲುತ್ತಾರೆ ಎಂಬ ನಿರೀಕ್ಷೆಗಳಿದ್ದರೂ ಬಿಜೆಪಿಯ '೪೦೦ ಪಾರ್' ಹೆಗ್ಗಳಿಕೆಗೆ ಮಾರುಕಟ್ಟೆ ಬೆಂಬಲ ನೀಡುವುದಿಲ್ಲ ಎಂದು ಸಮೀಕ್ಷೆ ಹೇಳುತ್ತದೆ. ಲೋಕಸಭಾ ಚುನಾವಣಾ ಫಲಿತಾಂಶಗಳಲ್ಲಿ ಬಿಜೆಪಿಗೆ ಬಹುಮತದ ಮುನ್ಸೂಚನೆ ನೀಡಿದ ಫಲೋಡಿ ಬೆಟ್ಟಿಂಗ್ ಮಾರುಕಟ್ಟೆಯ ಮುನ್ಸೂಚನೆಯನ್ನು ಯನ್ನು ದಿ ಎಕನಾಮಿಕ್ ಟೈಮ್ಸ್ ಕೂಡ ವರದಿ ಮಾಡಿದೆ.
ತೀರ್ಪು:
ವೈರಲ್ ಚಿತ್ರದ ವಿಶ್ಲೇಷಣೆಯು ನ್ಯೂಸ್24 ಬಿಡುಗಡೆ ಮಾಡಿದ ೨೦೨೪ ರ ಲೋಕಸಭಾ ಚುನಾವಣೆಯ ಫಲಿತಾಂಶಗಳ ಸಟ್ಟಾ ಬಜಾರ್ ಗಳ ಮುನ್ಸೂಚನೆಗಳ ಅಧಿಕೃತ ಪಟ್ಟಿ ಅಲ್ಲ ಎಂದು ತೋರಿಸುತ್ತದೆ. ಆದ್ದರಿಂದ, ಪ್ರಸ್ತುತ ನಡೆಯುತ್ತಿರುವ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟ ಮತ್ತು ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟವು ನಿಕಟ ಪೈಪೋಟಿ ನಡೆಸುತ್ತಿದೆ ಎಂದು ಹೇಳಲು ಹಂಚಿಕೊಂಡ ಚಿತ್ರವು ಫೇಕ್.