೨೦೧೯ ರ ಹಳೆಯ ಬಿಬಿಸಿ ವೀಡಿಯೋ ಕ್ಲಿಪ್ ಅನ್ನು ೨೦೨೪ ರ ಲೋಕಸಭಾ ಚುನಾವಣೆಯ ಮುನ್ಸೂಚನೆಯಂತೆ ಹಂಚಿಕೊಳ್ಳಲಾಗಿದೆ
ಸಾರಾಂಶ:
೨೦೧೯ ರ ಲೋಕಸಭಾ ಚುನಾವಣೆಯ ಫಲಿತಾಂಶಗಳನ್ನು ಪ್ರಕಟಿಸುವ ಬಿಬಿಸಿ ನ್ಯೂಸ್ ಪ್ರಸಾರದ ವೀಡಿಯೋ ಕ್ಲಿಪ್ ಅನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ, ಇದು ನಡೆಯುತ್ತಿರುವ ೨೦೨೪ ರ ಲೋಕಸಭಾ ಚುನಾವಣೆಯ ಬಿಬಿಸಿಯ ಚುನಾವಣೆಯ ಮುನ್ಸೂಚನೆ ಎಂದು ತಪ್ಪುದಾರಿಗೆಳೆಯುವ ಹೇಳಿಕೆಯನ್ನು ಹೊಂದಿದೆ.
ಹೇಳಿಕೆ:
ಬಿಬಿಸಿ ನ್ಯೂಸ್ ನ ವೀಡಿಯೋ ಕ್ಲಿಪ್ ಅನ್ನು ಎಕ್ಸ್ (ಹಿಂದೆ ಟ್ವಿಟ್ಟರ್) ಮತ್ತು ಇನ್‌ಸ್ಟಾಗ್ರಾಮ್ ನಂತಹ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ಪ್ರಸ್ತುತ ನಡೆಯುತ್ತಿರುವ ೨೦೨೪ ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಅದರ ಮೈತ್ರಿ ಪಕ್ಷಗಳು ೩೪೭ ಸ್ಥಾನಗಳನ್ನು ಪಡೆದುಕೊಳ್ಳುತ್ತವೆ ಮತ್ತು ಕಾಂಗ್ರೆಸ್ ಮತ್ತು ಅದರ ಮೈತ್ರಿ ಪಕ್ಷಗಳು ೮೭ ಸ್ಥಾನಗಳನ್ನು ಗೆಲ್ಲುತ್ತವೆ ಎಂದು ವೀಡಿಯೋಗಳು ಹೇಳುತ್ತವೆ.
ಅಂತಹ ಒಂದು ಪೋಷ್ಟ್ ನ ಹಿಂದಿಯ ಶೀರ್ಷಿಕೆ ಹೀಗಿದೆ - “ದೇಶಭಕ್ತರಿಗೆ ಅನೇಕ ಅನೇಕ ಅಭಿನಂದನೆಗಳು. ಬಿಬಿಸಿ ಕೂಡ ಮೋದಿಯವರಿಗೆ ೩೪೭ ಸ್ಥಾನಗಳನ್ನು ನೀಡಿದೆ. ಜೈ ಶ್ರೀ ರಾಮ್.” ಆ ವೈರಲ್ ಬಿಬಿಸಿ ವೀಡಿಯೋ ಈ ಪಠ್ಯವನ್ನು ಒಳಗೊಂಡಿದೆ - "ನಿಮ್ಮ ಬಿಬಿಸಿ ನಾಶವಾಗಲಿ, ನಿಮ್ಮಂತಹ ಬೂಟ್‌ಲಿಕರ್‌ಗಳ ಕನಸಿನಲ್ಲಿಯೂ ನಾವು ರಾಹುಲ್‌ಗೆ ಪ್ರಧಾನಿಯಾಗಲು ಬಿಡುವುದಿಲ್ಲ. ಕನಿಷ್ಠ ಜೂನ್ ೪ ರವರೆಗೆ ಅವರನ್ನು ಆನಂದಿಸಲು ಬಿಡಬೇಕಾಗಿತ್ತು."
ಬಿಬಿಸಿಯ ಚುನಾವಣೆಯ ಮುನ್ಸೂಚನೆ ೨೦೨೪ ರ ಲೋಕಸಭಾ ಚುನಾವಣೆಗಳಿಗೆ ಸಂಬಂಧಿಸಿದೆ ಎಂದು ಹೇಳಿಕೊಳ್ಳುವ ಎಕ್ಸ್ ಪೋಷ್ಟ್ ನ ಸ್ಕ್ರೀನ್‌ಶಾಟ್.
ಪುರಾವೆ:
"ಕೆಲ ನಿಮಿಷಗಳ ಹಿಂದೆ ಚುನಾವಣಾ ಫಲಿತಾಂಶ ಪ್ರಕಟವಾದಂತೆ ಬಿಜೆಪಿ ಮತ್ತು ಅದರ ಮೈತ್ರಿ ಪಕ್ಷಗಳು ಸ್ಪಷ್ಟ ಬಹುಮತದಿಂದ ೩೪೭ ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮತ್ತು ಅದರ ಮೈತ್ರಿ ಪಕ್ಷಗಳು ೮೭ ಸ್ಥಾನಗಳಲ್ಲಿ ಹಿಂದುಳಿದಿವೆ" ಎಂದು ಬಿಬಿಸಿ ಸುದ್ದಿ ನಿರೂಪಕರು ಹೇಳುವುದನ್ನು ವೀಡಿಯೋ ತೋರಿಸುತ್ತದೆ.
