ಇಲ್ಲ, ರಾಹುಲ್ ಗಾಂಧಿ ಅವರು ಪಾಕ್ ಪರ ಘೋಷಣೆಗಳನ್ನು ಕೂಗಿದ ಆರೋಪಿ ಅಮೂಲ್ಯ ಲಿಯೋನಾ ಅವರನ್ನು ಭೇಟಿ ಮಾಡಿಲ್ಲ
ಸಾರಾಂಶ:
೨೦೨೦ ರಲ್ಲಿ ಪಾಕಿಸ್ತಾನದ ಪರ ಘೋಷಣೆಗಳನ್ನು ಕೂಗಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾದ ಕಾರ್ಯಕರ್ತೆ ಅಮೂಲ್ಯ ಲಿಯೋನಾ ಎಂದು ಹೇಳುವ ಮೂಲಕ ಯುವತಿಯೊಂದಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಚಿತ್ರವನ್ನು ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಂಡಿದ್ದಾರೆ. ಚಿತ್ರವನ್ನು ವಿಶ್ಲೇಷಿಸಿದ ನಂತರ, ನಾವು ಆ ಮಹಿಳೆಯನ್ನು ಎರ್ನಾಕುಲಂ ಜಿಲ್ಲೆಯಾ ಕೇರಳ ಸ್ಟೂಡೆಂಟ್ಸ್ ಯೂನಿಯನ್ ನ ಪ್ರಧಾನ ಕಾರ್ಯದರ್ಶಿ ಎಂದು ಗುರುತಿಸಿದ್ದೇವೆ. ಅವರು ರಾಹುಲ್ ಗಧಿಯವರೊಂದಿಗೆ ಸೆಪ್ಟೆಂಬರ್ ೨೦೨೨ ರಲ್ಲಿ “ಭಾರತ್ ಜೋಡೋ ಯಾತ್ರೆ” ಯಲ್ಲಿ ಭಾಗವಹಿಸಿದ್ದರು, ಆದ್ದರಿಂದ ಈ ಹೇಳಿಕೆ ತಪ್ಪಾಗಿದೆ.
ಹೇಳಿಕೆ:
ಫೆಬ್ರವರಿ ೨೦, ೨೦೨೦ ರಂದು ಬೆಂಗಳೂರಿನಲ್ಲಿ ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ವಿರುದ್ಧ ಎಐಎಂಐಎಂ ನಾಯಕ ಅಸಾದುದ್ದೀನ್ ಓವೈಸಿ ನಡೆಸಿದ ಪ್ರತಿಭಟನೆಯಲ್ಲಿ "ಪಾಕಿಸ್ತಾನ್ ಜಿಂದಾಬಾದ್" ಘೋಷಣೆಗಳನ್ನು ಕೂಗಿದ್ದ ಕಾರ್ಯಕರ್ತ ಅಮೂಲ್ಯ ಲಿಯೋನಾ ನೊರೊನ್ಹಾ ಅವರೊಂದಿಗೆ ರಾಹುಲ್ ಗಾಂಧಿ ಅವರು ಕಾಣಿಸಿಕೊಂಡಿದ್ದಾರೆ ಎಂದು ಹೇಳುವ ಪೋಷ್ಟ್‌ಗಳು ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ.
“ಭಾರತ್ ಜೋಡೋ ಯಾತ್ರೆ” ಸಮಯದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ಅಮೂಲ್ಯ ಲಿಯೋನಾ ನೊರೊನ್ಹಾ ಅವರು ನಡೆದುಕೊಂಡು ಹೋಗುತ್ತಿದ್ದಾರೆ ಯಂಬ ಹೇಳಿಕೆಯೊಂಧಿಗೆ ಈ ವೈರಲ್ ಪೋಷ್ಟ್ ಅನ್ನು ಫೇಸ್‌ಬುಕ್ ಮತ್ತು ಎಕ್ಸ್‌ನಲ್ಲಿ (ಹಿಂದಿ ಟ್ವಿಟರ್) ಹಂಚಿಕೊಂಡಿದ್ದಾರೆ.
