Begin typing your search above and press return to search.
    Others

    ಸೇನಾ ಸಿಬ್ಬಂದಿಯು ಬಿಜೆಪಿಯನ್ನು ಪ್ರಚಾರ ಮಾಡಿದರೆಂದು ಆರೋಪಿಸುವ ಹಳೆಯ ವೀಡಿಯೋವನ್ನು ೨೦೨೪ ರ ಲೋಕಸಭಾ ಚುನಾವಣೆಯ ಸಮಯದೆಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.

    IDTU - Karnataka
    10 May 2024 1:10 PM GMT
    ಸೇನಾ ಸಿಬ್ಬಂದಿಯು ಬಿಜೆಪಿಯನ್ನು ಪ್ರಚಾರ ಮಾಡಿದರೆಂದು ಆರೋಪಿಸುವ ಹಳೆಯ ವೀಡಿಯೋವನ್ನು ೨೦೨೪ ರ ಲೋಕಸಭಾ ಚುನಾವಣೆಯ ಸಮಯದೆಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.
    x

    ಸಾರಾಂಶ:

    ಎಕ್ಸ್ (ಹಿಂದೆ ಟ್ವಿಟರ್) ಬಳಕೆದಾರರು ಭಾರತೀಯ ಸೇನೆಯ ಸಿಬ್ಬಂದಿಯು ಪ್ರಸ್ತುತ ನಡೆಯುತ್ತಿರುವ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕಲು ಜನರನ್ನು ಒತ್ತಾಯಿಸುತ್ತಿದ್ದಾರೆ ಎಂದು ಆರೋಪಿಸುತ್ತಿರುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಆದರೆ, ಈ ಘಟನೆಯು ೨೦೧೯ ರದು. ಸೇನಾ ಸಿಬ್ಬಂದಿಯೊಬ್ಬರು ನಕಲಿ ಮತಗಳನ್ನು ಚಲಾಯಿಸಲು ವ್ಯಕ್ತಿಗಳನ್ನು ಒತ್ತಾಯಿಸುತ್ತಿದ್ದಾರೆ ಮತ್ತು ಮತದಾರರ ಮೇಲೆ ಪ್ರಭಾವ ಬೀರಿದ್ದಾರೆ ಎಂದು ಸುಳ್ಳು ಆರೋಪ ಹೊರಿಸಲಾಯಿತು. ಆದ್ದರಿಂದ ಈ ಹೇಳಿಕೆ ತಪ್ಪು.


    ಹೇಳಿಕೆ:

    ಎಕ್ಸ್ ಬಳಕೆದಾರರು ಮತದಾರರ ಮೇಲೆ ಪ್ರಭಾವ ಬೀರುತ್ತಿದ್ದಾರೆ ಮತ್ತು ಪ್ರಸ್ತುತ ನಡೆಯುತ್ತಿರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕಲು ಒತ್ತಾಯಿಸುತ್ತಿದ್ದಾರೆ ಎಂದು ಹೇಳುವ ವೀಡಿಯೋವನ್ನು ಮೇ ೭, ೨೦೨೪ ರಂದು ಹಂಚಿಕೊಂಡಿದ್ದಾರೆ. "ಬಿಜೆಪಿಯು ನಕಲಿ ಮತಗಳನ್ನು ಹಾಕಲು ಬಿಗ್ ಬ್ರೇಕಿಂಗ್ ಆರ್ಮಿಯನ್ನು ಬಳಸುತ್ತಿದೆ. ಭಾರತೀಯ ಸೇನೆಯನ್ನು ಬಿಜೆಪಿಗೆ ಕಾನೂನುಬಾಹಿರ ಮತ್ತು ಮೋಸದ ಕೆಲಸ ಮಾಡಲು ನಿಯೋಜಿಸಲಾಗಿದೆ. ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಚುನಾವಣಾ ಬೂತ್‌ಗಳ ಒಳಗೆ ಮತದಾರರ ಮೇಲೆ ಪ್ರಭಾವ ಬೀರಲು ನಕಲಿ ಮತಗಳನ್ನು ಬಿಜೆಪಿಗೆ.. #ArvindKejriwal #LokSabhaElections2024" (ಅನುವಾದಿಸಲಾಗಿದೆ) ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ.

