Begin typing your search above and press return to search.
    ಚುನಾವಣೆ

    ಡಿಕೆ ಶಿವಕುಮಾರ್ ಮತ್ತು ಚಂದ್ರಬಾಬು ನಾಯ್ಡು ಅವರ ಹಳೆಯ ಚಿತ್ರವನ್ನು ೨೦೨೪ ರ ಲೋಕಸಭಾ ಚುನಾವಣೆಗೆ ತಪ್ಪಾಗಿ ಜೋಡಿಸಲಾಗಿದೆ

    IDTU - Karnataka
    11 Jun 2024 1:10 PM GMT
    ಡಿಕೆ ಶಿವಕುಮಾರ್ ಮತ್ತು ಚಂದ್ರಬಾಬು ನಾಯ್ಡು ಅವರ ಹಳೆಯ ಚಿತ್ರವನ್ನು ೨೦೨೪ ರ ಲೋಕಸಭಾ ಚುನಾವಣೆಗೆ ತಪ್ಪಾಗಿ ಜೋಡಿಸಲಾಗಿದೆ
    x

    ಸಾರಾಂಶ:

    ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರನ್ನು ವಿಮಾನ ನಿಲ್ದಾಣದಲ್ಲಿ ಭೇಟಿಯಾಗಿರುವ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದ್ದು, ಇದು ೨೦೨೪ ರ ಲೋಕಸಭಾ ಚುನಾವಣೆಗೆ ಸಂಬಂಧಿಸಿದೆ ಎಂದು ತಪ್ಪುದಾರಿಗೆಳೆಯುವ ಹೇಳಿಕೆಗಳೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ಆದರೆ ಮೂಲತಃ ಈ ಚಿತ್ರವು ಡಿಸೆಂಬರ್ ೨೦೨೩ ರಲ್ಲಿ ಈ ಇಬ್ಬರು ನಾಯಕರು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಭೇಟಿಯಾದರು ಎಂದು ತೋರಿಸುತ್ತದೆ.

    ಹೇಳಿಕೆ:

    ಎಕ್ಸ್ (ಹಿಂದಿನ ಟ್ವಿಟರ್) ಮತ್ತು ಫೇಸ್‌ಬುಕ್‌ನ ಹಲವಾರು ಬಳಕೆದಾರರು ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ಅವರು ತೆಲುಗು ದೇಶಂ ಪಕ್ಷದ (ಟಿಡಿಪಿ) ಅಧ್ಯಕ್ಷ ಚಂದ್ರಬಾಬು ನಾಯ್ಡು ಅವರನ್ನು ವಿಮಾನ ನಿಲ್ದಾಣದಲ್ಲಿ ಭೇಟಿಯಾದ ಚಿತ್ರವನ್ನು ಹಂಚಿಕೊಂಡಿದ್ದಾರೆ. ಈ ಭೇಟಿ ಇತ್ತೀಚಿನದು ಎಂದು ಹೇಳಲಾಗಿದೆ ಮತ್ತು ೨೦೨೪ ರ ಲೋಕಸಭಾ ಚುನಾವಣಾ ಫಲಿತಾಂಶಗಳ ನಂತರ ಟಿಡಿಪಿ ಎನ್‌ಡಿಎಯಿಂದ ಇಂಡಿಯಾ ಬ್ಲಾಕ್‌ಗೆ ಸಂಭಾವ್ಯ ರಾಜಕೀಯ ಬದಲಾವಣೆಯನ್ನು ಸೂಚಿಸುತ್ತದೆ ಎಂದು ಹೇಳಿಕೊಳ್ಳಗಿದೆ.

    ಅಂತಹ ಒಂದು ಪೋಷ್ಟ್ ನ ಶೀರ್ಷಿಕೆ ಹೀಗಿದೆ - "ಡಿಕೆ ಶಿವಕುಮಾರ್ ಚಂದ್ರ ಬಾಬು ನಾಯ್ಡು ಅವರೊಂದಿಗೆ ಸಂಪರ್ಕದಲ್ಲಿದ್ದಾರೆ ಮತ್ತು ಡಿಕೆಶಿ ಬಾಬು ಅವರ ಭಾರಿ ಬಹುಮತದ ವಿಜಯಕ್ಕಾಗಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.”

    ೨೦೨೪ ರಲ್ಲಿ ಚುನಾವಣೋತ್ತರ ಮೈತ್ರಿಗಾಗಿ ಇಬ್ಬರು ನಾಯಕರು ಭೇಟಿಯಾದರು ಎಂದು ಹೇಳುವ ಎಕ್ಸ್‌ ಪೋಷ್ಟ್ ನ ಸ್ಕ್ರೀನ್‌ಶಾಟ್


    ಪುರಾವೆ:

