ರಾಜಸ್ಥಾನದ ಸಂಬಂಧವಿಲ್ಲದ ವೀಡಿಯೋವನ್ನು ಹಂಚಿಕೊಂಡು ಭಾರತದ ಚುನಾವಣಾ ಆಯೋಗವು ಆಮ್ ಆದ್ಮಿ ಪಕ್ಷದ ಪೋಸ್ಟರ್‌ಗಳನ್ನು ತೆಗೆದುಹಾಕುವುತ್ತಿದೆ ಎಂದು ತಪ್ಪಾಗಿ ಹೇಳಿಕೊಳ್ಳಲಾಗಿದೆ.
ಸಾರಾಂಶ:
೨೦೨೪ ರ ಜನವರಿಯಲ್ಲಿ ರಾಜಸ್ಥಾನದಲ್ಲಿ ನಡೆದ ಘಟನೆಯನ್ನು ವೀಡಿಯೋ ತೋರಿಸುತ್ತದೆ. ಅಲ್ಲಿನ ರಾಜ್ಯ ಅಧಿಕಾರಿಗಳ ಆದೇಶದ ಮೇರೆಗೆ ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ (ಎನ್‌ಎಸ್‌ಯುಐ) ಪೋಸ್ಟರ್‌ಗಳನ್ನು ತೆಗೆದುಹಾಕಲಾಗುತ್ತಿದೆ. ಈ ಘಟನೆಗೂ ಆಮ್ ಆದ್ಮಿ ಪಕ್ಷಕ್ಕೂ (ಎಎಪಿ) ಮುಂಬರುವ ಲೋಕ ಸಭಾ ಚುನಾವಣೆಗೂ ಯಾವುದೇ ಸಂಬಂಧವಿಲ್ಲ.
ಹೇಳಿಕೆ:
ಭಾರತದಲ್ಲಿ ೨೦೨೪ ರ ಲೋಕಸಭಾ ಚುನಾವಣೆಯು ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ನಡೆಯಲಿವೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಬಂಧನವು ಭಾರತದಾದ್ಯಂತ ಭಾರೀ ರಾಜಕೀಯ ಗದ್ದಲವನ್ನು ಉಂಟುಮಾಡಿದ್ದು, ಹಲವಾರು ರಾಜಕೀಯ ಪಕ್ಷಗಳು ಈ ಬಂಧನವನ್ನು ಬಿಜೆಪಿ ಸೃಷ್ಟಿಸಿದ ರಾಜಕೀಯ ಪಿತೂರಿ ಎಂದು ಆರೋಪಿಸಿವೆ.
ಎಲ್ಲಾ ರಾಜಕೀಯ ಪಕ್ಷಗಳು ಚುನಾವಣೆಗೆ ಸಜ್ಜಾಗುತ್ತಿದ್ದಂತೆ, ಭಾರತೀಯ ಚುನಾವಣಾ ಆಯೋಗವು ತನ್ನ ಮಾದರಿ ನೀತಿ ಸಂಹಿತೆಯನ್ನು ಬಿಡುಗಡೆ ಮಾಡಿತು ಮತ್ತು ಇದು ಮಾರ್ಚ್ ಮಧ್ಯದಿಂದ ಜಾರಿಗೆ ಬಂದಿದೆ. ಇದರ ಮಧ್ಯೆ, ಬಿಜೆಪಿ ಧ್ವಜಗಳು ಮತ್ತು ಪೋಸ್ಟರ್‌ಗಳು ಅಸ್ಪೃಶ್ಯವಾಗಿ ಉಳಿದಿರುವಾಗ ಭಾರತೀಯ ಚುನಾವಣಾ ಆಯೋಗ (ಇಸಿಐ) ಎಎಪಿಯ ಪೋಸ್ಟರ್‌ಗಳನ್ನು ಆಯ್ದವಾಗಿ ತೆಗೆದುಹಾಕುತ್ತಿದೆ ಎಂದು ಹೇಳುವ ವೀಡಿಯೋವನ್ನು ಎಕ್ಸ್ (ಹಿಂದೆ ಟ್ವಿಟರ್) ಮತ್ತು ಫೇಸ್‌ಬುಕ್‌ನಂತಹ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ಚಲಿಸುತ್ತಿರುವ ಟ್ರಕ್‌ನಲ್ಲಿ ವ್ಯಕ್ತಿಯೊಬ್ಬರು ರಸ್ತೆಯ ಮಧ್ಯದಲ್ಲಿರುವ ವಿದ್ಯುತ್ ಕಂಬಗಳಿಂದ ಪೋಸ್ಟರ್‌ಗಳನ್ನು ಎಳೆಯುತ್ತಿರುವುದನ್ನು ನಾವು ವೀಡಿಯೋದಲ್ಲಿ ನೋಡಬಹುದು.