    ಇತ್ತೀಚೆಗೆ ಭಾರತೀಯ ಸೇನೆಯ ಸಿಬ್ಬಂದಿಗಳು ಬಿಜೆಪಿಗೆ ಮತ ಹಾಕಲು ಜನರನ್ನು ಬಲವಂತಮಾಡುವುದನ್ನು ವೀಡಿಯೋ ತೋರಿಸುತ್ತದೆ ಎಂದು ಹೇಳಿಕೊಳ್ಳುವ ಎಕ್ಸ್‌ ಪೋಷ್ಟ್ ನ ಸ್ಕ್ರೀನ್‌ಶಾಟ್.


    ಮತ್ತೊಬ್ಬ ಎಕ್ಸ್ ಬಳಕೆದಾರರು, ೩.೩ ಸಾವಿರ ಅನುಯಾಯಿಗಳೊಂದಿಗೆ, ಮೇ ೯, ೨೦೨೪ ರಂದು ಅದೇ ಶೀರ್ಷಿಕೆಯೊಂದಿಗೆ ಕ್ಲಿಪ್ ಅನ್ನು ಹಂಚಿಕೊಂಡಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೋವನ್ನು #LokSabhaElections2024 ಎಂಬ ಹ್ಯಾಶ್‌ಟ್ಯಾಗ್ ಗಳೊಂದಿಗೆ ಹಂಚಿಕೊಂಡಿದ್ದಾರೆ.


    ಪುರಾವೆ:

    ನಾವು ವೈರಲ್ ವೀಡಿಯೋದ ಕೀಫ್ರೇಮ್‌ಗಳೊಂದಿಗೆ ರಿವರ್ಸ್ ಇಮೇಜ್ ಸರ್ಚ್ ನಡೆಸಿದ್ದೇವೆ. ಇದು ನಮ್ಮನ್ನು ಮೇ ೮, ೨೦೨೪ ರಿಂದ ಎಕ್ಸ್ ಪೋಷ್ಟ್ ಗೆ ಕರೆದೊಯ್ಯಿತ್ತು. ಅದರಲ್ಲಿನ ಶೀರ್ಷಿಕೆಯು ಈ ಘಟನೆಯು ೨೦೧೯ ರದು ಮತ್ತು ಮಧ್ಯಪ್ರದೇಶದ ಜಬಲ್‌ಪುರದಿಂದ ವರದಿಯಾಗಿದೆ ಎಂದು ಹೇಳುತ್ತದೆ.

    ಮೇ ೮, ೨೦೨೪ ರಂದು ವೈರಲ್ ವೀಡಿಯೋವನ್ನು ಹಂಚಿಕೊಳ್ಳುವ ಎಕ್ಸ್ ಪೋಷ್ಟ್ ನ ಸ್ಕ್ರೀನ್‌ಶಾಟ್.


    ಇದನ್ನು ಸೂಚನೆಯಾಗಿ ಬಳಸಿ, ಫೇಸ್‌ಬುಕ್‌ ಬಳಕಕೆದಾರರು ಏಪ್ರಿಲ್ ೩೦, ೨೦೧೯ ರಂದು "ಇಂತಹ ದೂರುಗಳ ಬಗ್ಗೆ ಚುನಾವಣಾ ಆಯೋಗವು ಗಮನಹರಿಸುವುದೇ ???" (ಅನುವಾದಿಸಲಾಗಿದೆ) ಎಂಬ ಶೀರ್ಷಿಕೆಯೊಂದಿಗೆ ವೀಡಿಯೋವನ್ನು ಹಂಚಿಕೊಂಡಿದ್ದಾರೆ ಎಂದು ನಾವು ಕಂಡುಕೊಂಡಿದ್ದೇವೆ.

    ಫೇಸ್‌ಬುಕ್ ಪೋಷ್ಟ್ ನ ಸ್ಕ್ರೀನ್‌ಶಾಟ್.


    ೨೦೧೯ ರ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಸೇನೆಯ ಸಿಬ್ಬಂದಿ ಮತದಾರರ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿ ಈ ವಿಡಿಯೋವನ್ನು ೨೦೧೯ ರಲ್ಲಿ ವಿವಿಧ ವೇದಿಕೆಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿತ್ತು.