    ರಿವರ್ಸ್ ಇಮೇಜ್ ಸರ್ಚ್ ನಮ್ಮನು ಡಿಸೆಂಬರ್ ೨೮ ೨೦೨೩ ರಂದು ಪ್ರಕಟಿಸಲಾದ ಈ ಶೀರ್ಷಿಕೆಯ “ರಾಷ್ಟ್ರ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆ | ಚಂದ್ರಬಾಬು ನಾಯ್ಡು ಅವರನ್ನು ಭೇಟಿ ಮಾಡಿದ ಡಿಕೆ ಶಿವಕುಮಾರ್ | ವಿಸ್ತಾರಾ ಸುದ್ದಿ ಯೂಟ್ಯೂಬ್ ವೀಡಿಯೋಗೆ ಕರೆದೋಯುಯಿತು. ಇದು ಈ ಭೇಟಿಯ ದಿನಾಂಕ ಮತ್ತು ಸ್ಥಳವನ್ನು ಸ್ಪಷ್ಟವಾಗಿ ಸೂಚಿಸುತ್ತದೆ. ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ನ ಸುದ್ದಿ ವರದಿಯ ಪ್ರಕಾರ, ಚಂದ್ರಬಾಬು ನಾಯ್ಡು ಅವರು ತಮ್ಮ ತವರು ಕ್ಷೇತ್ರವಾದ ಆಂಧ್ರಪ್ರದೇಶದ ಕುಪ್ಪಂಗೆ ಮತ್ತು ಡಿಕೆ ಶಿವಕುಮಾರ್ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆಗೆ ನಾಗ್ಪುರಕ್ಕೆ ತೆರಳುತ್ತಿದ್ದಾಗ ಬೆಂಗಳೂರಿನ ಹೆಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ಭೇಟಿ ಆದರು ಎಂದು ಸೂಚಿಸುತ್ತದೆ.

    ಡಿಕೆ ಶಿವಕುಮಾರ್ ಬೆಂಗಳೂರಿನಲ್ಲಿ ಚಂದ್ರಬಾಬು ನಾಯ್ಡು ಅವರನ್ನು ಭೇಟಿಯಾದ ಬಗ್ಗೆ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿಯ ಸ್ಕ್ರೀನ್‌ಶಾಟ್.


    ಹೆಚ್ಚಿನ ಹುಡುಕಾಟವು ಡಿಸೆಂಬರ್ ೩೦, ೨೦೨೩ ರಂದು ಟಿವಿ೫ ಕನ್ನಡ ಅಪ್‌ಲೋಡ್ ಮಾಡಿದ ಯೂಟ್ಯೂಬ್ ವೀಡಿಯೋಗೆ ನಮ್ಮನ್ನು ಕರೆದೊಯ್ಯಿತು, ಇದು ಬೆಂಗಳೂರಿನ ಹೆಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ಟಿಡಿಪಿ ಅಧ್ಯಕ್ಷ ಚಂದ್ರಬಾಬು ನಾಯ್ಡು ಅವರ ಭೇಟಿಯನ್ನು ಸ್ಪಷ್ಟಪಡಿಸುತ್ತಿರುವ ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ಕೆಲವು ವರದಿಗಾರರನ್ನು ಉದ್ದೇಶಿಸಿ ಮಾತನಾಡುವುದನ್ನು ತೋರಿಸುತ್ತದೆ.

    ಡಿಸೆಂಬರ್ ೨೯, ೨೦೨೩ ರ ಎನ್‌ಡಿಟಿವಿ ಸುದ್ದಿ ಲೇಖನವನ್ನು ಸಹ ನಾವು ಕಂಡುಕೊಂಡಿದ್ದೇವೆ. ಇದು ಟಿಡಿಪಿ ಪ್ರಧಾನ ಕಾರ್ಯದರ್ಶಿ ನಾರಾ ಲೋಕೇಶ್ ಅವರು ಈ ಭೇಟಿಯನ್ನು"ಕಾಕತಾಳೀಯ" ಎಂದು ವಿವರಿಸಿದ್ದಾರೆ ಮತ್ತು ಇದು ಟಿಡಿಪಿಯು ಇಂಡಿಯಾ ಬ್ಲಾಕ್‌ಗೆ ಸೇರುವ ಉದ್ದೇಶವನ್ನು ಸೂಚಿಸುವುದಿಲ್ಲ ಎಂದು ಹೇಳಿದ್ದಾರೆ.

    ಟಿಡಿಪಿ ಇಂಡಿಯಾ ಬ್ಲಾಕ್‌ಗೆ ಸೇರುವುದಿಲ್ಲ ಎಂದು ನಾರಾ ಲೋಕೇಶ್ ಹೇಳಿರುವುದನ್ನು ಉಲ್ಲೇಖಿಸಿರುವ ಎನ್‌ಡಿಟಿವಿ ಸುದ್ದಿ ಲೇಖನದ ಸ್ಕ್ರೀನ್‌ಶಾಟ್.


    ತೀರ್ಪು:

    ಡಿಕೆ ಶಿವಕುಮಾರ್ ಮತ್ತು ಚಂದ್ರಬಾಬು ನಾಯ್ಡು ಅವರು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಭೇಟಿಯಾದ ಚಿತ್ರವನ್ನು ೨೦೨೪ ರ ಲೋಕಸಭಾ ಚುನಾವಣೆಗೆ ತಪ್ಪಾಗಿ ಜೋಡಿಸಲಾಗಿದೆ. ಈ ಭೇಟಿಯು ಡಿಸೆಂಬರ್ ೨೦೨೩ ರಲ್ಲಿ ನಡೆಯಿತು ಮತ್ತು ೨೦೨೪ ರ ಚುನಾವಣೆಯ ನಂತರದ ರಾಜಕೀಯ ಬೆಳವಣಿಗೆಗಳಿಗೆ ಯಾವುದೇ ಸಂಬಂಧವಿಲ್ಲ. ಈ ರೀತಿ ಸೂಚಿಸುವ ಹೇಳಿಕೆಗಳು ತಪ್ಪುದಾರಿಗೆಳೆಯುವಂತಿವೆ.


    Claim Review :   Old image of DK Shivakumar & Chandrababu Naidu falsely linked to 2024 Lok Sabha polls
    Claimed By :  X user
    Fact Check :  Misleading
    IDTU - Karnataka

    IDTU - Karnataka