ಇಸಿಐ ಆಮ್ ಆದ್ಮಿ ಪಕ್ಷಕ್ಕೆ ಸೇರಿದ ಪೋಸ್ಟರ್‌ಗಳನ್ನು ಆಯ್ದು ತೆಗೆದುಹಾಕಲಾಗುತ್ತಿದೆ ಎಂದು ಹೇಳಿಕೊಳ್ಳುವ ವೈರಲ್ ವೀಡಿಯೋ ಹೊಂದಿರುವ ಫೇಸ್‌ಬುಕ್ ಪೋಸ್ಟ್‌ನ ಸ್ಕ್ರೀನ್‌ಶಾಟ್.
ಪುರಾವೆ:
ವೈರಲ್ ವೀಡಿಯೋವನ್ನು ನೋಡಿದಾಗ, "@NSUIRAJASTHANOFFICIAL" ಎಂದು ಬರೆದಿರುವ ಇನ್ಸ್ಟಾಗ್ರಾಮ್ ಲೋಗೋದ ವಾಟರ್‌ಮಾರ್ಕ್ ಕಂಡುಬಂದಿದೆ. ಎನ್‌ಎಸ್‌ಯುಐ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ವಿದ್ಯಾರ್ಥಿ ವಿಭಾಗವಾಗಿದೆ. ವೀಡಿಯೋದಲ್ಲಿ ಕೆಳಗೆ ಎಳೆಯಲಾದ ಪೋಸ್ಟರ್‌ನಲ್ಲಿರುವ ಬರಹವು, “विनोद जाखड़ जी NSUI प्रदेश अध्यक्ष”(ವಿನೋದ್ ಜಹಕದ್ ಜಿ, ಎನ್‌ಎಸ್‌ಯುಐ ರಾಜ್ಯಾಧ್ಯಕ್ಷ) ಎಂದು ಓದುತ್ತದೆ.
ಪೋಸ್ಟರ್‌ನ ವಾಟರ್‌ಮಾರ್ಕ್ ಮತ್ತು ಹಿಂದಿ ಪಠ್ಯವನ್ನು ತೋರಿಸುವ ವೈರಲ್ ವೀಡಿಯೋದ ಸ್ಕ್ರೀನ್‌ಶಾಟ್.
ಇದಲ್ಲದೆ, ಜನವರಿ ೧೪, ೨೦೨೪ ರಂದು ಎನ್‌ಎಸ್‌ಯುಐ ರಾಜಸ್ಥಾನದ ಇನ್ಸ್ಟಾಗ್ರಾಮ್ ಪೇಜ್ ನಲ್ಲಿ ಹಂಚಿಕೊಂಡ ಅದೇ ವೀಡಿಯೋವನ್ನು ನಾವು ಕಂಡುಕೊಂಡಿದ್ದೇವೆ. ಈ ಘಟನೆಯು ರಾಜಸ್ಥಾನದ ಜೈಪುರದಲ್ಲಿ ಸಂಭವಿಸಿದೆ ಎಂದು ವೀಡಿಯೋದ ಶೀರ್ಷಿಕೆಯು ಹೇಳಿಕೊಂಡಿದೆ. "ಎನ್‌ಎಸ್‌ಯುಐ ರಾಜ್ಯಾಧ್ಯಕ್ಷ ಶ್ರೀ ವಿನೋದ್ ಜಾಖರ್ ಜೈಪುರಕ್ಕೆ ಆಗಮಿಸಿದ್ದರಿಂದ ಭಜನ್‌ಲಾಲ್ ಸರ್ಕಾರವು ತುಂಬಾ ಹೆದರಿತ್ತು, ಅವರು ಮುಂಜಾನೆ ಪೋಸ್ಟರ್‌ಗಳನ್ನು ತೆಗೆಯಲು ಆದೇಶಿಸಿದರು" ಎಂದು ಶೀರ್ಷಿಕೆ ಆರೋಪಿಸಿದೆ. ಈ ಘಟನೆಯು ಜೈಪುರದಲ್ಲಿ ಸಂಭವಿಸಿದೆ ಮತ್ತು ಈ ಘಟನೆಯಲ್ಲಿ ಇಸಿಐ ಭಾಗಿಯಾಗಿಲ್ಲ ಎಂದು ಇದು ಸೂಚಿಸುತ್ತದೆ. ಇಸಿಐ ಲೋಕಸಭಾ ಚುನಾವಣೆಗಳು ಮತ್ತು ಮಾದರಿ ನೀತಿ ಸಂಹಿತೆಯನ್ನು ಘೋಷಿಸುವ ಮೊದಲೇ ಈ ವೀಡಿಯೋವನ್ನು ಜನವರಿಯಲ್ಲಿ ಹಂಚಿಕೊಳ್ಳಲಾಗಿದೆ ಎಂಬುದು ಗಮನಿಸಬೇಕಾದ ಸಂಗತಿ.
