Begin typing your search above and press return to search.
    Others

    ಇಲ್ಲ, ಕಾಂಗ್ರೆಸ್ ಪಕ್ಷವನ್ನು ಟೀಕಿಸುವ ಈ ವ್ಯಂಗ್ಯಚಿತ್ರ ವನ್ನು ಅಮೇರಿಕಾದ ವ್ಯಂಗ್ಯಚಿತ್ರಕಾರ ಬೆನ್ ಗ್ಯಾರಿಸನ್ ಚಿತ್ರಿಸಿಲ್ಲ

    IDTU - Karnataka
    30 May 2024 7:53 AM GMT
    ಇಲ್ಲ, ಕಾಂಗ್ರೆಸ್ ಪಕ್ಷವನ್ನು ಟೀಕಿಸುವ ಈ ವ್ಯಂಗ್ಯಚಿತ್ರ ವನ್ನು ಅಮೇರಿಕಾದ ವ್ಯಂಗ್ಯಚಿತ್ರಕಾರ ಬೆನ್ ಗ್ಯಾರಿಸನ್ ಚಿತ್ರಿಸಿಲ್ಲ
    x

    ಸಾರಾಂಶ:

    ಅಮೇರಿಕಾದ ವ್ಯಂಗ್ಯಚಿತ್ರಕಾರ ಬೆನ್ ಗ್ಯಾರಿಸನ್ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಐಎನ್‌ಸಿ) ಅನ್ನು ಟೀಕಿಸುವ ರಾಜಕೀಯ ವ್ಯಂಗ್ಯಚಿತ್ರವನ್ನು ರಚಿಸಿದ್ದಾರೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ವೈರಲ್ ಚಿತ್ರ ಹೇಳಿಕೊಂಡಿದೆ. ಆದರೆ, ಆ ಚಿತ್ರ ಫೇಕ್ ಎಂದು ತಿಳಿದುಬಂದಿದೆ. ೨೦೧೫ ರಲ್ಲಿ ಭಾರತೀಯ ವ್ಯಂಗ್ಯಚಿತ್ರಕಾರ ಅಮಲ್ ಮೇಧಿ ರಚಿಸಿದ ಮೂಲ ವ್ಯಂಗ್ಯಚಿತ್ರದಲ್ಲಿ ಸರ್ಕಾರದ 'ಮೇಕ್ ಇನ್ ಇಂಡಿಯಾ' ಅಭಿಯಾನವನ್ನು ಅವರು ಟೀಕಿಸಿದರು.

    ಹೇಳಿಕೆ:

    ಅಮೇರಿಕಾದ ವ್ಯಂಗ್ಯಚಿತ್ರಕಾರ ಬೆನ್ ಗ್ಯಾರಿಸನ್ ಅವರು ಕಾಂಗ್ರೆಸ್ ಪಕ್ಷವನ್ನು ಟೀಕಿಸುವ ರಾಜಕೀಯ ವ್ಯಂಗ್ಯಚಿತ್ರವನ್ನು ಚಿತ್ರಿಸಿದ್ದಾರೆ ಎಂದು ಆನ್‌ಲೈನ್‌ನಲ್ಲಿ ಹಂಚಿಕೊಂಡ ಚಿತ್ರ ಹೇಳುತ್ತದೆ. ಈ ಚಿತ್ರವನ್ನು ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ ಬಳಕೆದಾರರು “ನೆಹರೂ ಮತ್ತು ರಾಹುಲ್ ಆಳ್ವಿಕೆಯನ್ನು ಉತ್ತಮವಾಗಿ ಚಿತ್ರಿಸಲಾಗಿಧೆ"ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ. ಚಿತ್ರದ ಮೇಲಿನ ಪಠ್ಯವು, "ಅಮೇರಿಕಾದ ವ್ಯಂಗ್ಯಚಿತ್ರಕಾರ ಬೆನ್ ಗ್ಯಾರಿಸನ್ ಅವರ ಭಾರತದ ರಾಜ್ಯದ ಚಿತ್ರಣ. ಕಾಂಗ್ರೆಸ್ ಭಾರತವನ್ನು ಹೇಗೆ ಆಳಿತು ಎಂಬುದನ್ನು ತೋರಿಸಲು ಉತ್ತಮ ಮಾರ್ಗವಾಗಿದೆ."