    ಮೇ ೧, ೨೦೧೯ ರಿಂದ ಎಕ್ಸ್‌ನಲ್ಲಿ ನಾವು ಎಏನ್ಐ ನ ಪೋಷ್ಟ್ ಅನ್ನು ಕಂಡುಕೊಂಡಿದ್ದೇವೆ, ಅದು ಘಟನೆಯ ಕುರಿತು ಭಾರತೀಯ ಸೇನೆಯ ಅಧಿಕೃತ ಘೋಷಣೆಯನ್ನು ಹೊಂದಿದೆ. ಘೋಷಣೆಯ ಒಂದು ವಿಭಾಗವು ಹೀಗೆ ಹೇಳುತ್ತದೆ - "ಏಪ್ರಿಲ್ ೨೯, ೨೦೧೯ ರಂದು, ಸಂಸತ್ತಿನ ಚುನಾವಣೆಗಳಿಗೆ ಮತದಾನದ ದಿನ, ಗ್ರೆನೇಡಿಯರ್ಸ್ ರೆಜಿಮೆಂಟಲ್ ಸೆಂಟರ್‌ನ ಸೈನಿಕರು ಮತ್ತು ಅವರ ಸಂಗಾತಿಗಳು ಬೂತ್ ಸಂಖ್ಯೆ ೧೪೬ ರಲ್ಲಿ ಆರ್ಮಿ ವೆಹಿಕಲ್ ಎಂಬ ವಿಶ್ವಾಸಾರ್ಹ ಸಾರಿಗೆಯಲ್ಲಿ ಮತ ಚಲಾಯಿಸಲು ಮುಂದಾದರು. ಸ್ವಾಮಿ ವಿವೇಕಾನಂದ ಹೈಯರ್ ಸೆಕೆಂಡರಿ ಶಾಲೆ, ಕಟಾಂಗಾ, ಜಬಲ್‌ಪುರ ಬೂತ್ ಸಂಖ್ಯೆ ೧೪೬ ರಲ್ಲಿ ಭಾರತೀಯ ಸೇನೆಯ ಯೋಧರು ತಮ್ಮ ಮತದಾನದ ಹಕ್ಕನ್ನು ಚಲಾಯಿಸುವ ಪ್ರಕ್ರಿಯೆಯಲ್ಲಿದ್ದಾಗ, ಕೆಲವು ದುಷ್ಕರ್ಮಿಗಳು ಕ್ರಿಮಿನಲ್ ಬಲವನ್ನು ಬಳಸಿ ಅವರ ಮತದಾರರ ಗುರುತಿನ ಚೀಟಿಗಳನ್ನು ಕಸಿದುಕೊಂಡು ಅವರು ಮತಗಳನ್ನು ಚಲಾಯಿಸುವುದರಿಂದ ತಡೆದರು" (ಅನುವಾದಿಸಲಾಗಿದೆ).

    ಮೇ ೨, ೨೦೧೯ ರಿಂದ ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿಯ ಪ್ರಕಾರ, ದುಷ್ಕರ್ಮಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲು ಮತ್ತು ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಸೇನಾ ಅಧಿಕಾರಿಗಳು ಪೊಲೀಸರನ್ನು ವಿನಂತಿಸಿದ್ದಾರೆ.

    ವೀಡಿಯೋ ೨೦೧೯ ರ ಲೋಕಸಭಾ ಚುನಾವಣೆಯದು ಎಂದು ಇದು ಸ್ಪಷ್ಟಪಡಿಸುತ್ತದೆ ಮತ್ತು ವೀಡಿಯೋ ಇತ್ತೀಚಿನದು ಎಂದು ಆರೋಪಿಸುತ್ತಿರುವ ಹೇಳಿಕೆಗಳು ತಪ್ಪು.


    ತೀರ್ಪು:

    ವೀಡಿಯೋದ ವಿಶ್ಲೇಷಣೆಯು ಮಧ್ಯಪ್ರದೇಶದ ಜಬಲ್‌ಪುರದಲ್ಲಿ ೨೦೧೯ ರ ಲೋಕಸಭಾ ಚುನಾವಣೆಯ ಘಟನೆಯದು ಎಂದು ಬಹಿರಂಗಪಡಿಸುತ್ತದೆ. ಭಾರತೀಯ ಸೇನೆಯ ಸಿಬ್ಬಂದಿಯೊಬ್ಬರು ಬಿಜೆಪಿಗೆ ಮತ ಹಾಕುವಂತೆ ಜನರನ್ನು ಒತ್ತಾಯಿಸಿದ್ದಾರೆ ಎಂದು ಆರೋಪಿಸಲಾಗಿದೆ. ಆದ್ದರಿಂದ, ಘಟನೆಯು ಇತ್ತೀಚಿನದು ಎಂದು ಹೇಳುವ ಹೇಳಿಕೆಗಳು ತಪ್ಪು.

    Claim Review :   Old video of army personnel accused of canvassing for the BJP was falsely shared during the 2024 LS polls.
    Claimed By :  X user
    Fact Check :  False
    IDTU - Karnataka

    IDTU - Karnataka