ವೀಡಿಯೋದ ಪ್ರಮುಖ ಕೀಫ್ರೇಮ್ಸ್ ಗಳ ರಿವರ್ಸ್ ಇಮೇಜ್ ಸರ್ಚ್ ನಡೆಸಿದ ನಂತರ, ನಾವು ಮೇ ೨೩, ೨೦೧೯ ರಂದು ಪ್ರಕಟಿಸಲಾದ ಬಿಬಿಸಿ ನ್ಯೂಸ್ ನ ಯೂಟ್ಯೂಬ್ ವೀಡಿಯೋವನ್ನು ಗುರುತಿಸಿದ್ದೇವೆ. ವೀಡಿಯೋದ ಶೀರ್ಷಿಕೆ ಹೀಗಿದೆ - “ಭಾರತದ ಚುನಾವಣಾ ಫಲಿತಾಂಶಗಳು ೨೦೧೯: ನರೇಂದ್ರ ಮೋದಿ ಅವರು ಪ್ರಚಂಡ ಗೆಲುವು ಸಾಧಿಸಿದ್ದಾರೆ - ಬಿಬಿಸಿ ನ್ಯೂಸ್” (ಅನುವಾದಿಸಲಾಗಿದೆ). ಈ ವೀಡಿಯೋ ೨೦೧೯ ರ ಲೋಕಸಭಾ ಚುನಾವಣೆಯ ನೇರ ಫಲಿತಾಂಶದ ಭಾಗವಾಗಿದೆ, ಅದರಲ್ಲಿ ಹೀಗೆಂದು ವರದಿಯಾಗಿದೆ - ಬಿಜೆಪಿ ನೇತೃತ್ವದ ನ್ಯಾಷನಲ್ ಡೆಮಾಕ್ರೆಟಿಕ್ ಅಲೈಯನ್ಸ್ (ಎನ್‌ಡಿಎ) ೩೫೩ ಸ್ಥಾನಗಳನ್ನು ಗೆದ್ದಿದೆ ಮತ್ತು ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರೊಗ್ರೆಸ್ಸಿವ್ ಅಲೈಯನ್ಸ್ (ಯುಪಿಎ) ೯೧ ಸ್ಥಾನಗಳನ್ನು ಪಡೆದುಕೊಂಡಿದೆ.
೨೦೧೯ ರ ಲೋಕಸಭಾ ಚುನಾವಣೆಯ ಫಲಿತಾಂಶಗಳನ್ನು ವರದಿ ಮಾಡುತಿರುವ ಬಿಬಿಸಿಯ ಯೂಟ್ಯೂಬ್ ವೀಡಿಯೋದ ಸ್ಕ್ರೀನ್‌ಶಾಟ್.
ವೈರಲ್ ಕ್ಲಿಪ್ ಅನ್ನು ಮೂಲ ಬಿಬಿಸಿ ನ್ಯೂಸ್ ವೀಡಿಯೋದಲ್ಲಿ ೦:೦೩ ಸೆಕೆಂಡುಗಳ ಅವಧಿಯಲ್ಲಿ ನೋಡಬಹುದು, ಅಲ್ಲಿ ಸುದ್ದಿ ನಿರೂಪಕರು ೨೦೧೯ ರ ಲೋಕಸಭಾ ಚುನಾವಣೆಯ ನೇರ ಫಲಿತಾಂಶಗಳನ್ನು ಪ್ರಕಟಿಸುತ್ತಿದ್ದಾರೆ. ಪ್ರಸ್ತುತ ನಡೆಯುತ್ತಿರುವ ಚುನಾವಣೆಯ ಸಮಯದಲ್ಲಿ ದಾರಿತಪ್ಪಿಸುವ ಮಾಹಿತಿಯನ್ನು ಪ್ರಸಾರ ಮಾಡುವುದನ್ನು ತಡೆಯಲು ಭಾರತದ ಚುನಾವಣಾ ಆಯೋಗವು ಏಪ್ರಿಲ್ ೬, ೨೦೨೪ ರಿಂಧ ಜೂನ್ ೧, ೨೦೨೪ ರ ಸಂಜೆ ೬:೩೦ ರವರೆಗೆ ನಿರ್ಗಮನ ಸಮೀಕ್ಷೆಗಳನ್ನು ನಿಷೇಧಿಸಿದೆ.
ತೀರ್ಪು:
೨೦೨೪ ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ೩೪೭ ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಬಿಬಿಸಿ ಭವಿಷ್ಯ ನುಡಿದಿದೆ ಎಂಬ ಹೇಳಿಕೆಯು ತಪ್ಪುದಾರಿಗೆಳೆಯುವಂತಿದೆ. ಹಂಚಿಕೊಳ್ಳಲಾಗುತ್ತಿರುವ ವೀಡಿಯೋ ೨೦೧೯ ರ ಲೋಕಸಭಾ ಚುನಾವಣಾ ಫಲಿತಾಂಶದಾಗಿದೆ ಮತ್ತು ೨೦೨೪ ರ ಚುನಾವಣೆಗೆ ಇದು ಸಂಬಂಧಿಸಿಲ್ಲ. ಪ್ರಸ್ತುತ ನಡೆಯುತ್ತಿರುವ ಚುನಾವಣೆಗೆ ಬಿಬಿಸಿ ಅಂತಹ ಯಾವುದೇ ಮುನ್ಸೂಚನೆಯನ್ನು ನೀಡಿಲ್ಲ.