    ಇದು ಕಾಂಗ್ರೆಸ್ ಪಕ್ಷದ ಗುರುತನ್ನು ಹೊಂದಿರುವ ಹಸುವನ್ನು ಚಿತ್ರಿಸುತ್ತದೆ, ಭಾರತದ ನಕ್ಷೆಯ ಆಕಾರದ ಎಲೆಯನ್ನು ಸೇವಿಸುತ್ತದೆ ಮತ್ತು ಅದನ್ನು ಬಕೆಟ್‌ನಲ್ಲಿ ಮಲವಿಸರ್ಜನೆ ಮಾಡುತ್ತದೆ, ಇದು ಭಾರತೀಯ ಜನರಿಗೆ ಉಳಿದಿರುವುದನ್ನು ಸಂಕೇತಿಸುತ್ತದೆ. ಮತ್ತೊಂದು ಬಕೆಟ್‌ನಲ್ಲಿ ಸಂಗ್ರಹಿಸಿದ ಹಸುವಿನ ಹಾಲು ಗಾಂಧಿ ಕುಟುಂಬಕ್ಕೆ ಎಂಬುದನ್ನು ಪ್ರತಿನಿಧಿಸುತ್ತದೆ.

    ವ್ಯಂಗ್ಯಚಿತ್ರ ಕಾಂಗ್ರೆಸ್ ಪಕ್ಷದ ಆಡಳಿತವನ್ನು ಬಿಂಬಿಸುತ್ತದೆ ಎಂದು ಹೇಳುವ ಎಕ್ಸ್ ಪೋಷ್ಟ್ ನ ಸ್ಕ್ರೀನ್‌ಶಾಟ್.


    ಪುರಾವೆ:

    ರಿವರ್ಸ್ ಇಮೇಜ್ ಸರ್ಚ್ ಅನ್ನು ನಡೆಸಿದಾಗ ವ್ಯಂಗ್ಯಚಿತ್ರವನ್ನು ಬಹಳ ಹಿಂದೆ ಹಂಚಿಕೊಂಡು ಎಡಿಟ್ ಮಾಡಲಗಿಧೆ ಎಂದು ತಿಳಿದುಬಂದಿದೆ. ೨೦೨೧ ರ ಹಳೆಯ ಪೋಷ್ಟ್ ಗಳು ಇದು ಭಾರತೀಯ ವ್ಯಂಗ್ಯಚಿತ್ರಕಾರ ಅಮಲ್ ಮೇಧಿ ರಚಿಸಿದ ಮೂಲ ವ್ಯಂಗ್ಯಚಿತ್ರವು ಎಡಿಟ್ ಮಾಡಲಗಿಧೆ ಎಂದು ಸೂಚಿಸುತ್ತದೆ.

    ೨೦೨೧ ರ ಎಕ್ಸ್‌ ಪೋಷ್ಟ್ ನಲ್ಲಿ, ಬಳಕೆದಾರರು ೨೦೧೫ ರಲ್ಲಿ ಭಾರತೀಯ ವ್ಯಂಗ್ಯಚಿತ್ರಕಾರ ಅಮಲ್ ಮೇಧಿ ಅವರು 'ಮೇಕ್ ಇನ್ ಇಂಡಿಯಾ' ಅಭಿಯಾನವನ್ನು ಟೀಕಿಸಿವ ಮೂಲ ವ್ಯಂಗ್ಯಚಿತ್ರವನ್ನು ಹಂಚಿಕೊಂಡಿದ್ದಾರೆ.

    "ಮೇಕ್ ಇನ್ ಇಂಡಿಯಾ" ಅಭಿಯಾನವನ್ನು ಟೀಕಿಸುವ ಮೂಲ ವ್ಯಂಗ್ಯಚಿತ್ರ ದ ಎಕ್ಸ್‌ ಪೋಷ್ಟ್ ನ ಸ್ಕ್ರೀನ್‌ಶಾಟ್.