ಎನ್‌ಎಸ್‌ಯುಐ ರಾಜಸ್ಥಾನವು ಅದೇ ದಿನ ತನ್ನ ಅಧಿಕೃತ ಫೇಸ್‌ಬುಕ್ ಮತ್ತು ಎಕ್ಸ್ ಖಾತೆಗಳಲ್ಲಿ ಅದೇ ವೀಡಿಯೋವನ್ನು ಹಂಚಿಕೊಂಡಿದೆ. ರಾಜಸ್ಥಾನದ ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾ ಅವರು ಎನ್‌ಎಸ್‌ಯುಐ ರಾಜ್ಯ ಅಧ್ಯಕ್ಷರ ಜೈಪುರ ಭೇಟಿಗೆ ಮುಂಚಿತವಾಗಿ ಈ ಪೋಸ್ಟರ್‌ಗಳನ್ನು ಉದ್ದೇಶಪೂರ್ವಕವಾಗಿ ತೆಗೆದುಹಾಕಿಸಿದ್ದಾರೆ ಎಂದು ಆರೋಪಿಸಿದೆ.
ಜನವರಿ ೧೪, ೨೦೨೪ ರಂದು ಎನ್‌ಎಸ್‌ಯುಐ ರಾಜಸ್ಥಾನ ವೀಡಿಯೋ ಮತ್ತು ಶೀರ್ಷಿಕೆಯೊಂದಿಗೆ ಹಂಚಿಕೊಂಡ ಇನ್ಸ್ಟಾಗ್ರಾಮ್ ಪೋಸ್ಟ್‌ನ ಸ್ಕ್ರೀನ್‌ಶಾಟ್.
ತೀರ್ಪು:
ವೈರಲ್ ವೀಡಿಯೋ ಜನವರಿ ೧೪, ೨೦೨೪ ರಿಂದ ಆನ್‌ಲೈನ್‌ನಲ್ಲಿದೆ ಮತ್ತು ಈ ಘಟನೆಯು ರಾಜಸ್ಥಾನದ ಜೈಪುರದಲ್ಲಿ ಸಂಭವಿಸಿದೆ. ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡ ಮೂಲ ವೀಡಿಯೋದಲ್ಲಿ ಎನ್‌ಎಸ್‌ಯುಐ, ರಾಜಸ್ಥಾನದ ಮುಖ್ಯಮಂತ್ರಿ ಭಜನ್ ಲಾಲ್ ಶರ್ಮಾ ಈ ಎನ್‌ಎಸ್‌ಯುಐ ಪೋಸ್ಟರ್‌ಗಳನ್ನು ತೆಗೆದುಹಾಕಲು ಆದೇಶಿಸಿದ್ದಾರೆ ಎಂದು ಆರೋಪಿಸಿದೆ. ಮೂಲ ವೀಡಿಯೋದ ಶೀರ್ಷಿಕೆಯಲ್ಲಿ ಇಸಿಐ ಬಗ್ಗೆ ಯಾವುದೇ ಉಲ್ಲೇಖವಿಲ್ಲ.