ಅಂತಹ ಒಂದು ಪೋಷ್ಟ್ ನ ಶೀರ್ಷಿಕೆ ಹೀಗಿದೆ, “ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಸಿಎಎ ವಿರೋಧಿ ರ್ಯಾಲಿಯಲ್ಲಿ ಅಸಾದುದ್ದೀನ್ ಓವೈಸಿ ವೇದಿಕೆಯಲ್ಲಿರುವಾಗ ಪಾಕಿಸ್ತಾನ ಜಿಂದಾಬಾದ್ ಘೋಷಣೆಗಳನ್ನು ಎತ್ತಲಾಯಿತು. ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿದ ಕೆಂಪು ಭಯೋತ್ಪಾದಕ ಅಮೂಲ್ಯ ಲಿಯೋನಾ ನೊರೊನ್ಹಾ, ರಾಹುಲ್ ಗಾಂಧಿಯೊಂದಿಗೆ ನಡೆದುಕೊಂಡು ಹೋಗುತ್ತಾರೆ, ಮತ್ತು ಅವರನ್ನು ತಬ್ಬಿಕೊಳ್ಳುತ್ತಾರೆ.” (ಅನುವಾದಿಸಲಾಗಿದೆ).
ಎಕ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ಹಂಚಿಕೊಳ್ಳಲಾದ ವೈರಲ್ ಚಿತ್ರದ ಸ್ಕ್ರೀನ್‌ಶಾಟ್.
ಪುರಾವೆ:
ರಿವರ್ಸ್ ಇಮೇಜ್ ಸರ್ಚ್ ಈ ಹೇಳಿಕೆಯನ್ನು ನಿರಾಕರಿಸುವ ಹಲವಾರು ಎಕ್ಸ್ ಪೋಷ್ಟ್ ಗಳಿಗೆ ನಮ್ಮನ್ನು ಕರೆದೊಯ್ಯಿತು, ಮುಖ್ಯವಾಗಿ ಕೇರಳ ಕಾಂಗ್ರೆಸ್ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಅವರ ಎಕ್ಸ್ ಹ್ಯಾಂಡಲ್‌ಗಳಲ್ಲಿ ರಾಹುಲ್ ಗಾಂಧಿಯವರು ಎರ್ನಾಕುಲಂ ಜಿಲ್ಲೆಯ ಕೇರಳ ಸ್ಟೂಡೆಂಟ್ಸ್ ಯೂನಿಯನ್ ಪ್ರಧಾನ ಕಾರ್ಯದರ್ಶಿ ಮಿವಾ ಆಂಡ್ರೆಲಿಯೊ ಎಂದು ಗುರುತಿಸಲಾದ ಯುವತಿಯೊಂದಿಗೆ ಇರುವ ಚಿತ್ರ ಎಂದು ಸ್ಪಷ್ಟಪಡಿದ್ದಾರೆ.
ಕೆಎಸ್‌ಯು ನಾಯಕಿ ಮಿವಾ ಆಂಡ್ರೆಲಿಯೊ ಅವರೊಂದಿಗೆ ರಾಹುಲ್ ಗಾಂಧಿ ಅವರಿರುವ ಚಿತ್ರವನ್ನು ಸ್ಪಷ್ಟಪಡಿಸುವ ಕಾಂಗ್ರೆಸ್ ಕೇರಳದ ಅಧಿಕೃತ ಎಕ್ಸ್ ಹ್ಯಾಂಡಲ್‌ನ ಪೋಷ್ಟ್ ನ ಸ್ಕ್ರೀನ್‌ಶಾಟ್.
ಈ ಎಕ್ಸ್ ಪೋಷ್ಟ್ ಗಳ ನಂತರ, ಸೆಪ್ಟೆಂಬರ್ ೨೧, ೨೦೨೨ ರಂದು ಮಿವಾ ಆಂಡ್ರೆಲಿಯೊ ಅವರ ಇನ್‌ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡ ಅದೇ ರೀತಿಯ ಛಾಯಾಚಿತ್ರವನ್ನು ನಾವು ಪತ್ತೆಹಚ್ಚಿದ್ದೇವೆ. ಜೊತೆಗೆ, ಈ ಸಮಯದಲ್ಲಿ, ಕೇರಳದಲ್ಲಿ “ಭಾರತ್ ಜೋಡೋ ಯಾತ್ರೆ” ನಡೆಯುತ್ತಿತ್ತು ಎಂಬ ಮಾಹಿತಿಯನ್ನು ಸಹ ನಾವು ಕಂಡುಕೊಂಡಿದ್ದೇವೆ.
ರಾಹುಲ್ ಗಾಂಧಿಯವರೊಂದಿಗೆ ಕೆಎಸ್‌ಯು ನಾಯಕಿ ಮಿವಾ ಆಂಡ್ರೆಲಿಯೊ ಅವರ ಇನ್‌ಸ್ಟಾಗ್ರಾಮ್ ಪೋಷ್ಟ್ ನ ಸ್ಕ್ರೀನ್‌ಶಾಟ್.