    ಮತ್ತಷ್ಟು ಹುಡುಕಾಟವು ಬೆನ್ ಗ್ಯಾರಿಸನ್ ಅವರ ೨೦೧೭ ರ ಎಕ್ಸ್‌ ಪೋಷ್ಟ್ ಗೆ ನಮ್ಮನ್ನು ಕರೆದೊಯ್ಯಿತು, ಅವರು ಭಾರತೀಯ ರಾಜಕೀಯದ ಮೇಲೆ ಎಂದಿಗೂ ಯಾವುದೇ ವ್ಯಂಗ್ಯಚಿತ್ರಗಳನ್ನು ಚಿತ್ರಿಸಿಲ್ಲ ಎಂದು ಸ್ಪಷ್ಟಪಡಿಸುತ್ತಾ ಹೀಗೆಂದು ಹೇಳಿದರು - "ಇಲ್ಲ- ನಾನು ಭಾರತೀಯ ರಾಜಕೀಯದ ಮೇಲೆ ಯಾವುದೇ ವ್ಯಂಗ್ಯಚಿತ್ರಗಳನ್ನು ಚಿತ್ರಿಸಿಲ್ಲ- ನನ್ನ ಸಹಿಯೊಂದಿಗೆ ಸುತ್ತಾಡುವ ಕೆಲವು ವ್ಯಂಗ್ಯಚಿತ್ರಗಳು- ನನ್ನದಲ್ಲ." (ಅನುವಾದಿಸಲಾಗಿದೆ)

    ಬೆನ್ ಗ್ಯಾರಿಸನ್ ಅವರ ಅಧಿಕೃತ ಎಕ್ಸ್ ನಲ್ಲಿ ಹಂಚಿಕೊಂಡ ಸ್ಪಷ್ಟಿಕರಣದ ಸ್ಕ್ರೀನ್‌ಶಾಟ್.


    ವ್ಯಂಗ್ಯಚಿತ್ರಗಳ ಸಂಪೂರ್ಣ ಪೋರ್ಟ್‌ಫೋಲಿಯೊವನ್ನು ತೋರಿಸಿಕೊಳ್ಳುವ ಗ್ಯಾರಿಸನ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ಸಂಪೂರ್ಣ ಹುಡುಕಾಟವು ವೈರಲ್ ವ್ಯಂಗ್ಯಚಿತ್ರ ಇರುವಿಕೆಯನ್ನು ಬಹಿರಂಗಪಡಿಸಲಿಲ್ಲ, ಅದು ಅವರ ರಚನೆಯಲ್ಲ ಎಂದು ಮತ್ತಷ್ಟು ದೃಢೀಕರಿಸುತ್ತದೆ.

    ಬೆನ್ ಗ್ಯಾರಿಸನ್ ಅವರು ರಚಿಸಿದ್ದಾರೆ ಎಂದು ಹೇಳಲಾದ ವೈರಲ್ ವ್ಯಂಗ್ಯಚಿತ್ರವನ್ನು ನಕಲಿಯೆಂದು ಸಾಬೀತುಪಡಿಸುವ ತಮಿಳು ಸುದ್ದಿ ಚಾನೆಲ್ ಕಲೈಂಗರ್ ಸೈದಿಗಳ್ ನಿಂದ ಎಕ್ಸ್ (ಹಿಂದೆ ಟ್ವಿಟರ್) ಪೋಷ್ಟ್ ಅನ್ನು ಸಹ ನಾವು ಕಂಡುಕೊಂಡಿದ್ದೇವೆ.

    ಚಿತ್ರದಲ್ಲಿನ ತಮಿಳು ಪಠ್ಯ ಹೀಗಿದೆ, “ಆಡಿಟರ್ ಗುರುಮೂರ್ತಿ ಅವರ ನಕಲಿ ಸುದ್ದಿ! ಕಾಂಗ್ರೆಸ್ ಮೇಲೆ ಸ್ಥೂಲವಾಗಿ ಸೆಳೆಯಲಾಗಿದೆ. ಕಾರ್ಟೂನಿಸ್ಟ್ ಅಮೇರಿಕಾ ಕಾರ್ಟೂನಿಸ್ಟ್. ಬೆನ್ ಗ್ಯಾರಿಸನ್ ಚಿತ್ರಿಸಿದ ಆಡಿಟರ್ ಗುರುಮೂರ್ತಿ. ಅವರು ಅದನ್ನು ತಮ್ಮ ಎಕ್ಸ್ ಸೈಟ್ ಪುಟದಲ್ಲಿ ಹಂಚಿಕೊಂಡಿದ್ದಾರೆ. ೨೦೧೭ ರಲ್ಲಿ ಬೆನ್ ಗ್ಯಾರಿಸನ್ ಅವರು ಚಿತ್ರವನ್ನು ಬಿಡಲಿಲ್ಲ ಎಂದು ಘೋಷಿಸಿದರೂ, ಗುರುಮೂರ್ತಿ ಅವರು ಅದನ್ನು ಲೆಕ್ಕಿಸದೆ ನಕಲಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ (ಅನುವಾದಿಸಲಾಗಿದೆ).”