ಸೆಪ್ಟೆಂಬರ್ ೨೪, ೨೦೨೪ ರಂದು ತನ್ನ ಮತ್ತೊಂದು ಇನ್‌ಸ್ಟಾಗ್ರಾಮ್ ಪೋಷ್ಟ್ ನಲ್ಲಿ, ಕೆಎಸ್‌ಯು ನಾಯಕಿ ಮಿವಾ ಆಂಡ್ರೆಲಿಯೊ ಅವರು ವೀಡಿಯೋದಲ್ಲಿ ಸ್ಪಷ್ಟಪಡಿಸಿದ್ದಾರೆ. “ನಮ್ಮ ಹೇರ್ ಸ್ಟೈಲ್‌ನಲ್ಲಿ ಸಾಮ್ಯತೆ ಇದೆ ಎಂಬ ಕಾರಣಕ್ಕೆ ನಾನು ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದ ಹುಡುಗಿ ಎಂದು ಸಂಘ ಪರಿವಾರದವರು ನನ್ನ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಈ ಹಿಂದೆಯೂ ಸಂಘಪರಿವಾರ ಕಾಂಗ್ರೆಸ್ ಅನ್ನು ನಾಶ ಮಾಡಲು ಯತ್ನಿಸಿತ್ತು. ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿಯನ್ನು ನಾಶ ಮಾಡಲು ಅವರು ಎಂತಹ ಸುಳ್ಳು ಕಥೆಗಳನ್ನು ಹಬ್ಬಿಸುತ್ತಾರೆ ಎಂಬುದಕ್ಕೆ ಇಂದು ನಾವು ನೋಡುತ್ತಿರುವುದು ದೊಡ್ಡ ಉದಾಹರಣೆಯಾಗಿದೆ” (ಅನುವಾದಿಸಲಾಗಿದೆ).
ಹೆಚ್ಚಿನ ಸಂಶೋಧನೆಯ ನಂತರ, ಹಿರಿಯ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರ ಎಕ್ಸ್ ಪೋಷ್ಟ್ ಅನ್ನು ನಾವು ಕಂಡುಕೊಂಡಿದ್ದೇವೆ, ಅಲ್ಲಿ ಕಾಂಗ್ರೆಸ್ ಪಕ್ಷವು ಬಿಜೆಪಿ ಕಾರ್ಯಕರ್ತೆ ಪ್ರೀತಿ ಗಾಂಧಿ ವಿರುದ್ಧ ನಕಲಿ ಸುದ್ದಿಯನ್ನು ಹರಡಿದಕ್ಕಾಗಿ ಪೊಲೀಸ್ ದೂರು ದಾಖಲಿಸಿದೆ. ದೂರಿನಲ್ಲಿ, ಎರ್ನಾಕುಲಂನ ಕಾಂಗ್ರೆಸ್ ಸಂಸದೆ ಹೈಬಿ ಈಡನ್, ಪ್ರೀತಿ ಗಾಂಧಿ ಅವರು "ತಪ್ಪಿಸುವ, ಪ್ರಚೋದಿಸುವ, ಸಾರ್ವಜನಿಕರನ್ನು ಪ್ರಚೋದಿಸಲು ಮತ್ತು ಗುಂಪುಗಳ ನಡುವೆ ದ್ವೇಷವನ್ನು ಸೃಷ್ಟಿಸಲು" ಸುಳ್ಳು ಮಾಹಿತಿಯನ್ನು ಪ್ರಸಾರ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ತೀರ್ಪು:
ವೈರಲ್ ಪೋಷ್ಟ್ ಅನ್ನು ವಿಶ್ಲೇಷಿಸಿದ ನಂತರ, ರಾಹುಲ್ ಗಾಂಧಿಯವರ ಚಿತ್ರವು ಅಮೂಲ್ಯ ಲಿಯೋನಾ ನೊರೊನ್ಹಾ ಅವರೊಂದಿಗೆ ಅಲ್ಲ, ಆದರೆ ಕೇರಳ ಸ್ಟೂಡೆಂಟ್ಸ್ ಯೂನಿಯನ್ (ಕೆಎಸ್‌ಯು) ನ ಎರ್ನಾಕುಲಂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಿವಾ ಆಂಡ್ರೆಲಿಯೊ ಅವರೊಂದಿಗೆ ಎಂದು ನಾವು ಕಂಡುಕೊಂಡಿದ್ದೇವೆ. ಆದ್ದರಿಂದ, ಈ ಹೇಳಿಕೆ ತಪ್ಪು.