    ಆಡಿಟರ್ ಗುರುಮೂರ್ತಿ ಅವರು ಹಂಚಿಕೊಂಡಿರುವ ನಕಲಿ ವ್ಯಂಗ್ಯಚಿತ್ರವನ್ನು ನಕಲಿಯೆಂದು ಸಾಬೀತುಪಡಿಸುವ ಕಲೈಂಗರ್ ಸೈದಿಗಳ್ ನ ಎಕ್ಸ್ ಪೋಷ್ಟ್ ನ ಸ್ಕ್ರೀನ್‌ಶಾಟ್.


    ಅಮಲ್ ಮೇಧಿಯವರ ಎಡಿಟ್ ಮಾಡಲಾದ ವ್ಯಂಗ್ಯಚಿತ್ರ ಮತ್ತು ಮೂಲ ವ್ಯಂಗ್ಯಚಿತ್ರದ ಹೋಲಿಕೆಯು ಸ್ಪಷ್ಟವಾದ ಕುಶಲತೆಯನ್ನು ತೋರಿಸುತ್ತದೆ. ಮೂಲ ವ್ಯಂಗ್ಯಚಿತ್ರ 'ಮೇಕ್ ಇನ್ ಇಂಡಿಯಾ' ಅಭಿಯಾನವನ್ನು ಟೀಕಿಸುತ್ತದೆ, ಆದರೆ ಎಡಿಟ್ ಮಾಡಲಾದ ವ್ಯಂಗ್ಯಚಿತ್ರವು ಕಾಂಗ್ರೆಸ್ ಪಕ್ಷವನ್ನು ಟೀಕಿಸುವುದಾಗಿ ತೋರಿಸುತ್ತದೆ.


    ತೀರ್ಪು:

    ಬೆನ್ ಗ್ಯಾರಿಸನ್ ಅವರು ಕಾಂಗ್ರೆಸ್ ಪಕ್ಷವನ್ನು ಟೀಕಿಸಿ ವ್ಯಂಗ್ಯಚಿತ್ರವನ್ನು ರಚಿಸಿದ್ದಾರೆ ಎಂಬ ಚಿತ್ರ ನಕಲಿ. ವ್ಯಂಗ್ಯಚಿತ್ರವನ್ನು ತಪ್ಪಾಗಿ ಎಡಿಟ್ ಮಾಡಿ ಅವರದೆಂದು ಆರೋಪಿಸಲಾಗಿದೆ. ೨೦೧೫ ರಲ್ಲಿ ಭಾರತೀಯ ವ್ಯಂಗ್ಯಚಿತ್ರಕಾರ ಅಮಲ್ ಮೇಧಿ ರಚಿಸಿದ ಮೂಲ ವ್ಯಂಗ್ಯಚಿತ್ರ, 'ಮೇಕ್ ಇನ್ ಇಂಡಿಯಾ' ಅಭಿಯಾನವನ್ನು ಟೀಕಿಸಿದೆ. ವೈರಲ್ ಚಿತ್ರವು ಅವರ ಮೂಲ ವ್ಯಂಗ್ಯಚಿತ್ರಧಿಂಧಾ ಎಡಿಟ್ ಮಾಡಲಗಿಧೆ ಎಂದು ದೃಢಪಡಿಸಿದರು, ಆರಂಭದಲ್ಲಿ ಅವರ ಫೇಸ್‌ಬುಕ್ ಪುಟದಲ್ಲಿ ಪ್ರಕಟಿಸಲಾಯಿತು. ಗ್ಯಾರಿಸನ್ ಅವರು ೨೦೧೭ ರಲ್ಲಿ ಭಾರತೀಯ ರಾಜಕೀಯದ ಬಗ್ಗೆ ಯಾವುದೇ ವ್ಯಂಗ್ಯಚಿತ್ರಗಳನ್ನು ಚಿತ್ರಿಸಿಲ್ಲ ಎಂದು ಸ್ಪಷ್ಟಪಡಿಸಿದರು.

    Claim Review :   No, the cartoon targeting INC is not by American Cartoonist Ben Garrison
    Claimed By :  X user
    Fact Check :  Fake